Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸ್ಮೋಕ್ ಮಾಡುವ ಪೋಷಕರೇ, ಮಕ್ಕಳು ಸೆಕೆಂಡ್ ಹ್ಯಾಂಡ್ ಸ್ಮೋಕ್ ಮಾಡಿದರೆ ತಪ್ಪದ್ದಲ್ಲ ಈ ಅಪಾಯ
ಧೂಮಪಾನಿಗಳಿಗಿಂತ ಸೆಕೆಂಡ್ ಹ್ಯಾಂಡ್ ಸ್ಮೋಕರ್‌ಗೆ ಅದರ ಅಪಾಯ ಅಧಿಕ. ಅದರಲ್ಲೂ ಮಕ್ಕಳಿಗೆ, ಗರ್ಭಿಣಿಯರ ಮೇಲೆ ಈ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ತುಂಬಾನೇ ಕೆಟ್ಟ ಪರಿಣಾಮ ಬೀರುವುದರಿಂದ ಧೂಮಪಾನ ಮಾಡುವವರು ಈ ಕುರಿತು ತುಂಬಾನೇ ಜಾಗ್ರತೆವಹಿಸಬೇಕು. ತುಂಬಾ ಮನೆಗಳಲ್ಲಿ ಪೋಷಕರಿಗೆ ಧೂಮಪಾನ ಅಭ್ಯಾಸವಿದ್ದರೆ ಅವರು ಮನೆಯೊಳಗಡೆಯೇ ಧೂಮಪಾನ ಎಳೆದು ಬಿಡುತ್ತಾರೆ.

ತಾವು ಧೂಮಪಾನ ಮಾಡುವುದರಿಂದ ನನ್ನ ಆರೋಗ್ಯ ಮೇಲೆ ಮಾತ್ರ ಪ್ರಭಾವ ಬೀರುತ್ತದೆ ಅದು ನನಗೆ ಡೋಂಟ್ ಕೇರ್ ಎಂದು ಹೇಳಬಹುದು, ಆದರೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಹಾಗೆ ಹೇಳಲು ಸಾಧ್ಯವಾಗುವುದೇ ಖಂಡಿತ ಇಲ್ಲ ಅಲ್ವಾ? ಹಾಗಾದರೆ ನೀವು ಧೂಮಪಾನದ ಹೊಗೆ ಮನೆಯೊಳಗಡೆ ಅಥವಾ ಕಾರಿನೊಳಗಡೆ ಎಳೆದು ಬಿಡುವುದರಿಂದ ಅದರ ಹೊಗೆ ಸೇವಿಸಿದರೆ ಮಕ್ಕಳ ಮೇಲೆ ಎಂಥ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ಗೊತ್ತೇ? ಇಲ್ಲಾಂದ್ರೆ ಈ ಲೇಖನ ನಿಮಗಾಗಿ:
ಮೊದಲಿಗೆ ಸೆಕೆಂಡ್ ಹ್ಯಾಂಡ್ ಸ್ಮೋಕ್ ಎಂದರೇನು ಎಂದು ನೋಡುವುದಾದರೆ
ಒಬ್ಬರು ಎಳೆದು ಬಿಟ್ಟ ಹೊಗೆಯನ್ನು ಉಸಿರಾಡುವಾಗ ಮತ್ತೊಬ್ಬರು ಸೇವಿಸುವುದು. ಇದರಿಂದ ತಾವು ಧೂಮಪಾನಿಗಳು ಆಗಿರದಿದ್ದರೂ ಧುಮಪಾನ ಬೀರುವ ಕೆಟ್ಟ ಪರಿಣಾಮಕ್ಕೆ ಬಲಿಯಾಗಬೇಕಾಗುತ್ತದೆ.
ಗರ್ಭಿಣಿಯರು ಸಿಗರೇಟ್ ಹೊಗೆಯನ್ನು ಉಸಿರಾಡಿದರೆ
ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಅಪಾಯ
ಗಂಡ ಗರ್ಭಿಣಿ ಹೆಂಡತಿ ಮುಂದೆ ಸಿಗರೇಟ್ ಎಳೆಯಬಾರದು, ಅಲ್ಲದೆ ಮನೆಯಲ್ಲಿ ಯಾರಾದರೂ ಧೂಮಪಾನ ಮಾಡುತ್ತಿದ್ದರೆ ಮನೆಯೊಳಗಡೆ ಧೂಮಪಾನ ಮಾಡದಂತೆ ಎಚ್ಚರವಹಿಸಬೇಕು. ಏಕೆಂದರೆ ನಿಮ್ಮ ಚಟ ಹೊಟ್ಟೆಯೊಳಗಿನ ಮಗುವಿನ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುವುದು. ಗರ್ಭಿಣಿ ಧೂಮಪಾನದ ಹೊಗೆಯನ್ನು ಉಸಿರಾಡುವುದರಿಂದ ಜನಿಸುವ ಮಗುವಿನ ತೂಕ ತುಂಬಾ ಕಡಿಮೆ ಇರುತ್ತದೆ.
ಪ್ಲಾಸೆಂಟಾದಲ್ಲಿ ಸಮಸ್ಯೆ ಉಂಟಾಗುವುದು
ಪ್ಲಾಸೆಮಟಾ ಪ್ರೀವಿಯಾ, ಪ್ಲಾಸೆಂಟಲ್ ಅಬರಪಕ್ಷನ್ ಮುಂತಾದ ಸಮಸ್ಯೆ ಉಂಟಾಗುವುದು. ಅಂದರೆ ಗರ್ಭಚೀಲ ಗರ್ಭಕೋಶದಿಂದ ಬೇರ್ಪಡುವುದು. ಈ ರೀತಿಯಾದರೆ ತಾಹಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಗರ್ಭಿಣಿಯರು ಧೂಮಪಾನ ಯಾರಾದರೂ ಮಾಡುತ್ತಿದ್ದರೆ ಆ ಕಡೆ ಹೋಗಬೇಡಿ. ತಾಯಿ ಹಾಗೂ ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಮನೆಯವರು ಈ ಕುರಿತು ಜಾಗ್ರತೆವಹಿಸಿ.
ಅವಧಿ ಪೂರ್ವ ಮಗುವಿನ ಜನನ
* ಗರ್ಭಿಣಿಯರು ಧೂಮಪಾನ ಹೊಗೆಯನ್ನು ಸೇವಿಸುವುದರಿಂದ ಅವಧಿಪೂರ್ವ ಹೆರಿಗೆಯಾಗುವ ಅಪಾಯವಿದೆ.
* ತುಂಬಾ ಧೂಮಪಾನ ಸೇವಿಸುವುದರಿಂದ ಜನಿಸುವ ಮಗು ಹುಟ್ಟುವಾಗಲೇ ಸತ್ತು ಹುಟ್ಟಬಹುದು ಅಥವಾ ಹುಟ್ಟಿದ ಬಳಿಕ ಅನೇಕ ಅನಾರೋಗ್ಯ ಸಮಸ್ಯೆಗಳು ಕಂಡು ಬರುವುದು.
ಮಕ್ಕಳ ಬುದ್ಧಿಶಕ್ತಿಯ ಮೇಲೆ ಪ್ರಭಾವ ಬೀರುವುದು
ಮಕ್ಕಳ ಮುಂದೆ ಧೂಮಪಾನ ಮಾಡಿದರೆ ಅವರು ಆ ಹೊಗೆಯನ್ನು ಸೇವಿಸಿದರೆ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ಕೆಟ್ಟ ಪ್ರಭಾವ ಬೀರುವುದು. ಅವರ ಬುದ್ಧಿಶಕ್ತಿ ಅಷ್ಟು ಚುರುಕಾಗಿರಲ್ಲ ಅಥವಾ ಅವರಲ್ಲಿ ADHD ಕಂಡು ಬರಬಹುದು.
ಕಿವಿ ಸೋಂಕು
ಮಕ್ಕಳು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಾದಾಗ ಅವರಲ್ಲಿ ಕಿವಿಯ ಸೋಂಕು ಕಂಡು ಬರುವುದು. ಕಿವಿಗಳಲ್ಲಿ ಊತ, ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು.
ಮಕ್ಕಳ ಉಸಿರಾಟದಲ್ಲಿ ಸಮಸ್ಯೆ ಕಂಡು ಬರುವುದು
ಮಕ್ಕಳು ಸೆಕೆಂಡ್ ಹ್ಯಾಂಡ್ ಸ್ಮೋಕ್ ಮಾಡುವುದರಿಂದ ಉಸಿರಾಟದ ತೊಂದರೆ ಹೆಚ್ಚಾಗುವುದು. ಅಸ್ತಮಾ, ನ್ಯೂಮೋನಿಯಾ ಈ ಬಗೆಯ ಸಮಸ್ಯೆ ಹೆಚ್ಚಾಗುವುದು.
ಅನಾರೋಗ್ಯ ಸಮಸ್ಯೆ ಹೆಚ್ಚಾಗುವುದು
ಮಕ್ಕಳು ಸೆಕೆಂಡ್ ಹ್ಯಾಂಡ್ ಸ್ಮೋಕ್ ಮಾಡಿದರೆ ಅವರಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುವುದು. ಇದರಿಂದ ಮಕ್ಕಳಿಗೆ ಸರಿಯಾಗಿ ಶಾಲೆಗೆ ಹೋಗಲು, ಕಲಿಕೆ ಕಡೆಗೆ ಗಮನಹರಿಸಲು ಕಷ್ಟವಾಗುವುದು.
ಮಕ್ಕಳು ಧೂಮಪಾನಿಗಳಾಗಬಹುದು
ಯಾವ ಪೋಷಕರು ತಮ್ಮ ಮಕ್ಕಳು ಧೂಮಪಾನಿಗಳಾಗಲಿ ಎಂದು ಬಯಸುವುದಿಲ್ಲ, ಆದರೆ ಬಯಸಿದರೆ ಮಾತ್ರ ಸಾಲದು ಅದಕ್ಕಾಗಿ ಪ್ರಯತ್ನಿಸಬೇಕಾಗಿದೆ. ತಾವು ಧೂಮಪಾನ ಮಾಡುತ್ತಿದ್ದರೆ ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಸೇವಿಸಿ ಅಂಥ ಮಕ್ಕಳು ಕೂಡ ಧೂಮಪಾನದ ಕಡೆಗೆ ಆಸಕ್ತಿ ಬೆಳೆಸಿ ಧೂಮಪಾನಿಗಳಾಗಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಆದ್ದರಿಂದ ಈ ಕುರಿತು ಗಮನಹರಿಸಿ.
ಆದ್ದರಿಂದ ಪೋಷಕರೇ ನಿಮ್ಮ ಮಗುವಿನ ಆರೋಗ್ಯ ಬಗ್ಗೆ ಕಾಳಜಿವಹಿಸುವುದಾದರೆ ನಿಮ್ಮ ಮಕ್ಕಳು ಸೆಕೆಂಡ್ ಹ್ಯಾಂಡ್ ಸ್ಮೋಕರ್ ಆಗದಂತೆ ಎಚ್ಚರವಹಿಸಿ, ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ನೀವು ಧೂಮಪಾನಕ್ಕೆ ಗುಡ್ ಬೈ ಹೇಳುತ್ತೀರಿ ತಾನೆ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
