Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈ ತೂಕ ಕಡಿಮೆಯಾಗುವುದಕ್ಕೂ ಹೃದಯಾಘಾತಕ್ಕೂ ಸಂಬಂಧವಿದೆಯೇ?
ವಿಜಯ್ ರಾಘವೇಂದ್ರ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ಕೇಳಿ ಬರುತ್ತಿದ್ದಂತೆ ಮತ್ತೆ ಹೃದಯಾಘಾತದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಚಿಕ್ಕ ಪ್ರಾಯದಲ್ಲಿ ತುಂಬಾ ಜನರಿಗೆ ಹೃದಯಘಾತ ಉಂಟಾಗುತ್ತಿದೆ. ಇಂಥ ಪ್ರಕರಣಗಳು ಕೇಳಿ ಬರುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ಅವರು ಮಾಧ್ಯಮಗಳಿಗೆ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳ ಬಗ್ಗೆ ಹೇಳುತ್ತಾ ಒಂದು ಜೀವನಶೈಲಿ ಮತ್ತೊಂದು ಭಾರತೀಯರ ಜೀನ್ ಕೂಡ ಪ್ರಮುಖ ಕಾರಣವಾಗಿದೆ ಎಂಬುವುದಾಗಿ ಹೇಳಿದ್ದಾರೆ.

ಹೃದಯಾಘಾತ ನೋಡಲು ಫಿಟ್ ಆಗಿ ಫೈನ್ ಆಗಿರುವವರಲ್ಲಿಯೂ ಕಂಡು ಬರುತ್ತಿರುವುದರಿಮದ ಈ ಹೃದಯಾಘಾತ ಯಾರಿಗೆ, ಏಕೆ ಬರುತ್ತಿದೆ ಎಂದು ಹೇಳುವುದೇ ಕಷ್ಟವಾಗುತ್ತಿದೆ. ಕೆಲವರು ಮೈ ತೂಕ ಕಡಿಮೆ ಮಾಡಲು ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ, ಇದು ಕೂಡ ಜೀವಕ್ಕೆ ಮುಳುವಾಗುತ್ತಿದೆ ಎಂಬುವುದಾಗಿ ತಜ್ಞರು ಹೇಳುತ್ತಿದ್ದಾರೆ. ಕೆಲವರು ಕೆಲವೇ ತಿಂಗಳಿನಲ್ಲಿ ಹಲವಾರು ಕೆಜಿ ತೂಕ ಕಡಿಮೆ ಮಾಡುತ್ತಾರೆ, ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ತೂಕ ಇಳಿಕೆಯಿಂದ ಹೃದಯಕ್ಕೆ ಹೇಗೆ ಹಾನಿಯುಂಟಾಗುವುದು ಎಂಬುವುದು ನೋಡೋಣ ಬನ್ನಿ:
ತೂಕ ಇಳಿಕೆ ಮತ್ತು ಹೃದಯದ ಆರೋಗ್ಯ
ಹೃದಯದ ಆರೊಗ್ಯಕ್ಕೆ ತೂಕ ನಿಯಂತ್ರಣದಲ್ಲಿಡುವುದು ತುಂಬಾ ಒಳ್ಳೆಯದು. ಆದರೆ ತೂಕ ನಿಯಂತ್ರಣ ಮಾಡುವಾಗ ಆರೋಗ್ಯಕವಾಗಿ ತೂಕ ನಿಯಂತ್ರಣ ಮಾಡಬೇಕು, ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆ ಮಾಡುವುದು ಖಂಡಿತ ಆರೋಗ್ಯಕರವಲ್ಲ, ಇದರಿಂದ ದೇಹದ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟು ಮಾಡುವುದು ಅಲ್ಲದೆ ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾಗುವುದು, ಇದರ ಪ್ರಭಾವ ಹೃದಯದ ಮೇಲೆ ಬಿದ್ದು ಹೃದಯಾಘಾತಕ್ಕೆ ಕಾರಣವಾಗುವುದು.
ಕಡಿಮೆ ಕ್ಯಾಲೋರಿಯ ಡಯಟ್ ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ
ಕ್ರ್ಯಾಶ್ ಡಯಟ್, ಲೋ ಕ್ಯಾಲೋರಿ ಡಯಟ್ ಮಾಡುವುದರಿಂದ ಬೇಗನೆ ಮೈ ತೂಕ ಕಡಿಮೆಯಾಗುವುದು, ಆದರೆ ಈ ರೀತಿ ಮೈ ತೂಕ ಬೇಗನೆ ಕಡಿಮೆ ಮಾಡುವುದರಿಂದ ಇದರಿಂದ ಹೃದಯಕ್ಕೆ ಹಾನಿಯುಂಟಾಗುವುದು. ಕಡಿಮೆ ಕ್ಯಾಲೋರಿಯ ಡಯಟ್‌ನಿಂದಾಗಿ ಪೋಷಕಾಂಶದ ಕೊರತೆ ಉಂಟಾಗುವುದು, ಇದರಿಂದ ಹೃದಯಕ್ಕೆ ಹಾನಿಯುಂಟಾಗುವುದು. ನಮ್ಮ ದೇಹದ ಆರೋಗ್ಯಕ್ಕೆ ಕೆಲವೊಂದು ಪ್ರಮಾಣದಲ್ಲಿ ಕ್ಯಾಲೋರಿ, ಕೊಬ್ಬಿನಂಶದ ಅವಶ್ಯಕತೆ ಇರುತ್ತದೆ. ಆದರೆ ದೇಹಕ್ಕೆ ಅಗ್ಯತವಾದ ಕ್ಯಾಲೋರಿ ದೊರೆಯದೇ ಹೋದಾಗ ಇದರಿಂದ ಇತರ ಅಂಗಾಂಗಗಳ ಕಾರ್ಯಕ್ಕೆ ಕಷ್ಟವಾಗುವುದು, ಇದರಿಂದ ಹೃದಯದ ಮೇಲೆ ಹೆಚ್ಚು ಒತ್ತಡ ಹಾಕುತ್ತದೆ, ಇದರಿಂದಾಗಿ ಕೂಡ ಹೃದಯಾಘಾತ ಅಥವಾ ಹೃದಯ ಸ್ತಂಭನ ಉಂಟಾಗುವುದು.
ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಬೇಕು
ಮೈ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರು ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸಬೇಕು. ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸುವವರು ವ್ಯಾಯಾಮ ಹಾಗೂ ಮಿತ ಆಹಾರದ ಮೂಲಕ ಕಡಿಮೆ ಮಾಡಲು ಪ್ರಯತ್ನಿಸಬೇಕು. ಅದಕ್ಕಾಗಿ ಪ್ರೊಟೀನ್ ಪುಡಿ ಅಥವಾ ತೂಕ ಇಳಿಕೆಗೆ ಸಪ್ಲಿಮೆಂಟ್ಸ್ ಅಂತ ತೆಗೆದುಕೊಳ್ಳುವುದರಿಂದ ಮೈ ತೂಕ ಬೇಗನೆ ಕಡಿಮೆಯಾಗುವುದು. ಆದರೆ ಇದರಿಂದ ಮೈ ತೂಕವೇನೋ ಬೇಗನೆ ಕಡಿಮೆಯಾಗುವುದು. ಆದರೆ ಇದರಿಂದ ಬೇಗನೆ ಮೈ ತೂಕವೇನೋ ಕಡಿಮೆಯಾಗುವುದು. ಆದರೆ ಇದರಿಂದ ಅಡ್ಡಪರಿಣಾಮವೇ ಅಧಿಕ.
ಫೇಡ್ ಡಯಟ್, ಕ್ರ್ಯಾಶ್ ಡಯಟ್ ಇವುಗಳಷ್ಟೇ ಅಲ್ಲ ಅತಿಯಾದ ವ್ಯಾಯಾಮ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ವ್ಯಾಯಾಮ ಮಾಡುವುದರಿಂದ ಕೂಡ ಹೃದಯಕ್ಕೆ ಹಾನಿಯುಂಟು ಮಾಡುವುದು.
ಆರೋಗ್ಯಕರ ಆಹಾರ, ಮಿತ ವ್ಯಾಯಾಮ ಮಾಡಿ
ಮೈ ತೂಕ ಕಡಿಮೆ ಮಾಡಲು ನೀವು ಇತರ ಮಾರ್ಗಗಳನ್ನು ಅನುಸರಿಸುವ ಬದಲಿಗೆ ಆರೋಗ್ಯಕರ ಆಹಾರವನ್ನು ಮಿತಿಯಲ್ಲಿ ಸೇವಿಸಬೇಕು ಜೊತೆಗೆ ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ಇಷ್ಟು ಮಾಡಿದರೆ ಸಾಕು ಮೂ ತೂಕ ನಿಯಂತ್ರಣದಲ್ಲಿಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications