Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೈಬ್ರಾಯ್ಡ್ ಗಡ್ಡೆಯಿರುವ ಮಹಿಳೆಯರಿಗೆ ಬಗ್ಗೆ ಸ್ತ್ರೀ ರೋಗ ತಜ್ಞೆ ಡಾ. ಶೆಫಾಲಿಕಾ ಎಸ್ ಬಿ ನೀಡಿರುವ ಸಲಹೆಗಳು
ಭಾರತದಲ್ಲಿ ಹೆಚ್ಚುತ್ತಿರುವ ಗರ್ಭಾಶಯದ ಫೈಬ್ರಾಯ್ಡ್ ಗಡ್ಡೆಗಳ ಹೊರೆ. ಹೆಚ್ಚುತ್ತಿರುವ ಈ ಸಮಸ್ಯೆಯನ್ನು ಮಹಿಳೆಯರು ಹೇಗೆ ನಿಭಾಯಿಸಬಹುದು? ಎಂಬವುದರ ಬಗ್ಗೆ ಡಾ. ಶೆಫಾಲಿಕಾ ಎಸ್ ಬಿ, ಕನ್ಸಲ್ಟೆಂಟ್ - ಮಿನಿಮಲ್ಲಿ ಇನ್ವಾಸಿವ್ ಸ್ತ್ರೀರೋಗತಜ್ಞರು, ಮಣಿಪಾಲ ಆಸ್ಪತ್ರೆ ಯಶವಂತಪುರ ಇವರು ನಮ್ಮೊಂದಿಗೆ ಹಂಚಿಕೊಂಡಿರುವ ಸಲಹೆ ಹೀಗಿವೆ:

ಫೈಬ್ರಾಯ್ಡ್ ಗಡ್ಡೆ ಎಂದರೇನು?
"ಫೈಬ್ರಾಯ್ಡ್ ಗಡ್ಡೆಗಳು ಗರ್ಭಕೋಶದ ಮಧ್ಯ ಭಾಗದಲ್ಲಿನ ಸ್ನಾಯುಗಳ ಪದರಿನ ಅತಿಯಾದ ಬೆಳವಣಿಗೆಯಿಂದ ಸಂಭವಿಸುತ್ತವೆ. ಈ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಫೈಬ್ರಾಯ್ಡ್ ಗಡ್ಡೆಗಳು ಹೆಚ್ಚು ಸಾಮಾನ್ಯವಾಗಿವೆ. ಪರಿಸರ ಮಾಲಿನ್ಯ, ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ನಾವು ಸೇವಿಸುವ ಹೆಚ್ಚಿನ ಆಹಾರವು ಹಾನಿಕಾರಕ ರಾಸಾಯನಿಕಗಳಿಂದ ಕೂಡಿದೆ, ಅವು ಅಂತಃಸ್ರಾವಕ ವ್ಯವಸ್ಥೆಯನ್ನು (endocrine system) ಹಾನಿಗೊಳಿಸಬಹುದು, ಆದ್ದರಿಂದ ಅವುಗಳನ್ನು ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳು (endocrine disrupting chemicals) ಎಂದು ಕರೆಯಲಾಗುತ್ತದೆ. ಈ ರಾಸಾಯನಿಕಗಳು ತೀವ್ರವಾದ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತವೆ, ಇದು ಫೈಬ್ರಾಯ್ಡ್‌ಗಳ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವಾಗಿದೆ.
ಫೈಬ್ರಾಯ್ಡ್ ಗಡ್ಡೆ ಲಕ್ಷಣಗಳು
ಫೈಬ್ರಾಯ್ಡ್ ಗಡ್ಡೆಗಳು ಋತುಚಕ್ರದ ಸಮಯದಲ್ಲಿಅಧಿಕ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯ ರೂಪದಲ್ಲಿ ರಕ್ತಸ್ರಾವವನ್ನು ಉಂಟುಮಾಡುತ್ತವೆ. ಫೈಬ್ರಾಯ್ಡ್‌ಗಳು ದೀರ್ಘಕಾಲದ ಮುಟ್ಟಿನ ಚಕ್ರಗಳು ಅಥವಾ ಆಗಾಗ್ಗೆ (ಸಮಯಕ್ಕಿಂತ ಮುಂಚಿತವಾಗಿ) ಋತುಚಕ್ರಗಳಿಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಅತಿಯಾದ ರಕ್ತಸ್ರಾವ, ರಕ್ತಹೀನತೆ, ಮತ್ತು ಹಿಮೊಗ್ಲೋಬಿನ್ ಕೊರತೆ ಉಂಟಾಗಿ ಅನೀಮಿಯ ಕಾಯಿಲೆ (anaemia) ಸಂಭವಿಸಬಹುದು. ಅನೀಮಿಯ ಕಾಯಿಲೆಯು, ತೀವ್ರವಾದ ಸುಸ್ತು, ಕೈ ಕಾಲು ಮತ್ತು ಮೈಯಲ್ಲಿ ನೋವು, ಉದಾಸೀನತೆ, ಎಕಾರಗಟೆಯ ಕ್ಷೀಣಿಸುವಿಕೆ, ಕೆಲಸದಲ್ಲಿ ನಿರಾಸಕ್ತಿ, ಮುಂತಾದ ತೊಂದರೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಋತುಚಕ್ರದ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ದಿನನಿತ್ಯದ ಕಾರ್ಯಗಳು ಹಾಗೂ ವ್ಯಾವಹಾರಿಕ (ಕಚೇರಿ) ಕೆಲಸ ಮಾಡುವುದಕ್ಕೆ ಕಷ್ಟ ಉಂಟಾಗಬಹುದು.
ಚಿಕಿತ್ಸೆ
ಹೆಚ್ಚಿನ ಮಹಿಳೆಯರಲ್ಲಿ ಫೈಬ್ರಾಯ್ಡ್ ಗೆಡ್ಡೆಗಳ ಬಗ್ಗೆ ಸಾಮಾನ್ಯವಾದ ಅರಿವಿನ ಕೊರತೆಯಿದೆ. ರಕ್ತಹೀನತೆಯ ಲಕ್ಷಣಗಳು ಫೈಬ್ರಾಯ್ಡ್‌ಗಳಿಂದ ಉಂಟಾಗುತ್ತವೆ ಎಂದು ಅವರು ಅರಿತುಕೊಳ್ಳಲು ವಿಫಲರಾಗಬಹುದು, ಇದು ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತದ ನಷ್ಟವನ್ನು ಉಂಟುಮಾಡುತ್ತದೆ. ಆದ್ದರಿಂದ ಫೈಬ್ರಾಯ್ಡ್‌ಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದೆ. ಯಾವುದೇ ಮಹಿಳೆ ತನ್ನ ಋತುಚಕ್ರದ ಸಮಯದಲ್ಲಿ ಭಾರೀ ರಕ್ತದ ನಷ್ಟದಿಂದ ಬಳಲುತ್ತಿದ್ದರೆ ಮತ್ತು ರಕ್ತಹೀನತೆಯ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಸ್ತ್ರೀರೋಗತಜ್ಞರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.
ಸರಳವಾದ ಅಲ್ಟ್ರಾಸೌಂಡ್ ಸ್ಕ್ಯಾನ್ ಯಾವುದೇ ಗರ್ಭಾಶಯದ ಫೈಬ್ರಾಯ್ಡ್‌ಗಳು ಇದೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಫೈಬ್ರಾಯ್ಡ್‌ಗಳ ಆರಂಭಿಕ ರೋಗನಿರ್ಣಯವು ಸರಿಯಾದ ಚಿಕಿತ್ಸೆಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಮತ್ತು ಮುಟ್ಟಿನ ಸಮಸ್ಯೆಗಳು, ಅತಿಯಾದ ರಕ್ತದ ನಷ್ಟ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಗರ್ಭಾಶಯದ ಫೈಬ್ರಾಯ್ಡ್ ಗೆಡ್ಡೆಗಳ ಪ್ರಕರಣಗಳ ಹೆಚ್ಚಳವನ್ನು ಪರಿಗಣಿಸಿ, ಮಹಿಳೆಯರು ತಮ್ಮ ಮುಟ್ಟಿನ ಆರೋಗ್ಯದ ಬಗ್ಗೆ ಸರಿಯಾದ ಜ್ಞಾನದೊಂದಿಗೆ ತಮ್ಮನ್ನು ತಾವು ಸಶಕ್ತಗೊಳಿಸಿಕೊಳ್ಳುವುದು ಮತ್ತು ಯಾವುದೇ ತೊಡಕುಗಳನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ."
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


