Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರಲ್ಲಿ ಮಧುಮೇಹ ಸಮಸ್ಯೆವಿದ್ದರೆ ಬಂಜೆತನ ಉಂಟಾಗುವುದೇ?
ಮಧುಮೇಹ ಎಂಬುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಲ್ಲಿ ಕಂಡು ಬರುತ್ತಿದೆ, ಬದಲಾದ ಜೀವನ ಶೈಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತಿದೆ. ಈ ಮಧುಮೇಹದ ಸಮಸ್ಯೆ ಪುರುಷರು-ಮಹಿಳೆಯರನ್ನೆದೆ ಎಲ್ಲರನ್ನೂ ಕಾಡುತ್ತಿದೆ, ಮಧುಮೇಹದ ಸಮಸ್ಯೆ ಶುರುವಾದರೆ ಒಂದರ ಹಿಂದೆ ಮತ್ತೊಂದು ಎಂಬಂತೆ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ಇದು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುತ್ತದೆ.
ಮಧುಮೇಹ ಪುರುಷರ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ, ಇದರಿಂದ ಮಕ್ಕಳಾಗುವುದಕ್ಕೆ ತೊಂದರೆಯಾಗುವುದೇ? ಇದರ ಬಗ್ಗೆ ಹೆಚ್ಚಿನ ಮಾಹಿತಿ ನೋಡೋಣ ಬನ್ನಿ:

ಮಧುಮೇಹದ ಲಕ್ಷಣಗಳು
ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು
ಅತಿಯಾದ ಬಾಯಾರಿಕೆ
ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗುವುದು
ತಲೆಸುತ್ತು
ಸುಸ್ತು
ಕಣ್ಣುಗಳು ಮಂಜಾಗುವುದು
ಗಾಯವಾದರೆ ಬೇಗನೆ ಒಣಗಿದಿರುವುದು
ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಮಧುಮೇಹದ ಸಮಸ್ಯೆ ಇರುವ ಪುರುಷರಲ್ಲಿ ಶೀಘ್ರ ಸ್ಖಲನದ ಸಮಸ್ಯೆ ಕಂಡು ಬರುವುದು
ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಅಲ್ಲದೆ ಶಿಶ್ನಗಳಿಗೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ, ಇದರಿಂದ ಶೀಘ್ರ ಸ್ಖಲನದ ಸಮಸ್ಯೆ ಉಂಟಾಗುತ್ತದೆ.
ಅಲ್ಲದೆ ಮಧುಮೇಹದ ಸಮಸ್ಯೆ ಟೆಸ್ಟೋಸ್ಟಿರೋನೆ ಹಾರ್ಮೋನ್‌ಗಳ್ಲಿ ವ್ಯತ್ಯಾಸ ಉಂಟು ಮಾಡುತ್ತದೆ, ಇದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.
ಯಾವ ಬಗೆಯ ಮಧುಮೇಹ ಪುರುಷರ ಲೈಂಗಿಕ ಸಾಮರ್ಥ್ಯ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ?
ಮಧುಮೇಹದಲ್ಲಿ ಎರಡು ವಿಧ
ಟೈಪ್ 1 ಮಧುಮೇಹ
ಟೈಪ್ 2 ಮಧುಮೇಹ
ಇದರಲ್ಲಿ ಟೈಪ್ 2 ಮಧುಮೇಹ ಹೆಚ್ಚಿನ ಪರಿಣಾಮ ಬೀರುತ್ತದೆ, ಅಲ್ಲದೆ ಟೈಪ್ 2 ಮಧುಮೇಹ ಅತಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ.
ಮಧುಮೇಹವಿದ್ದರೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು
ಮಧುಮೇಹ ಮಹಿಳೆಯರಿಗಿದ್ದರೂ ಗರ್ಭಧಾರಣೆಗೆ ತೊಂದರೆ ಉಂಟಾಗುವುದು. ಅದರಂತೆ ಪುರುಷರಿಗೆ ಮಧುಮೇಹದ ಸಮಸ್ಯೆವಿದ್ದರೆ ವೀರ್ಯಾಣುಗಳ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು.
ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ಬರುವುದನ್ನು ತಡೆಗಟ್ಟಬಹುದು
ಈ ಮಧುಮೇಹದ ಕಾಯಿಲೆಯನ್ನು ಮನಸ್ಸು ಮಾಡಿದರೆ ತಡೆಗಟ್ಟಬಹುದು, ಏಕೆಂದರೆ ಇದು ಜೀವನಶೈಲಿಯಿಂದ ಬರುವಂಥ ಕಾಯಿಲೆಯಾಗಿದೆ. ಅನಾರೋಗ್ಯಕರ ಜೀವನಶೈಲಿಯಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆಹಾರ ಶೈಲಿ, ಅತ್ಯಧಿಕ ಮಾನಸಿಕ ಒತ್ತಡ, ದೈಹಿಕ ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಮಧುಮೇಹದ ಸಮಸ್ಯೆಗೆ ಕಾರಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
