Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಒಂದು ಪೆಗ್ ಅಷ್ಟೇ, ತೊಂದರೆಯಾಗಲ್ಲ ಅಂದುಕೊಂಡ್ರೆ ತಪ್ಪು, ಮದ್ಯದಿಂದ ಬರುತ್ತೆ 7 ಬಗೆಯ ಕ್ಯಾನ್ಸರ್
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎಂಬ ಎಚ್ಚರಿಕೆಯ ಬರಹದೊಂದಿಗೆ ಮದ್ಯದ ಬಾಟಲಿಗಳು ಮಾರಾಟವಾಗುತ್ತಿವೆ, ಅಲ್ಲದೆ ಮದ್ಯ ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕುಡಿಯುವ ಎಲ್ಲರಿಗೂ ಗೊತ್ತು, ಆದರೂ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಮದ್ಯಪಾನಿಗಳೇ ಎಚ್ಚರ ... ಎಚ್ಚರ ಲಹರಿಗಾಗಿ ಕುಡಿಯುವ ಮದ್ಯದಿಂದ ಕ್ಯಾನ್ಸರ್ ಬಂದಿ ಆರೋಗ್ಯ ನರಕವಾಗಬಹುದು.
ಮದ್ಯ ಕುಡಿಯುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಎಚ್ಚರಿಸಿದ್ದಾರೆ, ದಿನದಲ್ಲಿ ಒಂದು ಪೆಗ್ ಅಷ್ಟೇ ಎಂದು ಹೇಳುವುದಾದರೆ ಇದು ಕೂಡ ಅಪಾಯಕಾರಿ ಎಂದು ಹೇಳಿದ್ದಾರೆ.

ಅವರು ನೀಡಿರುವ ಅಂಕಿಅಂಶ ಪ್ರಕಾರ ಯುಎಸ್‌ನಲ್ಲಿ ವರ್ಷಕ್ಕೆ 20, 000 ಜನರು ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪುತ್ತಿದ್ದಾರೆ, ಅವರಲ್ಲಿ 13, 500 ಜನ ಕುಡುಕರಾಗಿದ್ದಾರೆ, ಆದರೆ ಈ ಬಗ್ಗೆ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ ಎಂಬುವುದಾಗಿ ಹೇಳಿದ್ದಾರೆ.
ಮದ್ಯ ಕುಡಿಯುವುದರಿಂದ ಕ್ಯಾನ್ಸರ್ ಹೇಗೆ ಉಂಟಾಗುವುದು?
ಮದ್ಯ ಹೊಟ್ಟೆಯನ್ನು ಸೇರಿದಾಗ ಚಯಪಚಯ ಕ್ರಿಯೆಯಲ್ಲಿ ರಾಸಾಯನಿಕವಾಗಿ ಪರಿವರ್ತನೆಯಾಗಿ ಅದು DNA ಹಾನಿ ಮಾಡುತ್ತದೆ, ಹೀಗಾಗಿ
ಕ್ಯಾನ್ಸರ್ ಕಣಗಳ ಉತ್ಪತ್ತಿ ಹೆಚ್ಚಾಗುವುದು ಎಂದು ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹೇಳಿದೆ. ಅಲ್ಲದೆ ಮದ್ಯವು ದೇಹವು ಕೆಲ ಪೋಷಕಾಂಶಗಳು ಹೀರುವುದನ್ನು ಕೂಡ ತಡೆಗಟ್ಟುತ್ತದೆ ಎಂದು ಹೇಳಿದೆ.
ಯಾರು ಮದ್ಯ ಸೇವನೆ ಮಾಡ್ತಾರೋ ಅವರಿಗೆ ಈ ಕ್ಯಾನ್ಸರ್ ಅಪಾಯ ಹೆಚ್ಚಿದೆ
ಲಿವರ್ ಕ್ಯಾನ್ಸರ್
ಸ್ತನ ಕ್ಯಾನ್ಸರ್
ಬ್ರೆಸ್ಟ್ ಕ್ಯಾನ್ಸರ್ ಸೇರಿದಂತೆ ಮದ್ಯ ಸೇವನೆಯಿಂದ 7 ಬಗೆಯ ಕ್ಯಾನ್ಸರ್ ಅಪಾಯವಿದೆ
ಮದ್ಯ ಬಾಟಲಿಗಳ ಮೇಲೆ ಸಿಗರೇಟ್ ಪ್ಯಾಕ್ ಮೇಲೆ ಇರುವಂತೆ ಮದ್ಯ ಕ್ಯಾನ್ಸರ್ ಕಾರಕ ಎಂಬ ಎಚ್ಚರಿಕೆ ಬರವಿರಬೇಕು ಎಂದು ಡಾ. ಮೂರ್ತಿ ಹೇಳಿದ್ದಾರೆ. ಯುಎಸ್‌ನಲ್ಲಿ ಮದ್ಯ ಗರ್ಭಣಿಯರಿಗೆ ಒಳ್ಳೆಯದಲ್ಲ ಎಂಬ ಎಚ್ಚರಿಕೆಯ ಲೇಬಲ್ ಹಾಕಿ ಮಾರಾಟ ಮಾಡಲಾಗುತ್ತಿದೆ. ನಮ್ಮಲ್ಲಿ ಮದ್ಯ ಆರೋಗ್ಯಕ್ಕೆ ಹಾನಿಕರ ಎಂಬ ಲೇಬಲ್ ಇದೆ, ಆದರೆ ಮದ್ಯದಿಂದ ಕ್ಯಾನ್ರರ್ ಬರುತ್ತದೆ ಎಂಬ ಎಚ್ಚರಿಕೆಯ ಬರಹ ಹಾಕಿ ಮಾರಾಟ ಮಾಡಬೇಕು ಎಂಬುವುದಾಗಿ ಅವರು ಹೇಳಿದ್ದಾರೆ.
ಮಿತಿಯಲ್ಲಿ ಮದ್ಯ ಕುಡಿದರೆ ತೊಂದರೆಯಿಲ್ಲ ಎಂಬ ಕಲ್ಪನೆಯನ್ನು ಉಲ್ಟಾ ಮಾಡಿದೆ ಹೊಸ ಅಧ್ಯಯನ
ಮಧ್ಯ ಮಿತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಲ್ಪನೆ ಇತ್ತು, ಈ ಕಾರಣಕ್ಕೆ ಹಲವರು ಮದ್ಯ ತೆಗೆದುಕೊಳ್ಳುತ್ತಿದ್ದರು. ಆದರೆ ದಿನಾ ಒಂದು ಪೆಗ್ ಕುಡಿದರೂ ಕ್ಯಾನ್ಸರ್ ಬರುತ್ತದೆ, ಅಲ್ಲದೆ ಕ್ಯಾನ್ಸರ್ ಕಣಗಳು ಉತ್ಪತ್ತಿಯಾದಾಗ ಮದ್ಯ ಸೇವನೆ ರೋಗವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹೇಳಿದೆ.
ಜಗತ್ತಿನಲ್ಲಿ ಬದಲಾಗುತ್ತಿದೆ ಮದ್ಯ ಟ್ರೆಂಡ್
ಐರ್ಲ್ಯಾಂಡ್‌ನಲ್ಲಿ 2026ರಿಂದ ಮದ್ಯದಿಂದ ಕ್ಯಾನ್ಸರ್ ಅಪಾಯವಿದೆ ಎಂಬ ಎಚ್ಚರಿಕೆಯ ಲೇಬಲ್ ಹಾಕಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಕೆನಡಾ ಕೂಡ ವಾರದಲ್ಲಿ 2 ಪೆಗ್‌ಗಿಂತ ಹೆಚ್ಚು ಕುಡಿಯುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ನೀಡಿದೆ.
ಮದ್ಯ ಮನುಷ್ಯನ ಆರೋಗ್ಯದ ಮೇಲೆ ಮಾತ್ರವಲ್ಲ ಆರ್ಥಿಕತ ಮೇಲೆ ಕೂಡ ಪರಿಣಾಮ ಬೀರುವುದು
ಮದ್ಯ ಕುಡಿಯುವುದರಿಂದ ಮನೆಯ ಆರ್ಥಿಕತೆ ಮೇಲೆ ಪ್ರಭಾವ ಬೀರುವುದು, ಇನ್ನು ಕ್ಯಾನ್ಸರ್ ಕೂಡ ಅಷ್ಟೇ ಮನೆಯನ್ನು ಆರ್ಥಿಕ ಸಮಸ್ಯೆಗೆ ದೂಡುತ್ತದೆ, ಹಾಗಾಗಿ ಮದ್ಯ, ಕ್ಯಾನ್ಸರ್ ಎರಡೂ ಮನುಷ್ಯನನ್ನು ದಿವಾಳಿಯನ್ನಾಗಿ ಮಾಡುತ್ತದೆ.
ಹೀಗಾಗಿ ನಾನು ಯಾವಾಗಾದರು ಒಮ್ಮೆ ಮದ್ಯ ಸೇವಿಸುತ್ತೇನೆ ಎಂದು ಹೇಳುವವರು ಕೂಡ ಮದ್ಯ ದೂರವಿಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
