Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಎಸಿಯಲ್ಲಿ ಹೆಚ್ಚಾಗಿ ಇದ್ದರೆ ಇಷ್ಟೊಂದು ಆರೋಗ್ಯ ಸಮಸ್ಯೆಗಳು ಬರುವುದು, ಜೋಕೆ!
ಈ ವರ್ಷ ತುಂಬಾನೇ ಸೆಕೆ ಎಂದು ತುಂಬಾ ಜನ ಎಸಿ ಹಾಕಿಸಿಕೊಂಡಿದ್ದಾರೆ, ಫ್ಯಾನ್ ಗಾಳಿ ತಟ್ಟುವುದೇ ಇಲ್ಲ, ಅಷ್ಟೊಂದು ಸೆಕೆ ಇತ್ತು. ಎಸಿಯಿದ್ದರೆ ಸಮಧಾನ, ಇಲ್ಲದಿದ್ದರೆ ಮನೆಯೊಳಗಡೆ ಕೂರುವುದಕ್ಕೂ ಕಷ್ಟವಾಗುತ್ತಿತ್ತು. ಕೋಣೆ, ಮನೆಯನ್ನು ತಣ್ಣನೆ ಇರಿಸುವ ಎಸಿ ಆರೋಗ್ಯಕ್ಕೆ ಒಳ್ಳೆಯದಲ್ಲ.
ತುಂಬಾ ಹೊತ್ತು ಎಸಿಯಲ್ಲಿ ಕೂರುವುದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಎಸಿಯಲ್ಲಿ ಹೆಚ್ಚು ಹೊತ್ತು ಇದ್ದರೆ ಈ ಬಗೆಯ ಸಮಸ್ಯೆ ಉಂಟಾಗುವುದು ನೋಡಿ:

ತ್ವಚೆ ಡ್ರೈಯಾಗುವುದು, ತ್ವಚೆಯಲ್ಲಿ ತುರಿಕೆ
ಎಸಿಯಲ್ಲಿ ಕೂತಾಗ ತಣ್ಣನೆ ಹಿತ ಅನುಭವ, ಆದರೆ ತ್ವಚೆ ಗಮನಿಸಿ ನೋಡಿ ತ್ವಚೆ ತುಂಬಾ ಡ್ರೈಯಾಗಿರುತ್ತದೆ. ಇನ್ನು ಕೆಲವರಿಗೆ ತ್ವಚೆಯಲ್ಲಿ ತುರಿಕೆ ಕಂಡು ಬರುವುದು. ತುರಿಕೆ ಎಸಿ ಬಳಸದಿದ್ದರೆ ಸರಿಯಾಗುತ್ತೆ, ಆದರೆ ಎಸಿಯಲ್ಲಿ ಕಳೆದರೆ ತ್ವಚೆ ತುಂಬಾನೇ ಡ್ರೈಯಾಗುವುದು.
ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು
ಎಸಿಯಲ್ಲಿ ಬಾಯಾರಿಕೆ ಅನಿಸಲ್ಲ, ಆದರೆ ನೀರು ಕುಡಿಯಬೇಕು, ಇಲ್ಲದಿದ್ದರೆ ತುಂಬಾನೇ ನಿರ್ಜಲೀಕರಣ ಉಂಟಾಗುವುದು, ಹೀಗಾಗಿ ತ್ವಚೆ ಡ್ರೈಯಾಗುತ್ತದೆ, ಆದ್ದರಿಂದ ಎಸಿಯಲ್ಲಿ ಕೂತಿದ್ದರೂ ದಿನದಲ್ಲಿ 8 ಲೋಟ ನೀರು ಕುಡಿಯುವುದು ಕಡಿಮೆ ಮಾಡಬಾರದು.
ಉಸಿರಾಟದ ಸಮಸ್ಯೆ
ಇನ್ನು ಎಸಿ ಅಸ್ತಮಾ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ, ಅಸ್ತಮಾ ಸಮಸ್ಯೆ ಉಂಟಾಗುವುದು, ಗಂಟಲು ಕೆರೆತ, ಕೆಮ್ಮು ಈ ಬಗೆಯ ಸಮಸ್ಯೆ ಉಂಟಾಗುವುದು, ಅಲ್ಲದೆ ಕಫ ಬರುವುದು, ಶ್ವಾಸಕೋಶದ ಉರಿಯೂತದ ಸಮಸ್ಯೆ ಕಂಡು ಬರುವುದು. ಹಾಗಾಗಿ ಅಸ್ತಮಾ ಅಲರ್ಜಿಯಿದ್ದರೆ ಎಸಿ ಒಳ್ಳೆಯದಲ್ಲ.
ತಲೆನೋವು ಉಂಟಾಗುವುದು
ಎಸಿಯಲ್ಲಿ ತುಂಬಾ ಹೊತ್ತು ಕೂರುವುದರಿಂದ ತಲೆನೋವು ಉಂಟಾಗುವುದು. ನಿಮಗೆ ಆಫೀಸ್‌ನಲ್ಲಿ ತುಂಬಾ ತಲೆನೋವು ಉಂಟಾಗ ಉತ್ತಿದ್ದರೆ ಎಸಿಯೂ ಒಂದು ಕಾರಣವಾಗಿರಬಹುದು.
ಕಣ್ಣುಗಳು ಡ್ರೈಯಾಗುವುದು
ಕಣ್ಣು ಡ್ರೈಯಾದರೆ ದೃಷ್ಟಿ ಮಂಜಾಗುವುದು, ಹೆಚ್ಚಾಗಿ ಎಸಿಯಲ್ಲಿ ಕೂತರೆ, ಹೆಚ್ಚಾಗಿ ಮೊಬೈಲ್, ಲ್ಯಾಪ್‌ಟಾಪ್ ನೋಡುವುದರಿಂದ ಕಣ್ಣು ಡ್ರೈಯಾಗುವುದು.
ಸೋಂಕು ಹರಡುವುದು
ಎಸಿ ರೂಮ್‌ನಲ್ಲಿ ಬೇಗನೆ ಸೋಂಕು ಹರಡುತ್ತದೆ. ಅಲ್ಲದೆ ಎಸಿ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
