Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಿಸಿ ಬಿಸಿ ನೀರಿನ ಸ್ನಾನ ಪುರುಷ ಸಾಮರ್ಥ್ಯ ಕುಗ್ಗಿಸುವುದು ಜಾಗ್ರತೆ! ಮಕ್ಕಳಾಗುವುದು ಕೂಡ ಕಷ್ಟ
ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತುಂಬಾನೇ ಹಿತ ಅನಿಸುವುದು, ಆದ್ರೆ ಪುರುಷರೇ ಜಾಗ್ರತೆ ಈ ಅಭ್ಯಾಸ ಪುರುಷರ ಸಾಮರ್ಥ್ಯದ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುವುದು. ಇದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಯಾಗುತ್ತದೆ. ಪುರುಷರಲ್ಲಿ ಬಂಜೆತನ ಉಂಟು ಮಾಡುವುದು.
ಬಿಸಿ ನೀರಿನ ಸ್ನಾನ ಪುರುಷರ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ಸಂಶೋಧನೆ ಪ್ರಕಾರ ಉಷ್ಣಾಂಶಕ್ಕೂ, ಟೆಸ್ಟೋಸ್ಟಿರೋನೆ ಪ್ರಮಾಣಕ್ಕೂ ಸಂಬಂಧವಿದೆ. ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಟೆಸ್ಟೋಸ್ಟಿರೋನೆ ಕಡಿಮೆಯಾಗುವುದು. ಇದರಿಂದ ವೀರ್ಯಾಣುಗಳು ಕಡಿಮೆಯಾಗುವುದು.

ವೀರ್ಯಾಣುಗಳು ಕಡಿಮೆಯಾದರೆ ಬಂಜೆತನ ಉಂಟಾಗುವುದು
ಬಂಜೆತನ ಎಂಬುವುದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಕಂಡು ಬರುವುದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ ಮಕ್ಕಳಾಗಲು ಕಷ್ಟವಾಗುವುದು, ಆದರೆ ವೃಷಭಗಳು ಬಿಸಿಯಾಗಬಾರದು, ಬಿಗಿಯಾದ ಅಂಡರ್‌ವೇರ್ ಧರಿಸಬೇಡಿ ಎಂಬ ಸಲಹೆ ನೀಡಲಾಗುವುದು.
ಪುರುಷರಲ್ಲಿ ವೀರ್ಯಾಣುಗಳು ಹೆಚ್ಚಾಗಲು ಏನು ಮಾಡಬೇಕು?
ಪ್ರತಿನಿತ್ಯ ವ್ಯಾಯಾಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹವನ್ನು ಫಿಟ್ ಆಗಿ ಇಡುವುದು ಮಾಡುವುದು ಮಾತ್ರವಲ್ಲ ನಮ್ಮ ಪುರುಷ ಸಾಮರ್ಥ್ಯವನ್ನು ಹೆಚ್ಚಿಸಬಹುದು. ದೈಹಿಕ ವ್ಯಾಯಾಮ ಮಾಡುವುದರಿಂದ ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಾಗುವುದು.
ವಿಟಮಿನ್ ಸಿ ಸೇವಿಸಿ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಿಸಿ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗಲು ಕೂಡ ಇದು ಸಹಕಾರಿ.
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು
ಮಾನಸಿಕ ಒತ್ತಡ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ. ಅತ್ಯಧಿಕ ಮಾನಸಿಕ ಒತ್ತಡ ನಿಮ್ಮ ದೇಹದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.
ಸತು
ಸತುವಿನಂಶವಿರುವ ಆಹಾರ ಸೇವಿಸಿ. ಮೀನು, ಮೊಟ್ಟೆ, ಮೃದ್ವಂಗಿಗಳು ಈ ಬಗೆಯ ಆಹಾರದಲ್ಲಿ ಸತುವಿನಂಶ ಇರುತ್ತದೆ. ಸಿಹಿ ಕುಂಬಳಕಾಯಿ ಬೀಜದಲ್ಲಿಯೂ ಸತುವಿನಂಶ ಇದೆ.
ಮದ್ಯಪಾನ ಕಡಿಮೆ ಮಾಡಿ.
ಅತ್ಯಧಿಕ ಮದ್ಯಪಾನ ಮಾಡುವುದರಿಂದ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
ಪುರುಷರಲ್ಲಿ ಬಂಜೆತನಕ್ಕೆ ಕಾರಣವೇನು?
* ಧೂಮಪಾನ * ಅತ್ಯಧಿಕ ಮದ್ಯಪಾನ * ಅತ್ಯಧಿಕ ಮಾನಸಿಕ ಒತ್ತಡ * ಅನಾರೋಗ್ಯಕರ ಆಹಾರ ಶೈಲಿ * ಅನಾರೋಗ್ಯಕರ ಜೀವನಶೈಲಿ ಈ ಎಲ್ಲಾ ಕಾರಣಗಳಿಂದ ಬಂಜೆತನ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
