Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮೈ ಮೇಲೆ ಬಿಳಿ ಮಚ್ಚೆ ಮೂಡಿದರೆ ಹೀಗೆ ಮಾಡಿ..! ಮನೆಯಲ್ಲಿದೆ ಮದ್ದು..!
ನಿಮ್ಮ ಚರ್ಮದ ಮೇಲೆ ಬಿಳಿ ಕಲೆಗಳು ಆಗಿವೆಯೇ..? ಇಲ್ಲ ಆಗಲು ಈಗತಾನೆ ಆರಂಭಿಸಿವೆಯೇ..? ಈ ಬಿಳಿ ಕಲೆಗಳು ಅಥವಾ ಮಚ್ಚೆಯುಪಿ ಆಲ್ಬಾ ಅಥವಾ ಪಾಲಿಮಾರ್ಪಲ್ ಲೈಟ್ ಎರಿಪ್ಷನ್ ಎಂಬ ಸ್ಥಿತಿಯ ಕಾರಣದಿಂದಾಗಿ ಉಂಟಾಗುತ್ತದೆ. ದೇಹದಲ್ಲಿ ಮೆಲನಿನ್ ಉತ್ಪಾದನೆಯನ್ನು ಮಾಡುವ ಜೀವಕೋಶಗಳಲ್ಲಿ ನ್ಯೂನತೆಯಾದರೆ ಈ ರೀತಿ ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತದೆ.
ಆದರೆ ಸೂರ್ಯನ ಕಿರಣಗಳಲ್ಲಿರುವ ನೇರಳಾತೀತ ಕಿರಣದಿಂದಲೂ ಸಹ ಈ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಹಲವು ರೀತಿಯ ಕ್ರೀಮ್‌ಗಳ ಬಳಸಿದರೂ ಕೆಲವರಲ್ಲಿ ಕಡಿಮೆಯಾಗುವುದಿಲ್ಲ. ಬದಲಿಗೆ ಹೆಚ್ಚಾಗುತ್ತಾ ಹೋಗುತ್ತದೆ. ಮೈಯಲ್ಲಿ ಹರಡಲು ಆರಂಭವಾಗುತ್ತದೆ.

ಆದರೆ ಇವುಗಳಿಗಿಂತ ಪರಿಣಾಮಕಾರಿಯಾಗಿ ವರ್ತಿಸುವ ಹಲವಾರು ಮನೆಮದ್ದುಗಳು ಚರ್ಮದ ಸಮಸ್ಯೆಯನ್ನು ನೀಗಿಸಬಲ್ಲವು. ಹಾಗಾದ್ರೆ ಈ ರೀತಿಯ ಬಿಳಿಯ ಕಲೆಗಳನ್ನು ನಿವಾರಿಸಲು ಮನೆಯಲ್ಲೇ ಏನನ್ನು ಮಾಡಬಹುದು ಎಂಬ ಕೆಲವು ಮನೆಮದ್ದುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಆಂಟಿ ಫಂಗಲ್ ಗುಣಗಳಿದೆ ಮತ್ತು ಇದು ಚರ್ಮದ ಬಿಳಿಯ ಕಲೆಗಳನ್ನು ನಿವಾರಿಸಲು ಬಹಳವಾಗಿ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಆಗಿರುವಂತೆ ಮತ್ತು ತೇವಾಂಶಭರಿತವಾಗಿ ಕೂಡಿರುವಂತೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
•2-3 ಸ್ಪೂನ್ ಕೊಬ್ಬರಿ ಎಣ್ಣೆ
ಕೆಲವು ಹನಿಗಳಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಬಿಳಿಯ ಕಲೆಗಳಾಗಿರುವ ಚರ್ಮದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಸುಮಾರು 5 ನಿಮಿಷ ಹೀಗೆಯೇ ಮಸಾಜ್ ಮಾಡುತ್ತಾ ಇರಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮಾರನೆ ದಿನ ಬೆಳಿಗ್ಗೆ ಎದ್ದ ಮೇಲೆ ತೊಳೆಯಿರಿ.
ಶುಂಠಿ
ಬೇಕಾಗುವ ಪದಾರ್ಥಗಳು:
• ಶುಂಠಿ ರಸ
ಬಳಕೆ ಮಾಡುವ ವಿಧಾನ:
ಕೆಲವು ಶುಂಠಿಯ ತುಂಡುಗಳನ್ನು ರುಬ್ಬಿಕೊಳ್ಳಿ ಇಲ್ಲವೇ ಜಜ್ಜಿ ರಸ ತೆಗೆದುಕೊಳ್ಳಿ.ಈ ರೀತಿಯಾಗಿ ತೆಗೆದ ತಾಜಾ ಶುಂಠಿಯ ರಸವನ್ನು ಬಿಳಿಯ ಕಲೆಗಳಿರುವ ಚರ್ಮ ಭಾಗಕ್ಕೆ ಅಪ್ಲೈ ಮಾಡಿ. ಇದು ಸುಮಾರು 5 ರಿಂದ 10 ನಿಮಿಷ ಹಾಗೆಯೇ ನಿಮ್ಮ ಚರ್ಮದ ಮೇಲೆ ಇರಲಿ. ನಂತರ ಸಹಜವಾಗಿರುವ ನೀರಿನಲ್ಲಿ ತೊಳೆಯಿರಿ.
ಗ್ರೀನ್ ಟೀ
ಬೇಕಾಗುವ ಪದಾರ್ಥಗಳು:
• ಗ್ರೀನ್ ಟೀ ಬ್ಯಾಗ್
• 1 ಕಪ್ ನೀರು
• ಕಾಟನ್ ತುಂಡುಗಳು
ಬಳಕೆ ಮಾಡುವ ವಿಧಾನ:
ಒಂದು ಕಪ್ ನಲ್ಲಿ ನೀರನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಗ್ರೀನ್ ಟೀ ಬ್ಯಾಗ್ ನ್ನು ಅದ್ದಿ. ಅದು ತಣ್ಣಗಾಗುವ ತನಕ ಹಾಗೆಯೇ ಬಿಡಿ.ನಂತರ ಅದನ್ನು ನಿಮಗೆ ಬಿಳಿಯ ಕಲೆಗಳು ಕಾಣಿಸಿಕೊಂಡಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ. ಸುಮಾರು 10 ರಿಂದ 15 ನಿಮಿಷ ಹಾಗೆಯೇ ಬಿಡಿ ಮತ್ತು ನಂತರ ಸಹಜ ನೀರಿನಲ್ಲಿ ತೊಳೆಯಿರಿ.
ಪಪ್ಪಾಯ
ಬೇಕಾಗುವ ಪದಾರ್ಥಗಳು:
• ಕೆಲವು ತುಂಡುಗಳಷ್ಟು ಪಪ್ಪಾಯ ಹಣ್ಣುಗಳು
ಬಳಕೆ ಮಾಡುವ ವಿಧಾನ:
ಪಪ್ಪಾಯ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು ನಿಮ್ಮ ಚರ್ಮದಲ್ಲಿ ಬಿಳಿಯ ಕಲೆಗಳು ಕಾಣಿಸಿಕೊಂಡಿರುವ ಜಾಗದಲ್ಲಿ ರಬ್ ಮಾಡಿ ಅಪ್ಲೈ ಮಾಡಿ.ಹೆಚ್ಚು ಕಡಿಮೆ ಸುಮಾರು 15 ರಿಂದ 20 ನಿಮಿಷ ಹಾಗೆಯೇ ಬಿಡಿ.20 ನಿಮಿಷದ ನಂತರ, ನೀವು ಅದನ್ನು ತೊಳೆಯಬಹುದು. 20 ನಿಮಿಷದ ನಂತರ ನೀವು ಇದನ್ನು ತೊಳೆಯಬಹುದು.ಇದರ ಬದಲಿಗೆ ನೀವು ಪಪ್ಪಾಯ ಪೇಸ್ಟ್ ನ್ನು ಕೂಡ ಬಳಕೆ ಮಾಡಬಹುದು.
ಸಾಸಿವೆ ಎಣ್ಣೆ
ಬೇಕಾಗುವ ಪದಾರ್ಥಗಳು:
• 2-3 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ
• ಸ್ವಲ್ಪವೇ ಸ್ವಲ್ಪ ಅರಿಶಿನ
ಬಳಕೆ ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಳ್ಳಿ ಮತ್ತು ಅದರಲ್ಲಿ 3 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿ. ನಂತರ ಸ್ವಲ್ಪವೇ ಸ್ವಲ್ಪ ಅರಿಶಿನವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ಈ ಮಿಶ್ರಣವನ್ನು ಎಫೆಕ್ಟ್ ಆಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ ಮತ್ತು ಸುಮಾರು 15 ನಿಮಿಷ ಹಾಗೆಯೇ ಬಿಡಿ. 15 ನಿಮಿಷದ ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ.
ಗಂಧದ ಪುಡಿ
ಬೇಕಾಗುವ ಪದಾರ್ಥಗಳು:
• 1 ಟೇಬಲ್ ಸ್ಪೂನ್ ಗಂಧದ ಪುಡಿ
• 1 ಟೇಬಲ್ ಸ್ಪೂನ್ ಜೇನುತುಪ್ಪ
ಬಳಕೆ ಮಾಡುವ ವಿಧಾನ:
ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ.ಬಿಳಿ ಕಲೆಗಳಿರುವ ಚರ್ಮದ ಭಾಗಕ್ಕೆ ಇದನ್ನು ಅಪ್ಲೈ ಮಾಡಿ.10 ನಿಮಿಷದ ನಂತರ ಸಹಜವಾಗಿರುವ ನೀರಿನಲ್ಲಿ ಇದನ್ನು ತೊಳೆಯಿರಿ.
ಬೇವು
ಬೇಕಾಗುವ ಪದಾರ್ಥಗಳು:
• ಒಂದು ಪೂರ್ಣ ಮುಷ್ಠಿಯಷ್ಟು ಬೇವಿನ ಎಲೆಗಳು
• 1 ಟೀ ಸ್ಪೂನ್ ಜೇನುತುಪ್ಪ
ಬಳಕೆ ಮಾಡುವ ವಿಧಾನ:
ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ದಪ್ಪನೆಯ ಪೇಸ್ಟ್ ನ್ನು ತಯಾರಿಸಿಕೊಳ್ಳಿ.ಈ ದಪ್ಪನೆಯ ಪೇಸ್ಟಿಗೆ ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮತ್ತು ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಪರಿಣಾಮ ಉಂಟಾಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ ಮತ್ತು ಸುಮಾರು 20 ನಿಮಿಷ ಹಾಗೆಯೇ ಇರಲು ಬಿಡಿ. 20 ನಿಮಿಷದ ನಂತರ ಸಹಜವಾಗಿರುವ ನೀರಿನಿಂದ ತೊಳೆಯಿರಿ.
ಟೀ ಟ್ರೀ ಆಯಿಲ್
ಬೇಕಾಗುವ ಪದಾರ್ಥಗಳು:
• 4-5 ಹನಿಗಳಷ್ಟು ಟೀ ಟ್ರೀ ಆಲ್
• 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
ಬಳಕೆ ಮಾಡುವ ವಿಧಾನ:
ಟೀ ಟ್ರೀ ಆಯಿಲ್ ಮತ್ತು ಆಲಿವ್ ಎಣ್ಣೆ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕಾಟನ್ ಬಾಲ್ ತೆಗೆದುಕೊಳ್ಳಿ ಮತ್ತು ಅದನ್ನು ಈ ಮಿಶ್ರಣದಲ್ಲಿ ಅದ್ದಿ ಮತ್ತು ನಿಮ್ಮ ಚರ್ಮದಲ್ಲಿ ಬಿಳಿ ಕಲೆಗಳಾಗಿರುವ ಜಾಗಕ್ಕೆ ಅಪ್ಲೈ ಮಾಡಿ.15 ನಿಮಿಷ ಹಾಗೆಯೇ ಬಿಡಿ ಮತ್ತು ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ.
ಅಲೂವೇರಾ
ಅಲೂವೇರಾದಲ್ಲಿರುವ ಆಂಟಿ-ಇನ್ಫ್ಲಮೇಟರಿ ಗುಣವು ಚರ್ಮದ ಬಿಳಿಯ ಕಲೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೇಕಾಗುವ ಪದಾರ್ಥಗಳು:
• 1 ಅಲೂವೇರಾ
ಬಳಕೆ ಮಾಡುವ ವಿಧಾನ:
ತಾಜಾ ಅಲೂವೇರಾ ಎಲೆಯನ್ನು ಕತ್ತರಿಸಿ ಮತ್ತು ಅದರ ಜೆಲ್ ನ್ನು ಹೊರತೆಗೆಯಿರಿ. ಹೀಗೆ ತೆಗೆದ ತಾಜಾ ಅಲೂವೇರಾವನ್ನು ನಿಮಗೆ ಚರ್ಮದಲ್ಲಿ ಕಲೆಗಳು ಉಂಟಾಗಿರುವ ಜಾಗಕ್ಕೆ ಅಪ್ಲೈ ಮಾಡಿ. ಮತ್ತು ಸುಮಾರು 30 ನಿಮಿಷ ಹಾಗೆಯೇ ಬಿಡಿ. ನಂತರ ಸಹಜವಾಗಿರುವ ನೀರಿನಿಂದ ತೊಳೆಯಿರಿ.
ಒಟ್ಟಾರೆ ಬಿಳಿಯ ಕಲೆಗಳ ನಿವಾರಣೆಗೆ ಯಾವುದೋ ಕೆಮಿಕಲ್ ಮಿಶ್ರಿತ ಕ್ರೀಮ್ ಮತ್ತು ಲೋಷನ್ ಗಳ ಮೊರೆ ಹೋಗುವ ಬದಲು ಈ ರೀತಿಯ ನೈಸರ್ಗಿಕ ವಿಧಾನಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಗಳಾಗದಂತೆ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಉತ್ತಮವಾದುದ್ದಾಗಿದೆ. ಆ ಮೂಲಕ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
