Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂಲವ್ಯಾಧಿ-ಕೊಬ್ಬಿನ ಗಂಟು ನಿವಾರಣೆಗೆ ಇದೇ ಗಿಡ ಮದ್ದು..! ಹೇಗೆ ಔಷಧಿ ಸಿದ್ದಪಡಿಸೋದು..?
ನಮ್ಮ ಸುತ್ತ ಮುತ್ತಲಿರುವ ಸಸ್ಯಗಳಲ್ಲೇ ಔಷಧಿ ಗುಣಗಳು ಹೊಂದಿರುತ್ತವೆ. ಕೆಲವೊಂದು ಸಸ್ಯಗಳು ಅತ್ಯಂತ ಗಂಭೀರ ಕಾಯಿಲೆಗಳಿಗೂ ಔಷಧಿಯಾಗಿ ಬಳಕೆಯಾಗುತ್ತವೆ. ಔಷಧೀಯ ಗಿಡ,ನಿಮ್ಮ ಆರೋಗ್ಯ ಲಾಭಕ್ಕಾಗಿ ಪ್ರಕೃತಿಯ ಕೊಡುಗೆ ಅಂದ್ರೆ ಆಶ್ಚರ್ಯ ಆಗಬಹುದು. ಕೆಲವೊಂದು ನಮ್ಮ ಸುತ್ತಲಿನ ಗಿಡಗಳಲ್ಲಿ ಅಡಗಿರುವ ಔಷಧಿ ಗಿಡಗಳ ಕುರಿತು ತಿಳಿದರೆ ನಮಗೇ ಅಚ್ಚರಿಯಾಗಬಹುದು.
ಇಂತಹ ಔಷಧಿ ಗುಣ ಹೊಂದಿರುವ ಗಿಡಗಳ ಪೈಕಿ ಮುಟ್ಟಿದರೆ ಮುನಿ ಸಸ್ಯದ ಕುರಿತು ನಿಮಗೆ ಗೊತ್ತಿದ್ಯಾ? ಮುಟ್ಟಿದರೆ ಮುನಿ ಸಸ್ಯ ಮುಳ್ಳು ಹೊಂದಿರುತ್ತದೆ. ಟಚ್ ಮಿನಾಟ್ ಎಂದು ಕರೆಯಲ್ಪಡುವ ಈ ಸಸ್ಯ ಸಣ್ಣದಾದ ನೀಲಿ ಬಣ್ಣದ ಹೂವು ಬಿಡುತ್ತದೆ. ಯಾರಾದರು ಈ ಗಿಡ ಮುಟ್ಟಿದರೆ ಅದರ ಎಲೆಗಳು ಒಳಗೆ ಮಡಚಿಕೊಳ್ಳುತ್ತವೆ.

ಆದರೆ ಈ ಗಿಡಗಳು ಮನೆಯ ಬಳಿ ಬೆಳೆದರೆ ಅದನ್ನು ಕಿತ್ತು ಎಸೆಯುತ್ತಾರೆ. ಆದ್ರೆ ಈ ಸಸ್ಯದಿಂದ ಎಷ್ಟೊಂದು ಆರೋಗ್ಯಕರ ಲಾಭಗಳಿವೆ ಎಂದು ತಿಳಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ, ಜೊತೆಗೆ ಈ ಗಿಡಗಳನ್ನು ಬೆಳೆಸಲು ಮುಂದಾಗುತ್ತೀರಿ. ಹಾಗಾದ್ರೆ ನಾವಿಂದು ಈ ಗಿಡಗಳ ಲಾಭವೇನು? ಯಾವ ಯಾವ ಕಾಯಿಲೆಗಳಿಗೆ ಬಳಸಬಹುದು? ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮೂಲವ್ಯಾಧಿಗೆ ಔಷಧ
ಈ ಮುಟ್ಟಿದರೆ ಮುನಿ ಸಸ್ಯವು ಮೂಲವ್ಯಾದಿ ಚಿಕಿತ್ಸೆಯಲ್ಲಿ ಬಳಸಲಾಗಿದೆ. ಆಯುರ್ವೇದದ ಚಿಕಿತ್ಸೆ ಪಡೆಯುವವರಿಗೆ ಇದೇ ಔಷಧಿ ನೀಡುತ್ತಾರೆ. ಪಿಸ್ತುಲ ಹೊರತುಪಡಿಸಿ ಉಳಿದೆಲ್ಲಾ ಸಮಸ್ಯೆಗೆ ಇದರಿಂದ ಪರಿಹಾರ ಸಾಧ್ಯವಾಗಲಿದೆ. ಮೊದಲು ಈ ಸಸ್ಯದ ಎಲೆಗಳ ತಂದು ಅದನ್ನು ಚೆನ್ನಾಗಿ ಜೆಜ್ಜಿ ಅದರ ರಸ ತೆಗೆಯಬೇಕು. ಬಳಿಕ ಒಂದು ಗ್ಲಾಸ್ ಮಜ್ಜಿಗೆಯಲ್ಲಿ ಬೆರೆಸಬೇಕು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇರಿಸಬೇಕು. ನಿರಂತರವಾಗಿ 2 ತಿಂಗಳ ಕಾಲ ಇದನ್ನು ಸೇವಿಸಬೇಕು.
ಗರ್ಭಕೋಶ ಸಮಸ್ಯೆ ಬಳಸಬಹುದು
ಗರ್ಭಕೋಶದ ಸಮಸ್ಯೆಗಳಾದ PCOD (Polycystic Ovarian Disease), PCOS (Polycystic ovary syndrome), ನಂತಹ ಸಮಸ್ಯೆಗಳ ನಿವಾರಿಸಲು ಇದು ಉತ್ತಮ. ಈ ಸಸ್ಯದ ಎಲೆಯ ರಸ ತೆಗೆದು ಮಜ್ಜಿಗೆ, ಎಳನೀರು, ನೀರಿನ ಜೊತೆ ಸೇವಿಸುವುದರಿಂದ ಈ ಸಮಸ್ಯೆಗಳು ಅದರಲ್ಲೂ ಮಹಿಳೆಯರಲ್ಲಿ ಕಾಣುವ ಈ ಸಮಸ್ಯೆ ತಡೆಯಬಹುದು.
ಋತುಸ್ರಾವದ ಸಮಯದಲ್ಲಿ ಬ್ಲೀಡಿಂಗ್ ತಡೆಯಲು
ಮುಟ್ಟಿದರೆ ಮುನಿ ಸಸ್ಯವು ಋತುಸ್ರಾವದ ವೇಳೆ ಕಂಡುಬರುವ ಹೊಟ್ಟೆ ನೋವು ಹಾಗೂ ವಿಪರೀತ ರಕ್ತಸ್ರಾವ ತಡೆಯುವಲ್ಲಿ ಸಹಕಾರಿಯಾಗಿದೆ. ಈ ಎಲೆಯ ಸಸ್ಯದ ಎಲೆ ರಸ ತೆಗೆದು ಅದನ್ನು ಗ್ಲಾಸ್ ಮೊಸರಿನಲ್ಲಿ ಸೇರಿಸಿ ಉಪ್ಪು ಹಾಕಿಕೊಂಡು ಕುಡಿಯಬೇಕು. ಈ ರೀತಿ ಒಂದು ವಾರ ಮಾಡಿ ನೋಡಿ.
ವೃಷಣ ವೃದ್ಧಿಗೆ ಪರಿಣಾಮಕಾರಿ
ಪುರುಷರಲ್ಲಿ ವಯಸ್ಸಾದ್ದಂತೆ ವೃಷಣಗಳ ಗಾತ್ರ ದೊಡ್ಡದಾಗುತ್ತದೆ. ಒಂದು ವೇಳೆ ಅಸಹಜ ಪ್ರಕ್ರಿಯೆಗೆ ಒಳಗಾಗಿ ವೃಷಣಗಳು ಚಿಕ್ಕಗಾತ್ರದಲ್ಲಿದ್ದರೆ ಈ ಸಸ್ಯದ ಎಲೆಗಳ ಪೇಸ್ಟ್ ತಯಾರಿಸಿ ವೃಷಣಗಳ ಮೇಲೆ ಹಚ್ಚಬೇಕು. ಹೀಗೆ ಮಾಡುವುದರಿಂದ ವೃಷಣಗಳ ಗಾತ್ರ ಹೆಚ್ಚುತ್ತದೆ. ಆದರೆ ಈ ಪೇಸ್ಟ್ ಅನ್ನು ಜನಾನಾಂಗಕ್ಕೆ ಹಚ್ಚಬಾರದು.
ಮಲಬದ್ಧತೆಗೆ ಸಹಕಾರಿ
ಈ ಗಿಡದ ರಸವನ್ನು ಬೆಟ್ಟದ ನೆಲ್ಲಿಕಾಯಿ ರಸ ಅಥವಾ ಎಳನೀರಿನ ಜೊತೆ ಸೇರಿಸಿ ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಕೊಬ್ಬಿನ ಗಂಟು ನಿವಾರಣೆ
ಕೆಲವರ ಕೈ ಹಾಗೂ ಕಾಲುಗಳ ಮೇಲೆ ಉಂಟಾಗುವ ಕೊಬ್ಬಿನ ಗಂಟುಗಳ ಕರಸಗಿಸಲು ಸಹ ಇದು ಸಹಕಾರಿ. ಈ ಸಸ್ಯದ ಎಲೆಗಳ ಅರಿದುಕೊಂಡು ರಾತ್ರಿ ಆ ಗಂಟುಗಳ ಮೇಲೆ ಹಚ್ಚಿ ಬೆಳಗ್ಗೆ ತೊಳೆಯಬೇಕು, ಈ ರೀತಿ ನಿರಂತರವಾಗಿ ಮಾಡುವುದರಿಂದ ಕೊಬ್ಬಿನ ಗಂಟು ಕರಗಲು ನೆರವಾಗುತ್ತದೆ.
ಸೂಚನೆ: ಈ ಸಸ್ಯದ ಔಷಧಿಯನ್ನ ಗರ್ಭಿಣಿಯರು, ಸ್ತನ ಪಾನ ಮಾಡಿಸುತ್ತಿರುವವರು, ಶಸ್ತ್ರ ಚಿಕಿತ್ಸೆಗೆ ಒಳಗಾದವರು ಬಳಸಬಾದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
