Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಲ್ಲಿ ಜಾಂಡೀಸ್ ಕಂಡುಬರುವುದೇಕೆ..? ಚಿಕಿತ್ಸೆ ಏನು ಗೊತ್ತಾ?
ಮಳೆಗಾಲ ಅಂದ್ರೆ ಮಕ್ಕಳ ಮೇಲೆ ಸ್ವಲ್ಪ ಹೆಚ್ಚು ಕಾಳಜಿ ಇಡಲೇಬೇಕು. ಏಕೆಂದರೆ ಮಳೆಗಾಲದಲ್ಲಿ ವೈರಲ್ ಕಾಯಿಲೆಗಳು ಹರಡುವ ಕಾಲವಿದು. ಅದ್ರಲ್ಲೂ ಸೊಳ್ಳೆಗಳಿಂದ ಹರಡುವ ಅಪಾಯಕಾರಿ ರೋಗಗಳೇ ಹೆಚ್ಚು. ಏಕೆಂದರೆ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿರುತ್ತದೆ. ಹೀಗಿರುವಾಗ ಮಕ್ಕಳಲ್ಲಿ ಮಳೆಗಾಲದಲ್ಲಿ ಜಾಂಡೀಸ್ ಕಾಣಿಸಿಕೊಳ್ಳುವುದು ಸಹ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಾಂಡೀಸ್ ರೋಗ ಅಪಾಯಕಾರಿಯಾಗಿ ಬದಲಾಗಬಹುದು.
ಮಕ್ಕಳಲ್ಲಿ ಕಂಡು ಬರುವ ಈ ಹಳದಿ ಜಾಂಡೀಸ್ ತೀವ್ರ ಜ್ವರಕ್ಕೆ ಕಾರಣವಾಗಬಹುದು. ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸದಿದ್ದರೆ ಸಾವು ಸಹ ಸಂಭವಿಸುತ್ತದೆ. ಹಾಗಾದ್ರೆ ಈ ಜಾಂಡೀಸ್ ರೋಗಕ್ಕೆ ಕಾರಣವೇನು? ಜಾಂಡೀಸ್‌ಗೆ ಮನೆ ಮದ್ದು ಏನು? ಜಾಂಡೀಸ್ ಬಂದಾಗ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

100 ಮಕ್ಕಳ ಪೈಕಿ 60 ಮಕ್ಕಳಲ್ಲಿ ಜಾಂಡೀಸ್ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆಯಂತೆ. ಹಳದಿ ಜಾಂಡೀಸ್ ಶಿಶುಗಳಲ್ಲಿ ಮಾರಕವಾಗುತ್ತದೆ. ಕೆಲವೊಮ್ಮೆ ಈ ಜಾಂಡೀಸ್ ರೋಗವು ತನ್ನ ಲಕ್ಷಣವನ್ನೇ ತೋರ್ಪಡಿಸುವುದಿಲ್ಲ. ಇನ್ನು 9 ತಿಂಗಳಿಗಿಂತಲೂ ಮೊದಲು ಹುಟ್ಟಿದರ ಪ್ರಿ ಮೆಚೂರ್ ಮಕ್ಕಳಲ್ಲಿ ಶೇ.80ರಷ್ಟು ಈ ಕಾಯಿಲೆ ಕಂಡುಬರಬಹುದು ಎಂದು ತಿಳಿದುಬಂದಿದೆ.
ಮಕ್ಕಳ ಕಣ್ಣು ಹಸಿರು ಅಥವಾ ಹಳದಿಯಾಗುತ್ತದೆ
ಶಿಶುಗಳಿಗೆ ಜಾಂಡೀಸ್ ಬಂದರೆ ಕಣ್ಣು ಹಸಿರಾಗುತ್ತದೆ. ಆದರೆ ಹಳದಿಯಾಗುವುದಿಲ್ಲ. ಜೊತೆಗೆ ಜ್ವರ ಕಾಣಿಸಿಕೊಳ್ಳುತ್ತದೆ. ಮಗು ರಾತ್ರಿ ನಿದ್ರೆ ಮಾಡುವುದಿಲ್ಲ, ಹಾಲು ಕುಡಿಯುವುದಿಲ್ಲ. ಹೀಗಾದಾಗ ವೈದ್ಯರ ಭೇಟಿ ಯಾಗುವುದು ಉತ್ತಮ. ಮೊದಲು ಮುಖದ ಮೇಲಿಂದ ಪ್ರಾರಂಭವಾಗಿ ನಂತರ ಎದೆ ಮತ್ತು ಹೊಟ್ಟೆಯ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ. ನಂತರ ಕಾಲುಗಳು. ಚರ್ಮದ ಹೊರತಾಗಿ ಮಗುವಿನ ಕಣ್ಣುಗಳ ಬಿಳಿ ಭಾಗವು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಈ ಸಮಯದಲ್ಲಿ ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾಗೋದ್ರಿಂದ ಮಗು ಹೆಚ್ಚಿನ ನಿದ್ರೆ ಮತ್ತು ಗಡಿಬಿಡಿಗೆ ಒಳಗಾಗುತ್ತದೆ. ಇನ್ನೂ ಮಕ್ಕಳು ಕಪ್ಪಿದ್ದರೆ ಕಪ್ಪು ಚರ್ಮದ ಮೇಲೆ ಕಾಮಾಲೆಯನ್ನು ಗುರುತಿಸುವುದು ಕಷ್ಟವಾಗಬಹುದು. ಇಂತಹ ಸಮಯದಲ್ಲಿ ಕಣ್ಣು ನೋಡಿ ಪತ್ತೆ ಹಚ್ಚಬಹುದು.
ಮಕ್ಕಳ ಮೈ ಹಳದಿಯಾಗುವುದು
ಜಾಂಡೀಸ್ ಬಂದರೆ ಮಕ್ಕಳಿಗೆ ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮೈ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗಾದಾಗ ಜಾಂಡೀಸ್ ಆಗಿದೆ ಎಂದು ತಿಳಿದುಕೊಳ್ಳಿ. ಅಲ್ಲದೆ ಚಿಕಿತ್ಸೆಗಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ.
ಈ ರೀತಿ ಆದಾಗ ವೈದ್ಯರ ಸಲಹೆ ಪಡೆಯುವುದು ಉತ್ತಮ. ಆದ್ರೆ ಜಾಂಡೀಸ್ ಆದಾಗ ಕೆಲವು ಮುನ್ನೆಚ್ಚರಿಕೆ ಪಡೆಯುವುದು ಉತ್ತಮ.
ತಾಯಿ ಹಾಲು ಕುಡಿಸುವುದು
ಶಿಶುಗಳಿಗೆ ಜಾಂಡೀಸ್ ಬಂದಾಗ ವೈದ್ಯರು ಮೊದಲು ಹೇಳುವುದು ತಾಯಿಯ ಹಾಲು ಹೆಚ್ಚಾಗಿ ಕುಡಿಸಬೇಕು. ಶಿಶುವಿಗೆ ತಾಯಿಯ ಹಾಲೇ ಆರೋಗ್ಯಕ್ಕೆ ಅತ್ಯುತ್ತಮ ಔಷಧಿಯಾಗಿರುತ್ತದೆ. ಸುಮಾರು 2 ತಿಂಗಳ ವರೆಗೂ ಜಾಂಡೀಸ್ ಶಿಶುಗಳಲ್ಲಿ ಕಂಡುಬರಬಹುದು.
ಮಕ್ಕಳನ್ನೂ ಸೂರ್ಯನ ಬೆಳಕಿಗೆ ಹಿಡಿದರೆ ಜಾಂಡೀಸ್ ಕಡಿಮೆಯಾಗುವುದಿಲ್ಲ
ಹಲವರಲ್ಲಿ ಈ ರೀತಿಯ ನಂಬಿಕೆ ಇದೆ. ಜಾಂಡೀಸ್ ಬಂದಿರುವ ಮಕ್ಕಳನ್ನು ಸೂರ್ಯನ ಬೆಳಕಿಗೆ ಹಿಡಿಯುವುದರಿಂದ ಜಾಂಡೀಸ್ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಆ ರೀತಿ ಯಾವುದೇ ಪ್ರಯೋಜನವಾಗುವುದಿಲ್ಲ, ಸೂರ್ಯನ ಬೆಳಕಿಗೆ ಮಕ್ಕಳನ್ನು ಹಿಡಿಯುವುದು ಆರೋಗ್ಯಕ್ಕೆ ಉತ್ತಮ ಆದರೆ ಅದರಿಂದ ಜಾಂಡೀಸ್ ಕಡಿಮೆಯಾಗುವುದಿಲ್ಲ.
ಶಿಶುವಿನ ತಾಯಿಯ ಆರೋಗ್ಯ
ಶಿಶುಗಳಿಗೆ ಜಾಂಡೀಸ್ ಕಂಡುಬಂದಾಗ ಮಕ್ಕಳ ತಾಯಿ ಸಹ ಆರೋಗ್ಯದ ಬಗ್ಗೆ ಗಮನವಿಡಬೇಕು. ಕರಿದ ತಿಂಡಿ ಸೇವಿಸಬಾರದು, ಹಣ್ಣು, ಹಂಪಲು ಸೇವಿಸಬೇಕು. ಹೆಚ್ಚು ಸೊಪ್ಪಿನ ಸಾರು, ಪಲ್ಯ ಸವಿಯಬೇಕು. ಹೀಗಾದಾಗ ತಾಯಿಯ ಹಾಲಿನ ಮೂಲಕ ಶಿಶುವಿಗೆ ಆರೋಗ್ಯಕರ ಹಾಲು ಸಿಗುತ್ತದೆ.
ಶಿಶುವಿಗೆ ಈಗಾಗಲೇ ಕಾಮಾಲೆ ಕಾಣಿಸಿಕೊಂಡಿದ್ದರೆ ನಿರ್ಲಕ್ಷ ಮಾಡಬೇಡಿ. ಮನೆಮದ್ದು ಮಾಡುವುದಾದರೆ ಅದು ಕೇವಲ ಪ್ರಾಥಮಿಕ ಚಿಕಿತ್ಸೆಯಾಗಿರಲಿ. ಆದರೆ ವೈದ್ಯರ ಬಳಿ ತೆರಳುವ ಬದಲು ಮನೆಮದ್ದು ಬಳಸಿ ಕಾಮಾಲೆಗೆ ಚಿಕಿತ್ಸೆ ನೀಡುವ ಸಾಹಸಕ್ಕೆ ಕೈಹಾಕಬೇಡಿ. ಕಾಮಾಲೆ ಬಂದಾಗ ಮಕ್ಕಳಿಗೆ ಹೆಚ್ಚು ಸ್ತನಪಾನ ಮಾಡಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

