Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಟ್ಟೆ ಉಬ್ಬರ-ಅಸಿಡಿಟಿಗೆ ಈ ಮದ್ದು ಮಾಡಿ..! ಕ್ಷಣದಲ್ಲಿ ಮಾಯವಾಗುತ್ತೆ!!
ಇತ್ತೀಚಿಗೆ ನೀವು ಏನೇ ಆಹಾರ ಸವಿದರು ಅಸಿಡಿಟಿ ಆಗುವುದು, ಹೊಟ್ಟೆ ಉಬ್ಬರಿಸಿದಂತೆ ನಿಮಗೆ ಅನಿಸಿರಬಹುದು. ಅದರಲ್ಲೂ ತೂಕ ಹೆಚ್ಚಿರುವವರಲ್ಲಿ ಹೆಚ್ಚಾಗಿ ಈ ರೀತಿಯ ಅನುಭವವಾಗಿರಬಹುದು. ಅವರು ಊಟ ಮಾಡಿದ ತಕ್ಷಣ ಇಲ್ಲವೆ, ಅದಕ್ಕೂ ಮೊದಲು ಅಸಿಡಿಟಿಯ ಅನುಭವದಿಂದ ಹೊಟ್ಟೆ ಉಬ್ಬುವುದು, ನೋವು ಕಾಣಿಸಿಕೊಳ್ಳುವುದು, ವಿಪರೀತ ತೇಗು ಬರುವುದು ಉಂಟಾಗುತ್ತಿರಬಹುದು.
ನಾವು ಈ ಅಸಿಡಿಟಿಗೆ ಹಲವು ರೀತಿಯ ಪರಿಹಾರವನ್ನು ಕೂಡ ಮಾಡಿರುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಹತ್ತಾರು ಬಗೆಯ ಔಷಧಿಗಳು, ಪಾನೀಯಗಳ ಕುಡಿದಿರುತ್ತೇವೆ. ಆದಚರೆ ಇದೆಲ್ಲವು ಕ್ಷಣ ಮಾತ್ರಕ್ಕೆ ಪರಿಹಾರ ನೀಡುತ್ತಿರುತ್ತವೆ. ಆದ್ರೆ ಅಸಿಡಿಟಿಯನ್ನು ದೀರ್ಘಕಾಲ ಹಾಗೆಯೇ ಬಿಟ್ಟರೆ ದೊಡ್ಡ ಸಮಸ್ಯೆಯಾಗಿ ನಿಮಗೆ ಪರಿಣಮಿಸಬಹುದು.

ಹಾಗಾದ್ರೆ ಸುಲಭವಾಗಿ ಈ ಅಸಿಡಿಟಿಯನ್ನು ಹೋಗಲಾಡಿಸುವುದು ಹೇಗೆ? ಎದೆ ಉರಿ, ಹುಳಿ ತೇಗು ಹೀಗೆ ನಾನಾ ಬಗೆಯ ಸಮಸ್ಯೆಗೆ ಸುಲಭದ ಪರಿಹಾರವೇನು? ಮನೆಯಲ್ಲಿಯೇ ಹೇಗೆ ಇದಕ್ಕೆಲ್ಲ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಅಸಿಡಿಟಿಯಲ್ಲಿ ಹಲವರಿಗೆ ಹಲವು ರೀತಿ ಲಕ್ಷಣಗಳಿರುತ್ತವೆ. ಎಲ್ಲರಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡುಬರಬೇಕು ಎಂಬುದಿಲ್ಲ. ನಮ್ಮ ದೇಹದ ಪರಿಸ್ಥಿತಿಗೆ ಅನುಗುಣವಾಗಿ ನಮ್ಮಲ್ಲಿ ಅಸಿಡಿಟಿಯ ಲಕ್ಷಣಗಳು ಕಂಡುಬರುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಹೈಡ್ರೋಕ್ಲೋರಿಕ್ ಆಸಿಡ್ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಕೆಲವರು ಇದೇ ಆಮ್ಲ ನಮ್ಮ ಅಸಿಡಿಟಿಗೆ ಕಾರಣ ಎನ್ನುತ್ತಾರೆ, ಇದು ಸತ್ಯವೂ ಕೂಡ ಹೌದು. ಆದ್ರೆ ಇದಕ್ಕೆ ಹತ್ತಾರು ಕಾರಣಗಳಿರುತ್ತದೆ.
ಶುಂಠಿ
ಶುಂಠಿಯು ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕಿನ ವಿರುದ್ಧ ಹೋರಾಡುವಂತಹ ಗುಣಗಳನ್ನು ಹೊಂದಿದೆ. ಅಂದರೆ ಹೆಲಿಕೋಬ್ಯಾಕ್ಟರ್ ಪೈಲೋರಿ (H. ಪೈಲೋರಿ) ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು ಅದು ಹೊಟ್ಟೆಯನ್ನು ಸೋಂಕು ಉಂಟು ಮಾಡುತ್ತದೆ. ಇದು ಅಲ್ಸರ್, ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗುವ ಅಂಶವಾಗಿದೆ. pH ಲೆವೆಲ್ ಹೆಚ್ಚಾಗಿ ಈ ಹೊಟ್ಟೆಯ ಆಸಿಡ್‌ಗಳು ಉಂಟು ಮಾಡುವ ಹಾನಿಯ ವಿರುದ್ಧ ಶುಂಠಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಆಸಿಡಿಟಿ ಇದ್ದರೂ ಶುಂಠಿಯಿಂದ ನಿವಾರಣೆ ಮಾಡಬಹುದು. ಶುಂಠಿಯನ್ನು ಜಗಿಯುವುದು, ಶುಂಠಿ ಟೀ, ಶುಂಠಿ ಕಷಾಯ ಮಾಡಿ ಕುಡಿದರೆ ಬಹಖ ಉತ್ತಮವಾಗಿದೆ.
ಜೇಷ್ಠ ಮಧು ಅಥವಾ ಅತಿ ಮಧುರ
ಇದರ ಕಷಾಯ ಅಥವಾ ನೇರವಾಗಿ ತಿನ್ನುವುದು ಅಸಿಡಿಟಿಗೆ ಅತ್ಯುತ್ತಮ ಔಷಧಿಯಾಗಿದೆ. ಇದನ್ನು ಸ್ವಲ್ಪ ತೇದಿಕೊಂಡು ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಕುಡಿದರೆ ಹಲವು ರೀತಿಯ ಅಸಿಡಿಟಿ ಸಂಬಂಧಿ ಸಮಸ್ಯೆ ದೂರ ಮಾಡಬಹುದು.
ಆಪಲ್ ಸೈಡರ್ ವಿನೆಗರ್
ಹೊಟ್ಟೆಯಲ್ಲಿ ಪಿಹೆಚ್ ಹೆಚ್ಚಾದಾಗ ಅಸಿಡಿಟಿಕ್ ಸಮಸ್ಯೆ ಹೆಚ್ಚಾಗುತ್ತದೆ. ಊಟಕ್ಕೂ ಮುನ್ನ ಒಂದು ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಊಟಕ್ಕೆ ಮುನ್ನ ಕುಡಿಯುವುದು ನಿಮ್ಮ ಸಮಸ್ಯೆ ದೂರ ಮಾಡಲಿದೆ.
ಕಪ್ಪು ಜೀರಿಗೆ ಕಷಾಯ
ಜೀರಿಗೆಯಲ್ಲಿ ಅತ್ಯುತ್ತಮ ಔಷಧಿ ಗುಣಗಳಿವೆ. ಹೀಗಾಗಿ ಎಲ್ಲಾ ಅಡುಗೆಯಲ್ಲೂ ಈ ಜೀರಿಗೆಯನ್ನು ಬಳಸಿಯೇ ಬಳಸುತ್ತೇವೆ. ಅದರಲ್ಲೂ ಕಪ್ಪು ಜೀರಿಗೆಯನ್ನು ಕಷಾಯ ಮಾಡಿ ಕುಡಿದರೆ ಅಸಿಡಿಟಿ ಕಡಿಮೆಯಾಗುತ್ತದೆ.
ಪ್ರೋ ಬಯೋಟಿಕ್ಸ್ ಸೇವನೆ
ನಮ್ಮ ಹೊಟ್ಟೆಯಲ್ಲಿ ಮಿಲಿಯನ್ ಗಟ್ಟಲೆ ಬ್ಯಾಕ್ಟಿರಿಯಾಗಳಿರುತ್ತವೆ. ಇದರಲ್ಲಿ ಕೆಲವೊಂದು ವಿನಾಶಕಾರಿ ಬ್ಯಾಕ್ಟಿರಿಯಾ ಆಗಿವೆ. ಹೀಗಾಗಿ ಪ್ರೋ ಬಯೋಟಿಕ್ ಮಾತ್ರೆಗಳು, ಔಷಧಿಯನ್ನ ನಾವು ಸೇವಿಸುವುದರಿಂದ ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾ ಬೆಳೆಯಲು ಕಾರಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟಿರಿಯಾ ಸಾಯಲು ನಾವು ಸೇವಿಸುವ ಆಂಟಿಬಯೋಟಿಕ್ ಕಾರಣವಾಗಿರುತ್ತದೆ.
ನಾವು ಸಣ್ಣ ಜ್ವರ, ನೆಗಡಿಗೂ ಆಂಟಿ ಬಯೋಟಿಕ್ ತೆಗೆದುಕೊಳ್ಳುತ್ತೇವೆ, ಇದರಿಂದ ಒಳ್ಳೆಯ ಬ್ಯಾಕ್ಟಿಡಿಯಾಗಳ ಸಾವಿಗೆ ಕಾರಣವಾಗಬಹುದು. ಇದರಿಂದ ಆಸಿಡಿಟಿಕ್ ಪರಿಣಾಮಕ್ಕೆ ಕಾರಣವಾಗುತ್ತದೆ. ಪ್ರೋ ಬಯೋಟಿಕ್ ನಮಗೆ ಮೊಸರಿನಿಂದ, ಚಿತ್ರಾನ್ನ, ತಂಗಳನ್ನ ಇಂತಹ ವಸ್ತುಗಳಿಂದಲೂ ಸಿಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
