Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಮ್ಮು-ಮಧುಮೇಹ ನಿಯಂತ್ರಣಕ್ಕೆ ಈ ಇನ್ಸೂಲಿನ್ ಗಿಡ ಮದ್ದು..!
ನಮ್ಮ ಸುತ್ತ ಮುತ್ತಲಿನ ಹಲವು ಸಸ್ಯ, ಗಿಡಮೂಲಿಕೆಗಳಲ್ಲಿ ಔಷಧಿಯ ಗುಣಗಳಿವೆ ಎಂಬುದು ನಮಗೆ ತಿಳಿದಿರುವ ವಿಚಾರ. ಅಂದರೆ ನಾವು ಅದರ ಬಗ್ಗೆ ತಿಳಿದಿರುವುದೇ ಇಲ್ಲ. ಹಲವು ಸಮಸ್ಯೆಗಳಿಗೆ ಈ ಗಿಡಗಳು ಪರುಹಾರ ನೀಡುತ್ತವೆ. ಆದ್ರೆ ನಮಗೆ ಆ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ, ಆಯುರ್ವೇದ ಸೇರಿದಂತೆ ಹಲವು ಔಷಧಿ ಪದ್ಧತಿಯಲ್ಲಿ ಗಿಡಮೂಲಿಕೆಗಳ ಬಳಸುವುದು ನಡೆದುಬಂದಿದೆ. ಪುರಾತನ ಕಾಲದಿಂದಲು ಭಾರತದಲ್ಲಿ ಈ ಗಿಡಮೂಲಿಕೆಯ ಔಷಧಿಗಳು ಬಳಕೆಯಲ್ಲಿದೆ.
ಹೀಗೆ ನಮ್ಮ ನಡುವೆಯೇ ಬೆರೆತಿರುವ ಕೆಲವು ಔಷಧಿ ಗಿಡಗಳ ಪರಿಚಯಿಸುವ ಪ್ರಯತ್ನದಲ್ಲಿ ನಾವಿಂದು ರಸ್ತೆ ಬದಿಯಲ್ಲಿ ನಾವು ಕಾಣುವಂತಹ ಇನ್ಸೂಲಿನ್ ಗಿಡದ ಬಗ್ಗೆ ತಿಳಿದುಕೊಳ್ಳೋಣ. ಇನ್ಸೂಲಿನ್ ಗಿಡಗಳು ಎಂದು ಕರೆಯಲ್ಪಡುವ ಅರಶಿಣ ಗಿಡದಂತೆ ಕಾಣುವ ಒಂದು ಸಸ್ಯ ನೀವು ನೋಡಿರಬಹುದು, ಇದರಲ್ಲಿ ಹಲವು ರೀತಿಯ ಔಷಧಿ ಅಂಶವಿದೆ.

ಇನ್ಸೂಲಿನ್ ಗಿಡ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಆದ್ರೆ ವೈಜ್ಞಾನಿಕವಾಗಿ ಕೋಸ್ಟಸ್ ಪಿಕ್ಟಸ್ (Costus Igenus) ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ತಂಪಿನ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಗಿಡವು ಮಧುಮೇಹ ವಿರೋಧಿ, ಉತ್ಕರ್ಷಣ ನಿರೋಧಕ, ಕ್ಯಾನ್ಸರ್-ವಿರೋಧಿ, ಉರಿಯೂತದ ಮತ್ತು ಹೆಪಟೊಪ್ರೊಟೆಕ್ಟಿವ್ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಅದರಲ್ಲೂ ಈ ಗಿಡದ ಎಲೆಯಿಂದ ನೀವು ಮಧುಮೇಹ ನಿಯಂತ್ರಣದಲ್ಲಿ ಇಡಬಹುದು. ಇದು ಅಧ್ಯಯನದಲ್ಲೇ ತಿಳಿದುಬಂದಿದೆ. ಭಾರತದಲ್ಲಿ 80 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ - ಇದು 2045 ರ ವೇಳೆಗೆ 134 ಮಿಲಿಯನ್‌ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಈ ಮಧುಮೇಹ ನಿಯಂತ್ರಣದಲ್ಲಿಡುವುದು ಜನರ ದೊಡ್ಡ ಸಮಸ್ಯೆಯಾಗಲಿದೆ.
ಈ ಇನ್ಸುಲಿನ್ ಗಿಡದ ಎಲೆಯನ್ನು ಅಗಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಈ ಸಸ್ಯವು ಇನ್ಸುಲಿನ್ ಅನ್ನು ಹೊಂದಿರುವುದಿಲ್ಲ, ಅಥವಾ ಅದನ್ನು ಉತ್ಪಾದಿಸಲು ಸಹಾಯ ಮಾಡುವುದಿಲ್ಲ, ಆದರೂ ಇದು ಸಕ್ಕರೆಯನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ಇದು ನೈಸರ್ಗಿಕವಾಗಿ ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಈ ಗಿಡದ ಎಲೆ ಜಗಿಯಬಹುದೇ?
ಎಲೆಯನ್ನು ನೇರವಾಗಿ ಜಗಿಯುವುದು ಕೂಡ ಉತ್ತಮವೇ, ಆದ್ರೆ ಎಲೆಯನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಸವಿಯಬಹುದು. ಇದಲ್ಲದೆ ಈ ಎಲೆಯನ್ನು ಚಟ್ನಿ ಮಾಡಿಯೂ ಸವಿಯುತ್ತಾರೆ, ಇದು ಬಹಳ ಉತ್ತಮ ವಿಧಾನವಾಗಿದೆ. ಹಾಗೆ ಈ ಎಲೆಯನ್ನು ಗ್ರೀನ್ ಟೀ ರೀತಿ ಮಾಡಿಯೂ ಸವಿಯಬಹುದು ಇದರಿಂದ ನಿಮ್ಮ ಮಧುಮೇಹ ಸಮಸ್ಯೆ ನಿಯಂತ್ರಣದಲ್ಲಿಡಬಹುದು.
ಈ ಗಿಡ ಕೇವಲ ಮಧುಮೇಹ ನಿಯಂತ್ರಣದಲ್ಲಿಡುವುದು ಮಾತ್ರವಲ್ಲ ಕೆಮ್ಮು ನಿಯಂತ್ರಣವೂ ಹೌದು. ಹವಾಮಾನ ಬದಲಾವಣೆಯಿಂದ ಉಂಟಾಗುವ ಸಾಮಾನ್ಯ ಕೆಮ್ಮು, ನೆಗಡಿಗೂ ಇದು ರಾಮಬಾಣದಂತೆ. ಹಾಗೆ ಈ ಇನ್ಸುಲಿನ್ ಸಸ್ಯವು ಕೆಮ್ಮು, ಶೀತಗಳು, ಸೋಂಕುಗಳು, ಶ್ವಾಸಕೋಶದ ಸಮಸ್ಯೆಗಳು, ಅಸ್ತಮಾ, ಗರ್ಭಾಶಯದ ಸಂಕೋಚನ ಮತ್ತು ಅತಿಸಾರ ಮತ್ತು ಮಲಬದ್ಧತೆಯಂತಹ ಕಾಯಿಲೆಗಳನ್ನು ಗುಣಪಡಿಸುವ ಗುಣಗಳನ್ನು ತನ್ನಲ್ಲಿಟ್ಟುಕೊಂಡಿದೆ.
ಈ ಗಿಡಗಳು ಎಲ್ಲಿ ಬೆಳೆಯುತ್ತವೆ
ಇನ್ಸೂಲಿನ್ ಗಿಡ ಎಂದು ಕರೆಯಲ್ಪಡುವ ಈ ಗಿಡವು ಮೊದಲೇ ಹೇಳಿದಂತೆ ತಂಪಾದ ಜಾಗದಲ್ಲಿ ಬೆಳೆಯುತ್ತವೆ. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ನೋಡಬಹುದು. ಈ ಜಾಗವನ್ನು ನರ್ಸರಿಯಲ್ಲಿ ಮನೆಯಲ್ಲೂ ಬೆಳೆಯಬಹುದು. ಇದು ಹಳದಿ ಬಣ್ಣದ ಹೂವನ್ನು ಬಿಡುತ್ತದೆ, ನೋಡಲು ಅರಶಿನ ಗಿಡವನ್ನ ಹೋಲುತ್ತದೆ. ಈ ಗಿಡ ಆಯುರ್ವೇದದಲ್ಲಿ ಹಲವು ಬಗೆಯ ಔಷಧಿಗಾಗಿ ಈ ಗಿಡವನ್ನು ಬಳಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


