Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ದಿನಿನಿತ್ಯ ಜಿಮ್ ಗೆ ಹೋಗ್ತಿದ್ದೀರಾ? ಹಾಗಾದ್ರೆ ಈ ಕಾಯಿಲೆಗಳು ಹರಡುತ್ತೆ ಜೋಕೆ!
ಇತ್ತೀಚಿನ ದಿನಗಳಲ್ಲಿ ಜಿಮ್ ಗೆ ಹೋಗೋದು ಒಂದು ರೀತಿ ಟ್ರೆಂಡ್ ಆಗ್ಬಿಟ್ಟಿದೆ. ಎಲ್ಲರಿಗೂ ಕೂಡ ಫಿಟ್ ಆಗಿರ್ಬೇಕು ಅನ್ನೋ ಆಸೆ ಖಂಡಿತ ಇರುತ್ತೆ. ಮಾರ್ಡನ್ ಯುವಕ-ಯುವತಿಯರು ಫಿಟ್ ನೆಸ್ ಗೆ ತುಂಬಾನೇ ಮಹತ್ವ ಕೊಡ್ತಿದ್ದಾರೆ. ಇದ್ರ ಜೊತೆಗೆ ಈಗಿನ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಸಿಕ್ಕಾಪಟ್ಟೆ ತೂಕ ಹೆಚ್ಚಿಸಿಕೊಂಡ ನಂತರ ತೂಕ ಕಳೆದುಕೊಳ್ಬೇಕು ಅನ್ನೋ ಹಠಕ್ಕೆ ಒಂದಿಷ್ಟು ಜನ ಜಿಮ್ ಗೆ ಹೋಗ್ತಾರೆ.
ನಮ್ಮ ಪ್ರಕಾರ ಜಿಮ್ ಗೆ ಹೋದ್ರೆ ಆರೋಗ್ಯವಾಗಿ ಜೊತೆಗೆ ಫಿಟ್ ಆಗಿ ಇರ್ಬಹುದು. ಆದ್ರೆ ನಿಮಗೊತ್ತಾ? ಜಿಮ್ ನಲ್ಲಿ ಅನೇಕ ರೀತಿಯ ಕಾಯಿಲೆಗಳು ನಮ್ಮ ಸುತ್ತುವರಿಯುತ್ತವೆ. ಯಾಕಂದ್ರೆ ಅಲ್ಲಿ ಬರೋರು ಎಲ್ಲರೂ ಜಿಮ್ ಉಪಕರಣಗಳನ್ನು ಬಳಕೆ ಮಾಡ್ತಾರೆ. ಒಬ್ಬರು ಬಳಸಿರೋದನ್ನು ಮತ್ತೊಬ್ಬರು ಬಳಕೆ ಮಾಡ್ತಾರೆ. ಹೀಗಾಗಿ ನಿಮಗೆ ಗೊತ್ತಿಲ್ಲದ ಹಾಗೆ ಕಾಯಿಲೆಗಳು ನಿಮ್ಮ ಮೈಗೆ ಅಂಟಿಕೊಳ್ಳುತ್ತವೆ. ಅಷ್ಟಕ್ಕು ಜಿಮ್ ನಿಂದ ಯಾವೆಲ್ಲಾ ಕಾಯಿಲೆ ಹರಡುತ್ತೆ ಅನ್ನೋದನ್ನು ತಿಳಿಯೋಣ.

1. ಹುಳುಕಡ್ಡಿ(Ringworm)
ಹುಳುಕಡ್ಡಿ ರೋಗವು ಶಿಲೀಂಧ್ರಗಳಿಂದ ಉಂಟಾಗುತ್ತದೆ. ಒರ್ವ ಹುಳುಕಡ್ಡಿ ಸೋಂಕಿತ ವ್ಯಕ್ತಿಯು ಯಾವ ಸ್ಥಳವನ್ನು ಮುಟ್ಟುತ್ತಾನೋ ಅದನ್ನು ಇತರರು ಮುಟ್ಟಿದರೆ ಈ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅಥವಾ ಸೋಂಕಿತ ಸಂಪರ್ಕಕ್ಕೆ ಇನ್ನೊಬ್ಬ ವ್ಯಕ್ತಿ ಬಂದರೂ ಕೂಡ ಈ ರೋಗ ತಗಲುತ್ತೆ. ಹುಳುಕಡ್ಡಿ ರೋಗವು ಚರ್ಮದ ಮೇಲೆ ಉಂಗುರದ ಆಹಾರದಲ್ಲಿ ರೂಪುಗೊಳ್ಳುತ್ತದೆ. ಹಾಗೂ ಸಿಕ್ಕಾಪಟ್ಟೆ ತುರಿಸುತ್ತದೆ.
2. ಅಥ್ಲೆಟ್ ಫೂಟ್ (Athlete's foot)
ಅಥ್ಲೆಟ್ ಫೂಟ್ ಕೂಡ ಸಾಮಾನ್ಯವಾಗಿ ಶಿಲೀಂಧ್ರದಿಂದ ಹರಡುವ ಸೋಂಕಾಗಿದೆ. ಮತ್ತು ಇದನ್ನು ಟಿನಿಯಾ ಪೆಡಿಸ್ ಎಂದು ಕರೆಯಲಾಗುತ್ತದೆ. ಈ ಸೋಂಕು ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತು ಇದು ಸುಡುವ ಸಂವೇದನೆಯನ್ನು ಅನುಭವಿಸುವಂತೆ ಮಾಡುತ್ತದೆ. ನಿಮ್ಮ ಕೈಗಳಿಂದ ನಿಮ್ಮ ಕಾಲುಗಳನ್ನು ತುರಿಸೋದಕ್ಕೆ ಹೋಗಬೇಡಿ. ಇದರಿಂದ ಈ ರೋಗ ಕಾಲಿಗೆ ವರ್ಗಾವಣೆ ಆಗುವ ಸಾಧ್ಯತೆಯಿದೆ.
3. ಹೆಚ್ ಪಿವಿ
ಹ್ಯೂಮನ್ ಪ್ಯಾಪಿಲೋಮ ವೈರಸ್ ಇದು ಜಿಮ್‌ನಿಂದಲೇ ಬರುವ ಮತ್ತೊಂದು ಕಾಯಿಲೆಯಾಗಿದೆ. ಈ ಕಾಯಿಲೆ ಜಿಮ್‌ನೊಳಗಡೆ ಬರಿಗಾಲಿನಲ್ಲಿ ನಡೆಯುವ ಮೂಲಕ ಈ ವೈರಸ್ ವರ್ಗಾವಣೆ ಆಗುತ್ತದೆ. ಹೀಗಾಗಿ ಜಿಮ್ ಗೆ ಹೋಗುವಾಗ ಶೂ ಹಾಕುವುದನ್ನು ಮರೆಯಬೇಡಿ.
4. ಇನ್ಫ್ಲುಯೆಂಜಾ (Influenza)
ಇನ್ಫ್ಲುಯೆಂಜಾ ಕಾಯಿಲೆಯು ಜಿಮ್‌ನಂತಹ ಮುಚ್ಚಿದ ಜಾಗದಲ್ಲಿ ಹರಡುತ್ತದೆ. ಈ ಜಾಗದಲ್ಲಿ ಫ್ಲೂ ವೈರಸ್ ಹೆಚ್ಚಾಗುವುದರಿಂದ ಇದು ಸಾಂಕ್ರಾಮಿಕ ವೈರಸ್ ಆಗಿ ಬದಲಾಗುವ ಸಾಧ್ಯತೆ ಇದೆ. ಬೆವರು, ಸೀನು ಮತ್ತು ಕೆಮ್ಮು ಮುಂತಾದ ದೇಹದ ದ್ರವಗಳು ಇನ್ಫ್ಲುಯೆಂಜಾ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ.
5. ಜಾಕ್ ಇಚ್ (Jock itch)
ಇದು ಕೂಡ ಒಂದು ರೀತಿಯ ಕಜ್ಜಿಯಾಗಿದೆ. ಇದು ಸಾಮಾನ್ಯವಾಗಿ ತೊಡೆಸಂದು ಪ್ರದೇಶದಲ್ಲಿ ಸಂಭವಿಸುತ್ತದೆ. ಇದನ್ನು ಟಿನಿಯಾ ಕ್ಯೂರಿಸ್ ಎಂತಲೂ ಕರೆಯುತ್ತಾರೆ. ಮತ್ತು ಇದು ಶಿಲೀಂಧ್ರಗಳಿಂ ಹರಡುವ ಸೋಂಕು. ಇದು ತುರಿಕೆಯನ್ನು ಉಂಟುಮಾಡುತ್ತದೆ. ಇದು ಕೆಂಪಾಗುತ್ತದೆ. ಮತ್ತು ನೋವಿನ ಹುಣ್ಣುಗಳಾಗಿ ಬೆಳೆಯುತ್ತದೆ.
6. ಇಂಪೆಟಿಗೊ (Impetigo)
ಇಂಪೆಟಿಗೊ ಬ್ಯಾಕ್ಟೀರಿಯಾದಿಂದ ಉಂಟಾಗುವ ಒಂದು ರೀತಿಯ ಚರ್ಮದ ಸೋಂಕು. ಇದು ಕೆಂಪಾಗಿದ್ದು, ಮತ್ತು ತುರಿಕೆಯಿಂದ ಪ್ರಾರಂಭವಾಗುತ್ತದೆ. ಇದು ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ದೈಹಿಕ ಸಂಪರ್ಕದಿಂದ ಹರಡುತ್ತದೆ.
ಹೀಗಾಗಿ ಜಿಮ್ ಗೆ ಹೋಗುವವರು ನಿಮ್ಮ ಜಾಗ್ರತೆಯಲ್ಲಿ ನೀವಿರಬೇಕು. ಆದಷ್ಟು ನೈರ್ಮಕ್ಕೆ ಒತ್ತು ನೀಡಿ. ಇಲ್ಲದಿದ್ದರೆ ರೋಗ ಅಂಟಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

