Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಪುರುಷರಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೈ-ಕಾಲುಗಳಲ್ಲಿ ಕಂಡು ಬರುವ 7 ಲಕ್ಷಣಗಳು
ಇತ್ತೀಚೆಗೆ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಸಮಸ್ಯೆ ಪುರುಷರಲ್ಲಿಯೂ ಕಂಡು ಬರುತ್ತಿದೆ. ಕೆಲವೊಂದು ಆಹಾರ ಹಾಗೂ ಪಾನೀಯಗಳು ಈ ಸಮಸ್ಯೆಯನ್ನು ಮತ್ತಷ್ಟೂ ಹೆಚ್ಚಿಸುವುದು. ಯೂರಿಕ್ ಆಮ್ಲ ಪ್ರಮಾಣ ಹೆಚ್ಚಾದರೆ ಕಿಡ್ನಿ ಸ್ಟೋನ್, ಹೃದಯ ಸಮಸ್ಯೆ ಈ ಬಗೆಯ ತೊಂದರೆ ಉಂಟಾಗುವುದು.
ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾದರೆ ಈ ಬಗೆಯ ಲಕ್ಷಣಗಳು ದೇಹದಲ್ಲಿ ಕಂಡು ಬರುವುದು ನೋಡಿ:

ಯೂರಿಕ್ ಆಮ್ಲ ಕಾಲಿನಲ್ಲಿ, ಕಾಲು ಬೆರಳುಗಳಲ್ಲಿ ಕಂಡು ಬರುವುದು
ಪುರುಷರಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆ ಉಂಟು ಮಾಡುವುದು. ಆದ್ದರಿಂದ ಯೂರಿಕ್ ಆಮ್ಲ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಅದಕ್ಕೆ ಚಿಕಿತ್ಸೆ ಪಡೆದರೆ ಇತರ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.
ಪಾದಗಳಲ್ಲಿ ಊತ ಕಂಡು ಬರುವುದು
ಪಾದಗಳಲ್ಲಿ ಊತ, ಕಾಲುಗಳು ಕೆಂಪಾಗುವುದು ಇವೆಲ್ಲಾ ಯೂರಿಕ್ ಆಮ್ಲ ಹೆಚ್ಚಾಗಿದೆ ಎಂದು ಸೂಚಿಸುವ ಲಕ್ಷಣಗಳಿವೆ.
ಸಂಧಿ ನೋವು
ಯೂರಿಕ್ ಆಮ್ಲ ಹೆಚ್ಚಾದರೆ ತುಂಬಾನೇ ಸಂಧಿನೋವು ಉಂಟಾಗುವುದು. ಕೈಗಳಲ್ಲಿ, ಪಾದಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವಾಗ ತುಂಬಾನೇ ನೋವುಂಟಾಗುವುದು. ಈ ಬಗೆಯ ಸಮಸ್ಯೆ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದು.
ಮರಗಟ್ಟಿದಂತೆ, ಸೂಜಿಯಿಂದ ಚುಚ್ಚಿದಂತಾಗುವುದು
ಯೂರಿಕ್ ಆಮ್ಲ ಹೆಚ್ಚಾದರೆ ಕಾಲುಗಳಲ್ಲಿ, ಕೈಗಳಲ್ಲಿ, ಬೆರಳುಗಳಲ್ಲಿ ಸೂಜಿ ಚುಚ್ಚಿದಂಥ ಅನುಭವ, ಮರಗಟ್ಟಿದಂಥ ಅನುಭವ ಉಂಟಾಗುವುದು. ಈ ಬಗೆಯ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಕಂಡು ಅವರ ಸಲಹೆ ಪಡೆಯಿರಿ.
ದಿನನಿತ್ಯದ ಕೆಲಸ ಮಾಡಲು ತೊಂದರೆಯಾಗುವುದು
ಪುರುಷರಿಗೆ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾದರ ನಡೆದಾಡುವಾಗ, ಸಣ್ಣ ಪುಟ್ಟ ಕೆಲಸ ಮಾಡಿದಾಗ ತೊಂದರೆ ಉಂಟಾಗುವುದು. ಸಂಧುಗಳಲ್ಲಿ ಊತ , ನೋವು ಕೂಡ ಯೂರಿಕ್ ಆಮ್ಲದ ಲಕ್ಷಣವಾಗಿದೆ.
ತ್ವಚೆಯಲ್ಲಿ ಬದಲಾವಣೆ
ತ್ವಚೆ ಕೆಂಪಾಗುವುದು, ತುರಿಕೆ, ತ್ವಚೆಯಲ್ಲಿ ಗಡ್ಡೆಯಂತಾಗುವುದು ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿಮಗೆ ಆರೋಗ್ಯ ಸಮಸ್ಯೆಯಿದೆ ಎಂದರ್ಥ.
ರಾತ್ರಿ ಹೊತ್ತಿನಲ್ಲಿ ಅಸ್ವಸ್ಥತೆ ಹಾಗೂ ಸುಸ್ತು
ರಾತ್ರಿ ಹೊತ್ತಿನಲ್ಲಿ ತುಂಬಾನೇ ಅಸ್ವಸ್ಥತೆ, ಸುಸ್ತು ಈ ಬಗೆಯ ಸಮಸ್ಯೆ ಕಂಡು ಬರುವುದು, ಒಳ್ಳೆಯ ನಿದ್ದೆ ಮಾಡಲು ಸಾಧ್ಯವಾಗಲ್ಲ, ಹಗಲಿನಲ್ಲಿಯೂ ಹೆಚ್ಚು ಲವಲವಿಕೆಯಿಮದ ಇರಲು ಸಾಧ್ಯವಾಗುವುದಿಲ್ಲ.
ಈ ಯೂರಿಕ್ ಆಮ್ಲ ಸಮಸ್ಯೆ ಉಂಟಾದರೆ ನೀವು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು. ಜೊತೆಗೆ ಈ ರೀತಿ ಮಾಡುವುದರಿಂದ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡಬಹುದು
ಸಾಕಷ್ಟು ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯುವುದರಿಂದ ಅನಗ್ಯತ ಯೂರಿಕ್ ಆಮ್ಲವನ್ನು ದೇಹದಿಂದ ಹೊರಕ್ಕೆ ಹಾಕಲು ಸಹಕಾರಿ. ದಿನದಲ್ಲಿ 8-10 ಲೋಟ ನೀರು ಕುಡಿಯಿರಿ.
ಪ್ಯೂರಿನೆ ಕಡಿಮೆ ಇರುವ ಆಹಾರಕ್ರಮ ಪಾಲಿಸಿ
ನೀವು ಸಮುದ್ರಾಹಾರ, ಮದ್ಯ ಹೀಗೆ ಕೆಲವೊಂದು ಆಹಾರ ನಿಯಂತ್ರಿಸಬೇಕು.
ತೂಕ ನಿಯಂತ್ರಣದಲ್ಲಿಡಿ
ಅತ್ಯಧಿಕ ಮೈ ತೂಕ ಕೂಡ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಿಸುವುದು. ಮೈ ತೂಕ ನಿಯಂತ್ರಿಸಲು ಪ್ರತಿದಿನ ವ್ಯಾಯಾಮ ಮಾಡಿ.
ಸಕ್ಕರೆ ಪದಾರ್ಥ ಸೇವಿಸಬೇಡಿ
ಸಕ್ಕರೆಯಂಶ ಸಂಪೂರ್ಣ ಬಿಟ್ಟರೆ ಒಳ್ಳೆಯದು ಇದರಿಂದ ಯೂರಿಕ್ ಆಮ್ಲ ಸಮಸ್ಯೆ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications