Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೇಸಿಗೆಗೆ ದಾಹ ತಣ್ಣಿಸಲು ಮನೆಯಲ್ಲೇ ತಯಾರಿಸಿ ಆರೋಗ್ಯರ ಎನರ್ಜಿ ಡ್ರಿಂಕ್
ಈ ಸುಡು ಸುಡು ಬಿಸಿಲಿಗೆ ಎಷ್ಟು ನೀರು ಕುಡಿದ್ರು ಸಾಲೋದಿಲ್ಲ. ದೇಹ ಬೇಗನೆ ಡಿಹೈಡ್ರೇಟ್ ಆಗಿ ಬಿಡುತ್ತೆ. ಹಾಗಂತ ಇಡೀ ದಿನ ನೀರು ಕುಡಿಯೋದಕ್ಕೂ ಜನ ಇಷ್ಟ ಪಡೋದಿಲ್ಲ. ಇಂತಹ ಸಮಯ ಕೆಲ ಎನರ್ಜಿ ಡ್ರಿಂಕ್‌ಗಳು ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾನೇ ಒಳ್ಳೆಯದು. ಅಂತಹ ಪಾನೀಯಗಳನ್ನು ನಾವು ಮನೆಯಲ್ಲೇ ಸುಲಭವಾಗಿ ತಯಾರಿಸಿ ಕುಡಿಯಬಹುದು. ಹಾಗಾದ್ರೆ ಆ ಪಾನೀಯಗಳು ಯಾವುದು? ಅದನ್ನು ಯಾವ ರೀತಿ ತಯಾರಿಸೋದು ಅನ್ನೋದನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಬಿಸಿಲು ಇರೋದ್ರಿಂದ ಜನ ಸಾಫ್ಟ್ ಡ್ರಿಂಕ್‌ಗಳ ಮೊರೆ ಹೋಗ್ತಾರೆ. ಈ ಸಾಫ್ಟ್ ಡ್ರಿಂಕ್‌ಗಳು ಒಂದು ಸಾರಿ ಕುಡಿಯೋದಕ್ಕೆ ಹಿತ ಅನ್ನಿಸಿದ್ರು ಕೂಡ ಆರೋಗ್ಯದ ದೃಷ್ಟಿಯಿಂದ ಇವುಗಳು ಖಂಡಿತ ಒಳ್ಳೆಯದಲ್ಲ. ಇದ್ರಲ್ಲಿ ಸಕ್ಕರೆ ಸೇರಿಸಿರೋದ್ರಿಂದ ಇದು ನಮ್ಮ ದೇಹಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನೀವು ಮನೆಯಲ್ಲೇ ಇರೋ ಕೆಲ ಸಾಮಾಗ್ರಿಗಳನ್ನು ಬಳಸಿಕೊಂಡು ಈ ನೈಸರ್ಗಿಕ ಪಾನೀಯಗಳನ್ನು ಸಿದ್ಧಪಡಿಸಿಕೊಳ್ಳಬಹುದು.

1. ತೆಂಗಿನಕಾಯಿ ನೀರು ಮತ್ತು ಲಿಂಬೆ ಹಣ್ಣಿನ ಪಾನೀಯ
ತೆಂಗಿನಕಾಯಿ ನೀರಿನಲ್ಲಿ ಪ್ರೋಟಿನ್, ಫೈಬರ್, ವಿಟಮಿನ್, ಆಂಟಿಆಕ್ಸೈಡ್‌ಗಳು ಸಮೃದ್ಧವಾಗಿದೆ. ಇನ್ನೂ ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ದಿನ ಪೂರ್ತಿ ಉಲ್ಲಾಸವಾಗಿರುವಂತೆ ನೋಡಿಕೊಳ್ಳುತ್ತದೆ.
ತಯಾರಿಸುವ ವಿಧಾನ : ತೆಂಗಿನ ಕಾಯಿ ನೀರಿಗೆ, ಲಿಂಬೆ ರಸ, ಸಕ್ಕರೆ, ಜೇನುತುಪ್ಪ, ಉಪ್ಪು, ಶುಂಠಿ ಹಾಗೂ ನೀರು ಸೇರಿಸಿ ತಯಾರಿಸಿಕೊಳ್ಳಿ. ಯಾವಾಗೆಲ್ಲಾ ಬಾಯಿ ಒಣಗಿದಂತೆ, ನಿರ್ಜಲೀಕರಣವಾದಂತೆ ಭಾಸವಾಗುತ್ತದೆಯೋ ಆ ಸಮಯದಲ್ಲಿ ಕುಡಿಯಿರಿ.
2. ಚಾಕಲೇಟ್ ಹಾಗೂ ಬಾಳೆಹಣ್ಣಿನ ಮಿಲ್ಕ್‌ಶೇಕ್
ಚಾಕಲೇಟ್ ಹಾಗೂ ಬಾಳೆಹಣ್ಣಿನ ಮಿಲ್ಕ್‌ಶೇಕ್ ರುಚಿಕರ ಮಾತ್ರವಲ್ಲದೇ ಇದು ನಿಮ್ಮ ಸ್ಟಾಮಿನವನ್ನು ಕೂಡ ಹೆಚ್ಚಿಸುತ್ತದೆ.
ತಯಾರಿಸುವ ವಿಧಾನ : ಮೊದಲಿಗೆ ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಹಾಲು, ಸಕ್ಕರೆ ಮತ್ತು ಕೋಕ ಸೇರಿಸಿ ಮಿಕ್ಸಿಯಲ್ಲಿ ಹಾಕಿ. ಇವುಗಳನ್ನು ಚೆನ್ನಾಗಿ ರುಬ್ಬಿದ ನಂತರ ಒಂದು ಲೋಟಕ್ಕೆ ಹಾಕಿ ಕುಡಿಯಿರಿ.
3. ಆಪಲ್ ಸೈಡರ್ ವಿನೆಗರ್, ಲಿಂಬೆಹಣ್ಣು ಮತ್ತು ಶುಂಠಿ
ಈ ರಣ ಬಿಸಿಲಿನಲ್ಲಿ ಆಪಲ್ ಸೈಡರ್ ವಿನೆಗರ್, ಲಿಂಬೆಹಣ್ಣ ಮತ್ತು ಶುಂಠಿ ಸೇರಿಸಿ ತಯಾರಿಸಿದ ಪಾನೀಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತಯಾಸುವ ವಿಧಾನ : ಮೊದಲಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅದಕ್ಕೆ ಕೊಂಚ ಬಿಸಿ ನೀರು ಸೇರಿಸಿ. ಇನ್ನೂ ಲಿಂಬೆಹಣ್ಣು, ಶುಂಠಿ, ಕರಿ ಮೆಣಸು ಹುಡಿ, ಜೇನುತುಪ್ಪ, ಜೊತೆಗೆ ದಾಲ್ಚಿನ್ನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಕುಡಿಯಲು ಆರೋಗ್ಯಯುತವಾದ ಎನರ್ಜಿ ಡ್ರಿಂಕ್ ಸಿದ್ಧ.
4. ಶುಂಠಿ ಹಾಗೂ ಏಲಕ್ಕಿಯ ಪಾನೀಯ
ಈ ಬೇಸಿಗೆಯಲ್ಲಿ ನಿಮ ದೇಹಕ್ಕೆ ಮತ್ತಷ್ಟು ಶಕ್ತಿ ನೀಡಬೇಕಾದರೆ ಶುಂಠಿ ಹಾಗೂ ಏಲಕ್ಕಿಯಿಂದ ತಯಾರಿಸಿದ ಪಾನೀಯ ಕುಡಿಯಿರಿ. ಶುಂಠಿ ಹಾಗೂ ಏಲಕ್ಕಿಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ತಯಾರಿಸುವ ವಿಧಾನ : ಮೊದಲಿಗೆ ಬಿಸಿ ನೀರಿಗೆ ಎರಡು ತುಂಡು ಶುಂಠಿ, ಅರಶಿನ ಪುಡಿ, ಏಲಕ್ಕಿ ಪುಡಿ ಹಾಗೂ ಜೇನುತುಪ್ಪ ಸೇರಿಸಿ ಪಾನೀಯ ತಯಾರಿಸಿ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಸುಡು ಬಿಸಿಲಿಗೆ ನಿಮ್ಮಲ್ಲಿ ಚೈತನ್ಯ ತುಂಬಲು ಸಹಾಯ ಮಾಡುತ್ತದೆ.
5. ಗ್ರೀನ್ ಟೀ ಮತ್ತು ಚಿಯಾ ಬೀಜದ ಪಾನೀಯ
ಚೀಯಾ ಬೀಜದಲ್ಲಿ ಪ್ಯಾಟಿ ಆಸೀಡ್, ಪ್ರೊಟೀನ್, ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇದೆ. ಇನ್ನೂ ಗ್ರೀನ್ ಟೀಯು ಆಯಾಸವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ತಯಾರಿಸುವ ವಿಧಾನ : ಮೊದಲಿಗೆ ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಕೊಂಚ ಹೊತ್ತು ಮುಳಗಲು ಬಿಡಿ. ಆನಂತರ ಮತ್ತೊಂದು ಪಾತ್ರೆಯಲ್ಲಿ ಚೀಯಾ ಬೀಜಗಳನ್ನು ಹಾಕಿಡಿ. ಹದಿನೈದು ನಿಮಿಷದ ನಂತರ ಆ ನೀರಿಗೆ ಲಿಂಬೆಹುಳಿ, ಗ್ರೀನ್ ಟೀಯ ನೀರು, ಮತ್ತು ಸ್ವಲ್ಪ ಸಕ್ಕರೆ ಹಾಕಿ ಮಿಶ್ರಣ ಮಾಡಿಕೊಂಡು ಕುಡಿಯಿರಿ.
ಬೇಸಿಗೆಯಲ್ಲಿ ಅತಿಯಾದ ಉಷ್ಣಾಂಶದಿಂದಾಗಿ ನಮಗೆ ಆರೋಗ್ಯ ಸಮಸ್ಯೆಗಳು ಉಂಟಾಗೋದು ಸಾಮಾನ್ಯ. ಇಂತಹ ಸಮಯದಲ್ಲಿ ನಾವು ನಮ್ಮ ಆದಷ್ಟು ಹೈಡ್ರೇಟ್ ಆಗಿ ಇಟ್ಟುಕೊಳ್ಳಿವುದರ ಜೊತೆಗೆ ಆರೋಗ್ಯಯುತವಾದ ಆಹಾರಗಳನ್ನೇ ಸೇವನೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
