Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್‌ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಭಾರತದ ಬಹುತೇಕ ಕಡೆ 45°c ಉಷ್ಣಾಂಶ : ಹೀಟ್‌ವೇವ್ ಇರುವಾಗ ಇರಲಿ ಈ ಎಚ್ಚರ
ಅಬ್ಬಾ ಎಂಥ ಬಿಸಿಲು, ಈ ವರ್ಷದಷ್ಟು ಬಿಸಿಲು ನಾನು ನೋಡಿಯೇ ಇಲ್ಲ ಅಂತಿದ್ದಾರೆ. ರಣ ಬಿಸಿಲಿನ ತಾಪಕ್ಕೆ ಬೆಚ್ಚಿ ಜನ ಮನೆಯಿಂದ ಹೊರಗಡೆ ಹೆಜ್ಜೆ ಇಡಲು ಭಯ ಪಡುತ್ತಿದ್ದಾರೆ. ಮಧ್ಯಾಹ್ನ ಹೊತ್ತಿಗೆಗಂತೂ 5 ನಿಮಿಷ ಬಿಸಿಲಿನಲ್ಲಿ ನಿಂತರೆ ಹೀಟ್ ಸ್ಟ್ರೋಕ್ ಉಂಟಾಗಬಹುದು, ಹಾಗಿದೆ ಈ ಬಿಸಿಲಿನ ಉರಿ. ದೇಶದ ಬಹುತೇಕ ಕಡೆ ಉಷ್ಣಾಂಶ 45 ಡಿಗ್ರಿ ಸೆ. ತಲುಪಿದೆ.
ಹವಾಮಾನ ಇಲಾಖೆ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಬಿಹಾರದಲ್ಲಿ ಈ ಅ ವರ್ಷ ಅತ್ಯಧಿಕ ಉಷ್ಣಾಂಶ ತಲುಪಿದೆ ಎಂದು ಹೇಳಿದೆ. ಇದಲ್ಲದೆ ಸಿಕ್ಕೀಂ, ಜಾರ್ಖಂಡ್, ಒಡಿಸ್ಸಾ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣದಲ್ಲೂ ಉಷ್ಣಾಂಶ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ 13 ಜನ ಹೀಟ್ ಸ್ಟ್ರೋಕ್‌ಗೆ ಬಲಿಯಾಗಿದ್ದಾರೆ. ಈಗಾಗಲೇ ಕೆಲವು ಕಡೆ ಎಲ್ಲೋ ಇನ್ನು ಕೆಲವು ಕಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಎಲ್ಲೋ ಅಲರ್ಟ್ ಉಷ್ಣಾಂಶ
ಒಂದು ಹಂತದ ಸೆಕೆ ಸಹಿಸಿಕೊಳ್ಳಬಹುದು, ಆದರೆ ಎಲ್ಲೋ ಅಲರ್ಟ್ ಅಂದರೆ ಸಹಿಸಲು ಅಸಾಧ್ಯವಾದ ಸೆಕೆ. ಆದರೆ ಸೆಕೆ ಅತಿಯಾದರೆ ಮಕ್ಕಳಿಗೆ, ವಯಸ್ಕರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ ಪ್ರಾಣಿಗಳಿಗೆ ಅಪಾಯಕಾರಿ.
ಆರೆಂಜ್ ಅಲರ್ಟ್
ಮತ್ತಷ್ಟು ಉಷ್ಣಾಂಶ ಅಧಿಕವಿರುವ ಕಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಷ್ಣಾಂಶ ಅಧಿಕವಿದ್ದಾಗ ಬಿಸಿಲಿನಲ್ಲಿ ಕೆಲಸ ಮಾಡದಂತೆ ಸೂಚಿಸಲಾಗಿದೆ. ತುಂಬಾ ಹೊತ್ತು ಬಿಸಿಲಿನಲ್ಲಿ ನಿಲ್ಲುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚುವುದು.
ಉಷ್ಣಾಂಶ ಅಧಿಕವಿರುವಾಗ ಏನು ಮಾಡಬೇಕು, ಏನು ಮಾಡಬಾರದು?
ಏನು ಮಾಡಬಾರದು?
* ಮಧ್ಯಾಹ್ನ12 ಗಂಟೆಯಿಂದ 3 ಗಂಟೆಯವರೆಗೆ ಹೊರಗಡೆ ಹೋಗಬೇಡಿ.
* ಬಿಸಿಲಿನಲ್ಲಿ ಯಾವುದೇ ಕೆಲಸ ಮಾಡಬೇಡಿ. ಕೆಲಸವನ್ನು ಸಂಜೆ ಅಥವಾ ರಾತ್ರಿ ಹೊತ್ತಿನಲ್ಲಿ ಮಾಡಿ, ಬಿಸಿಲಿನಲ್ಲಿ ಮನೆಯೊಳಗಡೆ ಇರಿ.
* ಉಷ್ಣಾಂಶ ಅಧಿಕವಿರುವಾಗ ಟೀ, ಕಾಫಿ ಕುಡಿಯಬೇಡಿ, ಮದ್ಯಸೇವಿಸಬೇಡಿ.
* ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಪಾರ್ಕ್ ಮಾಡಿದ ಗಾಡಿಯಲ್ಲಿ ಸ್ವಲ್ಪ ಹೊತ್ತು ಇರಲಿ, ನಾನು ಈಗ ಬರುತ್ತೇನೆ ಎಂದು ಬಿಟ್ಟು ಹೋಗಬೇಡಿ.
* ಪ್ರಾಣಿಗಳನ್ನು ತಂಪಾದ ಕಡೆ ಕಟ್ಟಿ, ಕುಡಿಯಲು ನೀರು ಇಟ್ಟಿರಿ
ಏನು ಮಾಡಬೇಕು?
* ಸಾಕಷ್ಟು ನೀರು ಕುಡಿಯಿರಿ, ದಾಹವಾಗದಿದ್ದರೂ ನೀರು ಕುಡಿಯಿರಿ. ನಿಂಬೂ ಪಾನೀಯ, ತಾಜಾ ಜ್ಯೂಸ್ ಇವುಗಳನ್ನು ಮಾಡಿ ಕುಡಿಯಿರಿ.
* ಪ್ರಯಾಣ ಮಾಡುವಾಗ ನೀರನ್ನು ಜೊತೆಗೆ ಕೊಂಡೊಯ್ಯಿರಿ.
* ತೆಳು ಬಣ್ಣದ ಸಡಿಲವಾದ ಕಾಟನ್ ಬಟ್ಟೆ ಧರಿಸಿ.
* ಅತ್ಯಧಿಕ ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಡಿ
* ಬೀದಿ ಬದಿಯ ಆಹಾರಗಳನ್ನು ಸೇವಿಸಬೇಡಿ
* ಸುಸ್ತಾದಂತೆ, ತಲೆ ಸುತ್ತಿದಂತೆ ಅನಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
* ಮಜ್ಜಿಗೆ ಸೇವಿಸಿ, ಲಸ್ಸಿ, ಮಣ್ಣಿನ ಮಡಿಕೆಯಲ್ಲಿಟ್ಟ ನೀಡು ಇವುಗಳನ್ನು ಸೇವಿಸಿ.
* ಮನೆಯ ಕಿಟಕಿಗಳಿಗೆ ಕರ್ಟನ್ ಹಾಕಿ ಮನೆಯನ್ನು ಕೂಲ್ ಆಗಿಡಿ
* ತಣ್ಣೀರಿನಲ್ಲಿ ಸ್ನಾನ ಮಾಡಿ
* ತಲೆಗೆ ತಣ್ನೀರು ಹಾಕಿ ಕೊಳ್ಳಿ
* ಟವಲ್ ಅನ್ನು ಒದ್ದೆ ಮಾಡಿ ಕುತ್ತಿಗೆಗೆ ಹಾಕಿ ಇದರಿಂದ ತಂಪಾಗುವುದು.
ಹೀಟ್ ಸ್ಟ್ರೋಕ್ ಆದಾಗ ಏನು ಮಾಡಬೇಕು?
ಈಗಾಗಲೇ ಬಿಸಿಲಿನ ಝಳಕ್ಕೆ 13 ಸಾವು ಸಂಭವಿಸಿದೆ. ಬಿಸಿಲು ಇದ್ದಾಗ ಹೊರಗಡೆ ಹೋಗಬೇಡಿ. ಒಂದು ವೇಳೆ ವ್ಯಕ್ತಿಗೆ ಹೀಟ್‌ಸ್ಟ್ರೋಕ್ ಉಂಟಾದರೆ ಪ್ರಾಥಮಿಕ ಚಿಕಿತ್ಸೆ ಹೀಗೆ ಮಾಡಿ
* ನೆರಳಿನಲ್ಲಿ ಆ ವ್ಯಕ್ತಿಯನ್ನು ಮಲಗಿಸಿ, ನಂತರ ಬಟ್ಟೆಯನ್ನು ಒದ್ದೆ ಮಾಡಿ ಅವರ ಮೈಯನ್ನು ಒರೆಸಿ. ಅವರ ಹಣೆಗೆ ತಣ್ನೀರು ಹಾಕಿ.
* ದೇಹದ ಉಷ್ಣಾಂಶ ಕಡಿಮೆಯಾಗಬೇಕು, ಆದ್ದರಿಂದ ತಣ್ಣೀರಿನಿಂದ ಮೈಯನ್ನು ಒರೆಸುತ್ತಾ ಇರಿ.
* ORS ಅಥವಾ ನಿಂಬು ಪಾನೀಯ ಕುಡಿಸಿ
* ನಂತರ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ.
ಹೀಟ್ ಸ್ಟ್ರೋಕ್ ಆದಾಗ ವ್ಯಕ್ತಿಯನ್ನು ಆದಷ್ಟು ಬೇಗ ಸಾಗಿಸಬೇಕು, ಇಲ್ಲದಿದ್ದರೆ ಅಪಾಯ.
ತಣ್ಣನೆಯ ಪ್ರದೇಶದಿಂದ ಉಷ್ಣತೆ ಅಧಿಕವಿರುವ ಪ್ರದೇಶಕ್ಕೆ ಬರುವವರಾದರೆ ಹೆಚ್ಚು ಜಾಗ್ರತೆವಹಿಸಿ
ತಣ್ಣನೆಯ ಪ್ರದೇಶದಲ್ಲಿ ಇರುವವರಿಗೆ ಅವರ ದೇಹ ಅಲ್ಲಿಗೆ ಹೊಂದಿಕೊಂಡಿರುತ್ತದೆ. ಇದ್ದಕ್ಕಿದ್ದಂತೆ ಉಷ್ಣಾಂಶ ಅಧಿಕವಿರುವ ಕಡೆ ಬಂದಾಗ ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂಥವರು ಉಷ್ಣಾಂಶ ಅಧಿಕವಿರುವ ಕಡೆ ಬಂದಾಗ ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹೀಟ್‌ಸ್ಟ್ರೋಕ್ ಉಂಟಾಗಬಹುದು. ಸಾಕಷ್ಟು ನೀರು ಕುಡಿಯಿರಿ. ಮಧ್ಯಾಹ್ನ ಹೊತ್ತಿನಲ್ಲಿ ಹೊರಗಡೆ ತಿರುಗಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

