Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೀಟ್‌ವೇವ್ ಅಲರ್ಟ್: ಈ ರೀತಿ ಮಾಡಿದರೆ ಆರೋಗ್ಯ ಕಾಪಾಡಬಹುದು ನೋಡಿ
ಅಯ್ಯೋ ಸೆಕೆ ಸಹಿಸಲು ಸಾಧ್ಯನೇ ಆಗ್ತಾನೇ ಇಲ್ಲ .....ಇದೀಗ ಪ್ರತಿಯೊಬ್ಬರ ಬಾಯಿಂದ ಬರುತ್ತಿರುವ ಮಾತುಗಳು... ಇಷ್ಟು ಸೆಕೆ ಇದೇ ಮೊದಲ ಬಾರಿಗೆ ಅನುಭವಿಸುತ್ತಿದ್ದೇವೆ ಎಂದು ತುಂಬಾ ಪ್ರದೇಶದ ಜನರು ಹೇಳುತ್ತಿದ್ದಾರೆ. ಕೆಲವು ಕಡೆಗಳು ಅತೀ ಹೆಚ್ಚಿನ ಉಷ್ಣತೆ ಎಂದರೆ 28 ಡಿಗ್ರಿ C ಇರುತ್ತಿತ್ತು, ಇದೀಗ ಅಂಥ ಸ್ಥಳಗಳಲ್ಲಿ 35ಡಿಗ್ರಿ C ದಾಟಿದೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಹೀಟ್‌ವೇವ್ ಇದೆ. ಬಿಸಿಲಿನ ಝಳ ಹೆಚ್ಚಾದಾಗ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:
ಹೀಟ್ ವೇವ್ ಏನು ಮಾಡಬೇಕು, ಏನು ಮಾಡಬಾರದು?
* ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ಒಳಗಡೆ ವ್ಯಾಯಾಮ ಮಾಡಬೇಡಿ
* ಹೀಟ್‌ವೇವ್ ಇರುವಾಗ ಹೊರಗಡೆ ವ್ಯಾಯಾಮ ಮಾಡಬೇಡಿ
* ವ್ಯಾಯಾಮ ಮಾಡುವಾಗ ಸ್ವಲ್ಪ ನೀರು ಕುಡಿಯಿರಿ
* ತುಂಬಾ ಹೊತ್ತು ವ್ಯಾಯಾಮ ಮಾಡಬೇಡಿ, ಅರ್ಧ ಗಂಟೆಯ ಒಳಗಡೆ ವ್ಯಾಯಾಮ ಮಾಡಿ ಮುಗಿಸಿ
* ಶೀಥಲಿ ಪ್ರಾಣಯಾಮ ಮಾಡಿ, ದೇಹವನ್ನು ತಂಪಾಗಿಸಲು ಸಹಕಾರಿ.

ಆಹಾರ
ಸೆಕೆ ಹೆಚ್ಚಾದಾಗ ನಾವು ತಿನ್ನುವ ಆಹಾರ ಕಡೆಯೂ ಗಮನಹರಿಸಬೇಕು
* ಈ ಸಮಯದಲ್ಲಿ ಕಾಫಿ, ಟೀ ಕುಡಿಯುವುದು ಕಡಿಮೆ ಮಾಡಿ.
* ತಂಪು ಪಾನೀಯಗಳನ್ನು ಸೇವಿಸಬೇಡಿ
* ಮಾಂಸಾಹಾರ ಸೇವನೆ ಕಡಿಮೆ ಮಾಡಿ
* ರಾಗಿ, ನವಣೆ ಇವುಗಳನ್ನು ಬಳಸಿ. ಗೋಧಿ ಕೂಡ ಬಳಸಬೇಡಿ
* ಕೆಂಪಕ್ಕಿಯಿಂದ ಗಂಜಿ ತಯಾರಿಸಿ ಸೇವಿಸಿ
* ನೆಲ್ಲಿಕಾಯಿ ತಿನ್ನಿ. ಕುಡಿಯುವ ನೀರಿಗೆ ಜೀರಿಗೆ, ಮೆಂತೆ ಹಾಕಿ ಸೇವಿಸಿ.
* ನೀರಿಗೆ ಕಾಮ ಕಸ್ತೂರಿ ಹಾಕಿ ಕುಡಿಯಿರಿ
* ಗಸೆ ಗಸೆ ಬಳಸಿ.
ಹೀಟ್ ವೇವ್ ಇರುವಾಗ ಯಾವ ಬಗೆಯ ಆಹಾರ ಸೇವಿಸಿ
* ರಾಯತ
* ಲಸ್ಸಿ
* ಹಣ್ಣುಗಳು
* ಸಲಾಡ್
* ಎಳನೀರು
* ರಾಗಿ ಗಂಜಿ
* ಮಜ್ಜಿಗೆ
ಯಾವ ಆಹಾರವನ್ನು ತಿನ್ನದಿದ್ದರೆ ಒಳ್ಳೆಯದು
* ಮಸಾಲೆ ಪದಾರ್ಥಗಳು
* ಅಧಿಕ ಕೊಬ್ಬಿನಂಶವಿರುವ ಆಹಾರಗಳು
* ಕೆಫೀನ್ ಅಧಿಕವಿರುವ ಆಹಾರಗಳು, ಮದ್ಯ
* ಸಂಸ್ಕರಿಸಿದ ಆಹಾರ
* ಉಪ್ಪಿನಂಶವಿರುವ ಅಧಿಕವಿರುವ ಆಹಾರ (ಉಪ್ಪಿನಕಾಯಿ, ಚಿಪ್ಸ್...)
* ಎಣ್ಣೆಯಲ್ಲಿ ಕರಿದ ಪದಾರ್ಥಗಳು
* ಕೃತಕ ಸಿಹಿಯಂಶವಿರುವ ಆಹಾರಗಳು, ಸಕ್ಕರೆಯಂಶವಿರುವ ಆಹಾರಗಳು
* ಮಸಾಲೆ ಪದಾರ್ಥಗಳು: ಅಧಿಕ ಮಸಾಲೆ ಪದಾರ್ಥಗಳನ್ನು ಸೇವಿಸಿದಾಗ ದೇಹದಲ್ಲಿ ಉಷ್ಣಾಂಶ ಅಧಿಕವಾಗುವುದು, ತುಂಬಾ ಸೆಕೆ ಅನಿಸಲಾರಂಭಿಸುವುದು.
* ಅಧಿಕ ಕೊಬ್ಬಿನಂಶವಿರುವ ಆಹಾರಗಳು: ಅಧಿಕ ಕೊಬ್ಬಿನಂಶವಿರುವ ಆಹಾರ ಸೇವಿಸುವುದರಿಂದ ದೇಹದ ಉಷ್ಣಾಂಶ ಅಧಿಕವಾಗುವುದು.
* ಕೆಫೀನ್ ಅಧಿಕವಿರುವ ಆಹಾರಗಳು, ಮದ್ಯ: ಈ ಬಗೆಯ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಇದರಿಂದ ಸುಸ್ತು ಹೆಚ್ಚಾಗುವುದು.
* ಸಂಸ್ಕರಿಸಿದ ಆಹಾರ: ಸಂಸ್ಕರಿಸಿದ ಆಹಾರಗಳಲ್ಲಿ ಅಧಿಕ ಸೋಡಿಯಂ ಇರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಬೇಸಿಗೆಯಲ್ಲಿ ಈ ಪಾನೀಯಗಳಿಂದ ದೂರವಿರಿ.
* ಉಪ್ಪಿನಂಶವಿರುವ ಅಧಿಕವಿರುವ ಆಹಾರ (ಉಪ್ಪಿನಕಾಯಿ, ಚಿಪ್ಸ್...): ಈ ಬಗೆಯ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬಿದಂತಾಗುವುದು.
* ಎಣ್ಣೆಯಲ್ಲಿ ಕರಿದ ಪದಾರ್ಥಗಳು: ಬೇಸಿಗೆಯಲ್ಲಿ ಎಣ್ಣೆ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು.
* ಕೃತಕ ಸಿಹಿಯಂಶವಿರುವ ಆಹಾರಗಳು, ಸಕ್ಕರೆಯಂಶವಿರುವ ಆಹಾರಗಳು: ಇವುಗಳು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು.
ಆದ್ದರಿಂದ ಈ ಬಗೆಯ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು.
ಸಮುದ್ರಾಹಾರಗಳಿಂದ ದೂರವಿರಿ
ಹೀಟ್‌ವೇವ್ ಹೆಚ್ಚಾಗಿರುವಾಗ ಸಮುದ್ರಾಹಾರದಿಂದ ದೂರವಿರುವುದು ಒಳ್ಳೆಯದು.
ಸಾಸ್ ಬಳಸಬೇಡಿ
ಸಾಸ್ ಅದರಲ್ಲೂ ಚೀಸ್ ಸಾಸ್ ಬಳಸದಿದ್ದರೆ ಒಳ್ಳೆಯದು. ಏಕೆಂದರೆ ಚೀಸ್ ಬಳಸುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗಬಹುದು.
ತಂಗಳು ಆಹಾರ ಬಳಸಬೇಡಿ
ಬೇಸಿಗೆಯಲ್ಲಿ ತಂಗಳು ಆಹಾರ ಸೇವಿಸಬೇಡಿ
ನೀವು ಆಹಾರ ತಯಾರಿಸಿ 4-5 ಗಂಟೆ ಕಳೆದಿದ್ದರೆ ಆ ಆಹಾರ ಸೇವಿಸದಿದ್ದರೆ ಒಳ್ಳೆಯದು. ಬೇಸಿಗೆಯಲ್ಲಿ ನೀವು ತಂಗಳನ್ನ ಸೇವಿಸಬೇಡಿ, ತಾಜಾ ಆಹಾರ ಸೇವಿಸಿ. ಇಲ್ಲದಿದ್ದರೆ ಈ ಬಗೆಯ ಆಹಾರಗಳು ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು, ಎಚ್ಚರ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
