Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಡೋಮೇಕರ್ ಹೃದಯಾಘಾತ ತುಂಬಾನೇ ಅಪಾಯಕಾರಿ ಏಕೆ, ಇದರ ಲಕ್ಷಣಗಳೇನು?
ಹೃದಯಾಘಾತಗಳಲ್ಲಿ ಮಾರಾಣಾಂತಿಕ ಹೃದಯಾಘಾತವೆಂದರೆ ಅದು ವಿಡೋ ಹಾರ್ಟ್ ಅಟ್ಯಾಕ್. ಇತರ ಹೃದಯಘಾತದಲ್ಲಿ ಕೂಡಲೇ ಚಿಕಿತ್ಸೆ ದೊರೆತರೆ ಬದುಕಿಳಿಯಬಹುದು, ಆದರೆ ಈ ಹೃದಯಾಘಾತ ಸಂಭವಿಸಿದರೆ ಬದುಕಿಳಿಯುವ ಸಾಧ್ಯತೆ ತುಂಬಾನೇ ಕಡಿಮೆ. ಅಭಿದಮನಿ (ಅಭಿದಮನಿ ಎಂದರೆ ದೇಹದ ಎಲ್ಲಾ ಕಡೆಯಿಂದ ಹೃದಯಕ್ಕೆ ರಕ್ತವನ್ನು ತರುವ ರಕ್ತನಾಳವಾಗಿದೆ) ಬ್ಲಾಕ್ ಆದಾಗ ವಿಡೋಮೇಕರ್ ಹಾರ್ಟ್ ಅಟ್ಯಾಕ್ ಸಂಭವಿಸುವುದು.

ಏಕೆ ವಿಡೋಮೇಕರ್ ಹಾರ್ಟ್‌ಟ್ಯಾಕ್ ಸಂಭವಿಸಿದಾಗ ಇದು ಅತ್ಯಂತ ಅಪಾಯಕಾರಿ ಹೃದಯಾಘಾತ ಎಂದು ಹೇಳುವುದು ಎಂದು ನೋಡೋಣ ಬನ್ನಿ:

ವಿಡೋಮೇಕರ್ ಹೃದಯಾಘಾತ ಸಂಭವಿಸಿದಾಗ ಏನಾಗುತ್ತದೆ?
ಹೃದಯ ಸ್ನಾಯುಗಳಿಗೆ ಪ್ರತಿ ಸೆಕೆಂಡ್ ರಕ್ತ ಸಂಚಾರವಾಗಬೇಕು. ಯಾವಾಗ ಬ್ಲಾಕ್ ಉಂಟಾಗಿ ಹೃದಯದ ಸ್ನಾಯುಗಳಿಗೆ ರಕ್ತ ಸಂಚಾರವಾಗುವುದು ನಿಂತು ಹೋಗುವುದೋ ನಿಮಿಷದಲ್ಲಿಯೇ ಹೃದಯದ ಸ್ನಾಯುಗಳು ಸಾಯಲಾರಂಭಿಸುತ್ತದೆ.

ವಿಡೋಮೇಕರ್ ಹಾರ್ಟ್‌ಅಟ್ಯಾಕ್ ಲಕ್ಷಣಗಳೇನು?
ಇತರ ಹೃದಯಾಘಾತದಂತೆ ಇದರ ಲಕ್ಷಣಗಳು ಒಂದೇ ರೀತಿ ಇರುತ್ತದೆ.
* ಎದೆ ನೋವು ಕಂಡು ಬರುವುದು. ಎದೆಯಲ್ಲಿ ನೋವು, ಒತ್ತಡ, ಎದೆ ಹಿಂಡಿದಂಥ ಅನುಭವ ಈ ರೀತಿಯ ಅನುಭವ ಉಂಟಾಗುವುದು. ಸ್ವಲ್ಪ ಹೊತ್ತು ಈ ರೀತಿ ಉಂಟಾಗಿ ಮತ್ತೆ ಬರಬಹುದು.
* ದೇಹದ ಮೇಲ್ಭಾಗದಲ್ಲಿ ಅಸ್ವಸ್ಥತೆ ಉಂಟಾಗುವುದು. ತೋಳುಗಳು, ಭುಜದಲ್ಲಿ ನೋವು, ದವಡೆ ನೋವು, ಹೊಟ್ಟೆ ನೋವು ಈ ರೀತಿ ಕಂಡು ಬರುವುದು.
* ಉಸಿರಾಟದಲ್ಲಿ ತೊಂದರೆ ಕಂಡು ಬರುವುದು. ಈ ಸಮಸ್ಯೆ ಎದೆ ನೋವು ಕಾಣಿಸದೆ ಕೂಡ ಕಂಡು ಬರುವುದು.
* ಮೈ ಬೆವರುವುದು
* ತಲೆಸುತ್ತಿದಂತಾಗುವುದು
ಈ ರೀತಿಯ ಲಕ್ಷಣಗಳು ಗೋಚರಿಸುತ್ತಿದ್ದಂತೆಯೇ ಒಂದು ನಿಮಿಷ ತಡಮಾಡದೆ ಸಮೀಪದ ಸುಸಜ್ಜಿತ ಆಸ್ಪತ್ರೆಗೆ ದಾಖಲಾಗಿ.

ವಿಡೋಮೇಕರ್ ಹಾರ್ಟ್‌ಅಟ್ಯಾಕ್ ಲಕ್ಷಣಗಳೇನು?
ಜೀವನಸೈಲಿ ಹಾಗೂ ವಂಶವಾಹಿ ಸಮಸ್ಯೆಯಿಂದಾಗಿ ಉಂಟಾಗುವುದು. ಕೊಲೆಸ್ಟ್ರಾಲ್, ಫ್ಯಾಟಿ ಲಿವರ್ ಇರುವವರಿಗೆ ವಿಡೋ ಹಾರ್ಟ್‌ಅಟ್ಯಾಕ್ ಅಪಾಯ ಅಧಿಕ.
ಯಾರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು?
* ತುಂಬಾ ಸಿಗರೇಟ್ ಸೇದುವವರಿಗೆ
* ಒಬೆಸಿಟಿ ಸಮಸ್ಯೆ ಇರುವವರಿಗೆ
* ತುಂಬಾ ಅನಾರೋಗ್ಯಕರ ಆಹಾರ ಸೇವಿಸುವವರಿಗೆ
* 45 ವರ್ಷ ಮೇಲ್ಪಟ್ಟವರಿಗೆ
* ಅತ್ಯಧಿಕ ರಕ್ತದೊತ್ತಡ
* ನಿಯಂತ್ರಣಕ್ಕೆ ಬಾರದ ಮಧುಮೇಹ
* ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತವಾಗಿದ್ದರೆ (ಅಪ್ಪ, ಅಮ್ಮ, ಒಡಹುಟ್ಟಿದವರು)

ಹೃದಯಾಘಾತ ಸಂಭವಿಸಿ ಎಷ್ಟು ಸಮಯದ ಒಳಗಾಗಿ ಚಿಕಿತ್ಸೆ ದೊರೆಯಬೇಕು?
ಹೃದಯಾಘಾತವಾದ ತಕ್ಷಣ ವೈದ್ಯರು ನಿಮಗೆ ಸೂಕ್ತ ಚಿಕಿತ್ಸೆ ನೀಡಿದರೆ ಬದುಕಿಳಿಯುವ ಸಾಧ್ಯತೆ ಇದೆ. ಹೃದಯಾಘಾತದ ಲಕ್ಷಣಗಳು ಕಂಡು ಬಂದ 90 ನಿಮಿಷದೊಳಗಾಗಿ ಬ್ಲಾಕ್ ತೆಗೆದಿರಬೇಕು. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಸ್ಟಂಟ್ ಹಾಕಲಾಗುವುದು. ಮೊದಲಿಗೆ ಆಂಜಿಯೋಪ್ಲಾಸ್ಟಿ ಮಾಡಿ ಬ್ಲಾಕ್ ತೆಗೆಯಲಾಗುವುದು, ನಂತರ ಸ್ಟಂಟ್ ಹಾಕುತ್ತಾರೆ.
ಹೃದಯಾಘಾತ ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ, ಒತ್ತಡಮುಕ್ತ ಬದುಕು ಸಾಗಿಸಿ.



Click it and Unblock the Notifications
