Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತ್ತಜನಕಾಂಗದ ಕ್ಯಾನ್ಸರ್‌ನ ಮೊದಲ ಲಕ್ಷಣ ಮತ್ತು ಚಿಹ್ನೆಗಳು
ಲಿವರ್(ಪಿತ್ತಜನಕಾಂಗ) ನಮ್ಮ ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದಾಗಿದೆ. ಪಿತ್ತಜನಕಾಂಗ ನಮ್ಮ ದೇಹದಲ್ಲಿರುವ ಅತೀ ದೊಡ್ಡ ಗ್ರಂಥಿ ಮತ್ತು ಎರಡನೇ ಅತೀ ದೊಡ್ಡ ಅಂಗ. ಆರೋಗ್ಯಕರ ಜೀವನಕ್ಕೆ ಪಿತ್ತಜನಕಾಂಗದ ಕ್ರಿಯೆ ತುಂಬಾ ಮಹತ್ವದ್ದಾಗಿರುತ್ತದೆ. ಪಿತ್ತಜನಕಾಂಗದ ಕ್ರಿಯೆ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯೆಂದರೆ ಅದು ಪಿತ್ತಜನಕಾಂಗದ ಕ್ಯಾನ್ಸರ್. ಇದು ಪ್ರಾಣ ಹೋಗುವ ಮಟ್ಟಕ್ಕೂ ತಲುಪಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಿತ್ತಜನಕಾಂಗದ ರೋಗಕ್ಕೆ ಪರಿಣಾಮಕಾರಿ ಮನೆ ಮದ್ದುಗಳು
ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಕೆಲವೊಂದು ಚಿಹ್ನೆಗಳು ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ತನ್ನ ಪಿತ್ತಜನಕಾಂಗದ ಕ್ರಿಯೆ ಬಗ್ಗೆ ಸಂಶಯ ಮೂಡುವಂತೆ ಮಾಡಬಹುದು. ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಲಕ್ಷಣಗಳನ್ನು ತಿಳಿಯುವ ಮೂಲಕ ನೀವು ಆರಂಭದಲ್ಲೇ ಇದಕ್ಕೆ ವೈದ್ಯರ ಸಲಹೆ ಪಡೆಯಬಹುದು.
ನಿಮ್ಮ ದೇಹವು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಚಿಹ್ನೆ ತೋರಿಸಲು ಆರಂಭಿಸಿದಾಗಲೇ ನೀವು ಚಿಕಿತ್ಸೆ ಆರಂಭಿಸಿದರೆ ಅದು ತುಂಬಾ ಪರಿಣಾಮಕಾರಿ. ಪಿತ್ತಜನಕಾಂಗದ ಕ್ಯಾನ್ಸರ್ ನ ಆರಂಭಿಕ ಚಿಹ್ನೆಗಳನ್ನು ನೀವು ಗುರುತಿಸುತ್ತಿದ್ದರೆ ರೋಗ ಇದೆಯೆಂದು ಪರಿಗಣಿಸಬಹುದು. ಪಿತ್ತಜನಕಾಂಗದ ಕ್ಯಾನ್ಸರ್ ನ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಕಾಮಾಲೆರೋಗ
ಕಾಮಾಲೆರೋಗ ಒಂದು ರೋಗವಲ್ಲ, ಇದು ಪಿತ್ತಜನಕಾಂಗದ ಕ್ರಿಯೆಗೆ ತೊಂದರೆಯಾಗಿದೆ ಎನ್ನುವುದರ ಲಕ್ಷಣ. ದುರ್ಬಲಗೊಂಡ ಪಿತ್ತಜನಕಾಂಗದ ಕಾರ್ಯಚಟುವಟಿಕೆಯಿಂದ ದೇಹದಲ್ಲಿ ಬಿಲಿರುಬಿನ್ ಮಿತಗೊಳಿಸುತ್ತದೆ. ಕಾಮಾಲೆರೋಗವು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಚಿಹ್ನೆಗಳಲ್ಲಿ ಒಂದಾಗಿರಬಹುದು.

ತೂಕ ಕಳಕೊಳ್ಳುವುದು
ಪಿತ್ತಜನಕಾಂಗವು ನಮ್ಮ ಚಯಾಪಚಯಾ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗ. ಪಿತ್ತಜನಕಾಂಗದ ಕಾರ್ಯವು ದುರ್ಬಲವಾಗಿರುವ ಕಾರಣ ತೂಕ ಕಳಕೊಳ್ಳುತ್ತದೆ. ಇದು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ವಾಕರಿಕೆ ಮತ್ತು ವಾಂತಿ
ಯಾವುದೇ ಕಾರಣವಿಲ್ಲದೆ ನಿಮಗೆ ವಾಕರಿಕೆ ಮತ್ತು ವಾಂತಿಯ ಅನುಭವವಾಗುತ್ತಿದ್ದರೆ ನೀವು ಪಿತ್ತಜನಕಾಂಗದ ದುರ್ಬಲ ಕ್ರಿಯೆಯ ಯಾವುದಾದರೂ ಸಮಸ್ಯೆಯಿದೆಯಾ ಎಂದು ಪರೀಕ್ಷಿಸಿ. ವಾಕರಿಕೆ ಮತ್ತು ವಾಂತಿಯನ್ನು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ.

ದಣಿವು
ಪಿತ್ತಜನಕಾಂಗದ ಕಡಿಮೆಯಾದ ಕ್ರಿಯೆಯ ಲಕ್ಷಣಗಳೊಂದಿಗೆ ನಿಮಗೆ ದಣಿವು ಕಾಣಿಸಿಕೊಂಡರೆ ನೀವು ಮೊದಲ ಹಂತದ ಪಿತ್ತಜನಕಾಂಗದ ಕ್ಯಾನ್ಸರ್ ಬಗ್ಗೆ ಸಂಶಯ ಪಡಬಹುದು. ದಣಿವು ಪಿತ್ತಜನಕಾಂಗದ ಕ್ಯಾನ್ಸರ್ ಇರುವ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆ.

ಪಿತ್ತಜನಕಾಂಗ ಊದಿಕೊಳ್ಳುವುದು
ನಿಮ್ಮ ಹೊಟ್ಟೆಯ ಮೇಲ್ಭಾಗದ ಬಲಭಾಗದಲ್ಲಿ ಪಿತ್ತಜನಕಾಂಗವಿದ್ದು, ಇದು ಮಧ್ಯದ ತನಕ ಆವರಿಸಿದೆ. ಊದಿಕೊಳ್ಳುವ ಪಿತ್ತಜನಕಾಂಗವನ್ನು ನಾವು ಆ ಸ್ಥಳದಲ್ಲಿ ಸ್ಪರ್ಶಿಸಬಹುದು. ಇದಕ್ಕೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಯಾಕೆಂದರೆ ಹೆಪಟೊಮೆಗಲಿ ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಚಿಹ್ನೆಗಳಲ್ಲಿ ಪ್ರಮುಖವಾದದ್ದು.

ತುರಿಕೆ
ಇದನ್ನು ಸಾಮಾನ್ಯ ರೋಗವೆಂದು ಪರಿಗಣಿಸಲಾಗಿದೆ. ಆದರೆ ಇದು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಪ್ರಮುಖ ಚಿಹ್ನೆಯಾಗಿದೆ. ನಿಮ್ಮ ದೇಹದಲ್ಲಿ ಬಿಲಿರುಬಿನ್ ಹೆಚ್ಚಾದ ಪರಿಣಾಮ ಹೀಗೆ ಆಗುತ್ತದೆ. ಪಿತ್ತಜನಕಾಂಗದ ಕ್ರಿಯೆ ದುರ್ಬಲವಾಗುವ ಕಾರಣ ಬಿಲಿರುಬಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಚರ್ಮದಲ್ಲಿ ತುರಿಕೆ ಉಂಟು ಮಾಡುತ್ತದೆ.

ಹೊಟ್ಟೆ ನೋವು
ಪಿತ್ತಜನಕಾಂಗದ ಊದುವಿಕೆ ಮತ್ತು ಅದರ ಕ್ರಿಯೆ ದುರ್ಬಲಗೊಳ್ಳುವ ಕಾರಣ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಪಿತ್ತಜನಕಾಂಗದ ಊದುವಿಕೆಯೊಂದಿಗೆ ಹೊಟ್ಟೆನೋವು ಕಾಣಿಸಿಕೊಂಡರೆ ನಿಮಗೆ ಪಿತ್ತಜನಕಾಂಗದ ರೋಗಗಳಿರುವ ಸಾಧ್ಯತೆ ಹೆಚ್ಚು.

ಅಸಿಟಿಸ್
ಅಸಿಟಿಸ್ ಅಥವಾ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಪಿತ್ತಜನಕಾಂಗದ ಕ್ಯಾನ್ಸರ್ ನ ಮೊದಲ ಹಂತದ ಚಿಹ್ನೆಗಳಲ್ಲಿ ಒಂದಾಗಿದೆ. ಪಿತ್ತಜನಕಾಂಗ ಊದಿಕೊಳ್ಳುವುದರೊಂದಿಗೆ ಹೊಟ್ಟೆ ಉಬ್ಬರಿಸುವುದು ಪಿತ್ತಜನಕಾಂಗದ ಕ್ಯಾನ್ಸರ್ ನ ಆರಂಭಿಕ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಗಾಢ ಬಣ್ಣದ ಮೂತ್ರ
ಬಿಲಿರುಬಿನ್ ಮಟ್ಟ ರಕ್ತದಲ್ಲಿ ಹೆಚ್ಚಾಗುವ ಪರಿಣಾಮ ಮೂತ್ರದ ಮೂಲಕ ರಕ್ತ ಹೊರಹೋಗುತ್ತದೆ. ಇದರಿಂದ ಮೂತ್ರದ ಬಣ್ಣವು ಗಾಢ ಹಳದಿಯಿಂದ ಕಂದು ಬಣ್ಣಕ್ಕೆ ತಿರುಗುತ್ತದೆ. ನಿಮ್ಮ ಮೂತ್ರದ ಬಣ್ಣ ಬದಲಾವಣೆಯಾದರೆ ಶೀಘ್ರವೇ ವೈದ್ಯರ ಬಳಿಗೆ ಹೋಗಿ ಸಲಹೆ ಪಡೆಯಿರಿ.



Click it and Unblock the Notifications