Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಪಿತ್ತಜನಕಾಂಗದ ರೋಗಕ್ಕೆ ಪರಿಣಾಮಕಾರಿ ಮನೆ ಮದ್ದುಗಳು
ಪಿತ್ತಜನಕಾಂಗದಲ್ಲಿ ಉಂಟಾಗುವ ಸಮಸ್ಯೆಗಳು ಮಾನವನನ್ನು ರೋಗಿಯನ್ನಾಗಿಸುತ್ತದೆ. ದೇಹದ ಹಲವಾರು ಸೂಕ್ಷ್ಮ ಕಾರ್ಯಾಚರಣೆಗಳಿಗೆ ಪಿತ್ತಜನಕಾಂಗ (ಲಿವರ್) ಜವಬ್ದಾರಿ. ಅದಕ್ಕೆ ತೊಂದರೆಯುಂಟಾದರೆ ದೇಹದ ಸೂಕ್ತ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ಸಕ್ಕರೆ, ಕೊಬ್ಬು ಮತ್ತು ಐರನ್‌ನ ಚಯಾಪಚಯದಲ್ಲಿ ಲಿವರ್ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಕೊಬ್ಬು ಕರಗುವಿಕೆ ಸಹಾಯ ಮಾಡುವಂತಹ ಪಿತ್ತರಸವನ್ನು ಅದು ಉತ್ಪಾದಿಸುತ್ತದೆ. ಪ್ರೋಟೀನ್ ಉತ್ಪಾದನೆಯಲ್ಲಿ ಹಾಗೂ ರಕ್ತ ಪ್ರಸರಣ ಕ್ರಿಯೆಯಲ್ಲಿ ಪಿತ್ತಜನಕಾಂಗದ ಮಹತ್ವ ಹಿರಿದು.
ಪಿತ್ತಜನಕಾಂಗದ ಕಾಯಿಲೆಯ ರೋಗಲಕ್ಷಣವೆಂದರೆ ಮಾನವನಲ್ಲಿ ಅಧಿಕ ಸುಸ್ತು, ತೂಕ ಇಳಿಕೆ, ವಾಂತಿ, ಜಾಯಿಂಡೀಸ್ ಮುಂತಾದುವು. ಇಂತಹ ಕೆಲವೊಂದು ಪಿತ್ತಜನಕಾಂಗದ ಸಮಸ್ಯೆಗಳನ್ನು ದೂರವಿರಿಸಲು ಸಹಕಾರಿಯಾದ ಮನೆಮದ್ದುಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈ ಮದ್ದುಗಳು ಸರಳ ಹಾಗೂ ತುರ್ತಾಗಿ ಕಾರ್ಯನಿರ್ವಹಿಸುತ್ತವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರುಳನ್ನು ಹಣ್ಣುಗಳಿಂದ ಸ್ವಚ್ಛಗೊಳಿಸಬಹುದೇ ?

ಹಾಲಿನ ಕಳ್ಳಿ
ಈ ಗಿಡಮೂಲಿಕೆ ಪಿತ್ತಜನಕಾಂಗದ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ಊಟದ ಸಮಯದಲ್ಲಿ ದಿನಕ್ಕೆ ಎರಡು ಬಾರಿ 900 ಮಿಲಿಗ್ರಾಂನಷ್ಟು ಈ ಹಾಲಿನ ಕಳ್ಳಿಯನ್ನು ಸೇವಿಸಿ.

ಏಪಲ್ ಸೀಡರ್ ವಿನೇಗರ್
ಪಿತ್ತಜನಕಾಂಗದ ಸಮಸ್ಯೆಯನ್ನು ಬುಡದಿಂದಲೇ ಇದು ಉಪಶಮನ ಮಾಡುತ್ತದೆ. ಕೊಬ್ಬನ್ನು ಸುಲಭವಾಗಿ ಚಯಾಪಚಯಗೊಳಿಸುತ್ತದೆ.
.ಒಂದು ಲೋಟ ನೀರಿಗೆ ಒಂದು ಸ್ಪೂನ್ ಏಪಲ್ ಸೀಡರ್ ವಿನೇಗರ್ ಅನ್ನು ಮಿಶ್ರ ಮಾಡಿ
.ಈ ಮಿಶ್ರಣಕ್ಕೆ ಜೇನನ್ನೂ ಸೇರಿಸಬಹುದು
.ದಿನಕ್ಕೆ ಮೂರು ಬಾರಿ ಈ ಮಿಶ್ರಣವನ್ನು ಸೇವಿಸಿ

ದಾಂಡೇಲಿಯನ್ ಬೇರಿನ ಟೀ
ದಾಂಡೇಲಿಯನ್ ಬೇರಿನ ಹುಡಿ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ದಿನಕ್ಕೆ ಎರಡು ಬಾರಿ ಇದರ ಚಹಾ ಮಾಡಿಕೊಂಡು ಕುಡಿಯಿರಿ ಅಥವಾ ನೀರಿನೊಂದಿಗೆ ಕಲಸಿ ಸೇವಿಸಿ.

ಆಮ್ಲಾ ಅಥವಾ ನೆಲ್ಲಿಕಾಯಿ
ಆಮ್ಲಾದಲ್ಲಿ ವಿಟಮಿನ್ ಸಿ ಅತ್ಯಧಿಕವಾಗಿದ್ದು ಪಿತ್ತಜನಕಾಂಗದ ಸಮಸ್ಯೆಯನ್ನು ದೂರವಿರಿಸುವಲ್ಲಿ ಸಹಕಾರಿಯಾಗಿದೆ.

ಅರಶಿನ
ಅರಶಿನ ಕೂಡ ಲಿವರ್ ಸಮಸ್ಯೆಗೆ ಪ್ರತ್ಯೌಷಧವಾಗಿದೆ. ನಿಮ್ಮ ಆಹಾರದಲ್ಲಿ ಅರಶಿನವನ್ನು ನೀವು ಬಳಸಿಕೊಳ್ಳುವುದರಿಂದ ಪಿತ್ತಜನಕಾಂಗದ ಹಲವಾರು ತೊಂದರೆಗಳು ಮಾಯವಾಗುತ್ತವೆ.

ಪಪ್ಪಾಯಿ ಹಣ್ಣು
ಪಿತ್ತಜನಕಾಂಗದ ಸಮಸ್ಯೆಗಳಿಗೆ ಇದು ನೈಸರ್ಗಿಕ ಪರಿಹಾರಕವಾಗಿದೆ.
ಎರಡು ಸ್ಫೂನ್‌ಗಳಷ್ಟು ಪಪ್ಪಾಯಿ ಜ್ಯೂಸ್‌ಗೆ ಅರ್ಧ ಚಮಚ ಲಿಂಬೆ ರಸವನ್ನು ಸೇರಿಸಿ ಪ್ರತೀ ದಿನ ಸೇವಿಸಿ

ಪಾಲಕ್ ಅಥವಾ ಕ್ಯಾರೇಟ್ ಜ್ಯೂಸ್
.ಅರ್ಧ ಲೋಟ ಪಾಲಾಕ್ ಜ್ಯೂಸ್ ಮತ್ತು ಅರ್ಧ ಲೋಟ ಕ್ಯಾರೇಟ್ ಜ್ಯೂಸ್ ಅನ್ನು ಮಿಶ್ರ ಮಾಡಿಕೊಂಡು ಈ ನೈಸರ್ಗಿಕ ಪರಿಹಾರವನ್ನು ಮೂರು ನಾಲ್ಕು ಗಂಟೆಗಳಿಗೊಮ್ಮೆ ಕುಡಿಯಿರಿ.

ಮದ್ಯಪಾನ ಮಾಡಬೇಡಿ
ನಿಮ್ಮ ಪಿತ್ತಜನಕಾಂಗವನ್ನು ಸ್ವಾಸ್ಥ್ಯವಾಗಿಡಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಮದ್ಯಪಾನ ಮಾಡಬೇಡಿ.

ಸೇಬು ಮತ್ತು ಎಲೆಗಳುಳ್ಳ ತರಕಾರಿಗಳು
ಸೇಬು ಹಾಗೂ ಎಲೆಗಳಿಂದ ಕೂಡಿದ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಸಾಕಷ್ಟು ನೀರು ಕುಡಿಯಿರಿ
ಹೌದು ಉತ್ತಮ ಆರೋಗ್ಯ ನಮ್ಮದಾಗಬೇಕಿದ್ದರೆ ಸಾಕಷ್ಟು ನೀರು ಕುಡಿಯುವುದು ಅನಿವಾರ್ಯ. ದಿನಕ್ಕೆ 10-12 ಲೋಟಗಳಷ್ಟು ನೀರನ್ನು ಕುಡಿಯಲೇಬೇಕು.

ವ್ಯಾಯಾಮ
ದಿನನಿತ್ಯ ವ್ಯಾಯಾಮ ಮಾಡುವುದು ಆಹಾರವನ್ನು ಚೆನ್ನಾಗಿ ಕರಗಿಸಿ ದೇಹದಿಂದ ಅಧಿಕ ಕೊಬ್ಬನ್ನು ಹೊರಹಾಕುತ್ತದೆ. ಹಾಗೂ ಪಿತ್ತಜನಕಾಂಗದ ಸಮಸ್ಯೆಯನ್ನು ದೂರೀಕರಿಸುತ್ತದೆ.



Click it and Unblock the Notifications