Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೃದಯಾಘಾತ ಮುನ್ನ ಕಾಣಿಸುವ 7 ಲಕ್ಷಣಗಳು

ಮಹಿಳೆಯರಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಅದು ಹೃದತಯಾಘಾತ ಉಂಟಾಗುವ ಲಕ್ಷಣಗಳಾಗಿದ್ದು ಮುನ್ನಚ್ಚರಿಕೆ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯುವುದು ಒಳ್ಳೆಯದು.
1. ತಲೆಸುತ್ತು: ಹೃದಯಾಘಾತ ಉಂಟಾಗುವ ಒಂದು ತಿಂಗಳ ಮುಂಚಿತವಾಗಿ ವಿಪರೀತ ತಲೆಸುತ್ತು ಕಂಡು ಬರುತ್ತದೆ. ಈ ರೀತಿ ತಲೆಸುತ್ತು ಕಾಣಿಸಿಕೊಂಡು ದಿನನಿತ್ಯದ ಚಟುವಟಿಕೆಗೆ ಅಡಚಣೆ ಉಂಟು ಮಾಡುತ್ತದೆ. ಹೃದಯಾಘಾತ ಆಗಿರುವ 70% ಮಹಿಳೆಯರಿಗೆ ಒಂದು ತಿಂಗಳ ಮುಂಚಿತವಾಗಿ ಈ ರೀತಿಯ ಲಕ್ಷಣಗಳು ಕಂಡು ಬಂದಿರುವುದಾಗಿ ಅಧ್ಯಯನವು ಹೇಳುತ್ತದೆ.
2. ನಿದ್ದೆ ಬರದಿರುವುದು: ಹೃದಯಾಘಾತ ಉಂಟಾಗುವ ಸ್ವಲ್ಪ ದಿನಗಳಿಗಿಂತ ಮುಂಚೆ ನಿದ್ದೆ ಸರಿಯಾಗಿ ಬರುವುದಿಲ್ಲ. ಇಂತಹ ಸ್ಥಿತಿಯನ್ನು ಇನ್ಸೋಮ್ನಿಯ ಎಂದು ಕರೆಯಲಾಗುತ್ತದೆ.
3. ಒತ್ತಡ: ಸಾಮಾನ್ಯವಾಗಿ ಕಾಣಿಸಿ ಕೊಳ್ಳುವುಕ್ಕಿಂತ ಅಧಿಕ ಮಾನಸಿಕ ಒತ್ತಡ ಹೃದಯಾಘಾತ ಮುಂಚೆ ಕಾಣಿಸಿಕೊಳ್ಳುತ್ತದೆ.
4. ಅಜೀರ್ಣತೆ: ಹೊಟ್ಟೆ ನೋವು, ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು ಮುಂತಾದ ಲಕ್ಷಣಗಳು ಕೂಡ ಕಂಡು ಬರುತ್ತದೆ.
5. ಉಸಿರಾಟ: ಮನೆ ಕೆಲಸ ಮಾಡುವಾಗ ಅಥವಾ ಮನೆ ಮೆಟ್ಟಿಲು ಹತ್ತುವಾಗ ಉಸಿರಾಟಕ್ಕೆ ಕಷ್ಟವಾಗುವುದು.
6. ಜ್ವರದ ಲಕ್ಷಣಗಳು: ಚಳಿಯಾಗುವುದು, ವಿಪರೀತ ಬೆವರುವುದು, ನಿಶ್ಯಕ್ತಿ, ಜ್ವರ ಬಂದಂತೆ ಅನಿಸುವುದು ಈ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ.
7. ಮೈಕೈ ನೋವು: ಗಲ್ಲ, ಕುತ್ತಿಗೆ, ಭುಜ, ಕಿವಿಯ ಹತ್ತಿರ ನೋವು ಉಂಟಾಗುತ್ತದೆ. ಕುತ್ತಿಗೆ ಮತ್ತು ಭುಜದ ನೋವು ದೇಹದ ಎಡ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
