Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ತುಪ್ಪದ ಜೊತೆಗೆ ಈ ಆಹಾರಗಳನ್ನು ಸೇವಿಸಿದ್ರೆ ಯಾವ ರೋಗವು ಹತ್ತಿರ ಸುಳಿಯೋದಿಲ್ಲ!
ಎಲ್ಲಾ ಭಾರತೀಯರ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ತುಪ್ಪ ಇದ್ದೇ ಇರುತ್ತದೆ. ಪ್ರತಿ ಆಹಾರ ತಯಾರು ಮಾಡುವಾಗಲೂ ನಾವು ತುಪ್ಪವನ್ನು ಬಳಕೆ ಮಾಡದೇ ಇರೋದಿಲ್ಲ. ಎಣ್ಣೆ ಅಥವಾ ಬೇರೆ ಕೊಬ್ಬಿನಾಮ್ಲಗಳಿಗೆ ಹೋಲಿಕೆ ಮಾಡಿದ್ರೆ ತುಪ್ಪು ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಹಾಗಂತ ಸಿಕ್ಕಾಪಟ್ಟೆ ತುಪ್ಪವನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಿದೆ. ಅಷ್ಟಕ್ಕೂ ತುಪ್ಪವನ್ನೂ ಯಾವ ರೀತಿ ಸೇವನೆ ಮಾಡಿದರೆ ಒಳ್ಳೆಯದು ಅನ್ನೋದನ್ನು ತಿಳಿದುಕೊಳ್ಳೋಣ.
1. ತುಪ್ಪದ ಜೊತೆಗೆ ಬೆಳುಳ್ಳಿ ಸೇವಿಸಿದ್ರೆ ಜ್ವರ ದೂರ!
ಬೆಳ್ಳುಳ್ಳಿ ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ಗಿಡಮೂಲಿಕೆ ವಸ್ತುವಾಗಿದೆ. ನಿಮಗೊತ್ತಾ? ಇದನ್ನು ತುಪ್ಪದೊಂದಿಗೆ ಬೆರೆಸಿ ತಿಂದರೆ ಇದು ದೀರ್ಘಕಾಲದ ಜ್ವರಕ್ಕೆ ಪರಿಣಾಮಕಾರಿ ಔಷಧಿಯಾಗುತ್ತಂತೆ. ಸಾಂಪ್ರದಾಯಿಕ ಔಷಧಗಳನ್ನು ನಂಬುವವರಿಗೆ ಈ ಔಷಧಿ ಉಪಯುಕ್ತವಾಗಿದೆ. ಒಂದು ವೇಳೆ ನಿಮಗೆ ಬಂದಿರುವ ಜ್ವರ ಹಲವಾರು ದಿನಗಳವರೆಗೆ ಮುಂದುವರಿದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
2. ತುಪ್ಪದೊಂದಿಗೆ ತ್ರಿಫಲವನ್ನು ಸೇರಿಸಿ!
ತ್ರಿಫಲ ಮಿಶ್ರಣವನ್ನು ತುಪ್ಪದೊಂದಿಗೆ ಸೇರಿಸಿ ತಿಂದರೆ ತುಂಬಾನೇ ಒಳ್ಳೆಯದು. ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡೋದಕ್ಕೆ ಇದು ಪರಿಣಾಮಕಾರಿ ಔಷಧಿಯಾಗಿದೆ. ತುಪ್ಪವು ಪೋಷಕಾಂಶಗಳು ಮತ್ತು ಸಂಯುಕ್ತಗಳ ಉತ್ತಮ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.
3. ತುಪ್ಪವನ್ನು ಬೆಳಗ್ಗಿನ ಉಪಹಾರದೊಂದಿಗೆ ಸೇವಿಸಿ!
ಬೆಳಗ್ಗಿನ ಉಪಹಾರದ ಜೊತೆಗೆ ಒಂದೆರಡು ಚಮಚ ತುಪ್ಪವನ್ನು ಸೇವನೆ ಮಾಡಬಹುದು. ಎಣ್ಣೆ ಅಥವಾ ಬೆಣ್ಣೆಯ ಬದಲಾಗಿ ತುಪ್ಪವನ್ನು ಸೇವನೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಬ್ರೆಡ್ ಟೋಸ್ಟ್ ಮಾಡುವಾಗ ಅಥವಾ ಬೇರೆ ಯಾವುದಾದರೂ ಬ್ರೇಕ್ ಫಾಸ್ಟ್ ತಯಾರು ಮಾಡುವಾಗ ತುಪ್ಪವನ್ನು ಸೇರಿಸಿಕೊಂಡರೆ ಉತ್ತಮ. ಇದು ನಿಮಗೆ ದಿನದ ಆರಂಭಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ.
4. ಲ್ಯಾಕ್ಟೋಸ್ ಸಮಸ್ಯೆ ಇರುವವರಿಗೆ ಒಳ್ಳೆಯದು!
ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೆ ತುಂಬಾ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತುಪ್ಪವು ಹಾಲಿನ ಘನವಸ್ತುಗಳನ್ನು ಮಾಡಿರೋದ್ರಿಂದ ಆರೋಗ್ಯಕರ ಕೊಬ್ಬಿನ ಮೂಲವನ್ನು ಹೊಂದಿದೆ. ಹೀಗಾಗಿ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಇದನ್ನು ಸೇವನೆ ಮಾಡಬಹುದು.
5. ಎಣ್ಣೆಯ ಬದಲು ತುಪ್ಪ ಸೇವಿಸಿ!
ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಮಗೆ ತಿನ್ನೋದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒಗ್ಗರಣೆಗೆ ಎಣ್ಣೆಯ ಬದಲು ತುಪ್ಪವನ್ನು ಬಳಕೆ ಮಾಡಿದ್ರೆ ಉತ್ತಮ. ನಾವು ತಿನ್ನುವ ಆಹಾರದಲ್ಲಿ ತುಪ್ಪವನ್ನು ಬಳಸೋದ್ರಿಂದ ಹಾನಿಕಾರಕ ಸಂಯುಕ್ತಗಳ ಬಿಡುಗಡೆಯನ್ನು ತಡೆಯುತ್ತದೆ. ಮತ್ತು ನಿಮ್ಮ ಭಕ್ಷ್ಯಗಳ ಪೌಷ್ಟಿಕಾಂಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತುಪ್ಪ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅನ್ನೋದು ನಮಗೆ ಗೊತ್ತಿರಬೇಕು. ಅತಿಯಾಗಿ ತುಪ್ಪ ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












