Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಉರಿ ಬಿಸಿಲಿನ ಈ ಸಮಯದಲ್ಲಿ ಆರೋಗ್ಯಕ್ಕಾಗಿ ನೀವು ಹೀಗೆ ಮಾಡಿದರೆ ತುಂಬಾ ಒಳ್ಳೆಯದು
ಅಬ್ಬಾ ಏನು ಬಿಸಿಲ ಉರಿ, ಇನ್ನೂ ಒಂದು ಮಳೆ ಬಂದಿಲ್ಲ, ಸಾಮಾನ್ಯವಾಗಿ ಇಷ್ಟು ಸಮಯಕ್ಕೆ ಒಂದು ಅಥವಾ ಎರಡು ಮಳೆ ಬಂದಿರುತ್ತದೆ, ಆದರೆ ಈ ವರ್ಷ ನದಿಗಳು, ಕೊಳಗಳು, ಬೋರ್‌ವೆಲ್‌ಗಳು ಬತ್ತುತ್ತಿವೆ, ಕೃಷಿಗೆ ನೀರಿಲ್ಲ, ಕುಡಿಯೋಕೆ, ಮನೆ ಬಳಕೆಗೆ ನೀರಿಲ್ಲ...
ಉರಿ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗಡೆ ಓಡಾಡಿದರೆ ಸುಸ್ತಾಗುತ್ತೇವೆ, ಅಷ್ಟೊಂದು ತೀವ್ರ ಬಿಸಿಲು, ಇನ್ನು ಏಪ್ರಿಲ್, ಮೇ ತಿಂಗಳು ಊಹಿಸಲೂ ಭಯವಾಗುತ್ತೆ. ಈ ಉರಿ ಬಿಸಿಲಿನ ಸಮಯದಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಈ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಯಾರು ಹೆಚ್ಚು ಜಾಗ್ರತೆವಹಿಸಬೇಕು. ಮೈಯನ್ನು ತಂಪಾಗಿಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬಿಸಿಲಿನ ಧಗೆ ಹೆಚ್ಚಾದಾಗ ಯಾರಿಗೆ ಹೆಚ್ಚು ಅಪಾಯಕಾರಿ?
60 ವರ್ಷ ಮೇಲ್ಪಟ್ಟವರು, ಮಕ್ಕಳು, 5 ವರ್ಷದ ಕೆಳಗಿನ ಮಕ್ಕಳು
ಆರೋಗ್ಯ ಸಮಸ್ಯೆ ಇರುವವರು, ಹೃದಯ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಮಧುಮೇಹದ ಸಮಸ್ಯೆ
ಕೆಲವೊಂದು ಕಾಯಿಲೆಗೆ ಔಷಧಿ ತೆಗೆಯುತ್ತಿದ್ದರೆ
ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದರೆ ( ಕಟ್ಟಡ ಕೆಲಸ, ರೋಡ್ ಕೆಲಸ ಹೀಗೆ ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿದ್ದರೆ)
ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡುವುದು ಹೇಗೆ?
ತುಂಬಾನೇ ನೀರು ಕುಡಿಯಬೇಕು
ಮದ್ಯಪಾನ ಮಾಡಬೇಡಿ, ತಂಪು ಪಾನೀಯ ಸೇವಿಸಬೇಡಿ
ಹೊರಗಡೆ ಹೀಗುವಾಗ ನೀರು ತಗೊಂಡು ಹೋಗಿ
ದೇಹವನ್ನು ತಂಪಾಗಿ ಇಡುವುದು ಹೇಗೆ?
ಸಾಕಷ್ಟು ನೀರು ಕುಡಿಯಿರಿ
ಹಣ್ಣುಗಳನ್ನು ಸೇವಿಸಿ
ಎಳನೀರು ಸೇವಿಸಿ
ತಣ್ಣೀರಿನಲ್ಲಿ ಸ್ನಾನ ಮಾಡಿ
ಹೊರಗಡೆ ಸನ್‌ಸ್ಕ್ರೀನ್ ಹಚ್ಚಿ
ಬಿಸಿಲಿನಲ್ಲಿ ಕೆಲಸ ಮಾಡಬೇಡಿ, ಅದೇ ಕೆಲಸವನ್ನು ಬೆಳಗ್ಗೆ ಹಾಗೂ ಮಧ್ಯಾಹ್ನ 3 ಗಂಟೆಯ ಮೇಲೆ ಕೆಲಸ ಮಾಡಿ.
ಮನೆಯನ್ನು ತಂಪಾಗಿ ಇಡಿ
ಕಿಟಕಿಗೆ ಕರ್ಟನ್ ಹಾಕಿ
ಹೇರ್ ಕಂಡೀಷನರ್ ಇಲ್ಲದಿದ್ದರೆ ಮನೆಯೊಳಗಡೆ ಗಾಳಿಯಾಡುವಂತಿರಬೇಕು
ಮನೆಯಲ್ಲಿ ಒಲೆ ಅಥವಾ್ ಸ್ಟೌವ್ ಅನ್ನು ಬಳಸುವ ಬದಲಿಗೆ ರಾತ್ರಿ ಬಳಸಿ, ಇದರಿಂದ ಮನೆಯೊಳಗಡೆ ಸೆಕೆ ಹೆಚ್ಚಾಗುವುದನ್ನು ತಡೆಗಟ್ಟಬಹುದು.
ಮಕ್ಕಳಿಗೆ ನೀರು ಕುಡಿಯಲು ಹೇಳಿ, ಜ್ಯೂಸ್ ಕೊಡಿ
ಮಕ್ಕಳನ್ನು, ನಾಯಿ, ಬೆಕ್ಕನ್ನು ಕಾರಿನೊಳಗಡೆ ಬಿಟ್ಟು ಹೋಗಬೇಡಿ
ಮನೆಯ ಹೊರಗಡೆ, ಟೆರೇಸ್‌ನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿಡಿ.
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಕಂಡು ಬರುವ ಲಕ್ಷಣಗಳು
ತಲೆಸುತ್ತುವುದು'
ಸುಸ್ತು
ಬಾಯಾರಿಕೆ
ಮೂತ್ರ ಹಳದಿ ಬಣ್ಣದಲ್ಲಿ ಇರುವುದು
ಹಸಿವು ಕಡಿಮೆ ಇರುವುದು
ತಲೆಸುತ್ತು
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಏನು ಮಾಡಬೇಕು?
ಸಾಕಷ್ಟು ನೀರು ಕುಡಿಯಬೇಕು
ಟೀ ಕುಡಿಯಬೇಡಿ
ಮದ್ಯಪಾನ ಮಾಡಬಾರದು
ಒಂದು ಸ್ಪ್ರೇ ಬಾಟಲಿನಲ್ಲಿ ನೀರು ತುಂಬಿ ಅದನ್ನು ಮುಖಕ್ಕೆ, ಕತ್ತಿಗೆ ಸ್ಪ್ರೇ ಮಾಡುತ್ತಾ ಇರಿ
ಹೀಟ್ ಕ್ರಾಂಪ್ಸ್ (ಬೇಸಿಗೆಯಲ್ಲಿ ಸ್ನಾಯು ಸೆಳೆತ)
ಬೇಸಿಗೆಯಲ್ಲಿ ಹೊರಗಡೆ ಕ್ರಿಕೆಟ್, ಮತ್ತಿತರ ಆಟವಾಡಿದಾಗ ಸ್ನಾಯು ಸೆಳೆತ ಉಂಟಾಗುವುದು, ಇದನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಬೇಕು
ತಣ್ಣೀರಿನಲ್ಲಿ ಸ್ನಾನ ಮಾಡಿ
ತುಂಬಾನೇ ವರ್ಕೌಟ್ ಮಾಡಬೇಡಿ.
ಹೀಟ್ ಸ್ಟ್ರೋಕ್ ಲಕ್ಷಣಗಳೇನು?
ದೇಹದ ಉಷ್ಣಾಂಶ ಹೆಚ್ಚಾಗುವುದು
ತುಂಬಾನೇ ಬಾಯಾರಿಕೆ
ಎದೆ ಬಡಿತ ಹೆಚ್ಚಾಗುವುದು
ವಾಂತಿ
ತಲೆಸುತ್ತುವುದು
ವಿಚಿತ್ರ ವರ್ತನೆ
ಪಿಡ್ಸ್ ಬರುವುದು, ಪ್ರಜ್ಞೆ ತಪ್ಪುವುದು
ಬೇಸಿಗೆಯಲ್ಲಿ ವ್ಯಕ್ತಿ ತಲೆ ಸುತ್ತಿದರೆ ಏನು ಮಾಡಬೇಕು?
ತಂಪಾದ ಸ್ಥಳದಲ್ಲಿ ಅವರನ್ನು ಕೂರಿಸಿ
ಅವರಿಗೆ ಸ್ವಲ್ಪ ಪ್ರಜ್ಞೆ ಇದ್ದರೆ ನೀರು ಕೊಡಿ
ನಂತರ ಮುಖಕ್ಕೆ ಸ್ವಲ್ಪ ನೀರು ಹಾಕಿ
ಅವರ ತಲೆ, ಕಂಕುಳ, ಕಾಲಿಗೆ ನೀರನ್ನು ಬಟ್ಟೆಯಲ್ಲಿ ಅದ್ದಿ ಇಡಿ
ಈ ಸಮಯದಲ್ಲಿ ಯಾವುದೇ ಪ್ಯಾರಾಸಿಟಮೋಲ್ ಅಥವಾ ಆಸ್ಪಿರಿನ್ ನೀಡಬೇಡಿ.
ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆವಹಿಸಿ, ಮಜ್ಜಿಗೆ ಸೇವಿಸಿ, ಎಳನೀರು ಸೇವಿಸಿ, ಹಣ್ಣುಗಳನ್ನು ಹೆಚ್ಚಾಗಿ ಬಳಸಿ, ಹೆಚ್ಚು ಖಾರದ ಆಹಾರ ಬಳಸಬೇಡಿ, ಬಟ್ಟೆ ಕೂಡ ಕಾಟನ್ ಬಟ್ಟೆ ಧರಿಸಿ, ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಹಿಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
