Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಇನ್ಮುಂದೆ ಆ್ಯಂಟಿಬಯೋಟಿಕ್ ನೀಡುವಾಗ ಎಲ್ಲಾ ವೈದ್ಯರು ಕೇಂದ್ರ ಆರೋಗ್ಯ ಇಲಾಖೆಯ ಈ ಸೂಚನೆ ಪಾಲಿಸಲೇಬೇಕು
ಸಣ್ಣಪುಟ್ಟ ಜ್ವರ ಬಂದು ವೈದ್ಯರ ಬಳಿ ಹೋದಾಗ ಆ್ಯಂಟಿಬಯೋಟಿಕ್ ಕೊಡುವವರು ಇದ್ದಾರೆ, ಏಕೆಂದರೆ ಆ್ಯಂಟಿಬಯೋಟಿಕ್ ನೀಡಿದ ತಕ್ಷಣ ಬೇಗನೆ ಜ್ವರ ಕಡಿಮೆಯಾಗುವುದು, ಹಾಗಾಗಿ ಆ್ಯಂಟಿಬಯೋಟಿಕ್ ನೀಡುತ್ತಾರೆ. ಮಕ್ಕಳಿಗೂ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆ ಆ್ಯಂಟಿಬಯೋಟಿಕ್ ನೀಡುತ್ತಾರೆ. ಆದರೆ ಇನ್ಮುಂದೆ ನೀವು ವೈದ್ಯರು ಸೂಚಿಸಿದರು ಎಂದು ಆ್ಯಂಟಿಬಯೋಟಿಕ್ ಸೇವಿಸಬೇಡಿ, ಹಾಗಂತ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ವೈದ್ಯರಿಗೂ ಸೂಚನೆ
ಕೇಂದ್ರ ಆರೋಗ್ಯ ಇಲಾಖೆ ವೈದ್ಯರಿಗೆ ನೀವು ಆ್ಯಂಟಿಬಯೋಟಿಕ್ ನೀಡುವುದಾದರೆ ಏಕೆ ಅದನ್ನು ನೀಡುತ್ತಿದ್ದೀರಿ ಎಂಬುವುದನ್ನು ಉಲ್ಲೇಖಿಸಬೇಕು ಎಂಬುವುದಾಗಿ ಸೂಚನೆ ನೀಡಿದೆ. ಡಾ. ಅತುಲ್ ಗೋಯಲ್ (the Director General of Health Services) ಎಲ್ಲಾ ವೈದ್ಯರಿಗೆ ನೀವು ಆ್ಯಂಟಿಬಯೋಟಿಕ್ ನೀಡುವುದಾದರೆ ಅದರ ಬಗ್ಗೆ ಕಡ್ಡಾಯವಾಗಿ ಚೀಟಿಯಲ್ಲಿ ಬರುಯುವಂತೆ ಹೇಳಿದೆ.

ಆ್ಯಂಟಿಬಯೋಟಿಕ್ ಎಂದರೇನು?
ಆ್ಯಂಟಿಬಯೋಟಿಕ್ ಎಂಬುವುದು ಪವರ್‌ಫುಲ್ ಔಷಧವಾಗಿದ್ದು ಕೆಲವೊಂದು ಸೋಂಕಿನ ವಿರುದ್ಧ ಹೋರಾಡಲು ಬಳಸಲಾಗುವುದು. ಇದನ್ನು ಬಳಸುವುದರಿಂದ ಹಾನಿಕಾರಕ ಬ್ಯಾಕ್ಟಿರಿಯಾ ಉತ್ಪತ್ತಿ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಸಾಮಾನ್ಯವಾಗಿ ಬ್ಯಾಕ್ಟಿರಿಯಾಗಳನ್ನು ರಕ್ತದಲ್ಲಿರುವ ಬಿಳಿ ರಕ್ತಕಣಗಳು ತಡೆಗಟ್ಟುತ್ತದೆ. ಆದರೆ ಬಿಳಿ ರಕ್ತಕಣಗಳು ಬ್ಯಾಕ್ಟಿರಿಯಾ ತಡೆಗಟ್ಟಲು ವಿಫಲವಾದಾಗ ಈ ರೀತಿ ಆ್ಯಂಟಿಬಯೋಟಿಕ್ ನೀಡಲಾಗುವುದು.
ಆ್ಯಂಟಿಬಯೋಟಿಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
* ಆ್ಯಂಟಿಬಯೋಟಿಕ್ ದೇಹದೊಳಗೆ ಸೇರಿದಾಗ ಅದು ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ.
* ಇದು ಬ್ಯಾಕ್ಟಿರಿಯಾಗಳು ಹೆಚ್ಚು ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತದೆ.
ಆ್ಯಂಟಿಬಯೋಟಿಕ್ ಯಾವಾಗ ಬಳಸಬೇಕು?
ಚಿಕ್ಕ ಪುಟ್ಟ ಅನಾರೋಗ್ಯಕ್ಕೆಲ್ಲಾ ಆ್ಯಂಟಿಬಯೋಟಿಕ್ ಬಳಸಬಾರದು. ಬ್ಯಾಕ್ಟಿರಿಯಾಗಳನ್ನು ಕೊಲ್ಲಲು ನಮ್ಮ ದೇಹ ಅಸಮರ್ಥವಾದಾಗ ಮಾತ್ರ ಬಳಸಬೇಕು.
ಆ್ಯಂಟಿಬಯೋಟಿಕ್ ಅಡ್ಡಪರಿಣಾಮಗಳೇನು?
* ಬೇಧಿ
* ವಾಂತಿ
* ಮೈಮೇಲೆ ಗುಳ್ಳೆಗಳು ಏಳುವುದು
* ಹೊಟ್ಟೆ ಹಾಳಾಗುವುದು
* ಸೂರ್ಯನ ಬೆಳಕು ನೋಡಲು ಸಾಧ್ಯವಾಗದೇ ಇರುವುದು
* ಕೆಲವೊಂದು ಆ್ಯಂಟಿಬಯೋಟಿಕ್ ಬಾಯಲ್ಲಿ ಫಂಗಲ್ ಸೋಂಕು ಉಂಟು ಮಾಡುತ್ತದೆ
* ಪ್ಲೇಟ್‌ಲೆಟ್ ಕಡಿಮೆ ಮಾಡುತ್ತದೆ
* ಕಿಡ್ನಿ ಸ್ಟೋನ್ ಉಂಟಾಗುವುದು.
ಅಲರ್ಜಿ ಸಮಸ್ಯೆ ಉಂಟಾಗುವುದು
* ಮೈ ಮೇಲೆ ಗುಳ್ಳೆಗಳು ಏಳುವುದು
* ನಾಲಗೆ ದಪ್ಪವಾಗುವುದು
* ಕೆಮ್ಮು
* ಉಸಿರಾಟದಲ್ಲಿ ತೊಂದರೆ
ಈ ರೀತಿಯ ಲಕ್ಷಣಗಳು ಕಂಡು ಬಂದರೆ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
