Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಡೆಂಗ್ಯೂ ಸೊಳ್ಳೆ ಕಚ್ಚಿ ಎಷ್ಟು ದಿನದ ನಂತರ ಜ್ವರ ಬರುತ್ತದೆ?
ಡೆಂಗ್ಯೂ ಒಂದು ರೀತಿಯಲ್ಲಿ ಮಾರಣಾಂತಿಕ ಕಾಯಿಲೆ ಅಂತಾನೇ ಹೇಳಬಹುದು. ಡೆಂಗ್ಯೂ ಜ್ವರ ಬಂದ ವ್ಯಕ್ತಿಗೆ ಸರಿಯಾದ ಚಿಕಿತ್ಸೆಗಳು ಸಿಗದೇ ಹೋದರೆ ಆತ ಸಾಯುವ ಅಪಾಯಗಳು ಹೆಚ್ಚಿದೆ. ಅದ್ರಲ್ಲೂ ಹೆಚ್ಚಿನವರಿಗೆ ಡೆಂಗ್ಯೂ ಬಗ್ಗೆ ಅನೇಕ ಪ್ರಶ್ನೆಗಳಿದೆ. ಡೆಂಗ್ಯೂ ಹೇಗೆ ಹರಡುತ್ತದೆ? ಅದು ನೀರಿನಲ್ಲಿ ಬೆಳೆಯುತ್ತಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಜನರಲ್ಲಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.

1. ಡೆಂಗ್ಯೂ ಸೊಳ್ಳೆಗಳು ನೋಡೋದಕ್ಕೆ ಹೇಗಿರುತ್ತದೆ?
ಡೆಂಗ್ಯೂ ಸೊಳ್ಳೆಯ ಹೆಸರು ಈಡಿಸ್ ಈಜಿಪ್ಟಿ. ಈ ಸೊಳ್ಳೆಗಳು ಗಾಢ ಬಣ್ಣ ಹೊಂದಿರುತ್ತವೆ. ಅದರ ಕಾಲುಗಳ ಸುತ್ತಲೂ ಇರುವ ಬಿಳಿ ಪಟ್ಟಿ ಮತ್ತು ಅದರ ದೇಹದ ಮೇಲೆ ಮಾಪಕಗಳಂತೆ ಕಾಣುವ ಬೆಳ್ಳಿಯ ಬಿಳಿ ಮಾದರಿಯಿಂದ ನೀವು ಅದನ್ನು ಗುರುತಿಸಬಹುದು. ಈ ರೀತಿಯ ಸೊಳ್ಳೆಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಹಾಗೂ ಹೆಚ್ಚಾಗಿ ನೀರಿ ನಿಂತಿರುವ ಸ್ಥಳಗಳಲ್ಲಿ ಕಂಡು ಬರುತ್ತದೆ.
2. ಯಾವ ಸಮಯದಲ್ಲಿ ಡೆಂಗ್ಯೂ ಸೊಳ್ಳೆ ಕಚ್ಚುತ್ತದೆ!
ಈ ಜಾತಿಯ ಡೆಂಗ್ಯೂ ಸೊಳ್ಳೆಗಳು ಸೂರ್ಯೋದಯದ ಎರಡು ಗಂಟೆಗಳ ನಂತರ ಮತ್ತು ಸೂರ್ಯಾಸ್ತದ ಹಲವಾರು ಗಂಟೆಗಳ ಮೊದಲು ಹೆಚ್ಚು ಸಕ್ರಿಯವಾಗಿರುತ್ತದೆ. ಆದರೆ ರಾತ್ರಿಯಲ್ಲಿ ನಿಮ್ಮ ಮನೆಯಲ್ಲಿ ಉತ್ತಮ ಬೆಳಕು ಇದ್ದರೂ ಕೂಡ ಅದು ನಿಮ್ಮನ್ನು ಕಚ್ಚುತ್ತದೆ. ಇಷ್ಟೇ ಅಲ್ಲದೇ, ಕೆಲವು ಸಂಶೋಧನೆಗಳ ಪ್ರಕಾರ ಕೀಲುಗಳು ಮತ್ತು ಮೂಳೆಗಳ ಮೇಲೆ ಹೆಚ್ಚು ಕಚ್ಚುತ್ತವೆ ಎಂದು ಪತ್ತೆ ಹಚ್ಚಲಾಗಿದೆ.
3. ಡೆಂಗ್ಯೂ ಸೊಳ್ಳೆ ಕಚ್ಚಿ ಎಷ್ಟು ದಿನಗಳ ನಂತರ ಜ್ವರ ಬರುತ್ತದೆ?
WHO(world health organisation) ಪ್ರಕಾರ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ 4-10 ದಿನಗಳ ನಂತರ ಸಂಭವಿಸುತ್ತದೆ. ಈ ಸಂದರ್ಭದಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ 104 ಡಿಗ್ರಿ ಎಫ್ ವರೆಗೆ ಹೋಗಬಹುದಾದ ಅತಿ ಹೆಚ್ಚು ಜ್ವರವಿರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ತಲೆನೋವು ಅಥವಾ ಕಣ್ಣುಗಳ ಹಿಂದೆ ನೋವು ಕಾಣಿಸಿಕೊಳ್ಳೋದು ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಒಂದಾಗಿದೆ
4. ಡೆಂಗ್ಯೂ ಸೊಳ್ಳೆ ಹೇಗೆ ಸಂತಾನೋತ್ಪತ್ತಿ ಮಾಡುತ್ತದೆ?
ಡೆಂಗ್ಯೂ ಸೊಳ್ಳೆಗಳು ಮನೆ ಮತ್ತು ಅಂಗಳದಲ್ಲಿ ನೀರು ತುಂಬಿದ ಪಾತ್ರೆಗಳು, ಗೋಡೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ನೀರಿನಲ್ಲಿ ಮುಳುಗಿದಾಗ ಮೊಟ್ಟೆಗಳು ಹೊರಬರುತ್ತವೆ. ಮೊಟ್ಟೆಗಳು ತಿಂಗಳುಗಳ ಕಾಲ ಬದುಕಬಲ್ಲವು. ಅಲ್ಲದೆ 1 ಹೆಣ್ಣು ಡೆಂಗ್ಯೂ ಸೊಳ್ಳೆಯು ತನ್ನ ಜೀವನದಲ್ಲಿ 5 ಬಾರಿ ಡಜನ್‌ಗಟ್ಟಲೆ ಮೊಟ್ಟೆಗಳನ್ನು ಇಡುತ್ತದೆ. ಮತ್ತು ಈ ಮೊಟ್ಟೆಗಳು ಸಾವಿರಾರು ಜನರಿಗೆ ಸೋಂಕು ತಗುಲಿಸಬಹುದು.
5. ಡೆಂಗ್ಯೂ ಸೊಳ್ಳೆಗಳು ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯೇ?
ಡೆಂಗ್ಯೂ ಸೊಳ್ಳೆಗಳು ಅಶುದ್ಧ ನೀರಿನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆಗಳು ಹೆಚ್ಚು ಎತ್ತರಕ್ಕೆ ಹಾರಲು ಸಾಧ್ಯವಿಲ್ಲ. ಸೊಳ್ಳೆಗಳು ಮೊಟ್ಟೆ ಇಡಲು ನೀರು ತುಂಬಿದ ಪಾತ್ರೆಗಳ ಹುಡುಕಾಟದಲ್ಲಿ 400 ಮೀಟರ್‌ಗಳವರೆಗೆ ಮಾತ್ರ ಹಾರಬಲ್ಲವು. ಮತ್ತು ಇಲ್ಲಿಯೇ ಅವು ತಮ್ಮ ಸೋಂಕನ್ನು ಹರಡಲು ಪ್ರಾರಂಭಿಸುತ್ತವೆ.
ಅದಕ್ಕಾಗಿಯೇ ನಿಮ್ಮ ಮನೆಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ. ಈ ಸೊಳ್ಳೆಗಳಿಂದ ಸೋಂಕಿಗೆ ಒಳಗಾಗದಂತೆ ತಂಪಾದ ಮತ್ತು ಇತರ ನೀರು ತುಂಬಿಕೊಂಡಿರೋ ಸ್ಥಳಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
