ಮಂಕಿಫಾಕ್ಸ್ ಅಬ್ಬರಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..! ಭಾರತಕ್ಕೂ ಕಾದಿದೆ ಅಪಾಯ.!

ಕೊರೊನಾ ಬಳಿಕ ಜಗತ್ತಿಗೆ ಹಲವು ರೀತಿಯ ವೈರಸ್‌ಗಳು ಹರಡುತ್ತಿರುವುದು ನೋಡಿರಬಹುದು. ಅದ್ರಲ್ಲೂ ಮಂಕಿ ಫಾಕ್ಸ್ ಎಂದು ಕರೆಯಲ್ಪಡುವ ಬಳಿಕ mpox ಎಂದು ಮರುನಾಮಕರಣ ಮಾಡಲಾದ ಕಾಯಿಲೆಯು ಆಫ್ರಿಕಾದಿಂದ ಹರಡುತ್ತಿದೆ. ಏಕಾಏಕಿ mpox ಕೇಸ್‌ಗಳು ಹೆಚ್ಚಾದ ಪರಿಣಾಮ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.

ಈ ರೋಗದ ಹರಕುವಿಕೆ ಪ್ರಮಾಣ ಹಾಗೂ ಈ ವೈರಸ್‌ನ ಹೊಸ ತಳಿಯ ರೂಪಾಂತರವು ಇಡೀ ವಿಶ್ವದಲ್ಲಿ ಕಳವಳಕ್ಕೆ ಕಾರಣವಾಗಿದೆ. ಅತ್ಯಂತ ವೇಗವಾಗಿ ಆಫ್ರಿಕಾದಿಂದ ಬೇರೆ ಖಂಡಗಳತ್ತ ಹರಡುತ್ತಿದೆ ಎಂಬುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ಸಾವು ವರದಿಯಾದ ಬೆನ್ನಲ್ಲೇ ಆಫ್ರಿಕಾದಾದ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ.

Health Emergency Declared For Monkey Fox Danger Awaits India too

ಈ ವರ್ಷವೇ ಆಫ್ರಿಕಾದಲ್ಲಿ ಮಾತ್ರ 14,000ಕ್ಕೂ ಹೆಚ್ಚು ಪ್ರಕರಣಗಳು ಮತ್ತು 524 ಸಾವುಗಳು ದಾಖಲಾಗಿವೆ. ಇದಕ್ಕೂ ಮೊದಲ ಸಹ ಒಮ್ಮೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. 2012ರಲ್ಲಿಯೂ ಸಹ ಇದೇ ರೀತಿ ವಿಪರೀತವಾಗಿ ವೈರಸ್ ಹರಡಿತ್ತು. ಈಗ ಅದರ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿದುಬಂದಿದೆ. ಈಗ 110 ಕ್ಕೂ ಹೆಚ್ಚು ದೇಶಗಳಲ್ಲಿ mpox ಏಕಾಏಕಿ ಆತಂಕ್ಕೆ ಕಾರಣವಾಗಿದೆ.

ಭಾರತಕ್ಕೇನು ಅಪಾಯ?

ವಿಶ್ವದ ಹಲವು ಭಾಗದಲ್ಲಿ ಈ ವೈರಸ್ ಹರಡುತ್ತಿದೆ. ಹೀಗಾಗಿ ಭಾರತಕ್ಕೂ ಇದರ ಅಪಾಯ ಕುರಿತು ಆತಂಕವಿದೆ. ಏಕೆಂದರೆ ಭಾರತದಲ್ಲಿ ಕೊರೊನಾ ಸಮಯದಲ್ಲಿ ನಡೆದಿದ್ದ ದುರಂತ ನಾವು ನೆನೆಯಬಹುದು. ಜನಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ವೈರಸ್ ಸಂಬಂಧಿ ಕಾಯಿಲೆಗಳು ವಿನಾಶ ಸೃಷ್ಟಿಸುತ್ತವೆ. ನಗರಗಳಲ್ಲಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಸುಗಮಗೊಳಿಸುತ್ತದೆ, ನಿಯಂತ್ರಣವನ್ನು ಹೆಚ್ಚು ಸವಾಲಾಗಿ ಮಾಡುತ್ತದೆ.

ಜೊತೆಗೆ ಈ ಕಾಯಿಲೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೊದಲೇ ವೈರಸ್ ದೇಶದಲ್ಲಿ ಹರಡಿರುತ್ತದೆ. ಹೀಗಾಗಿಯೇ ಭಾರತಕ್ಕೆ ಈ ವೈರಸ್ ಬಹಳ ಅಪಾಯಕಾರಿ. ಇದಲ್ಲದೆ, ಮಧುಮೇಹ, ಹೃದ್ರೋಗ ಮತ್ತು ಉಸಿರಾಟದ ಪರಿಸ್ಥಿತಿಗಳಂತಹ ದೀರ್ಘಕಾಲದ ಕಾಯಿಲೆಗಳಿರುವ ಭಾರತದ ಹೆಚ್ಚಿನ ಜನಸಂಖ್ಯೆಯಲ್ಲಿರುವುದು ಸಹ ಈ ವೈರಸ್‌ನ ತೀವ್ರ ಅಪಾಯಕ್ಕೆ ಕಾರಣವಾಗಬಹುದು.

ಪಾಕಿಸ್ತಾನದಲ್ಲಿ ಮೊದಲ ಕೇಸ್ ದೃಢ

ಭಾರತಕ್ಕೆ ಈ ವೈರಸ್ ಅಪಾಯದ ಜೊತೆಗೆ ದುರಂತಕ್ಕೆ ಕಾರಣವಾಗಬಹುದು ಎಂಬ ವರದಿಗಳ ನಡುವೆ ನೆರೆಯ ಪಾಕಿಸ್ತಾನದಲ್ಲಿ ಈ ವರ್ಷದ ಮೊದಲ ಕೇಸ್ ವರದಿಯಾಗಿದೆ. ಸೌದಿ ಅರೇಬಿಯಾದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರು ವೈರಸ್‌ಗೆ ಒಳಗಾಗಿರುವುದು ದೃಢವಾಗಿದೆ. ಇದು ಪಾಕಿಸ್ತಾನದಲ್ಲಿ ವರದಿಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ.

ಮರ್ದಾನ್‌ನ 34 ವರ್ಷದ ಪುರುಷ ನಿವಾಸಿ ಆಗಸ್ಟ್ 3 ರಂದು ಪಾಕಿಸ್ತಾನಕ್ಕೆ ಆಗಮಿಸಿದ್ದರು. ಅಲ್ಲಿಂದ ಅವರು ಪೇಶಾವರಕ್ಕೆ ಬಂದ ಕೆಲವು ದಿನಗಳ ಬಳಿಕ ರೋಗ ಲಕ್ಷಣಗಳ ಹೊಂದಿದ್ದರು. ಈ ವೇಳೆ ಆಸ್ಪತ್ರೆಗೆ ತೆರಳಿದಾಗ ರಕ್ತ ಪರೀಕ್ಷೆ ನಡೆಸಲಾಗಿತ್ತು, ಈಗ ವರದಿಯಲ್ಲಿ mpox ದೃಢವಾಗಿದೆ.

Mpox ಅಥವಾ ಮಂಕಿಫಾಕ್ಸ್ ಎಂದರೇನು?

Mpox ಒಂದು ವೈರಲ್ ಸೋಂಕು, ಆರ್ಥೋಪಾಕ್ಸ್ವೈರಸ್ ಎಂಬ ವೈರಸ್‌ನ ವಂಶಕ್ಕೆ ಇದು ಸೇರಿದೆ. ಇದು ಸಿಡುಬಿನ ಒಂದು ಪ್ರಭೇದ. 1958ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿತ್ತು. ಮಂಕಿಪಾಕ್ಸ್ ರೋಗ 1970ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲೂ ಕಂಡುಬಂತು. ಓರ್ವ ಕಾಯಿಲೆಪೀಡಿತ ವ್ಯಕ್ತಿಯಿಂದ ಮತ್ತೊಬ್ಬನಿಗೆ ಹರಡುತ್ತದೆ. ಈ ವೈರಸ್‌ನ ಮೂಲ ಪ್ರಾಣಿಗಳು ಎಂದು ತಿಳಿದುಬಂದಿದೆ. ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡು ಬಳಿಕ ಅಮೆರಿಕ ಸೇರಿ ಹಲವು ದೇಶಗಳಿಗೂ ವ್ಯಾಪಿಸಿದೆ.

ಮಂಕಿಪಾಕ್ಸ್ ಲಕ್ಷಣಗಳೇನು?

ಮಂಕಿಫಾಕ್ಸ್‌ನ ಪ್ರಮುಖ ಲಕ್ಷಣವೆಂದರೆ ಕೈ ಕಾಲುಗಳ ಮೇಲೆ ದದ್ದುಗಳಾಗುವುದು, ಸಣ್ಣದಾದ ಕಜ್ಜಿ ರೂಪದ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ವಿಪರೀತ ಜ್ವರ, ತಲೆನೋವು, ಬೆನ್ನುನೋವು, ಮೈ-ಕೈ ನೋವು ಸಹ ಕಂಡುಬರುತ್ತದೆ. ಈ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳಬಹುದು. ಮೈ ಮೇಲಿನ ದದ್ದುಗಳಿಂದ ಹಳದಿ ಬಣ್ಣದ ನೀರು ಸಹ ಕಂಡುಬರುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Health Emergency Declared For Monkey Fox..! Danger Awaits India too?

This virus is spreading in many parts of the world. So India is also worried about its danger. Because we can remember the tragedy that happened during Corona in India.
Story first published: Friday, August 16, 2024, 13:00 [IST]
X
Desktop Bottom Promotion