Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ತಿಂದ್ರೆ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ
ತಂಗಳು ಊಟ ಅಂದ್ರೆ ನಮ್ಮಲ್ಲಿ ಅನೇಕರು ಮೂಗು ಮುರಿಯುತ್ತಾರೆ. ಹೆಚ್ಚಿನವರಿಗೆ ತಾಜಾ ಆಹಾರವೇ ಬೇಕು. ಒಂದು ರೀತಿಯಲ್ಲಿ ಶುದ್ಧವಾದ ಆಹಾರವನ್ನು ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಪರಿಸ್ಥಿತಿ ಚೆನ್ನಾಗಿಲ್ಲದಾಗ ನಮಗೆ ತಂಗಳು ಆಹಾರವೇ ಗತಿ. ತಂಗಳು ಆಹಾರ ಸೇವಿಸಿದರೆ ಆಸಿಡಿಟಿ, ಕೆಲವೊಂದು ಸಲ ಫುಡ್ ಪಾಯಿಸನ್ ಆಗೋದು ಸಹಜ. ಆದರೆ ಕೆಲ ಅಧ್ಯಯನಗಳ ಪ್ರಕಾರ ತಂಗಳು ಊಟ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಂತೆ.
ನಿಮಗೊತ್ತಾ ತಂಗಳು ಚಪಾತಿ ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಚಪಾತಿಯನ್ನು ಗೋಧಿ ಹಿಟ್ಟು ಹಾಗೂ ನೀರನ್ನು ಸೇರಿಸಿ ತಯಾರಿಸಲಾಗುತ್ತದೆ. ಚಪಾತಿ ತಯಾರಿಸಿದ ಮೇಲೆ ಇದರಲ್ಲಿ ಯಾವುದೇ ರೀತಿ ನೀರಿನ ಅಂಶ ಉಳಿಯೋದಿಲ್ಲ. ಹೀಗಾಗಿ ಕೆಲ ಗಂಟೆಗಳ ಕಾಲ ಇಟ್ಟು ಸೇವಿಸುವುದರಿಂದ ಯಾವುದೇ ಸಮಸ್ಯೆ ಎದುರಾಗೋದಿಲ್ವಂತೆ.

ರಾತ್ರಿಯ ಚಪಾತಿ ಬೆಳಗ್ಗೆ ಸೇವಿಸ್ಬಹುದಾ?
ಅನೇಕ ಮನೆಗಳಲ್ಲಿ ರಾತ್ರಿ ಉಳಿದ ಆಹಾರವನ್ನು ಬೀದಿ ನಾಯಿಗಳಿಗೆ ನೀಡಲಾಗುತ್ತದೆ. ಅಥವಾ ಅದನ್ನು ಎಸೆಯಲಾಗುತ್ತದೆ. ಆದರೆ ನೀವು ರಾತ್ರಿ ಚಪಾತಿಯನ್ನು ತಯಾರಿಸಿದರೆ ಅದನ್ನು ಬೆಳಗ್ಗಿನ ಉಪಹಾರಕ್ಕೆ ಬಳಸಿಕೊಳ್ಳಬಹುದು. 12-15 ಗಂಟೆಗಳ ಕಾಲ ಚಪಾತಿಯನ್ನು ಹಾಗೆಯೇ ಇಡಬಹುದು. ಇದರಿಂದ ಯಾವುದೇ ರೀತಿ ಸಮಸ್ಯೆ ಆಗೋದಿಲ್ವಂತೆ. ಆದರೆ ಹದಿನೈದು ಗಂಟೆಗಳು ಕಳೆದ ನಂತರ ತಿನ್ನೋದಕ್ಕೆ ಹೋಗಬೇಡಿ ಆರೋಗ್ಯದಲ್ಲಿ ಏರುಪೇರಾಗಬಹುದು. ಅಷ್ಟಕ್ಕು ತಂಗಳು ಚಪಾತಿಯಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿದೆ ಅನ್ನೋದನ್ನು ತಿಳಿಯೋಣ.
1. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಇತ್ತೀಚಿಗೆ ಹೆಚ್ಚಿನವರು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಪಾತಿಯ ಜೊತೆಗೆ ಬೆಳಗ್ಗೆ ಒಂದು ಲೋಟ ಹಾಲು ಕುಡಿಯೋದ್ರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಯಾವುದೇ ಪಲ್ಯದ ಜೊತೆಗೆ ಚಪಾತಿಯನ್ನು ಸೇವಿಸುವುದರ ಬದಲಾಗಿ ಹಾಲಿನೊಂದಿಗೆ ಸೇವಿಸಿದರೆ ಆರೋಗ್ಯ ದೃಷ್ಟಿಯಿಂದ ತುಂಬಾನೇ ಉತ್ತಮ. ಇನ್ನೂ ಹಾಲಿನಲ್ಲೂ ಕೂಡ ಹಲವಾರು ಪೋಷಕಾಂಶಗಳಿದ್ದು ಇದು ಕೂಡ ನಮ್ಮ ದೇಹದ ಆರೋಗ್ಯ ಕಾಪಾಪಲು ನೆರವಾಗುತ್ತದೆ.
2. ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ
ಅನೇಕ ಜನರಿಗೆ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಯಾವುದೇ ಆಹಾರ ತಿಂದರೂ ಕೂಡ ಅವರ ದೇಹಕ್ಕೆ ಆಗೋದಿಲ್ಲ. ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತವರು ತಂಗಳು ಚಪಾತಿಯನ್ನು ಸೇವಿಸಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಆಮ್ಲೀಯತೆ, ಮಲಬದ್ಧತೆ, ಗ್ಯಾಸ್ ಸಮಸ್ಯೆಯನ್ನು ಪರಿಹರಿಸುತ್ತದೆ.
3. ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ
ಮಧುಮೇಹ ಸಮಸ್ಯೆ ಇರುವವರಿಗೆ ತಂಗಳು ಚಪಾತಿ ತುಂಬಾನೇ ಒಳ್ಳೆಯದು. ಬೆಳಗ್ಗೆ ತಂಗಳು ಚಪಾತಿಯನ್ನು ಹಾಲಿನೊಂದಿಗೆ ಸೇವಿಸಿದರೆ ಮಧುಮೇಹ ಸಮಸ್ಯೆ ನಿಯಂತ್ರಣದಲ್ಲಿರುತ್ತದೆ. ಚಪಾತಿಯನ್ನು ಆರರಿಂದ ಏಳು ನಿಮಿಷಗಳ ಕಾಲ ಹಾಲಿನಲ್ಲಿ ನೆನೆಸಿ ನಂತರ ಸೇವಿಸಿ. ಇದು ಸರಿಯಾದ ಕ್ರಮ. ಈ ರೀತಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
4. ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುತ್ತದೆ
ಇತ್ತೀಚಿನ ವಾತಾವರಣಕ್ಕೆ ನಮ್ಮ ದೇಹ ಹೊಂದಿಕೊಳ್ಳೋದೇ ಇಲ್ಲ. ಕೆಲವೊಂದು ಸಲ ಏಕಾ ಏಕಿ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ನಾನಾ ರೀತಿಯ ಪ್ರಯತ್ನ ಮಾಡಿದ್ರು ಕೂಡ ಪ್ರಯೋಜನವಾಗೋದಿಲ್ಲ. ಇದಕ್ಕೆ ಬೆಸ್ಟ್ ಪರಿಹಾರ ಅಂದ್ರೆ ಬೆಳಗ್ಗೆ ತಂಗಳು ಚಪಾತಿಯನ್ನು ಹಾಲಿನಲ್ಲಿ ಅದ್ದಿ ತಿನ್ನಿ. ಇದರಿಂದ ನಿಮ್ಮ ದೇಹದ ಉಷ್ಣಾಂಶ ಕಡಿಮೆ ಆಗುತ್ತದೆ.
ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಸೇವಿಸೋದ್ರಿಂದ ಯಾವ ರೀತಿಯ ಸಮಸ್ಯೆಯೂ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ. ಆದರೆ 12-15 ಗಂಟೆಯೊಳಗಡೆ ಸೇವಿಸಿ. ಇದರಿಂದ ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳು ಪರಿಹಾರವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
