Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಮತ್ಕಾರ ಮಾಡುತ್ತೆ ಈ ಗಿಡ..! ಯಾವೆಲ್ಲಾ ಸಮಸ್ಯೆಗೆ ಇದು ಔಷಧಿ ಗೊತ್ತಾ?
ನಮ್ಮ ಹಲವು ಕಾಯಿಲೆಗಳಿಗೆ ಗಿಡಮೂಲಿಕೆಯಲ್ಲಿ ಪರಿಹಾರ ಇರುವುದು ನೋಡಬಹುದು. ಪುರಾತನ ಕಾಲದಿಂದಲೂ ಗಿಡಮೂಲಿಕೆಯ ಔಷಧಿ ಹಲವು ಕಾಯಿಲೆಗೆ ಬಳಸಿರುವುದು ನೋಡಬಹುದು. ಹಾಗೆ ಕೆಲವು ಗಿಡಮೂಲಿಕೆಯಿಂದಾಗಿ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಹಿಂದಿನ ಕಾಲದಲ್ಲೂ ಇದೇ ಗಿಡಮೂಲಿಕೆಗಳ ಮೂಲಕ ಹಲವು ಸಮಸ್ಯೆಗಳ ಬಗೆಹರಿಸುತ್ತಿದ್ದರು.
ಇನ್ನು ನಮ್ಮ ಸುತ್ತಲೆ ಇರುವ ಹಲವು ಗಿಡಗಳು ಔಷಧಿ ಸಸ್ಯಗಳೆಂದು ನಮಗೆ ತಿಳಿದಿರುವುದೇ ಇಲ್ಲ. ಇಂದು ನಾವು ಇದೇ ರೀತಿ ರಸ್ತೆಯ ಬದಿಗಳಲ್ಲಿ ಕಂಡುಬರುವಂತಹ ಚಕ್ರಮರ್ಧನ ಅಥವಾ ತಗಚೆ ಗಿಡ ಎಂದು ಕರೆಯುವ ಗಿಡದ ಕುರಿತು ತಿಳಿಯೋಣ. ಈ ಗಿಡವನ್ನು ವೈಜ್ಞಾನಿಕವಾಗಿ ಸ್ಟಿಕಲ್ ಪಾಡ್ ಪ್ಲಾಂಟ್ ಅಥವಾ ಕ್ಯಾಸಿಯಾ ಟೊರಾ ಎಂದು ಕರೆಯಲಾಗುತ್ತದೆ. ಇದು 90 ಸೆಂ.ಮೀ ಎತ್ತರಕ್ಕೆ ಬೆಳೆಯಬಹುದು.

ಪ್ಯಾಬೇಸಿಯ ಎಂಬ ಕುಟುಂಬಕ್ಕೆ ಸೇರಿದ ಈ ಗಿಡವು ಹೊಲ, ಗದ್ದೆ, ತೋಟ, ರಸ್ತೆ ಬದಿಯಲ್ಲೂ ಕಾಣಲು ಸಿಗುತ್ತದೆ. ಈ ಗಿಡದ ಎಲೆಯಿಂದ ಚಟ್ನಿ, ಪಲ್ಯ ಸಹ ಮಾಡುತ್ತಾರೆ. ಹಾಗಾದ್ರೆ ಈ ಗಿಡದ ಅದ್ಭುತ ಪ್ರಯೋಜನವೇನು? ಏನೆಲ್ಲಾ ಲಾಭವಿದೆ ಎಂಬುದನ್ನು ನಾವಿಂದು ನೋಡೋಣ.
ರಿಂಗ್ ವರ್ಮ್ ಅಥವಾ ಹುಳುಕಡ್ಡಿಗೆ ಅತ್ಯುತ್ತಮ ಗಿಡ
ಈ ಗಿಡದ ಎಲೆಯಲ್ಲಿರುವ ಅತ್ಯುತ್ತಮ ಆರೋಗ್ಯಕರ ಅಂಶವು ಹುಳುಕಡ್ಡಿದೆ ಉತ್ತಮ ಔಷಧಿಯಾಗಿದೆ. ಈ ಎಲೆಯನ್ನು ಚೆನ್ನಾಗಿ ಜಜ್ಜಿ ಅದನ್ನು ಹುಳುಕಡ್ಡಿಗೆ ಹಚ್ಚಿದರೆ ನಿಧಾನವಾಗಿ ವಾಸಿಯಾಗುತ್ತದೆ. ಹಾಗೆ ಚರ್ಮದ ಹಲವು ಸಮಸ್ಯೆಗಳಿಗೆ ಈ ಗಿಡ ಉತ್ತಮ ಔಷಧಿಯಾಗಿದೆ. ಹಾಗೆ ಅಲರ್ಜಿ, ಸೋರಿಯಾಸಿಸ್, ತುರಿಕೆ, ನಂಜು ಹೀಗೆ ಎಲ್ಲದಕ್ಕೂ ಈ ಗಿಡದ ಎಲೆ ಪರಿಹಾರ ನೀಡುತ್ತದೆ.
ಮಲಬದ್ಧತೆ ಚಿಕಿತ್ಸೆ
ಈ ಗಿಡದಲ್ಲಿ ಬಿಡುವ ಸಣ್ಣ ಬೀಜಗಳನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿಕೊಳ್ಳಬೇಕು. ಈಗ ಈ ಬೀಜದ ಪುಡಿ ಮಾರುಕಟ್ಟೆಯಲ್ಲೂ ಸಿಗುತ್ತದೆ. ಈ ಬೀಜದ ಪುಡಿಯನ್ನು ಗಂಧ ಅಥವಾ ಅರಶಿನದ ಜೊತೆಗೆ ಅರೆದುಕೊಂಡು ಹಾಲಿಗೆ ಹಾಕಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರ ಬೀಜಗಳಲ್ಲಿ ಆಂಥ್ರೋಕ್ವಿನೋನ್ ಎಂಬ ಅಂಶ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ
ಈ ಗಿಡದ ಎಲೆ ಅಥವಾ ಬೀಜದ ಪುಡಿಯನ್ನು ಸೇವಿಸುವುದು ದೃಷ್ಟಿ ಸುಧಾರಿಸಲು ಸಹಾಯ ಮಾಡಲಿದೆ. ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನ ಪೊರೆ ಸಮಸ್ಯೆಯಲ್ಲು ಈ ಗಿಡಮೂಲಿಕೆಯ ಔಷಧಿ ಬಳಸಲಾಗುತ್ತದೆ.
ಮೊಡವೆಗೂ ಸಿದ್ಧ ಔಷಧಿ
ಈ ಗಿಡದ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಜಜ್ಜಿ ಅದರ ರಸವನ್ನು ಮೊಡವೆಗಳ ಮೇಲೆ ಹಚ್ಚುವುದರಿಂದ ಮೊಡವೆಗಳು ನಿಧಾನವಾಗಿ ಕಡಿಮೆಯಾಗುತ್ತದೆ. ಇದರಿಂದ ಚರ್ಮದ ಕಾಂತಿಯು ಹೆಚ್ಚಾಗುತ್ತದೆ.
ಚಕ್ರಮರ್ಧನ ಎಲೆಗಳನ್ನು ಹಾಗೂ ಬೀಜಗಳನ್ನು, ಬೇರಗಳನ್ನು ಆಯುರ್ವೇದದಲ್ಲಿ, ಚೀನಾ, ಯುನಾನಿ ಸೇರಿ ಹಲವು ಔಷಧಿ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದರ ಬೀಜಗಳು ತಂಪಿನ ಅಂಶ ಹೊಂದಿದೆ. ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು. ದೇಹ ಉಷ್ಣದಿಂದ ಹಲವು ಸಮಸ್ಯೆ ಎದುರಿಸುತ್ತಿದ್ದರೆ ಈ ಗಿಡದ ಬೀಜಗಳು ತಂಪಿನಿಂದ ಆರೋಗ್ಯ ಸುಧಾರಿಸಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications