Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಇಡೀ ದೇಹದ ಆರೋಗ್ಯಕ್ಕೆ ಶಿಲಾಜಿತ್ ಎಂಬ ಒಂದೇ ಔಷಧಿ..! ಇದರ ಲಾಭವೇನು ಗೊತ್ತಾ?
ಶಿಲಾಜಿತ್ ಎಂಬ ಅದ್ಭುತ ಆರೋಗ್ಯಕಾರಕ ಅಂಶದ ಬಗ್ಗೆ ನೀವೆಷ್ಟು ತಿಳಿದಿದ್ದೀರಿ. ಬಹುಪಾಲು ಮಂದಿ ಈ ಹೆಸರನ್ನೇ ಮೊದಲ ಕೇಳುತ್ತಿರಬಹುದು. ಶಿಲಾಜಿತ್ ಮೂಲತಃ ಉರಿಯೂತ ಕಡಿಮೆ ಮಾಡಲು ಬಳಸಲ್ಪಡುವ ವಸ್ತು ಎಂದು ನಿಮಗೆ ತಿಳಿದಿರಬಹುದು. ಆದರೆ ಇದಕ್ಕೂ ಮುನ್ನ ಶಿಲಾಜಿತ್ ಎಂಬ ಅತ್ಯುತ್ತಮ ಆರೋಗ್ಯಕಾರಕದ ಬಗ್ಗೆ ತಿಳಿದುಕೊಳ್ಳಿ.
ಶಿಲಾಜಿತ್ ಎಂಬ ವಸ್ತು ಮೂಲತಃ ಕಪ್ಪು ಶಿಲೆಗಳಿರುವ ಕಲ್ಲುಗಳಿರುವ ಪ್ರದೇಶದಲ್ಲಿ ಮಾತ್ರ ಕಂಡುಬರುವ ಒಂದು ರೀತಿಯ ಪುಡಿಯಾಗಿದೆ. ಇದು ಹಿಮಾಲಯದ ತಪ್ಪಲಲ್ಲಿ ಕಂಡು ಬರುತ್ತದೆ. ಇದು ನೈಸರ್ಗಿಕವಾಗಿಯೇ ತ್ವಚೆಯು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ ಮತ್ತು ಪುನರುಜ್ಜೀವನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಇದು ನಮ್ಮನ್ನು ದೈಹಿಕವಾಗಿ ಹೆಚ್ಚು ಸಕ್ರಿಯವಾಗಿ ಮಾಡುತ್ತದೆ.

ಶಿಲಾಜಿತ್ ಖನಿಜ ಆಧಾರಿತ ಸಾರವಾಗಿದ್ದು, ಇದು ತೆಳು-ಕಂದು ಬಣ್ಣದಿಂದ ಕಪ್ಪು-ಕಂದು ಬಣ್ಣ ಹೊಂದಿರುತ್ತದೆ. ಶಿಲಾಜಿತ್ ಹ್ಯೂಮಸ್, ಸಾವಯವ ಸಸ್ಯ ಸಾಮಗ್ರಿಗಳು ಮತ್ತು ಫುಲ್ವಿಕ್ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿ ಈ ಶಿಲಾಜಿತ್ ಔಷಧಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಾಗಾದರೆ ನಾವಿಂದು ಶಿಲಾಜಿತ್ ಪುಡಿಯ ಆರೋಗ್ಯಕರ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಇದು ಅತ್ಯುತ್ತಮ ರೋಗ ನಿರೋಧಕ ಶಕ್ತಿ ಹೊಂದಿದೆ
ಶಿಲಾಜಿತ್ ಫುಲ್ವಿಕ್ ಆಮ್ಲ ಮತ್ತು ಇತರ ನಿರೋಧಕಗಳ ಗಣಿಯಾಗಿದೆ. ಅದು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ ನಿಮ್ಮ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಗೆ ಪೂರಕವಾದ ಬಿಳಿ ರಕ್ತಕಣಗಳ ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ.
ಉರಿಯೂತಕ್ಕೆ ಮನೆ ಮದ್ದು
ಶಿಲಾಜಿತ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದೊಂದು ಮನೆ ಮದ್ದಾಗಿದ್ದು, ದೀರ್ಘಕಾಲದ ಉರಿಯೂತವು ಸಂಧಿವಾತ, ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿರುತ್ತದೆ. ಹೀಗಾಗಿ ಈ ಶಿಲಾಜಿತ್ ಎಂಬ ಆರೋಗ್ಯ ವರ್ಧಕ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ
ಶಿಲಾಜಿತ್ ಮೆದುಳಿನ ಕಾರ್ಯ ಹಾಗೂ ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಡೋಪಮೈನ್ ಮತ್ತು ಅಸೆಟೈಲ್ಕೋಲಿನ್‌ನಂತಹ ಮೆದುಳಿನ ರಾಸಾಯನಿಕಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ಸೆರೆಬ್ರಲ್ ಪರಿಚಲನೆ ಸುಧಾರಿಸುತ್ತದೆ.
ನೈಸರ್ಗಿಕ ಕಾಮೋತ್ತೇಜಕ
ಶಿಲಾಜಿತ್ ಬಹುಪಾಲು ಕಾಮೋತ್ತೇಜಕ ಔಷಧಿಯಾಗಿಯೇ ಬಳಕೆಯಾಗುತ್ತಿದೆ. ಪುರುಷ ಫಲವತ್ತತೆ ಮತ್ತು ಟಸ್ಟೋಸ್ಟರೇನ್ ವೀರ್ಯ ಹೆಚ್ಚಲು ಇದು ಸಹಕಾರಿಯಾಗಿದೆ. ವೃಷಣಗಳಲ್ಲಿನ ಲೇಡಿಗ್ ಕೋಶಗಳ ಕಾರ್ಯವನ್ನು ಹೆಚ್ಚಿಸುವ ಮೂಲಕ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಲಿದೆ.
ಮೂಳೆಗಳ ಆರೋಗ್ಯ ವೃದ್ಧಿ
ಶಿಲಾಜಿತ್ ಪುಡಿ ಮೂಳೆಗಳ ಆರೋಗ್ಯ ಕಾಪಾಡಲಿದೆ. ವಿಶೇಷವಾಗಿ ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆ ಇದರ ಬಳಕೆ ಅತ್ಯಗತ್ಯ. ಹೀಗಾಗಿ ಮಕ್ಕಳಿಗೆ ಊಟದ ಬಳಿಕ ಶಿಲಾಜಿತ್ ನೀಡುವುದು ಉತ್ತಮ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿರುತ್ತದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಉತ್ತಮ.
ವಯಸ್ಸಾಗುವಿಕೆ ತಡೆಯುತ್ತದೆ
ಶಿಲಾಜಿತ್ ಪುಡಿಯು ರಾಡಿಕಲ್‌ಗಳಿಂದ ಹಾನಿಯಾಗುವ ಜೀವಕೋಶಗಳ ರಕ್ಷಿಸುವ ಮೂಲಕ ಅವಧಿ ಪೂರ್ವ ವಯಸ್ಸಾಗುವಿಕೆ ಕಡಿವಾಣ ಹಾಕುತ್ತದೆ. ಚರ್ಮ ಸುಕ್ಕುಗಟ್ಟುವಿಕೆ, ಆರೋಗ್ಯಕರ ಚರ್ಮ, ಸುಧಾರಿತ ಕಾಲಜನ್ ಉತ್ಪಾದನೆ ಮತ್ತು ಕಡಿಮೆ ಸುಕ್ಕುಗಳಿಗೆ ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
