Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಳಿ ಸೊಪ್ಪು ಎಂಬ ಜೀವ ಸಂಜೀವನಿ ಬಗ್ಗೆ ಗೊತ್ತಾ? ಎಷ್ಟೆಲ್ಲಾ ಔಷಧಿ ಅಂಶವಿದೆ?
ಮಾನವ ಎಷ್ಟು ಕಾಯಿಲೆಯಿಂದ ಬಳಲುತ್ತಿದ್ದಾನೆ ಅಂದ್ರೆ ಈಗ ಆತನ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲೆಂದೇ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತೆ. ಜೊತೆಗೆ ದೊಡ್ಡ ದೊಡ್ಡ ಕಂಪನಿಗಳು ಔಷಧಿ ಮಾರಾಟ ಮಾಡಿಯೇ ಕೋಟಿ ಕೋಟಿ ಉದ್ಯಮವಾಗಿ ಬೆಳೆದಿವೆ. ಆದ್ರೆ ಇದೆಲ್ಲದರ ನಡುವೆ ಆಯುರ್ವೇದ ಹಾಗೂ ಮನೆಮದ್ದುಗಳ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿದೆ.
ನಮ್ಮ ನಡುವೆಯೇ ಇರುವ ಹಲವು ಗಿಡಗಳು, ಮೂಲಿಕೆಗಳು, ವಸ್ತುಗಳು ನಮ್ಮ ಅದೆಷ್ಟೋ ಕಾಯಿಲೆಗಳಿಗೆ ಔಷಧವಾಗಿರುತ್ತವೆ. ಆದರೆ ಈ ಬಗ್ಗೆ ನಮಗೆ ಗೊತ್ತಿಲ್ಲದೆ ನಾವು ನಿರ್ಲಕ್ಷ್ಯ ಮಾಡುತ್ತೇವೆ. ಅಂತಹ ಹಲವು ಸಸ್ಯಗಳ ಪೈಕಿ ನಾವಿಂದು ಈ ಗೋಳಿ ಸೊಪ್ಪಿನ ಕುರಿತು ಹೇಳುತ್ತೇವೆ ಕೇಳಿ.

ಗೋಳಿ ಸೊಪ್ಪು ಎಂಬ ಹೆಸರು ನೀವು ಸಹ ಕೇಳಿರಬಹುದು. ಬಹುತೇಕ ಹಳ್ಳಿ ಭಾಗದಲ್ಲಿ ಈ ಗಿಡಗಳು ಕಂಡುಬರುತ್ತದೆ. ಚಿಕ್ಕದಾಗಿ ನೆಲಸದ ಮೇಲೆ ಹರಡಿಕೊಂಡಿರುತ್ತದೆ. ಆದರೆ ಗೋಳಿ ಮರ ಎಂಬ ದೊಡ್ಡ ಗಾತ್ರದ ಮರವೂ ಇದೆ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ.
ಈ ಗೋಳಿ ಸೊಪ್ಪು ಚಿಕ್ಕದಾಗಿ ನೆಲದಲ್ಲಿ ಹರಡಿರುತ್ತೆ. ಕೆಂಪು ಬಣ್ಣದ ಪೂವನ್ನೂ ಸಹ ಬಿಡುತ್ತದೆ. ಆದ್ರೆ ಬಹುತೇಕ ಇಂದು ಈ ಗಿಡ ಮನೆಯಲ್ಲಿದ್ದರು ಇದನ್ನು ಕೇವಲ ಹೂವಿನ ಗಿಡವಾಗಿ ಮಾತ್ರ ನೋಡಿರುತ್ತಾರೆ. ಆದರೆ ಇದರಲ್ಲಿ ಅಡಗಿರುವ ಔಷಧಿ ಗುಣಗಳ ಕುರಿತು ಅವರಿಗೆ ತಿಳಿದಿರುವುದಿಲ್ಲ.
ಈ ಗೋಳಿ ಸೊಪ್ಪನ್ನು ಪ್ರಾಚೀನ ಕಾಲದಿಂದಲೂ ಬಳಸಿರುವ ಉಲ್ಲೇಖ ಸಿಗುತ್ತದೆ. ಇದರ ವೈಜ್ಞಾನಿಕ ಹೆಸರು ಪೋರ್ಟುಲಾಕಾ ಒಲೆರೇಸಿಯಾ (Portulaca oleracea) ಎಂದಾಗಿದೆ. ಈ ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ ಸೇರಿ ಹಲವು ಅಂಶಗಳ ಒಳಗೊಂಡಿದೆ.
ಹಾಗಾದ್ರೆ ನಾವಿಂದು ಈ ಗೋಳಿ ಸೊಪ್ಪಿನ ಆರೋಗ್ಯಕರ ಅಂಶವೇನು? ಯಾವ ಔಷಧಿ ಗುಣ ಹೊಂದಿದೆ.? ಯಾವ ಸಮಸ್ಯೆಗೆ ಇದರಲ್ಲಿ ಪರಿಹಾರವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಧುಮೇಹಕ್ಕೆ ಇದೊಂದು ಮೂಲ ಔಷಧಿ
ಈ ಗಿಡದಲ್ಲಿ ಒಂದು ರೀತಿಯ ಸಾಸಿವೆಯಂತಹ ಬೀಜ ಸಿಗುತ್ತದೆ. ಗಿಡದಲ್ಲಿ ಹೂವು ಅರಳಿ ಹೋದ ಬಳಿಕ ಕಪ್ಪು ಬೀಜ ಸಿಗುತ್ತದೆ. ಇದನ್ನು ಪುಡಿ ಮಾಡಿ ಸೇವಿಸುವುದು ಅಥವಾ ಹಸಿ ಎಲೆಗಳನ್ನು ಸೇವಿಸುವುದು ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.
ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ
ಇದರಲ್ಲಿ ಒಮೆಗಾ-3 ಹಾಗಾ ಫ್ಯಾಟಿ ಆಸಿಡ್ಸ್ ಅನ್ನು ಈ ಗಿಡ ಹೊಂದಿದ್ದು, ನಿಮ್ಮ ಹೃದಯದ ಆರೋಗ್ಯ ಸುಸ್ಥಿರದಲ್ಲಿಡಲು ಬಹಳ ಮುಖ್ಯವಾಗಿದೆ. ಈ ಗಿಡದ ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ, ಬಳಿಕ ಅದನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ಕುಡಿದರೆ ರಕ್ತ ಪರಿಚಲನೆ ಹಾಗೂ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ.
ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮ
ಈ ಸೊಪ್ಪಿನಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದಾಗಿ ಮೂಳೆ ಸೆವೆತ, ಕೀಲು ನೋವು ಸೇರಿ ಮೂಳೆಗಳು ಬಲಶಾಲಿಯಾಗುತ್ತವೆ. ಇದರ ಜೊತೆಗೆ ಈ ಗೋಳಿ ಸೊಪ್ಪನ್ನು ಕೊಬ್ಬರಿ ಎಣ್ಣೆ ಜೊತೆ ಅರಿದು ಹಸಿ ಗಾಯಕ್ಕೆ ಹಚ್ಚಿದರೆ ರಕ್ತ ಸುರಿಯುವುದು ತಕ್ಷಣ ನಿಲ್ಲುತ್ತದೆ.
ಈ ಗೋಳಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಅದಕ್ಕೆ ಎರಡು ಕಾಳು ಮೆಣಸು, ಶುಂಠಿ ಹಾಕಿ ಕಷಾಯ ಮಾಡಿ ಸೇವಿಸಿದರೆ ವಾಂತಿಯಾಗುವುದು, ಭೇದಿ, ಜೀರ್ಣಕ್ರಿಯೆಯ ಸಮಸ್ಯೆಗಳು ದೂರಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











