Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ಹಣ್ಣು ಯಾವುದು ಎಂದು ಗುರುತಿಸಬಲ್ಲಿರಾ.? ಇದರ ಆರೋಗ್ಯದ ಗುಟ್ಟು ನಿಮಗೆ ಗೊತ್ತಾ?
ನೀವು ಮಾರುಕಟ್ಟೆಯಲ್ಲಿ ಎಂತಹ ಹಣ್ಣುಗಳನ್ನೆಲ್ಲ ನೋಡಿರುತ್ತೀರಿ. ಇತ್ತೀಚಿಗೆ ಡ್ರ್ಯಾಗನ್ ಫ್ರೂಟ್ ಭಾರತಕ್ಕೆ ಬಂದು ಈಗ ರೈತರೇ ಬೆಳೆಯಲು ಆರಂಭಿಸಿದ್ದಾರೆ. ಕೆಲವ ವರ್ಷದ ಹಿಂದೆ ಕಿವಿ ಹಣ್ಣು ಕೂಡ ನಮ್ಮ ನಡುವೆ ಇರಲಿಲ್ಲ. ಅಂದರೆ ದಿನ ಕಳೆದಂತೆ ತೆರೆದ ಮಾರುಕಟ್ಟೆಯಲ್ಲಿ ವಿಶ್ವದ ಯಾವುದೋ ಮೂಲೆಯಲ್ಲಿ ಬೆಳೆದ ಹಣ್ಣು, ತರಕಾರಿ, ಉತ್ಪನ್ನಗಳು ನಮ್ಮ ಕೈಸೇರುತ್ತಲೇ ಇರುತ್ತವೆ.
ಇಂತಹ ಹೊಸದೊಂದು ಉತ್ಪನ್ನದ ಸಾಲಿಗೀಗ ಹೊಸದೊಂದು ಹಣ್ಣು ಸೇರಿಕೊಂಡಿದೆ. ಹೌದು ಭಾರತದ ಮಾರುಕಟ್ಟೆಯಲ್ಲ ಟೊಮೆಟೋ ರೀತಿಯಲ್ಲೇ ಕಾಣುವ ಹೊಸ ಹಣ್ಣು ಬಂದು ಬಿಟ್ಟಿದೆ. ಅಚ್ಚರಿ ಎಂದರೆ ಈ ಹಣ್ಣನ್ನು ನಮ್ಮ ನೆಲದಲ್ಲೂ ಬೆಳೆಯಲಾಗುತ್ತಿದೆ. ಹೌದು ನೋಡಲು ಟೊಮೆಟೋ ಹಣ್ಣಿನ ರೀತಿ ಕಾಣುವ ಈ ಹಣ್ಣು, ಬಣ್ಣದಲ್ಲಿ ಕಿತ್ತಳೆಯನ್ನು ಹೋಲುತ್ತದೆ. ರುಚಿಯಲ್ಲಿ ಹುಳಿ ಹುಳಿಯಾಗಿ ಸಿಹಿಯಾಗಿಯೂ ಇದೆ.

ಈ ಹಣ್ಣನ್ನು ಪರ್ಸಿಮನ್ ಹಣ್ಣು ಎಂದು ಕರೆಯಲಾಗುತ್ತದೆ. ಇದು ಮೂಲತಃ ಅಮೆರಿಕದಲ್ಲಿ ಬೆಳೆಯಲಾಗುವ ಹಣ್ಣಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಪ್ರತಿ ಕೆ.ಜಿ ಬೆಲೆ ಬರೋಬ್ಬರಿ 250 ರೂಪಾಯಿಗೂ ಅಧಿಕ ಇದೆ ಎಂದು ತಿಳಿದುಬಂದಿದೆ. ಇನ್ನೊಂದು ಅಚ್ಚರಿ ವಿಚಾರ ಏನೆಂದರೆ ಹಿಮಾಚಲ ಪ್ರದೇಶದಲ್ಲಿ ಸೇಬು ಹಣ್ಣಿಗಿಂತ ಹೆಚ್ಚಾಗಿ ಈ ಪರ್ಸಿಮನ್ ಹಣ್ಣನ್ನು ಬೆಳೆಯಲಾಗುತ್ತದೆ.
2013-14 ರಲ್ಲಿ, 403 ಹೆಕ್ಟೇರ್ ಕೃಷಿ ಭೂಮಿಯಲ್ಲಿ 519 ಮೆಟ್ರಿಕ್ ಟನ್ (MT) ಪರ್ಸಿಮನ್ ಹಣ್ಣು ಬೆಳೆಯಲಾಗಿದೆ. ಕುಲು ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ ಶೇ.90ರಷ್ಟು ಈ ಹಣ್ಣು ಬೆಳೆಯಲಾಗಿದೆ.
ಪರ್ಸಿಮನ್ ಹಣ್ಣಿಗೆ ಇಷ್ಟೊಂದು ಬೆಲೆ ಹಾಗೂ ಬೇಡಿಕೆ ಬರಲು ಕೆಲವು ಕಾರಣವಿದೆ. ಈ ಹಣ್ಣನ್ನು ಈಗ ಬೇಡಿಕೆಗೆ ತಕ್ಕಂತೆ ಬೆಳೆಯಲಾಗುತ್ತಿದೆ. ಹಾಗಾದ್ರೆ ಈ ಹಣ್ಣಿನಿಂದಾಗುವ ಆರೋಗ್ಯಕರ ಲಾಭವೇನು ಎಂಬುದು ನಿಮಗೆ ಗೊತ್ತಾ?
ಪರ್ಸಿಮನ್ ಹಣ್ಣಿನಲ್ಲಿ ಅತ್ಯಧಿಕ ಮಟ್ಟದ ಫೈಬರ್ ಇರಲಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಹೆಚ್ಚು ನೆರವಾಗುತ್ತದೆ. ಹಾಗೆ ಇದು ಕರಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಫೈಬರ್ ಒಳಗೊಂಡಿದೆ. ಇದು ದೇಹಕ್ಕೆ ಬಹಳ ಉತ್ತಮವಾದ ಅಂಶ. ಒಂದು ವೇಳೆ ಕರುಳಿನಲ್ಲಿ ಈ ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾದರೆ ಎಷ್ಟೆಲ್ಲಾ ಅನಾರೋಗ್ಯ ಸಮಸ್ಯೆ ಕಾಡಲಿದೆ ಎಂಬುದು ನಿಮಗೆಲ್ಲ ತಿಳಿದಿರಬಹುದು.
ಪರ್ಸಿಮನ್ ಹಣ್ಣಗಳಲ್ಲಿ ಕ್ಯಾರೊಟಿನಾಯ್ಡ್ ಅಂಶವೂ ಕೂಡಿದೆ. ಇದು ಈ ಹಣ್ಣಿನ ಕಿತ್ತಳೆ ಬಣ್ಣದಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ಕಿತ್ತಳೆ ಬಣ್ಣದಿಂದ ಕೂಡಿದ ಹಣ್ಣುಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ. ಕಣ್ಣಿನ ಉರಿ, ಕೆಂಪಾಗುವುದು, ಪೊರೆ, ನೀರು ಬರುವುದು ಇಂತಹ ಸಮಸ್ಯೆ ಹೊಂದಿರುವವರಿಗೆ ಇದು ಅತ್ಯುತ್ತಮ.
ನೀವು ಒಂದೇ ದಿನ ಹೆಚ್ಚು ಕಿತ್ತಳೆ ಬಣ್ಣದ ಹಣ್ಣು ತಿಂದರೆ ಅಂದರೆ ಪರ್ಸಿಮನ್, ಕಿತ್ತಳೆ, ಕ್ಯಾರೆಟ್, ಮತ್ತು ಸಿಹಿ ಕುಂಬಳ ಸೇವಿಸಿದಾಗ ನಿಮ್ಮ ಪಾದಗಳು ಹಳದಿ ಬಣ್ಣಕ್ಕೆ ತಿರುಗಿದರೆ ನಿಮ್ಮ ದೇಹ ಸರಿಯಾಗಿ ವಿಟಮಿನ್ ಎ ಅಂಶವನ್ನು ಹೀರಿಕೊಳ್ಳುತ್ತಿಲ್ಲ ಎಂದರ್ಥ. ಈ ರೀತಿ ಆದರೆ ನಿಮ್ಮ ದೇಹಕ್ಕೆ ವಿಟಮಿನ್ ಎ ಕೊರತೆ ಉಂಟಾಗುತ್ತದೆ.
ಪರ್ಸಿಮನ್‌ಗಳು ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಅನ್ನು ಸಹ ಹೊಂದಿರುತ್ತವೆ. ಈ ಹಣ್ಣಿನ ಪ್ರತಿ ನೂರು ಗ್ರಾಮ್‌ನಲ್ಲಿ ಸುಮಾರು 3 ಟೀ ಸ್ಪೂನ್ ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ. ಹಾಗೆ ಇದಕ್ಕೆ ಕಡಿಮೆ ಕೆಮಿಕಲ್ ಬಳಸಿ ಬೆಳೆಯಲಾಗುತ್ತದೆ. ಇದು ಕೂಡ ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಅಂಶವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
