Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಟನ್ ಲಿವರ್ ತಿಂದ್ರೆ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ಕೆಲವರಿಗೆ ಒಳಮಾಂಸ ಎಂದರೆ ತುಂಬಾನೇ ಪ್ರಿಯವಾಗಿರುತ್ತದೆ. ಬೋಟಿ ಕರಿ, ಲಿವರ್ ಫ್ರೈ ಎಂದರೆ ತುಂಬಾನೇ ಇಷ್ಟವಾಗುವುದು. ಅದರಲ್ಲೂ ಮಟನ್‌ನ ಲಿವರ್ ಇಷ್ಟಪಡುವವರಾದರೆ ನಿಮ್ಮ ಇಷ್ಟದ ಲಿವರ್ ಸವಿಯುವಾಗ ಇಷ್ಟೆಲ್ಲಾ ಗುಣವಿದೆ ಎಂದು ತಿಳಿದು ಎರಡು ಪೀಸ್ ಜಾಸ್ತಿಯೇ ಸವಿಯುತ್ತೀರಿ. ಹೌದು ಫ್ರೆಷ್ ಮಟನ್ ಲಿವರ್‌ನ ಅಡುಗೆ ಮಾಡಿ ಸವಿಯುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೊಜನಗಳಿವೆ. ಮಟನ್ ಲಿವರ್ ತಿನ್ನುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಪೋಷಕಾಂಶಗಳು ಅಧಿಕವಿರಲಿದೆ: ಮಟನ್ ಲಿವರ್ ಅತ್ಯಂತ ಪೋಷಕಾಂಶವಿರುವ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ ಬೇರೆಲ್ಲಾ ಆಹಾರ ಪದಾರ್ಥದಲ್ಲಿ ಇರುವುದಕ್ಕಿಂತ ತುಂಬಾನೇ ಅಧಿಕವಿದೆ. ಒಂದು ಹೊತ್ತು ಸ್ವಲ್ಪ ಮಟನ್ ಲಿವರ್ ತಿಂದ್ರೆ ನಿಮ್ಮ ಇಡೀ ದಿನಕ್ಕಾಗುವಷ್ಟು ವಿಟಮಿನ್ ಎ ಹಾಗೂ ಇತರ ಪೋಷಕಾಂಶ ದೊರೆಯಲಿದೆ.
ರಕ್ತಹೀನತೆ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು: ರಕ್ತಹೀನತೆ ಸಮಸ್ಯೆ ಇದ್ದರೆ ದಿನಾ ಸ್ವಲ್ಪ ಮಟನ್ ಲಿವರ್ ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು. ಇದರಲ್ಲಿ ವಿಟಮಿನ್ ಬಿ 12 ಅಧಿಕವಿದೆ. ಆದ್ದರಿಂದ ತುಂಬಾ ವೀಕ್ ಇರುವವರಿಗೆ ಮಟನ್ ಲಿವರ್ ನೀಡಲಾಗುವುದು. ಕೆಲವರಿಗೆ ಬರೀ ಲಿವರ್ ಫ್ರೈ ತಿನ್ನಲು ಇಷ್ಟವಾಗುವುದಿಲ್ಲಅಂಥವರು ಸ್ವಲ್ಪ ಮಟನ್ ಜೊತೆ ಮಿಕ್ಸ್ ಮಾಡಿ ಫ್ರೈ ಅಥವಾ ಸಾರು ಮಾರಿ ತಿನ್ನಬಹುದು.
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಇದರಲ್ಲಿ ವಿಟಮಿನ್ ಕೆ ಇದು. ವಿಟಮಿನ್ ಕೆ ನಿಮ್ಮ ಮೂಳೆಯ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಇದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತ್ವಚೆಗೆ ತುಂಬಾ ಒಳ್ಳೆಯದು
ಮಟನ್ ಲಿವರ್‌ನಲ್ಲಿರುವ ವಿಟಮಿನ್ ಎ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಕಾರಿ
ಮಟನ್ ಲಿವರ್ ದೇಹಕ್ಕೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲ ಜ್ಞಾಪಕ ಶಕ್ತಿಗೂ ತುಂಬಾ ಒಳ್ಳೆಯದು. ಅಲ್ಲದೆ ಏಕಾಗ್ರತೆಯನ್ನು ಕೂಡ ಹೆಚ್ಚಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
