Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬೆ ಗಿಡದ ಔಷಧಿ ಗುಣ ತಿಳಿದರೆ ಅಚ್ಚರಿಯಾಗುತ್ತೆ..! ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಗಿಡಗಳು, ಹೂವುಗಳ ನಾವು ನೋಡುತ್ತೇವೆ. ಆದರೆ ಕೆಲವು ಗಿಡಗಳಿಂದ ಇರುವ ಆರೋಗ್ಯಕರ ಪ್ರಯೋಜನಗಳು ನಮಗೆ ಗೊತ್ತೇ ಇರುವುದಿಲ್ಲ. ಅದರಲ್ಲೂ ಕಾಲ ಬುಡದಲ್ಲಿಯೇ ನಾವು ಆರೋಗ್ಯ ಅಂಶ ಹೊಂದಿರುವ ಗಿಡಗಳ ಹೊಂದಿದ್ದರೂ ಆ ಬಗ್ಗೆ ಅರಿವಿರುವುದಿಲ್ಲ.
ಇಂತಹ ಗಿಡಗಳ ಸಾಲಿನಲ್ಲಿ ತುಂಬೆ ಗಿಡವೂ ಒಂದು. ತುಂಬೆ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು ಎಂದು ಹೇಳಲಾಗುತ್ತದೆ. ತುಂಬೆ ಗಿಡಕ್ಕೂ ಸಹ ಆರ್ಯುವೇದದಲ್ಲಿ ಪ್ರಮುಖ ಸ್ಥಾನವಿದೆ. ಹಲವು ರೀತಿಯ ಆರೋಗ್ಯಕರ ಅಂಶಗಳ ಈ ತುಂಬೆ ಗಿಡ ಹೊಂದಿದೆ.

ಹಾಗಾದ್ರೆ ಈ ತುಂಬೆ ಗಿಡದ ಉಪಯೋಗವೇನು? ಯಾವೆಲ್ಲಾ ಕಾಯಿಲೆಗೆ ಈ ತುಂಬೆಗಿಡ ಔಷಧಿಯಾಗಿ ಬಳಸಬಹುದು. ಇದರ ಲಾಭವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಈ ತುಂಬೆ ಗಿಡಗಳು ಎಲ್ಲಿ ಬೆಳೆಯುತ್ತವೆ ಎಂಬುದನ್ನು ನೋಡೋಣ. ಇದು ತುಂಬಾನೆ ತಂಪಾಗಿರುವ ಪ್ರದೇಶದಲ್ಲಿ ಕಾಣಸಿಗುತ್ತವೆ. ಅದರಲ್ಲೂ ತೋಟ, ಹೊಲ, ಗದ್ದೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳ ಹೂವು ಬಿಳಿ, ಹಾಗೂ ನೀಲಿ ಬಣ್ಣದಲ್ಲೂ ಇದರ ಹೂವು ಕಾಣಸಿಗುತ್ತದೆ. ಇದನ್ನು ದ್ರೋಣ ಪುಷ್ಪ ಅಂತಲೂ ಕರೆಯಲಾಗುತ್ತದೆ.
ಶೀತ, ಕೆಮ್ಮು, ತಲೆನೋವಿಗೆ ಔಷಧಿ
ನಿಮಗೆ ಕಾಲೋಚಿತವಾಗಿ ಶೀತ, ಕೆಮ್ಮು, ತಲೆ ನೋವು ಕಾಣಿಸಿಕೊಳ್ಳುತ್ತಿರಬಹುದು. ಏಕೆಂದರೆ ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯಾದರು ಈ ಶೀತ ಕೆಮ್ಮು ಬರುವುದು ಸಾಮಾನ್ಯ. ಈ ಸಣ್ಣ ಪುಟ್ಟ ಕಾಯಿಲೆಗಳಿಗೆ ಎಂದಿಗೂ ಮಾತ್ರೆ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಅದಕ್ಕಿಂತ ಈ ತುಂಬೆ ಗಿಡದ ಒಂದು ಮದ್ದು ಪರಿಹಾರ ನೀಡಲಿದೆ.
10ರಿಂದ 15 ಹನಿಗಳಷ್ಟು ತುಂಬೆ ಹೂವಿನ ರಸವನ್ನು ತೆಗೆದು ಅದಕ್ಕೆ 30 ಹನಿ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕರಡಬೇಕು. ಬಳಿಕ ಇದನ್ನು ಆಹಾರ ಸೇವನೆಗೂ ಮೊದಲು ಕುಡಿಯಬೇಕು. ಹೀಗೆ ಮಾಡುವುದರಿಂದ ಶೀತ ಕಡಿಮೆಯಾಗುತ್ತದೆ. ಇನ್ನೊಂದೆಡೆ ಈ ಗಿಡದ ಹೂವು, ಕಾಂಡ, ಎಲೆಯನ್ನು ತಂದು ಬಿಸಿ ನೀರಿನಲ್ಲಿ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಕ್ಷಣದಲ್ಲಿ ತಲೆ ನೋವು ಮಾಯವಾಗುತ್ತದೆ.
ಜ್ವರಕ್ಕೂ ಇದು ಸಿದ್ಧೌಷಧ
ಬರಿ ಶೀತ ಕೆಮ್ಮು ಮಾತ್ರವಲ್ಲ ಜ್ವರಕ್ಕೂ ಸಹ ಈ ಗಿಡದಿಂದ ಔಷಧಿ ತಯಾರಿಸಬಹುದು. 10 ಎಂ.ಎಲ್ ತುಂಬೆ ಗಿಡದ ರಸವನ್ನು ತೆಗೆದು ಅದಕ್ಕೆ ಚಿಟಿಕೆಯಷ್ಟು ಕರಿ ಮೆಣಸಿನ ಪುಡಿ ಸೇರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ಹಸಿಗಾಯ ವಾಸಿಯಾಗಲು ಹಾಗೂ ಒಣಗಲು
ಈ ತುಂಬೆ ಗಿಡವನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ಚೆನ್ನಾಗಿ ಪುಡಿ ಮಾಡಿ. ಕಷಾಯ ಮಾಡಿ ಅದಕ್ಕೆ ಒಂದು ಚಿಟಿಕೆ ಅರಶಿನ ಬೆರೆಸಿ ಕುಡಿದರೆ ಮೈ ಮೇಲಿರುವ ಹಸಿಗಾಯ ವಾಸಿಯಾಗುತ್ತದೆ.
ಕಣ್ಣು ಉರಿ ಡಾರ್ಕ್ ಸರ್ಕಲ್‌ಗೆ ರಾಮಬಾಣ
ಇತ್ತೀಚಿಗೆ ಹೆಚ್ಚಿನವರು ಕಣ್ಣು ಉರಿ ಹಾಗೂ ಕಣ್ಣುಗಳ ಕೆಳಗೆ ಕಪ್ಪು ಬಣ್ಣದ ವೃತ್ತಾಕಾರದ ರಚನೆ ಹೊಂದಿರುತ್ತಾರೆ. ಇದಕ್ಕೆ ತುಂಬೆ ಗಿಡದ ರಸಕ್ಕೆ ನೀರು, ಹಾಲು ಹಾಕಿಕೊಂಡು ಮುಖವನ್ನು ತೊಳೆಯುವುದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ಹಲವು ಕಾರಣದಿಂದಾಗಿ ನಿಮ್ಮಲ್ಲಿ ಜೀರ್ಣಶಕ್ತಿ ಕಡಿಮೆಯಾಗಿದ್ದರೆ ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಈ ಗಿಡವನ್ನು ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ ಕುದಿಸಿ ಒಂದು ಚಿಟಿಕೆ ಉಪ್ಪು ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ. ಹೊಟ್ಟೆಯ ಸಮಸ್ಯೆಗಳು ಪರಿಹಾರವಾಗಲಿದೆ.
ಜೊತೆಗೆ ಹೆಚ್ಚಿನ ಸೇವನೆಯಿಂದ ಅಪಾಯವೂ ಉಂಟಾಗಬಹುದು. ಈ ಹೂವುಗಳು ಬಹಳ ಕಹಿಯಾಗಿರುತ್ತದೆ, ಹೀಗಾಗಿ ಇದರ ಬಳಕೆಗೂ ಮುನ್ನ ಆರ್ಯುವೇದ ವೈದ್ಯರ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications