Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
100 ಗ್ರಾಮ್ ನುಗ್ಗೆ ಸೊಪ್ಪು ಎಷ್ಟೆಲ್ಲಾ ಕೆಲಸ ಮಾಡುತ್ತೆ ಗೊತ್ತಾ?
ನೀವು ಈ ನುಗ್ಗೆಕಾಯಿ ಸಾಂಬಾರ್ಗೆ ಮಾರುಹೋಗುವಂತಹ ಜನ ಆಗಿರಬಹುದು. ಆದ್ರೆ ಈ ನುಗ್ಗೆ ಸೊಪ್ಪಿನಲ್ಲಿ ನೀವು ಅಚ್ಚರಿ ಪಡುವಷ್ಟು ಆರೋಗ್ಯಕರ ಅಂಶಗಳು ಅಡಗಿವೆ. ನಿಮ್ಮ ಮನೆಯಲ್ಲೊಂದು ನುಗ್ಗೆ ಮರ ಇದ್ದರಂತು ಅದರ ಪ್ರಯೋಜನವನ್ನ ಪಡೆಯಲು ಎಂದಿಗೂ ಮರೆಯಬೇಡಿ. ಏಕೆಂದರೆ ಹಲವು ಸಮಸ್ಯೆಗಳಿಗೆ ಈ ನುಗ್ಗೆ ಸೊಪ್ಪಿನಲ್ಲಿ ಪರಿಹಾರದ ಮಾರ್ಗವಿದೆ.
ನುಗ್ಗೆಮರದ ಎಲೆ, ಕಾಯಿ, ಹೂವು ಮೊಗ್ಗುಗಳೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಅದರಲ್ಲೂ ನುಗ್ಗೆ ಎಲೆಗಳ ಸೇವನೆಯಿಂದ ಹಲವಾರು ತೊಂದರೆಗಳಿಗೆ ಔಷಧಿಯ ಪರಿಣಾಮವನ್ನೇ ಪಡೆಯಬಹುದು. ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ನಂಬಿದ್ದಾರೆ.

ಅಡುಗೆಗೆ ಮಾತ್ರವಲ್ಲದೇ ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು. ಅಜೀರ್ಣತೆ ಅಥವಾ ಹೊಟ್ಟೆಯಲ್ಲಿ ನೋವು ಇರುವ ವ್ಯಕ್ತಿಗಳಿಗೆ ನುಗ್ಗೆಕಾಯಿಯ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಇದರ ಸೇವನೆಯಿಂದ ತ್ವಚೆ ಆತ್ಯಂತ ಉತ್ತಮ ಆರೋಗ್ಯ ಪಡೆಯುತ್ತದೆ ಹಾಗೂ ಜೀರ್ಣಕ್ರಿಯೆಯೂ ಸುಲಭಗೊಳ್ಳುತ್ತದೆ ಎಂಬ ಉಲ್ಲೇಖವಿದೆ.
ಹಾಗಾದ್ರೆ ನಾವಿಂದು ಯಾವೆಲ್ಲಾ ಔಷಧಿಯಲ್ಲಿ ಈ ನುಗ್ಗೆಸೊಪ್ಪು ಬಳಸುತ್ತಾರೆ, ಇದರ ಪ್ರಯೋಜನವಾದರೂ ಏನು? ಹೇಗೆ ನಾವು ಬಳಸಬೇಕು ಎಂಬಿತ್ಯಾದಿ ಕುತೂಹಲಕಾರಿ ಮಾಹಿತಿ ಪಡೆದುಕೊಳ್ಳೋಣ.
ನುಗ್ಗೆ ಸೊಪ್ಪಿನ ಜ್ಯೂಸ್
ಸರ್ವ ರೋಗಕ್ಕೂ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ತಡೆಯೊಡ್ಡುತ್ತದೆ. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಈ ನುಗ್ಗೆ ಸೊಪ್ಪಿನಲ್ಲಿದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ನೀವು ನುಗ್ಗೆ ಸೊಪ್ಪಿನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಜ್ಯೂಸ್ ಮಾಡಿ ಕುಡಿಯಬೇಕು.
ರಕ್ತ ಹೀನತೆಗೆ ಇದು ರಾಮಬಾಣ
ನುಗ್ಗೆ ಸೊಪ್ಪಿನಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶ ಇದ್ದು, ಇದು ರಕ್ತ ಹೀನತೆಗೆ ಬಹುಮುಖ್ಯ ಮನೆ ಮದ್ದಾಗಿದೆ. ನುಗ್ಗೆ ಸೊಪ್ಪಿನ ಜ್ಯೂಸ್ಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದು ನಿಮ್ಮಲ್ಲಿ ರಕ್ತ ಹೀನತೆ ನಿವಾರಣೆ ಮಾಡಲಿದೆ. ಇದರ ಜೊತೆ ಮೂಳೆಗಳ ಬೆಳವಣಿಗೆಗೆ ಇದು ಸಹಕಾರಿ. ಇದರಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿದ್ದು, ಮೂಳೆಗಳ ಆರೋಗ್ಯಕ್ಕೂ ಅತ್ಯಂತ ಒಳ್ಳೆಯದು
ಬರಪೂರ ವಿಟಮಿನ್ ಎ
ನುಗ್ಗೆ ಸೊಪ್ಪಿನಲ್ಲಿ ನೀವು ಊಹಿಸದಷ್ಟು ವಿಟಮಿನ್ ಎ ಅಂಶವಿದೆ. ನೀವು 100 ಗ್ರಾಮ್ ಹಸಿ ಕ್ಯಾರೆಟ್ ಸೇವಿಸುವಷ್ಟು ವಿಟಮಿನ್ ಈ ನುಗ್ಗೆ ಸೊಪ್ಪಿನಲ್ಲಿ ಸಿಗುತ್ತದೆ. ಜೊತೆಗೆ ಬೀಟಾ ಕೆರೋಟಿನ್ ಸಹ ಇದರಲ್ಲಿ ಸಿಗಲಿದೆ. ನುಗ್ಗೆ ಸೊಪ್ಪು ನಿತ್ಯ ಸೇವಿಸಿದರೆ ನಿಮ್ಮ ಕಣ್ಣಿನ ದೃಷ್ಟಿ ಸಹ ಚರುಕಾಗುತ್ತದೆ.
100 ಗ್ರಾಮ್ ನುಗ್ಗೆ ಸೊಪ್ಪು ಎಲ್ಲದಕ್ಕೂ ಮದ್ದು
ಇನ್ನು ಬರೀ 100 ಗ್ರಾಮ್ ನುಗ್ಗೆ ಸೊಪ್ಪಿನಲ್ಲಿ ನಿಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಎಲ್ಲಾ ಅಂಶಗಳು ಸಿಗುತ್ತವೆ. ಅದರಲ್ಲೂ 100 ಗ್ರಾಮ್ ಸೊಪ್ಪಿನಲ್ಲಿ 90 ಕ್ಯಾಲೋರಿ ಎನರ್ಜಿ, 7 ಗ್ರಾಮ್ ಪ್ರೋಟಿನ್, ವಿಟಮಿನ್ ಸಿ 220 ಮಿ.ಗ್ರಾಮ್ ಸಿಗಲಿದೆ. ಅಂದರೆ ಒಂದು ಕಿತ್ತಲೆ ಹಣ್ಣಿನಲ್ಲಿ ನಿಮಗೆ ಬರಿ 70 ಮಿ.ಗ್ರಾಮ್ ವಿಟಮಿನ್ ಸಿ ಸಿಗಲಿದೆ ಆದರೆ 100 ಗ್ರಾಮ್ ಸೊಪ್ಪಿನಲ್ಲಿ ಅದಕ್ಕಿಂತ ಹೆಚ್ಚು ಸಿಗಲಿದೆ. ಜೊತೆಗೆ ಈ 100 ಗ್ರಾಮ್ನಲ್ಲಿ 215 ಮಿ.ಗ್ರಾಮ್ ಪೊಟಾಷಿಯಂ ಸಿಗಲಿದೆ. ಹೀಗಾಗಿ ನಿಮ್ಮ ಬಿಪಿ ಕಂಟ್ರೋಲ್ ಮಾಡಲು ನಿಮಗೆ ನುಗ್ಗೆ ಸೊಪ್ಪು ಸತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ಇದರಿಂದ ನಿಮ್ಮ ತೂಕ ಇಳಿಸಲು ಸಹ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
