Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಈ ಪ್ರಯೋಜನಗಳಿವೆ
ಬೇಸಿಗೆಯಲ್ಲಿ ನೀವು ಹೊರಗಡೆ ಹೋಗುವಾಗ ಸೆಕೆ ಅಂತ ಸಾಫ್ಟ್ ಕೂಲ್ ಡ್ರಿಂಕ್ಸ್ ಕುಡಿಯುವ ಬದಲಿಗೆ ಕಬ್ಬಿನ ರಸ ಕುಡಿಯಿರಿ. ಈ ಕಬ್ಬಿನ ರಸ ರುಚಿ ಮಾತ್ರವಲ್ಲ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡುವ ಪಾನಕ.

ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ... ಏಪ್ರಿಲ್-ಮೇ ತಿಂಗಳಾಗುವಷ್ಟರಲ್ಲಿ ತಾಪಮಾನ ಇನ್ನೆಷ್ಟು ಹೆಚ್ಚಾಗುವುದೋ? ತಾಪಮಾನ ಹೆಚ್ಚಾದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ನೀವು ಬೇಸಿಗೆಯಲ್ಲಿ ಆಹಾರಕ್ರಮ ಮತ್ತು ಪಾನೀಯ ಕಡೆ ತುಂಬಾ ಗಮನಹರಿಸಬೇಕು. ಕಬ್ಬಿನ ಹಾಲು ನಿಮಗೆ ಹೀಟ್ ಸ್ಟ್ರೋಕ್ ಮುಂತಾದ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ನೀವು ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ:
ಕಬ್ಬಿನ ರಸದಲ್ಲಿ ಗ್ಲುಕೋಸ್, ಎಲೆಕ್ಟ್ರೋಲೈಟ್ಸ್ ಇರುವುದರಿಂದ ನೀವು ಬೇಸಿಗೆಯಲ್ಲಿ ಕಬ್ಬಿನರಸ ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದು. ಬೇಸಿಗೆಯಲ್ಲ ಹೊರಗಡೆ ಓಡಾಡಿದಾಗ ಬೇಗನೆ ಶಕ್ತಿ ಕಡಿಮೆಯಾಗುವುದು. ನೀವು ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಸಾಕು ದೇಹಕ್ಕೆ ಶಕ್ತಿ ದೊರೆಯುವುದು.
ತ್ವಚೆಗೆ ಒಳ್ಳೆಯದು
ಇದರಲ್ಲಿ ಮೆಗ್ನಿಷ್ಯಿಯಂ, ಕಬ್ಬಿಣದಂಶ ಹಾಗೂ ಇತರ ಎಲೆಕ್ಟ್ರೋಲೈಟ್ಸ್ ಇದ್ದು ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಶರೀರಕ್ಕೆ ತುಂಬಾ ಒಳ್ಳೆಯದು.
ದೇಹದಲ್ಲಿರುವ ಉಪ್ಪಿನಂಶ ಕಡಿಮೆಯಾಗುತ್ತದೆ
ನೀವು ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಇದು ದೇಹದಲ್ಲಿರುವ ಕಶ್ಮಲಗಳು ಹಾಗೂ ಅತ್ಯಧಿಕ ಉಪ್ಪಿನಂಶ ಹೊರಹಾಕುವುದು. ದೇಹದಲ್ಲಿ ಉಪ್ಪಿನಂಶ ಅಧಿಕವಿದ್ದರೆ ನೀರಿನಂಶ ಕಡಿಮೆಯಾಗುವುದು. ಕಬ್ಬಿನ ರಸ ದೇಹದಲ್ಲಿರುವ ಉಪ್ಪಿನಂಶ ಹೊರಹಾಕುವುದರಿಂದ ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಕಾರಿ.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಕಬ್ಬಿನರಸದಲ್ಲಿ ಪೊಟಾಷ್ಯಿಯಂ ಇರುವುದರಿಂದ ಇದು ದೇಹದಲ್ಲಿ pH ಸಮತೋಲನ ಮಾಡುತ್ತದೆ ಅಲ್ಲದೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿದರೆ ಮೈ ಉಷ್ಣಾಂಶ ಹೆಚ್ಚಾಗುವುದೇ?
ಕಬ್ಬಿನಹಾಲು ನಿರ್ಜಲೀಕರಣ ಹೋಗಕಾಡಿಸುವುದು ಮಾತ್ರವಲ್ಲ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಕಬ್ಬಿನ ಜ್ಯೂಸ್ ದೇಹದ ಉಷ್ಣಾಂಶ ಕಡಿಮೆ ಮಾಡುತ್ತದೆ. ಕಬ್ಬಿನ ಹಾಲನ್ನು ನಮ್ಮ ದೇಹ ಬೇಗನೆ ಹೀರಿಕೊಂಡು ದೇಹದಲ್ಲಿ ಸಕ್ಕರೆಯಂಶ ಕೂಡ ಕಾಪಾಡುತ್ತದೆ.
ಕಬ್ಬು ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
ಬೇಸಿಗೆಯಲ್ಲಿ ಕಾಮಲೆ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಮಲೆ ತಡೆಗಟ್ಟುವಲ್ಲಿ ಕಬ್ಬಿನ ರಸ ಸಹಕಾರಿಯಾಗಿದೆ. ಇದು ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಸಮತೋಲನದಲ್ಲಿಟ್ಟು ಲಿವರ್ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಮೂತ್ರ ಸೋಂಕು ತಡೆಗಟ್ಟುತ್ತದೆ
ಬೇಸಿಗೆಯಲ್ಲಿ ನೀರಿನಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಮೂತ್ರ ಸೋಂಕು ತಡೆಗಟ್ಟಬಹುದು, ಕಿಡ್ನಿ ಸ್ಟೋನ್ ಕೂಡ ತಡೆಗಟ್ಟಲು ಸಹಕಾರಿಯಾಗಿದೆ.
ಮೊಡವೆ ಕಡಿಮೆ ಮಾಡುತ್ತದೆ
ಬೇಸಿಗೆಯಲ್ಲಿ ಬೆವರುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುವುದು. ಆದರೆ ನೀವು ದಿನಾ ಒಂದು ಲೋಟ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು.' ಅಲ್ಲದೆ ಕಬ್ಬಿನ ರಸವನ್ನು ಮುಲ್ತಾನಿ ಮಿಟಿ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ.
ಬಾಯಿಯ ದುರ್ವಾಸನೆ ತಡೆಗಟ್ಟಲು ಕೂಡ ಸಹಕಾರಿ
ಬಾಯಿ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುವುಉದ. ಪ್ರತಿದಿನ ಕಬ್ಬಿನ ರಸ ಕುಡಿಯುವುದರಿಂದ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


