Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಬೇಸಿಗೆಯಲ್ಲಿ ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ಸಿಕ್ಕಾಪಟ್ಟೆ ಲಾಭವಿದೆ..!
ಮಾರುಕಟ್ಟೆಯಲ್ಲಿ ಕೆಂಪು ಬಣ್ಣದ ಡ್ರ್ಯಾಗನ್ ಫ್ರೂಟ್ ನೀವು ನೋಡಿರಬಹುದು. ಇದರ ಬೆಲೆ ತುಸು ಹೆಚ್ಚಾಗಿಯೇ ಇರುತ್ತೆ. ಇದರ ಆರೋಗ್ಯಕರ ಅಂಶಗಳು ಸಹ ಹೆಚ್ಚು ಅಂತಲೇ ಹೇಳಬಹುದು. ಡ್ರ್ಯಾಗನ್ ಫ್ರೂಟ್ ರುಚಿ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಆದ್ರೆ ಬೇಸಿಗೆಯಲ್ಲಿ ಇದು ಅಮೃತದಂತೆ ನಿಮ್ಮ ಆರೋಗ್ಯಕ್ಕೆ ಅನುಕೂಲವಾಗಿರಲಿದೆ.
ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಅಲ್ಲದೆ ಹೆಚ್ಚು ಶಕ್ತಿಯ ಅಗತ್ಯವೂ ಇರಲಿದೆ. ನೀವು ಯಾವ ಆಹಾರ ಸೇವಿಸುತ್ತೀರೋ ಅದರ ಆಧಾರದ ಮೇಲೆ ನಿಮ್ಮ ದೇಹ ಚಟುವಟಿಕೆಯಿಂದ ಕೂಡಿರುತ್ತೆ. ನೀವು ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಹಣ್ಣು ಸೇವಿಸಿದಷ್ಟು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹಾಗಾದ್ರೆ ಈ ಡ್ರ್ಯಾಗನ್ ಫ್ರೂಟ್ ಅನ್ನು ಬೇಸಿಗೆಯಲ್ಲಿ ಸೇವಿಸೋದ್ರಿಂದ ನಿಮ್ಮ ಆರೋಗ್ಯಕ್ಕೆ ಯಾವ ರೀತಿ ಉಪಯೋಗವಾಗಲಿದೆ ಎಂಬುದನ್ನು ನಾವಿಂದು ನೋಡೋಣ.
ಕ್ಯಾನ್ಸರ್ ಅಪಾಯಗಳು ಕಡಿಮೆ
ಇದು ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಪಾರ್ಕಿಸನ್ಸ್, ಕ್ಯಾನ್ಸರ್, ಅಲ್ಜೈಮರ್ಸ್ ಈ ಬಗೆಯ ಕಾಯಿಲೆಗಳನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಈ ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.ಇದರಲ್ಲಿ ಅತ್ಯಧಿಕ ನಾರಿನಂಶವಿದೆ, ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ತೂಕ ನಿಯಂತ್ರಣಕ್ಕೆ ಇದು ಸಹಕಾರಿಯಾಗಿದೆ.
ಒಮೆಗಾ 3 ಕೊಬ್ಬಿನಂಶವಿದೆ
ಒಮೆಗಾ 3 ಕೊಬ್ಬಿನಂಶ ಮೀನಿನಲ್ಲಿರುತ್ತದೆ, ಮೀನು ತಿನ್ನದವರು ಈ ಹಣ್ಣು ತಿನ್ನುವ ಮೂಲಕ ಒಮೆಗಾ 3 ಕೊಬ್ಬಿನಂಶ ಪಡೆಯಬಹುದು. ಒಮೆಗಾ 3 ಕೊಬ್ಬಿನಂಶ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಪ್ರತಿನಿತ್ಯ ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುವುದು.
ತ್ವಚೆ ಸೌಂದರ್ಯ ವೃದ್ಧಿಸುತ್ತದೆ
ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ತ್ವಚೆಯ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮುಖ ಕಾಂತಿಯನ್ನು ಹೆಚ್ಚಿಸುತ್ತದೆ. ತ್ವಚೆ ಸೌಂದರ್ಯಕ್ಕಾಗಿ ನೀವು ಪ್ರತಿದಿನ ಡ್ರ್ಯಾಗನ್ ಫ್ರೂಟ್ ಜ್ಯೂಸ್ ಕುಡಿದರೆ ಒಳ್ಳೆಯದು.
ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
ಕೂದಲಿನ ಆರೋಗ್ಯಕ್ಕೆ ಬಾಹ್ಯ ಆರೈಕೆ ಮಾತ್ರ ಸಾಲದು, ಆಂತರಿಕ ಆರೈಕೆ ಕೂಡ ಅವಶ್ಯಕ. ಅದಕ್ಕಾಗಿ ಪೋಷಕಾಂಶವಿರುವ ಆಹಾರ ಸೇವಿಸಬೇಕು. ಡ್ರ್ಯಾಗನ್ ಫ್ರೂಟ್ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಡ್ರ್ಯಾಗನ್ ಫ್ರೂಟ್ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಡ್ರ್ಯಾಗನ್ ಫ್ರೂಟ್‌ನಲ್ಲಿ ಶೇ. 18ರಷ್ಟು ಮೆಗ್ನಿಷ್ಯಿಯಂ ಇದ್ದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಂಧಿವಾತದ ಸಮಸ್ಯೆ ಇರುವವರು ಈ ಹಣ್ಣನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.
ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದು ಒಳ್ಳೆಯದು
ಈ ಹಣ್ಣಿನಲ್ಲಿ ವಿಟಮಿನ್ ಬಿ, ಫೋಲೆಟ್, ಕಬ್ಬಿಣದಂಶ ಇರುವುದರಿಂದ ಗರ್ಭಿಣಿಯರು ಇದನ್ನು ತಿನ್ನುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಮೆಗ್ನಿಷ್ಯಿಯಂ ಹೆರಿಗೆಯ ನಂತರ ಕಾಡುವ ಖಿನ್ನತೆ ತಡೆಗಟ್ಟಲು ಕೂಡ ಸಹಕಾರಿ. ಇವರ ಜೊತೆ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಇದರಲ್ಲಿ ನಾರಿನಂಶ ಇರುವುದರಿಂದ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಇದನ್ನು ಮಧುಮೇಹಿಗಳು ತಿಂದರೆ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಪ್ರತಿದಿನ ತಿನ್ನುವುದು ಕೂಡ ತುಂಬಾನೇ ಒಳ್ಳೆಯದು.
ಡ್ರ್ಯಾಗನ್ ಹಣ್ಣು ತಿನ್ನುವ ನಿಯಮವೇನು ಗೊತ್ತಾ?
- ಕಪ್ಪು ಕಲೆಗಳಿರುವ ಅಥವಾ ಒಣ ಎಲೆಗಳನ್ನು ಹೊಂದಿರುವ ಹಣ್ಣು ಸೇವಿಸಲು ಉತ್ತಮವಲ್ಲ. ಇದು ಅತಿಯಾಗಿ ಮಾಗಿದ ಲಕ್ಷಣಗಳಾಗಿವೆ. ನೀವು ಅದನ್ನು ಒತ್ತಿದಾಗ ಅದು ಗಟ್ಟಿಯಾಗಿದ್ದರೆ, ತಿನ್ನುವ ಮೊದಲು ಅದನ್ನು ಕೆಲವು ದಿನಗಳವರೆಗೆ ಹಣ್ಣಾಗಲು ಬಿಡಿ.
- ಡ್ರ್ಯಾಗನ್ ಹಣ್ಣನ್ನು ತಿನ್ನಲು, ಅದನ್ನು ಮಧ್ಯದಲ್ಲಿ ಕತ್ತರಿಸಿ ಬಳಿಕ ಒಂದು ಚಮಚ, ಐಸ್ ಕ್ರೀಮ್ ಸ್ಕೂಪ್ ತೆಗೆದುಕೊಂಡು ಮಧ್ಯದಲ್ಲಿರುವ ಅಂಶವನ್ನು ಮಾತ್ರ ಸೇವಿಸಬೇಕು. ಅದರ ಸಿಪ್ಪೆಯ ಅಂಶ ಸೇವನೆಗೆ ಯೋಗ್ಯವಲ್ಲ.
- ಈ ಹಣ್ಣನ್ನು ಬೇಸಿಗೆಯಲ್ಲಿ ಜ್ಯೂಸ್ ಮಾಡಿಯೂ ಕುಡಿಯುತ್ತಾರೆ, ಇದು ಉತ್ತಮವೂ ಹೌದು. ಸಕ್ಕರೆ ಜೊತೆ ಸೇರಿಸಿ ಜ್ಯೂಸ್ ಮಾಡಿ ಕುಡಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications