Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೂದು ಕುಂಬಳಕಾಯಿ ಜ್ಯೂಸ್‌ನಲ್ಲಿವೆ ಹತ್ತಾರು ಉಪಯೋಗ..! ಮಾಡೋದು ಹೇಗೆ ನೋಡಿ..!
ಬೂದು ಕುಂಬಳಕಾಯಿಯಲ್ಲಿ ನಾವು ಸಾಂಬಾರ್ ಇಲ್ಲವೆ ಹಲ್ವಾ ಅಥವಾ ಪಲ್ಯವನ್ನೂ ಮಾಡಿ ಸೇವಿಸಿರುತ್ತೇವೆ. ಮಸಾಲೆಯ ಜೊತೆ ಬಹಳಷ್ಟು ರುಚಿ ನೀರುವ ಈ ಕುಂಬಳಕಾಯಿಗೆ ಬೇಸಿಗೆಯಲ್ಲಿ ಭಾರೀ ಬೇಡಿಕೆ ಬರಲಿದೆ. ಇನ್ನು ಇದು ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಉಪಯೋಗಗಳ ಹೊಂದಿದೆ.
ಇದು ಆಹಾರವಾಗಿ ಸೇವೆನೆಗೆ ತುಂಬ ರುಚಿಕರವಾಗಿರುತ್ತೆ. ಇದರ ಸೀಸನ್ ಆರಂವಾಯಿತು ಎಂದಾದರೆ ಮಾರುಕಟ್ಟೆಗಳಲ್ಲಿ ಲೋಟ್ ಗಟ್ಟಳೆ ಕುಂಬಳಕಾಯಿಯನ್ನು ನಾವು ನೋಡಬಹುದು. ಕೆಲವರು ಲಾರಿಗಳಲ್ಲಿ ತಂದು ಗುಡ್ಡೆಹಾಕುತ್ತಾರೆ. ಇಷ್ಟಾದರು ಅದಕ್ಕೆ ಬೇಡಿಕೆ ಏನು ಕಡಿಮೆಯಾಗಿಲ್ಲ. ದೊಡ್ಡ ದೊಡ್ಡ ಹೋಟೆಲ್‌ಗಳಿಂದ ಹಿಡಿದು ಸಣ್ಣ ಅಂಗಡಿಗಳಲ್ಲೂ ನಾವು ಬೂದು ಕುಂಬಳದ ಖಾದ್ಯ ಸವಿಯಬಹುದು.

ಆದರೆ ನಾವಿಂದು ಬೂದು ಕುಂಬಳದಿಂದ ಮಾಡುವ ಜ್ಯೂಸ್ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬುದನ್ನು ತಿಳಿಯೋಣ. ಬೂದು ಕುಂಬಳ ಮಕ್ಕಳ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
ಬೇಸಿಗೆಯಲ್ಲಿ ಬೂದು ಕುಂಬಳ ಸೇವನೆ ಬಹಳಷ್ಟು ಆರೋಗ್ಯಕರ ಉಪಯೋಗಕ್ಕೆ ಸಹಾಯಕವಾಗಲಿದೆ. ಇದು ತಂಪಾಗಿಸುವ ಪರಿಣಾಮವನ್ನು ಹೊಂದಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇಷ್ಟೇ ಅಲ್ಲ ಆಯುರ್ವೇದ ಔಷಧದಲ್ಲಿ ಬೂದು ಕುಂಬಳವನ್ನು ಬಹಳಷ್ಟು ಕಡೆ ಬಳಸುತ್ತಾರೆ.
ದೇಹದ ನಿರ್ಜಲೀಕರಣ ತಡೆಯುತ್ತದೆ
ಬೂಕು ಕುಂಬಳ ಶೇ.95ರಷ್ಟು ನೀರನ್ನು ಹೊಂದಿರುತ್ತದೆ. ಇದು ನಮ್ಮ ದೇಹವನ್ನು ಡಿ ಹೈಡ್ರೇಷನ್ ಆಗುವುದರಿಂದ ತಡೆಯುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಮೂಲವ್ಯಾದಿ ಸಮಸ್ಯೆಗೆ ಇದು ಪರಿಹಾರ ನೀಡಲಿದೆ. ಜೊತೆಗೆ ಬೂದು ಕುಂಬಳ ಕಡಿಮೆ ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿದ್ದು, ತೂಕ ಇಳಿಸುವಲ್ಲಿ ಇದರ ಜ್ಯೂಸ್ ಸೇವನೆ ಪ್ರಮುಖ ಪಾತ್ರ ವಹಿಸಲಿದೆ.
ರಕ್ತಹೀನತೆಯಿಂದ ಕಾಪಾಡುತ್ತದೆ
ಕೆಂಪು ರಕ್ತ ಕಣಗಳ ವೃದ್ಧಿಸುವಲ್ಲಿ ಮತ್ತು ಅದನ್ನು ಉತ್ತೇಜಿಸುವಲ್ಲಿ ಬೂದು ಕುಂಬಳ ಬಹಳಷ್ಟು ಉಪಯೋಗಕಾರಿಯಾಗಿದೆ. ಜ್ಯೂಸ್ ನಮ್ಮ ದೇಹದಲ್ಲಿ ರಕ್ತದ ಕೊರತೆಯನ್ನು ಎಂದಿಗೂ ಉಂಟುಮಾಡುವುದಿಲ್ಲ. ಇದರ ಜ್ಯೂಸ್ ಸೇವನೆ ದೇಹದಲ್ಲಿ ಕಬ್ಬಿಣಾಂಶ ಕೊರತೆಯನ್ನು ನೀಗಿಸುತ್ತದೆ.
ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ
ಬೂದು ಕುಂಬಳ ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ನಮಗೆ ಹಲವಾರು ಲಾಭಗಳಿವೆ. ಅದರಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶ ಇರುವುದಿರಂದ ನಮ್ಮ ದೇಹವು ಒಳಗಿನಿಂದ ತಂಪಾಗಿರುತ್ತದೆ.
ಆಮ್ಲೀಯತೆಯನ್ನು ತೊಡೆದುಹಾಕುತ್ತದೆ
ಬೂದು ಕುಂಬಳಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿಡಲು ಸಹ ಸಹಾಯ ಮಾಡುತ್ತದೆ.
ಬೂದು ಕುಂಬಳಕಾಯಿ ಜ್ಯೂಸ್ ಮಾಡುವುದು ಹೇಗೆ?
ಮೊದಲು ಬೂದು ಕುಂಬಳವನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಒಳಗಿರುವ ಬೀಜಗಳನ್ನು ತೆಗೆದುಹಾಕಿ. ಈ ಬೀಜವನ್ನು ಜ್ಯೂಸ್‌ಗೆ ಬಳಸಬೇಡಿ. ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಅದನ್ನು ಜ್ಯೂಸರ್ ಅಥವಾ ಮಿಕ್ಸಿ ಜಾರ್‌ನಲ್ಲಿ ಹಾಕಿ ಮತ್ತು ಇದಕ್ಕೆ ನೀರು ಮಿಶ್ರಣ ಮಾಡಬೇಡಿ. ಜೊತೆಗ ಸಕ್ಕರೆಯನ್ನೂ ಸಹ ಮಿಶ್ರಣ ಮಾಡದಿದ್ದರೆ ಉತ್ತಮ.
ಮಿಕ್ಸರ್‌ನಲ್ಲಿ ದಪ್ಪವಾದ ಒಂದು ಪೇಸ್ಟ್ ರೀತಿ ಸಿಗುತ್ತದೆ, ಇದನ್ನು ಸೋಸಣಿಗೆ ಅಥವಾ ನಯವಾದ ಹತ್ತಿ ಬಟ್ಟೆಯಲ್ಲಿ ಹಾಕಿ ಹಿಂಡಿಕೊಳ್ಳಿ. ಮತ್ತು ನೀವು ಅದಕ್ಕೆ ಜೇನು ತುಪ್ಪ ಇಲ್ಲವೆ ಸ್ವಲ್ಪ ಹಾಲು ಸೇವಿಸಿ ಕುಡಿಯಬಹುದು. ಇದು ತುಂಬಾನೆ ರುಚಿಕರವಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಮೇಲೆ ತಿಳಿಸಲಾಗಿರುವ ಎಲ್ಲಾ ಪ್ರಯೋಜನವನ್ನು ನೀವು ಪಡೆಯಬಹುದು.
ನೆನಪಿಡಿ ಈ ಜ್ಯೂಸ್ ಮಾಡುವಾಗ ನೀರು ಹಾಕಬೇಡಿ, ಅಲ್ಲದೆ ಇದಕ್ಕೆ ಬೆಲ್ಲವನ್ನು ಹಾಕಿ ಸಹ ಮಾಡಬಹುದು. ಹಾಗೆ ಕಾಳು ಮೆಣಸು, ಜೀರಿಗೆಯನ್ನೂ ಸೇರಿಸಿ ಕುಡಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


