Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚುಂಬನದಿಂದ ಹರಡುವ ಕಾಯಿಲೆ ಬಗ್ಗೆ ಕೇಳಿದ್ದೀರಾ? 'ಮಾನೋನ್ಯೂಕ್ಲಿಯೊಸಿಸ್' ಎಂಬ ಕಿಸ್ಸಿಂಗ್ ಡಿಸೀಸ್!
ಚುಂಬನದ ಮೂಲಕ ದೇಹದಲ್ಲಿ ಹೆಚ್ಚಿನ ಕ್ಯಾಲೋರಿಗಳ ದಹಿಸಲಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪ್ರೀತಿಯ ಭಾವವನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಚುಂಬನ. ಸಂಗಾತಿಗೆ ನಿಮ್ಮ ಪ್ರೀತಿ, ವಾತ್ಸಲ್ಯದ ಭಾವನೆಗಳನ್ನು ಪ್ರಕಟಿಸಲು ಎದುರಾಗುವ ಉತ್ಕಟ ಬಯಕೆಯನ್ನು ಚುಂಬನದ ಮೂಲಕ ಸಾಧಿಸಬಹುದು.
ಚುಂಬನ ನಿಮ್ಮ ಜೀವನವನ್ನು ಇನ್ನಷ್ಟು ಸಂತೋಷಕರ, ಒತ್ತಡ ರಹಿತವಾಗಿಸಿ ದೀರ್ಘಾಯಸ್ಸು ಪಡೆಯಲು ನೆರವಾಗುತ್ತದೆ ಎಂಬುದು ಸಹ ನಾವು ತಿಳಿದಿದ್ದೇವೆ. ಕಿಸ್ಸಿಂಗ್‌ನಿಂದ ಒಂದಿಷ್ಟು ಮಾನಸಿಕ ನೆಮ್ಮದಿಗೂ ಕಾರಣವಾಗಬಹುದು, ಆದ್ರೆ ಚುಂಬನದಿಂದ ಒಂದಿಷ್ಟು ಹಾನಿ ಇದೆ ಎಂಬುದು ನಿಮಗೆ ಗೊತ್ತಾ? ಹೌದು ಚುಂಬನದಿಂದಾಗಿ ಬ್ಯಾಕ್ಟೀರಿಯಾ ಹರಡೋದು ಕಾಯಿಲೆಗೆ ಕಾರಣವಾಗಲಿದೆ.

ಮೊನೊನ್ಯೂಕ್ಲಿಯೊಸಿಸ್ ಅಥವಾ ಮೊನೊವನ್ನು ಚುಂಬನ ಕಾಯಿಲೆ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವಾದ ವೈರಸ್ ಸಾಮಾನ್ಯವಾಗಿ ಲಾಲಾರಸದ ಮೂಲಕ ಹರಡುತ್ತದೆ. ಇದು ತುಂಬಾ ಸಾಮಾನ್ಯವಾಗಿದೆ ಮತ್ತು ವಿವಿಧ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಇದು ಸಾಮಾನ್ಯವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ.
ಮಾನೋನ್ಯೂಕ್ಲಿಯೊಸಿಸ್ ಎಂದರೇನು?
ಮಾನೋನ್ಯೂಕ್ಲಿಯೊಸಿಸ್ ಒಂದು ವೈರಲ್ ಸೋಂಕು, ಇದು ಸಾಮಾನ್ಯವಾಗಿ ಎಪ್ಸ್ಟೀನ್-ಬಾರ್ ವೈರಸ್ (EBV) ನಿಂದ ಉಂಟಾಗುತ್ತದೆ, ಇದು ಎಲ್ಲಾ ಜನಸಂಖ್ಯೆಯ ಗುಂಪುಗಳಲ್ಲಿ ವ್ಯಾಪಕವಾಗಿ ಹರಡುತ್ತದೆ. StatPearls ನಲ್ಲಿ ಪ್ರಕಟವಾದ 2023 ರ ಸಂಶೋಧನೆಯ ಪ್ರಕಾರ, 15 ಮತ್ತು 24 ರ ನಡುವಿನ ವಯಸ್ಸಿನ ಜನರಲ್ಲಿ ಇದು ಹೆಚ್ಚಾಗಿ ಸಾಮಾನ್ಯವಾಗಿದೆ.
ಮಾನೋನ್ಯೂಕ್ಲಿಯೊಸಿಸ್‌ಗೆ ಕಾರಣವೇನು?
ಮಾನೋನ್ಯೂಕ್ಲಿಯೊಸಿಸ್‌ನ ಪ್ರಾಥಮಿಕ ಕಾರಣವೆಂದರೆ ಹರ್ಪಿಸ್ವೈರಸ್ ಎಂಬ ವೈರಸ್ ಕುಟುಂಬಕ್ಕೆ ಸೇರಿದ EBV. EBV ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಲಾಲಾರಸ, ಲೋಳೆಯ ಮತ್ತು ಕೆಲವೊಮ್ಮೆ ಕಣ್ಣೀರಿನ ಮೂಲಕ ಹರಡುವ ಒಂದು ಬ್ಯಾಕ್ಟೀರಿಯಾ ಆಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ, ಉದಾಹರಣೆಗೆ ಚುಂಬನ ಅಥವಾ ಅವರ ಕೆಲವು ವಸ್ತುಗಳನ್ನ ಸಂಪರ್ಕ ಮಾಡುವುದು. ಈ ಬ್ಯಾಕ್ಟೀರಿಯಾ ಶೀತ, ಕೆಮ್ಮು ಸೇರಿ ಹಲವು ಸಮಸ್ಯೆಗೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾ ತಗುಲಿದರೆ ಸತತ 6 ವಾರಗಳ ಕಾಲ ಅದರ ಲಕ್ಷಣಗಳು ಕಾಡಬಹುದು.
ವಿಪರೀತ ಆಯಾಸ
ಮೊನೊ ಬ್ಯಾಕ್ಟೀರಿಯಾದ ಸಾಮಾನ್ಯ ಲಕ್ಷಣವೆಂದರೆ ವಿಪರೀತ ಆಯಾಸವಾಗುವುದು. ಇದು ವಾರದಿಂದ ಹಿಡಿದು ತಿಂಗಳುಗಳ ಕಾಲ ಮುಂದುವರೆಯಬಹುದು. ನೀವು ಎಷ್ಟೆ ವಿಶ್ರಾಂತಿ ಪಡೆದರು ಸಹ ಈ ಆಯಾಸ ಕಡಿಮೆಯಾಗದಿರುವುದು ಈ ಮೊನೊ ವೈರಸ್ ಅಥವಾ ಬ್ಯಾಕ್ಟೀರಿಯಾ ಹರಡಿರುವುದರ ಲಕ್ಷಣವಾಗಿದೆ.
ಗಂಟಲು ನೋವು
ಮೊನೊ ತೀವ್ರವಾದ ಗಂಟಲು ನೋವಿಗೆ ಕಾರಣವಾಗುತ್ತದೆ. ಗಂಟಲು ಕೆಂಪು ಮತ್ತು ಊದಿಕೊಂಡಂತೆ ಕಾಣಿಸಬಹುದು ಮತ್ತು ಟಾನ್ಸಿಲ್‌ಗಳ ಮೇಲೆ ಬಿಳಿ ಗುಳ್ಳೆಗಳು ಅಥವಾ ಕೀವು ಕಂಡುಬರಬಹುದು.
ಜ್ವರ
ಮೊನೊ ಬ್ಯಾಕ್ಟೀರಿಯಾ ಜನರಲ್ಲಿ ಜ್ವರಕ್ಕು ಕಾರಣಷವಾಗುತ್ತದೆ. ಆದ್ರೆ ಈ ಜ್ವರ ಸಾಮಾನ್ಯ ಸೀಸನಲ್ ಜ್ವರದಂತೆ ಕಂಡುಬರುತ್ತದೆ. ಅತೀಯಾಗಿ ಕಾಡದೆ ಆಗಾಗ ಜ್ವರ ಕಾಡುತ್ತಿರುತ್ತದೆ.
ತಲೆನೋವು
ಮೊನೊ ಹೊಂದಿರುವ ಅನೇಕ ಜನರು ತಲೆನೋವು ಹೊಂದಿರುತ್ತಾರೆ, ಇದು ಸೌಮ್ಯ ಅಥವಾ ತೀವ್ರವಾಗಿರಬಹುದು. ಈ ತಲೆನೋವು ಆಯಾಸ ಮತ್ತು ಸ್ನಾಯು ನೋವುಗಳಂತಹ ಇತರ ರೋಗಲಕ್ಷಣಗಳೊಂದಿಗೆ ಇರಬಹುದು. ಹಾಗೆ ತಲೆನೋವಿನ ಕಾರಣ ವಿಪರೀತ ಆಯಾಸ, ಕಣ್ಣು ಉರಿ ಸಹ ಕಾಣಿಸಿಕೊಳ್ಳುತ್ತದೆ.
ಸ್ನಾಯು ನೋವು
ಮೊನೊ ದೇಹದಾದ್ಯಂತ ಸಾಮಾನ್ಯ ಸ್ನಾಯು ನೋವು ಮತ್ತು ದೌರ್ಬಲ್ಯವನ್ನು ಉಂಟುಮಾಡಬಹುದು. ಇದು ಬ್ಯಾಕ್ಟೀರಿಯಾ ಹರಡಿದ ಬಳಿಕ ಒಂದು ತಿಂಗಳ ಕಾಲದ ವರೆಗೂ ಕಾಡಬಹುದು. ಕೀಲು, ಸ್ನಾಯು, ಮಾಂಸಖಂಡಗಳ ನೋವಿಗೂ ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications