Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಕೂದಲು ದಟ್ಟವಾಗಿ, ಸೊಂಪಾಗಿ ಬೆಳೆಯಲು ಈ ಆಹಾರಗಳನ್ನು ಸೇವಿಸಿ!
ಇತ್ತೀಚಿನ ದಿನಗಳಲ್ಲಿ ಕೂದಲು ಉದುರೋ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಹೆಚ್ಚಾಗಿದೆ. ಇದಕ್ಕೆ ಮುಖ್ಯವಾಗಿ ನಮ್ಮ ಜೀವನ ಶೈಲಿ ಕಾರಣ ಅಂತ ಹೇಳಿದ್ರೂ ತಪ್ಪಾಗೋದಿಲ್ಲ. ಇದ್ರ ಜೊತೆಗೆ ಸಿಕ್ಕ ಸಿಕ್ಕ ಪ್ರಾಡಕ್ಟ್ ಗಳನ್ನು ಕೂದಲಿಗೆ ಅನ್ವಯಿಸುವುದರಿಂದಲೂ ಕೂಡ ಕೂದಲು ಉದುರೋದಕ್ಕೆ ಕಾರಣವಾಗುತ್ತದೆ. ಹೊರಗಿನ ಜಂಕ್ ಫುಡ್ ಗಳ ಅತಿಯಾದ ಸೇವನೆಯೂ ಕೂಡ ನಮ್ಮ ಕೂದಲು ಹಾಗೂ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಕೂದಲು ಸುಂದರವಾಗಿ, ಬಲವಾಗಿ, ಸೊಂಪಾಗಿ ಬೆಳೆಯಬೇಕೆಂದರೆ ಕೂದಲಿಗೆ ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಇತ್ಯಾದಿಗಳ ಅವಶ್ಯಕತೆ ತುಂಬಾನೇ ಇದೆ. ಅಷ್ಟಕ್ಕೂ ನಿಮ್ಮ ಕೂದಲು ಆರೋಗ್ಯಯುತವಾಗಿ ಮತ್ತು ಹೊಳೆಯುವಂತೆ ಮಾಡಲು ಯಾವೆಲ್ಲಾ ಆಹಾರಗಳು ಸೇವನೆ ಮಾಡ್ಬೇಕು ಅನ್ನೋದನ್ನು ತಿಳಿಯೋಣ.
ಮುಖ್ಯವಾಗಿ ಕೂದಲಿನ ರಚನೆಯಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಕೂದಲಿನ ರಚನೆ, ಬೆಳವಣಿಗೆ ಮತ್ತು ಬಲಕ್ಕೆ ಪ್ರೋಟೀನ್ ಅತ್ಯಗತ್ಯ. ಉತ್ತಮ ಮೂಲದಿಂದ ಪ್ರೋಟೀನ್ ಪಡೆಯಲು, ಕಡಲೆಕಾಯಿ, ಸೋಯಾಬೀನ್, ಮೊಸರು, ಮೊಟ್ಟೆ, ಸೊಪ್ಪು ಮಾಂಸ, ಕೊತ್ತಂಬರಿ-ಪುದೀನ ಮತ್ತು ಚೀಸ್ ಅನ್ನು ಸೇವಿಸಿ.
ಒಮೆಗಾ -3 ಕೊಬ್ಬಿನಾಮ್ಲಗಳು ಉತ್ತಮ!
ಒಮೆಗಾ-3 ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಎಳ್ಳು, ಅಗಸೆಬೀಜ, ಬೆಣ್ಣೆ, ಮೀನು ಮತ್ತು ವಾಲ್ನಟ್ ಗಳಲ್ಲಿ ಕಂಡುಬರುತ್ತವೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯಕಾರಿಯಾಗಿದೆ.
ಉದ್ದ ಕೂದಲು ಬೇಕಿದ್ದರೆ ಬಿ-ಕಾಂಪ್ಲೆಕ್ಸ್ ಸೇವಿಸಿ!
ಬಿ-ಕಾಂಪ್ಲೆಕ್ಸ್, ಬಿ ಜೀವಸತ್ವಗಳ ಸಮೃದ್ಧ ಮೂಲವಾಗಿದೆ. ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 12, ಬಯೋಟಿನ್ (ವಿಟಮಿನ್ ಬಿ 7), ಫೋಲಿಕ್ ಆಮ್ಲ (ವಿಟಮಿನ್ ಬಿ 9) ಇತ್ಯಾದಿಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೊಳಕೆ ಕಾಳುಗಳು, ಆಲೂಗಡ್ಡೆ, ಕ್ಯಾರೆಟ್ ಮತ್ತು ಕೋಸುಗಡ್ಡೆಗಳನ್ನು ತಿನ್ನುವುದರಿಂದ ಕೂಡ ಬಿ-ಕಾಂಪ್ಲೆಕ್ಸ್ ಅನ್ನು ಒದಗಿಸುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ!
ವಿಟಮಿನ್ ಸಿ ಅಂಶ ಹೊಂದಿರುವ ಆಹಾರಗಳು ಕೂಡ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಆಮ್ಲಾ, ಪೇರಳೆ, ಕಿತ್ತಳೆ, ನಿಂಬೆ ಇತ್ಯಾದಿಗಳಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಇದು ಕೂದಲನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದಲ್ಲದೆ, ವಿಟಮಿನ್ ಸಿ ಕೂಡ ಉತ್ಕರ್ಷಣ ನಿರೋಧಕವಾಗಿದೆ. ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸೇವನೆಯು ಕೂದಲಿನ ರಾಸಾಯನಿಕ ಸಂಯೋಜನೆ, ಕಾಲಜನ್ ಉತ್ಪಾದನೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಬ್ಬಿಣ, ಹಿಮೋಗ್ಲೋಬಿನ್ ಯುಕ್ತ ಆಹಾರ ಸೇವಿಸಿ!
ಬಲವಾದ ಕೂದಲಿಗೆ ಕಬ್ಬಿಣದ ಅಂಶವು ಬಹಳ ಮುಖ್ಯವಾಗಿದೆ. ಏಕೆಂದರೆ ಇದು ಹಿಮೋಗ್ಲೋಬಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಅದು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಿ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಅಂಶಕ್ಕಾಗಿ ಮಾಂಸ, ಮೀನು, ಸೋಯಾಬೀನ್, ಪಾಲಕ್ ಮತ್ತು ಒಣದ್ರಾಕ್ಷಿಗಳನ್ನು ಸೇವಿಸಿ.
ವಿಟಮಿನ್ ಇ ಸೇವಿಸಿ!
ವಿಟಮಿನ್ ಇ ಬಲವಾದ ಮತ್ತು ಆರೋಗ್ಯಕರ ಕೂದಲಿಗೆ ತುಂಬಾನೇ ಮುಖ್ಯಗಿದೆ. ಏಕೆಂದರೆ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು ಅದು ಸ್ವತಂತ್ರ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳಿಂದ ಕೂದಲನ್ನು ರಕ್ಷಿಸುತ್ತದೆ. ಇದು ಕೂದಲನ್ನು ದಪ್ಪವಾಗಿಸಲು ಮತ್ತು ಅದರ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಇ ಗೋಡಂಬಿ, ಬಾದಾಮಿ, ಕಡಲೆಕಾಯಿ, ಸೋಯಾಬೀನ್ ಮತ್ತು ಎಳ್ಳಿನ ಎಣ್ಣೆಯಲ್ಲಿ ಕಂಡುಬರುತ್ತದೆ.
ಸರಿಯಾಗಿ ನೀರು ಕುಡಿಯಿರಿ!
ಆರೋಗ್ಯಕರ ಕೂದಲಿಗೆ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದು ಬಹಳ ಮುಖ್ಯ. ಇದು ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ.
ಕೂದಲಿನ ಆರೈಕೆ ಮಾಡುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ವಾರಕ್ಕೆ ಕಡಿಮೆ ಅಂದ್ರು ಎರಡು ಬಾರಿಯಾದರೂ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಹಾಗೂ ಬಿಸಿ ನೀರಿನಿಂದ ಯಾವುದೇ ಕಾರಣಕ್ಕೂ ಕೂದಲನ್ನು ತೊಳೆಯೋದಕ್ಕೆ ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
