Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಜಿಮ್ ಫ್ರೀಕಾ? ಅತಿಯಾದರೆ ತಪ್ಪಿದ್ದಲ್ಲ ಅಪಾಯ: ತಮಿಳುನಾಡಿನಲ್ಲಿ ಅತಿಯಾದ ವರ್ಕೌಟ್‌ನಿಂದ ಸಾವನ್ನಪ್ಪಿದ ಜಿಮ್ ಓನರ್
ತಮಿಳುನಾಡಿನ ಸೇಲಂನ ಜಿಮ್ ಓನರ್ ಸಾವು ಜಿಮ್ ಫ್ರೀಕ್‌ಗಳಿಗೆ ಅಪಾಯದ ಎಚ್ಚರಿಕೆ ನೀಡಿದೆ, ಅತಿಯಾದರೆ ಅಮೃತವೂ ವಿಷ ಅಂತಾರೆ, ಅತಿಯಾದ ವರ್ಕೌಟ್ ಮಾಡಿ ದೇಹವನ್ನು ದಂಡಿಸಲು ಪ್ರಯತ್ನಿಸಿದರೆ ಅದರಿಂದ ಪ್ರಾಣಕ್ಕೆ ಅಪಾಯವನ್ನುಂಟು ಮಾಡಬಹುದು. ವರ್ಕೌಟ್ ಮಾಡುತ್ತಲೇ ಸಾವನ್ನಪ್ಪಿರುವ ಅನೇಕ ವೀಡಿಯೋಗಳನ್ನು ನೋಡಿದ್ದೇವೆ.

ನಮ್ಮೆಲ್ಲರ ಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಕೂಡ ಸಾವನ್ನಪ್ಪುವ ಮುನ್ನ ಹೆವಿ ವರ್ಕೌಟ್ ಮಾಡಿದ್ದರು, ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು. ಇವರ ಸಾವು ಹಲವು ಚರ್ಚೆಗಳನ್ನು ಹುಟ್ಟು ಹಾಕಿತ್ತು. ಅಷ್ಟೊಂದು ಫಿಟ್ ಅಂಡ್ ಫೈನ್ ಆಗಿದ್ದ ಅಪ್ಪುವಿಗೆ ಹೃದಯಾಘಾತವಾಯ್ತು ಎಂದಾಗ ಜನರಿಗೆ ನಂಬುವುದೇ ಕಷ್ಟವಾಗಿತ್ತು. ಅತಿಯಾದ ವರ್ಕೌಟ್ ಅವರ ಬದುಕಿಗೆ ಮುಳುವಾಗಿರಬಹುದು ಎಂದು ಕೆಲ ತಜ್ಞರು ತಮ್ಮ ಅಭಿಪ್ರಾಯ ಹೇಳಿದ್ದರು, ಅವರಿಗೆ ವರ್ಕೌಟ್‌ನಿಂದಲೇ ಹೃದಯಾಘಾತವಾಯ್ತು ಎಂದು ಕೆಲವರು ಹೇಳಿದರೆ ಅವರ ಕುಟುಂಬದಲ್ಲಿ ಹೃದಯ ಸಮಸ್ಯೆಯ ಇತಿಹಾಸವಿದೆ ಹೀಗಾಗಿ ಅವರಿಗೂ ಹೃದಯಾಘಾತದ ಸಮಸ್ಯೆ ಬಂತು ಎಂದು ವಾದ ಮಾಡುತ್ತಾರೆ, ಆದರೆ ಅವರು ಅಸ್ವಸ್ಥರಾದದ್ದು ಜಿಮ್ ವರ್ಕೌಟ್ ಬಳಿಕವಷ್ಟೇ ಎಂಬುವುದು ಸತ್ಯ.
ಇಲ್ಲಿ ಈ ವ್ಯಕ್ತಿ ಹೆವಿ ವರ್ಕೌಟ್ ಮಾಡುವುದನ್ನು ನೋಡಬಹುದು
ಅವರ ತಾಯಿ ನನ್ನ ಮಗ ತುಂಬಾನೇ ವರ್ಕೌಟ್ ಮಾಡುತ್ತಿದ್ದ ದಿನದಲ್ಲಿ 2-3 ಗಂಟೆ ವರ್ಕೌಟ್ ಮಾಡುತ್ತಿದ್ದ, ಬೇಡ ಎಂದರೂ ಕೇಳುತ್ತಿರಲಿಲ್ಲ, ನನ್ನ ಈ ದೇಹವೇ ಈ ಮನೆಯ ಆಸ್ತಿಎಂದು ಹೇಳುತ್ತಿದ್ದ, ಇನ್ನು ಯಾರೂ ಯಾರೂ ಈ ರೀತಿ ವರ್ಕೌಟ್ ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.
ವೈರಲ್ ಆದ ವೀಡಿಯೋ
ಅವರ ಜಿಮ್‌ನ ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಿದೆ, ಅದರಲ್ಲಿ ನೋಡಬಹುದು ಅವರು ಹೆವಿ ವರ್ಕೌಟ್ ಮಾಡ್ತಾರೆ, ಡಂಬಲ್ಸ್ ಎತ್ತಿ ವರ್ಕೌಟ್ ಮಾಡ್ತಾರೆ, ನಂತರ ಬಂದು ನೀರು ಕುಡಿಯುತ್ತಾರೆ, ಅಲ್ಲಿಯ ಲೈಟ್ಸ್ ಎಲ್ಲಾ ಆಫ್ ಮಾಡ ಸ್ಟೆಪ್ ಹತ್ತಿ ಮೇಲೆ ಹೋಗುತ್ತಾರೆ, ಅಷ್ಟು ಆ ದೃಶ್ಯದಲ್ಇದೆ. ಅವರ ಮನೆಯವರ ಪ್ರಕಾರ ಅವರ ಮೊಬೈಲ್‌ಗೆ ಕರೆ ಮಾಡ್ತಾರೆ, ಫೋನ್ ಎತ್ತದೆ ಇದ್ದಾಗ ಜಿಮ್‌ಗೆ ಬಂದು ನೋಡಿದರೆ ಇವರು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾರೆ,ಕಿವಿಯಲ್ಲಿ ರಕ್ತ ಬರ್ತಾ ಇರುತ್ತದೆ, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು, ಆದರೆ ವೈದ್ಯರು ಅವರು ಮರಣವೊಂದಿದ್ದಾರೆ ಎಂದು ದೃಢಪಡಿಸುತ್ತಾರೆ. ಅತಿಯಾದ ವರ್ಕೌಟ್‌ನಿಂದಾಗಿ ಆ ವ್ಯಕ್ತಿ ಸಾವನ್ನಪ್ಪುತ್ತಾರೆ.
ಅತಿಯಾಗಿ ವ್ಯಾಯಾಮ ಮಾಡಿದಾಗ ಹೃದಯಾಘಾತ ಉಂಟಾಗಲು ಕಾರಣವೇನು?
ಅತಿಯಾದ ವ್ಯಾಯಾದ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ:
ಅತಿಯಾಗಿ ವ್ಯಾಯಾಮ ಮಾಡಿದಾಗ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ, ಈ ಸಮಯದಲ್ಲಿ ದೇಹದಲ್ಲಿ ಹೆಚ್ಚು ಆಮ್ಲಜನಕ ಬೇಕಾಗುತ್ತದೆ ಅಲ್ಲದೆ ಹೃದಯಕ್ಕೆ ರಕ್ತ ಸಂಚಾರ ಹೆಚ್ಚಾಗುವುದು, ಈ ರೀತಿಯಾದಾಗ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುವುದರಿಂದ ಹೃದಯಾಘಾತ ಉಂಟಾಗುವುದು.
ರಕ್ತದೊತ್ತಡ ಹೆಚ್ಚಾಗುವುದು : ಅತಿಯಾಗಿ ವರ್ಕೌಟ್ ಮಾಡಿದಾಗ ರಕ್ತನಾಳಗಳ ಮೇಲೆ ಒತ್ತಡ ಬಿದ್ದು ಹಾನಿಯುಂಟಾಗುವುದು, ಇದರಿಂದ ಎದೆ ಬಡಿತದಲ್ಲಿದಲ್ಲಿ ವ್ಯತ್ಯಾಸ ಉಂಟಾಗಿ ಹೃದಯಾಘಾತ ಉಂಟಾಗಬಹುದು.
ಹೃದಯದ ಸಮಸ್ಯೆ ಇರುವುದು ಗೊತ್ತೇ ಇಲ್ಲದಿದ್ದಾಗ: ಕೆಲವರಿಗೆ ಹೃದಯದ ಸಮಸ್ಯೆ ಇರುತ್ತದೆ, ಆದರೆ ಆ ಸಮಸ್ಯೆ ಇದೆ ಎಂದು ಗೊತ್ತಾಗಿರುವುದಿಲ್ಲ. ಹೃದಯದ ಸಮಸ್ಯೆ ಪ್ರಾರಂಭದ ಹಂತದಲ್ಲಿದ್ದಿರಬಹುದು ಅಥವಾ ಅದರ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿರಬಹುದು ಅಂಥವರು ಅತಿಯಾಗಿ ವ್ಯಾಯಾಮ ಮಾಡಿದಾಗ ಹೃದಯದ ಮೇಲೆ ಒತ್ತಡ ಬೀರುವುದು.
ಹಾಗಾಗಿ ಮಿತಿ ಮೀರಿದ ವರ್ಕೌಟ್ ಮಾಡಲೇಬೇಡಿ. ದೇಹದ ಆರೋಗ್ಯಕ್ಕೆ ವರ್ಕೌಟ್ ಅವಶ್ಯಕ ಆದರೆ ದಿನದಲ್ಲಿ 2-3 ತಾಸು ವರ್ಕೌಟ್ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


