Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪರೂಪದ ಗುಯಿಲಿನ್-ಬಾರೆ ಸಿಂಡ್ರೋಮ್‌ಗೆ ಒಳಗಾದ 59 ಮಂದಿ: ಪುಣೆಯಲ್ಲಿ ಆತಂಕ!
2025ರ ಆರಂಭದಿಂದಲೇ ನಾವು ಹಲವು ರೀತಿಯ ಸವಾಲುಗಳು, ಸಮಸ್ಯೆಗಳ ಎದುರಿಸುತ್ತಿದ್ದೇವೆ. ಆರಂಭದಲ್ಲಿ HMPV ವೈರಸ್ ಒಂದಿಷ್ಟು ಆತಂಕಕ್ಕೆ ಕಾರಣವಾಗಿತ್ತು, ಹಾಗೆ ಯುರೋಪಿಯನ್ ದೇಶಗಳಲ್ಲಿ ಹಕ್ಕಿ ಜ್ವರ ಸೇರಿ ಹಲವು ರೀತಿಯ ವೈರಲ್ ಸಮಸ್ಯೆಗಳು ಹೆಚ್ಚಾಗ ತೊಡಗಿದೆ. ಇನ್ನು ಭಾರತದಲ್ಲಿಯೂ ಇಂತಹ ಹಲವು ಸಮಸ್ಯೆಗಳನ್ನು ನಾವು ನೋಡುತ್ತಿದ್ದೇವೆ.
ಕೆಲವ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಿಗೂಢವಾಗಿ 17 ಮಂದಿ ಮೃತಪಟ್ಟ ಸಂಬಂಧ ದೊಡ್ಡ ಚರ್ಚೆ ಉಂಟಾಗಿತ್ತು. ಕೇಂದ್ರ ಸರ್ಕಾರ ಕೂಡ ಈ ಕುರಿತ ತನಿಖೆಗೆ ಮುಂದಾಗಿತ್ತು. ಮೂರು ಕುಟುಂಬ 17 ಮಂದಿ 45 ದಿನಗಳ ಅಂತದಲ್ಲಿ ಮೃತಪಟ್ಟು ಎಲ್ಲರಲ್ಲೂ ಆತಂಕ ಹೆಚ್ಚಾಗುವಂತೆ ಮಾಡಿದ್ದ ಘಟನೆ ಅದು. ಆದ್ರೆ ಈ ನಿಗೂಢ ಸಾವಿಗೆ ಕಾರಣ ಪತ್ತೆಗೆ ಶ್ರಮಿಸಲಾಗುತ್ತಿದೆ.

ಇಂತಹ ಹಲವು ಘಟನೆಗಳ ನಡುವೆ ಈಗ ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಸಮಸ್ಯೆಯೊಂದು ಎಲ್ಲರ ನಿದ್ದೆಗೆಡಿಸಿದೆ. ಪುಣೆಯಲ್ಲಿ 59 ಮಂದಿಗೆ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾಗಿರುವ ಗುಯಿಲಿನ್ ಬಾರೆ ಸಿಂಡ್ರೋಮ್ (GBS) ಇರುವುದು ಪತ್ತೆಯಾಗಿದ್ದು ಇವರಲ್ಲಿ 12 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.
ಪುಣೆಯಲ್ಲಿ ಈ ರೀತಿ ಹಠಾತ್ ಆಗಿ ಈ ಅಪರೂಪದ ಪ್ರಕರಣಗಳ ಏರಿಕೆ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿದೆ. ಬುಧವಾರ ಒಟ್ಟು ಈ ಪ್ರಕರಣಗಳ ಸಂಖ್ಯೆ 59ಕ್ಕೆ ಏರಿಕೆಯಾಗಿದೆ, ಇದರಲ್ಲಿ 38 ಮಂದಿ ಪುರುಷರು 21 ಮಂದಿ ಮಹಿಳೆಯರಿದ್ದಾರೆ. ಹಾಗೆ 12 ಮಂದಿ ಮೇಲೆ ತೀವ್ರ ನಿಗಾ ಇಡಲಾಗಿದ್ದು, ವೆಂಟಿಲೇಟರ್‌ನಲ್ಲಿದ್ದಾರೆ.
ಗುಯಿಲಿನ್-ಬಾರೆ ಸಿಂಡ್ರೋಮ್ ಎಂದರೇನು?
ಗುಯಿಲಿನ್-ಬಾರೆ ಸಿಂಡ್ರೋಮ್ (GBS) ಒಂದು ಅಪರೂಪದ ನರವೈಜ್ಞಾನಿಕ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದ ನಮ್ಮ ದೇಹದ ಒಂದು ಭಾಗ ಕೆಲಸ ಮಾಡುವುದನ್ನೇ ನಿಲ್ಲಿಸಬಹುದು. ಮರಗಟ್ಟುವಿಕೆ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗೆ ಇದು ಕಾರಣವಾಗುತ್ತೆ.
ಈ ಅಪರೂಪದ ಕಾಯಿಲೆಗೆ ಉಂಟಾಗಲು ನಿಖರ ಕಾರಣ ಮಾತ್ರ ಇಂದಿಗೂ ತಿಳಿಯಲು ಸಾಧ್ಯವಾಗಿಲ್ಲ. ಗುಯಿಲಿನ್-ಬಾರ್ ಸಿಂಡ್ರೋಮ್ ಹೊಂದಿರುವ ಹೆಚ್ಚಿನ ಜನರು
ಈ ಸಮಸ್ಯೆಗೆ ಒಳಗಾಗುವ ಕನಿಷ್ಠ 6 ವಾರಗಳ ಮೊದಲು ಇದರ ಸೌಮ್ಯ ಲಕ್ಷಣಗಳ ಎದುರಿಸಲು ಮುಂದಾಗುತ್ತಾರೆ ಎನ್ನಲಾಗಿದೆ. ಇದರಲ್ಲಿ ಜಠರ ಸೋಂಕು, ಶ್ವಾಸಕೋಶ ಸೋಂಕು, ಉಸಿರಾಟ ಸಮಸ್ಯೆ ಕೂಡ ಸೇರಿವೆ.
ಆರಂಭದಲ್ಲಿ ಈ ಜಿಬಿಎಸ್ ಪಾದಗಳಿಂದ ಆರಂಭವಾಗಬಹುದು. ನಂತರ ಇಡೀ ದೇಹವನ್ನೂ ಆವರಿಸಬಹುದು. ಕಾಲುಗಳು, ತೋಳುಗಳು, ಮುಖ ಮತ್ತು ಉಸಿರಾಟ ಪ್ರಕ್ರಿಯೆಗೆ ಕಾರಣವಾಗುವ ಸ್ನಾಯುಗಳಿಗೂ ಇದು ಹರಡುತ್ತದೆ. ಏಕಾಏಕಿ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಕುಂದುವುದರಿಂದ ಈ ಸಮಸ್ಯೆ ಬಹುಬೇಗ ದೊಡ್ದದಾಗುತ್ತೆ. ಏಕಾಏಕಿ ನೀವು ನಡೆದಾಡುವುದು ಕೂಡ ಕಷ್ಟವಾಗಿಸಬಹುದು, ಹೀಗಾಗಿ ವೆಂಟಿಲೇಟರ್ ಮೂಲಕ ನೀವು ಬದುಕುಳಿಯಬೇಕಾಗುತ್ತದೆ.
ಈ ಸಮಸ್ಯೆಗೆ ಒಳಗಾದವರಲ್ಲಿ ನರಗಳ ಹಾನಿಯಿಂದಾಗಿ ಮೆದುಳಿನ ಅಸಹಜ ಸಂಕೇತಗಳ ಪಡೆಯಲಿದೆ. ಇದರಿಂದ ನಿಮ್ಮ ದೇಹಕ್ಕೂ ನಿಮಗೂ ಒಂದಕ್ಕೊಂದು ಸಂಬಂಧವೇ ಇಲ್ಲದ ಸ್ಥಿತಿ ಉಂಟಾಗಬಹುದು. ನಿಮಗೆ ಸುಲಭವಾಗು ಊಟ, ತಿಂಡಿ ಮಾಡುವುದು, ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಳ್ಳುವುದು, ಮೆಟ್ಟಿಲು ಹತ್ತುವಂತಹ ಸುಲಭದ ಕೆಲಸಗಳು ಕೂಡ ಕಷ್ಟವಾಗುತ್ತಾ ಸಾಗಬಹುದು. ಸಮಸ್ಯೆಯಿಂದ ಗುಣಮುಖರಾಗಲು ಕೆಲವು ವಾರಗಳಿಂದ ಹಿಡಿದು ವರ್ಷಗಳು ಕೂಡ ಬೇಕಾಗಬಹುದು. ಮತ್ತೆ ಕೆಲವರಲ್ಲಿ ಇದು ಹಾಗೆಯೇ ಉಳಿದುಬಿಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications