Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
2025ರಲ್ಲಿ ಕಾಡಲಿವೆ 6 ವೈರಸ್‌ಗಳು..! ಜಗತ್ತಿಗೆ ಕಾದಿದೆ ಮಹಾ ಅಪಾಯ.!
ಕೋವಿಡ್ ಬಳಿಕ ಒಂದಲ್ಲಾ ಒಂದು ಅಪಾಯಕಾರಿ ವೈರಸ್ ಕಾಣಿಸುತ್ತಿರುವುದು ನಾವು ನೋಡಿದ್ದೇವೆ. ಈಗ ಚೀನಾದಲ್ಲಿ ಹೊಸದೊಂದು ವೈರಸ್ ಹರಡುತ್ತಿದೆ ಎಂಬ ಸುದ್ದಿ ಹರಡಿದೆ. ಆದ್ರೆ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿಲ್ಲ. ಆದರೆ ಅಲ್ಲಿನ ಆಸ್ಪತ್ರೆಗಳ ಮುಂದಿನ ವಿಡಿಯೋಗಳು ವೈರಲ್ ಆಗಿವೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಎಲ್ಲರ ನಿದ್ದೆಗೆಡಿಸಿದೆ.
ಹಾಗೆ ಈ ವರ್ಷ ಹಲವು ರೀತಿಯ ವೈರಸ್‌ಗಳು ನಮ್ಮನ್ನು ಕಾಡಲಿದೆ ಎಂಬ ಅಘಾತಕಾರಿ ವಿಚಾರ ನಿಮಗೆ ಗೊತ್ತಾ? 2025ರಲ್ಲಿ ಕೆಲವೊಂದು ವೈರಲ್‌ಗಳು ಮತ್ತೊಮ್ಮೆ ಇಡೀ ಜಗತ್ತಿನಲ್ಲಿ ಆಘಾತ ತರಲಿವೆ. ಕೋವಿಡ್ ಕಾಲದಲ್ಲಿ ಉಂಟಾದ ಸಾಂಕ್ರಾಮಿಕದಂತೆ ಈ ವರ್ಷ ಕೆಲವು ವೈರಸ್‌ಗಳು ಮತ್ತೆ ಈ ವರ್ಷ ಜನರನ್ನು ಕಾಡಲಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಅದರಲ್ಲೂ 6 ಅಪಾಯಕಾರಿ ವೈರಸ್‌ಗಳು ಈ ವರ್ಷ ಕಾಡಲಿದೆಯಂತೆ. ಹಾಗಾದ್ರೆ ಯಾವೆಲ್ಲಾ ವೈರಸ್‌ಗಳು ಈ ವರ್ಷ ಇಡೀ ಜಗತ್ತನ್ನು ಕಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV)
ಚೀನಾದಲ್ಲಿ ಹೊಸದಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿರುವ ಈ ಹೆಚ್‌ಎಮ್‌ಪಿವಿ ವೈರಸ್ ಎಲ್ಲರ ನಿದ್ದೆ ಕೆಡಿಸಿದೆ. ಚೀನಾದಿಂದ ಇಡೀ ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ಹರಡುವ ಅಪಾಯ ಎದುರಾಗಿದೆ. ಅಜ್ಞಾತ ಮೂಲದ ನ್ಯುಮೋನಿಯಾ ಪ್ರಕರಣ ಎಂದು ಇದನ್ನು ಕರೆಯಲಾಗಿದೆ. ಹಾಗೆ ಚಳಿಗಾಲದಲ್ಲಿ ಉಸಿರಾಟದ ಕಾಯಿಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಡಿಸೆಂಬರ್ 16 ಮತ್ತು 22 ರ ನಡುವೆ ಈ ಪ್ರಕರಣಗಳ ಸಂಖ್ಯೆಲ್ಲಿ ಏರಿಕೆಯಾಗಿರುವ ಕುರಿತು ವರದಿಯಾಗಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) 2024 ರಲ್ಲಿ HMPV ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯನ್ನು ವರದಿ ಮಾಡಿದೆ, ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ 2025ರಲ್ಲಿ ಈ ವೈರಲ್ ಬಹಳಷ್ಟು ಹರಡುವ ಸಾಧ್ಯತೆ ಇದೆ ಎನ್ನುವ ಆಘಾತ ಎದುರಾಗಿದೆ.
HMPV ಎಂದರೇನು?
HMPV ಉಸಿರಾಟದ ಸಮಸ್ಯೆ ತರುವಂತಹ ವೈರಸ್ ಆಗಿದೆ. HMPV ವೈರಸ್ ಅನ್ನು ಪತ್ತೆಹಚ್ಚಲು PCR ಪರೀಕ್ಷೆಯು ಸರಿಯಾದ ಮಾರ್ಗವಾಗಿದೆ. ಇದರಲ್ಲೂ ವೈರಸ್ ಹರಡುವಿಕೆ ಕುರಿತು ಇನ್ನಷ್ಟೇ ಮಾಹಿತಿಗಳು ಹೊರಬೀಳಬೇಕಿದೆ.
ದಡಾರ
ವಿಶ್ವ ಆರೋಗ್ಯ ಸಂಸ್ಥೆ (WHO) 2024 ರಲ್ಲಿ ಜಾಗತಿಕವಾಗಿ 260,000 ದಡಾರ ಪ್ರಕರಣಗಳನ್ನು ದಾಖಲಿಸಿದೆ, ವ್ಯಾಕ್ಸಿನೇಷನ್ ದರಗಳು ಕುಸಿತ ಕಂಡಿರುವ ಪ್ರದೇಶದಲ್ಲಿ ಮತ್ತೆ ದಡಾರ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ 2025ರಲ್ಲಿ ದಡಾರ ಕೂಡ ಒಂದು ಆಪಾಯಕಾರಿ ಸಮಸ್ಯೆಯಾಗಿ ಬದಲಾಗಬಹುದಂತೆ.
ಡೆಂಗ್ಯೂ
WHO ಅಂದಾಜಿನ ಪ್ರಕಾರ 2024 ರಲ್ಲಿ ಪ್ರಪಂಚದಾದ್ಯಂತ 6 ಮಿಲಿಯನ್‌ಗಿಂತಲೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ ಮತ್ತು ಹವಾಮಾನ ಬದಲಾವಣೆಯು ಈ ವಾಹಕಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಭಾರತದಲ್ಲೂ ಇದರ ಅಪಾಯ ಹೆಚ್ಚಾಗಿತ್ತು. ಹಾಗೆ ಇದು 2025ರಲ್ಲೂ ದೊಡ್ಡ ಸಾವಲಾಗಿ ಪರಿಣಮಿಸಲಿದೆ.
ಹಕ್ಕಿ ಜ್ವರ
ಜನವರಿ 2025 ರ ಹೊತ್ತಿಗೆ ಜಾಗತಿಕವಾಗಿ 145 ಮಾನವ ಸೋಂಕುಗಳು ಕಂಡುಬಂದಿವೆ. H5N6 ನ ವಿರಳ ಮಾನವ ಪ್ರಕರಣಗಳು ಸಹ ವರದಿಯಾಗಿವೆ. ಹಲವು ಜಾತಿಯ ಪ್ರಾಣಿಗಳ ಮೂಲಕ ಈ ಹಕ್ಕಿ ಜ್ವರ ಹರಡುತ್ತಿರುವುದು 2025ರಲ್ಲಿ ಮತ್ತೊಂದು ಸಾಂಕ್ರಾಮಿಕವಾಗಿ ರೂಪುಗೊಳ್ಳುವ ದೊಡ್ಡ ಅಪಾಯ ಹೊಂದಿದೆ.
ನೊರೊವೈರಸ್
2024ರಲ್ಲಿ 500,000 ಕ್ಕೂ ಹೆಚ್ಚು ನೊರೊವೈರಸ್ ಪ್ರಕರಣಗಳು ವಿಶ್ವದಲ್ಲಿ ವರದಿಯಾಗಿದೆ. ಈ ವರ್ಷ ಈ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದೆ. ಚಳಿಗಾಲದ ಸಮಯದಲ್ಲೇ ಈ ಪ್ರಕರಣ ಹೆಚ್ಚಾಗಿ ಹರಡುತ್ತದೆ. ಹೀಗಾಗಿ ಯೂರೋಪಿಯನ್ ದೇಶಗಳಲ್ಲಿ ಈ ಪ್ರಮಾಣ ಅಧಿಕವಾಗಿದೆ.
ವೆಸ್ಟ್ ನೈಲ್ ವೈರಸ್
ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ (ECDC) 2024 ರಲ್ಲಿ 1,015 ವೆಸ್ಟ್ ನೈಲ್ ವೈರಸ್ ಪ್ರಕರಣಗಳ ವರದಿ ಮಾಡಿದೆ.
ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಸೊಳ್ಳೆಗಳಿಂದ ಹರಡುವ ಈ ವೈರಸ್ 2025ರಲ್ಲಿ ಸಮಸ್ಯೆಯಾಗಿ ಕಾಡಬಬಹುದು ಎನ್ನಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










