Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಮಕ್ಕಳಿಗೆ ಈ ಆಹಾರ ನೀಡಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ..! ಯಾವುದೆಲ್ಲಾ ಗೊತ್ತಾ?
ಮಕ್ಕಳು ಒಂದು ಹಂತದ ವರೆಗೂ ಬೆಳೆಯುವವರೆಗೂ ಅವರ ಮೇಲೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿರುತ್ತೆ. ಅದರಲ್ಲೂ ಆಹಾರದ ವಿಚಾರದಲ್ಲಿ ಅವರ ಮೇಲೆ ಹೆಚ್ಚು ನಿಗಾ ಇಡಬೇಕಾಗುತ್ತದೆ. ಮಕ್ಕಳ ಬೆಳವಣಿಗೆಗೆ ಸಹಾಯವಾಗುವಂತಹ ಆಹಾರ ನೀಡುವುದು ಮುಖ್ಯ ಸಂಗತಿಗಳಲ್ಲಿ ಒಂದಾಗಿರುತ್ತದೆ. ಹಾಗೆ ಅವರ ಕಲಿಕೆ ಕೂಡ ಮನೆಯಿಂದ ಆರಂಭವಾಗುತ್ತದೆ.
ಈಗಂತು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಎಲ್‌ಕೆಜಿ, ಬೇಬಿ ಸಿಟ್ಟಿಂಗ್‌ನಂತಹ ಕಡೆ ಬಿಡುತ್ತಾರೆ. ಏಕೆಂದರೆ ಮಕ್ಕಳು ಬುದ್ದಿವಂತರಾಗಲಿದೆ ಎಂಬುದು ಪೋಷಕರ ಆಸೆಯಾಗಿರುತ್ತೆ. ಆದ್ರೆ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡುವುದು ಕೇವಲ ಶಾಲೆಗೆ ಕಳುಹಿಸುವುರಿಂದ ಚಿಕ್ಕ ವಯಸ್ಸಿನಲ್ಲೇ ಬರವಣಿಗೆ ಓದು ಕಲಿಸುವುದರಿಂದ ಅಲ್ಲ.

ಬದಲಿಗೆ ನಿಮ್ಮ ಮಕ್ಕಳು ಬುದ್ದಿವಂತರಾಗಬೇಕಾದರೆ ಹಲವು ರೀತಿಯ ಅಂಶಗಳು ಕಾರಣವಾಗುತ್ತವೆ. ಅದರಲ್ಲು ಬಹಳ ಮುಖ್ಯ ಎನಿಸುವುದು ಆಹಾರ. ಹೌದು ನಮ್ಮ ಮೆದುಳಿನ ಕಾರ್ಯಕ್ಷಮತೆ ಹೆಚ್ಚು ಮಾಡುವಂತಹ ಆಹಾರಗಳು ಕೂಡ ಇದೆ. ಈ ಆಹಾರಗಳಿ ಮಕ್ಕಳ ಬುದ್ದಿಮಟ್ಟ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಯಾವ ರೀತಿಯ ಆಹಾರ ನೀಡುತ್ತೇವೋ ಅದರ ಮೇಲೆ ಅವರ ಬುದ್ಧಿವಂತಿಕೆ ಮಟ್ಟ ನಿರ್ಧಾರವಾಗುತ್ತೆ.
ಮಗುವಿನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಹಾಗೂ ಬುದ್ಧಿಶಕ್ತಿಯ ಅಭಿವೃದ್ಧಿಯೂ ಕೂಡ ಸಮಾನ ಪಾತ್ರ ಹೊಂದಿದೆ. ಮಗುವಿನ ಸ್ಮರಣ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಪೋಷಕಾಂಶಯುಕ್ತ ಆಹಾರವು ನಿಮಗೆ ಸಹಾಯ ಮಾಡುತ್ತದೆ. ಹಾಗಾದ್ರೆ ಮಕ್ಕಳ ಬುದ್ದಿಶಕ್ತಿ ಬೆಳವಣಿಗೆಗೆ ನಾವು ನಿತ್ಯ ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಒಮೆಗಾ-3 ಫುಡ್ಸ್
ಮಕ್ಕಳ ಬುದ್ದಿಶಕ್ತಿ ಹೆಚ್ಚುವಂತೆ ಮಾಡುವ ಆಹಾರಗಳಲ್ಲಿ ಈ ಒಮೆಗಾ-3 ಫುಡ್ಸ್ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಹಾಗಾದ್ರೆ ಯಾವುದು ಈ ಒಮೆಗಾ-3 ಫುಡ್ ಎಂಬುದನ್ನು ನೋಡಿ. ಒಮೆಗಾ 3 ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ. ಮಗು ಚಟುವಟಿಕೆಯಿಂದ ಕೂಡಿದಷ್ಟು ಅದರ ಬುದ್ದಿಶಕ್ತಿ ಬೆಳವಣಿಗೆ ಆಗುತ್ತಾ ಹೋಗುತ್ತದೆ. ವಾಲ್ ನಟ್ಸ್, ಅಗಸೆ ಬೀಜ, ಆಲಿವ್ ಆಯಿಲ್ ಚಿಯಾ ಬೀಜ, ಮೊಟ್ಟೆ, ಮೀನು ಹಲವು ಬಗೆ ಸೊಪ್ಪು, ತರಕಾರಿಗಳಲ್ಲಿ ಒಮೆಗಾ 3 ಕೊಬ್ಬು ಹೆಚ್ಚಾಗಿರುತ್ತದೆ. ಹಾಗೆ ಡ್ರೈ ಫ್ರೂಟ್ಸ್‌ಗಳಲ್ಲೂ ಈ ಒಮೆಗಾ3 ಕೊಬ್ಬಿನಾಂಶ ಸಿಗಲಿದೆ. ಒಮೆಗಾ 3 ಮಾತ್ರೆಗಳು ಕೂಡ ಮೀನಿನ ಎಣ್ಣೆಯಿಂದ ಮಾಡಲಾಗಿರುತ್ತದೆ.
ಮೊಸರು
ಮಕ್ಕಳಿಗೆ ಮೊಸರನ್ನು ಹೆಚ್ಚು ನೀಡುವುದು ಉತ್ತಮ. ಇದು ಪ್ರೋ ಬಯೋಟಿಕ್ ಆಗಿದ್ದು ಕರುಳಿಗೆ ಬೇಕಾದ ಅತ್ಯುತ್ತಮ ಬ್ಯಾಕ್ಟೀರಿಯಾವನ್ನು ಮೊಸರು ಸೃಷ್ಟಿಸಲಿದೆ. ಹೀಗಾಗಿ ಮೊಸರು ಅಗತ್ಯವಾಗಿ ಬೇಕಾಗುತ್ತದೆ. ಬ್ರೈನ್‌ಗೆ ಬೇಕಾದ ನ್ಯೂರೋ ಟ್ರಾನ್ಸ್‌ಮೀಟರ್‌ಗಳು ಹೊಟ್ಟೆಯಲ್ಲಿ ಬೆಳವಣಿಗೆಯಾಗುತ್ತದೆ ಹೀಗಾಗಿ ಮೊಸರು ಮಕ್ಕಳ ಬುದ್ಧಿಮಟ್ಟದಲ್ಲಿ ಸುಧಾರಣೆಯಾಗಲು ಸಹಕಾರಿಯಾಗಿದೆ.
ರೆಡ್ ರೈಸ್
ಮಕ್ಕಳಿಗೆ ಬ್ರೌನ್ ರೈಸ್ ಅಥವಾ ರೆಡ್ ರೈಸ್ ಬಹಳ ಉತ್ತಮ. ಬಿಳಿಯಾದ ರೈಸ್‌ಗಿಂತಲೂ ಈ ಬ್ರೌನ್ ರೈಸ್ ಅವರಿಗೆ ನೀಡುವುದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಬುದ್ದಿ ಚುರುಕಾಗಿಸಲು ಇದು ಸಹಕಾರಿಯಾಗಿದೆ.
ಮೊಳಕೆ ಕಾಳು
ಮೊಳಕೆ ಕಾಳಿನಲ್ಲಿ ಅತೀ ಹೆಚ್ಚು ಫೈಬರ್, ಪ್ರೋಟೀನ್ ಸಿಗುವುದರಿಂದ ಸಂಜೆ ಅಥವಾ ಬೆಳಗ್ಗೆ ಈ ಮೊಳಕೆ ಕಾಳು ನೀಡುವುದರಿಂದ ಅವರ ಬುದ್ದಿ ಶಕ್ತಿಯ ಮಟ್ಟ ಸಮತೋಲನದಿಂದ ಕೂಡಿರುತ್ತದೆ. ಹಾಗೆ ಮೊಳಕೆ ಕಾಳಿನ ಪಲ್ಯ, ಸಾರು, ಹಸಿಯಾಗಿ ನೀಡುವುದು, ಜ್ಯೂಸ್ ರೀತಿ ನೀಡುವ ಮೂಲಕ ಅವರಿಗೆ ನೀಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications