Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸ್ಮೋಕಿ ಬೀಡಾ ಸೇವಿಸಿದ ಬಾಲಕಿ ಆಸ್ಪತ್ರೆ ಪಾಲು..! ಹೊಟ್ಟೆಯಲ್ಲಿ ರಂದ್ರ ಮಾಡಿದ ನೈಟ್ರೋಜನ್
ಇತ್ತೀಚಿನ ದಿನಗಳಲ್ಲಿ ನೀವು ಚಿತ್ರ ವಿಚಿತ್ರ ಪಾನ್‌ಗಳ ನೋಡಿರುತ್ತೀರಿ, ನೀವೇನಾದ್ರು ಬೀಡಾ ಸೇವಿಸುವ ಅಭ್ಯಾಸ ಇಟ್ಟುಕೊಂಡಿರುವವರಾಗಿದ್ದರೆ ಖಂಡಿತವಾಗಿ ವಿಭಿನ್ನ ರೀತಿಯ ಬೀಡಾಗಳ ರುಚಿ ನೋಡಿರುತ್ತಿರಿ. ಅದರಲ್ಲೂ ಹತ್ತು ಹಲವು ವಿಧಗಳಿವೆ, ಹತ್ತಾರು ಸ್ವಾದದ ಬೀಡಗಳು ಇಂದು ಸಿಗುತ್ತವೆ.
10 ರೂಪಾಯಿ ಇಂದ ಆರಂಭಗೊಂಡು ಲಕ್ಷ ರೂಪಾಯಿಯ ಬೀಡಾಗಳು ಸಹ ಮಾರುಕಟ್ಟೆಯಲ್ಲಿವೆ. ತೀರಾ ಇತ್ತೀಚಿಗೆ ನೀವು ಬೆಂಕಿಯೊಂದಿಗೆ ಬಾಯಿಗೆ ಹಾಕಿ ಅಗಿಯುವ ಬೀಡಾ ನೋಡಿರುತ್ತೀರಿ. ಇದರ ಜೊತೆಗೆ ಹೊಗೆಯ ಪಾನ್ ನೋಡಿರುತ್ತಿರಿ. ಲಿಕ್ವಿಡ್ ನೈಟ್ರೋಜನ್ ಬಳಸಿ ಹೊಗೆ ಬರುವಂತೆ ಮಾಡಿ ಅದೇ ಬೀಡವನ್ನು ನೇರವಾಗಿ ನಿಮ್ಮ ಬಾಯಿಗೆ ಹಾಕುತ್ತಾರೆ. ಕೆಲವು ದಿನಗಳ ಹಿಂದೆ ಇದೊಂದು ಟ್ರೆಂಡ್ ಆಗಿತ್ತು.

ಆದ್ರೆ ಈ ರೀತಿಯ ಹೊಗೆ ಪಾನ್ ಈಗ ಬಾಲಕಿಯೊಬ್ಬಳ ಅನಾರೋಗ್ಯಕ್ಕೆ ಕಾರಣವಾಗಿದ್ದು, ಆಕೆಯ ಹೊಟ್ಟೆಯಲ್ಲಿ ತೂತಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಸ್ಮೋಕಿ ಪಾನ್ ಸೇವಿಸಿದ ನಂತರ ತೀವ್ರವಾದ ಹೊಟ್ಟೆ ನೋವು ಅನುಭವಿಸಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಈ ಪ್ರಮಾದ ನಡೆದಿರುವುದು ತಿಳಿದುಬಂದಿದೆ.
12 ವರ್ಷದ ವರ್ಷದ ಬಾಲಕಿ ಮೋಜಿಗಾಗಿ ಈ ಸ್ಮೋಕಿ ಬೀಡಾ ಸೇವಿಸಿದ್ದಾಳೆ. ಆದರೆ ಈ ಬೀಡಾದಿಂದ ಆಕೆಯ ಆರೋಗ್ಯ ಹದಗೆಟ್ಟಿದೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಪೆರಿಟೋನಿಟಿಸ್ ಎಂಬ ಕಾಯಿಲೆಗೆ ಒಳಗಾಗಿರುವುದಾಗಿ ತಿಳಿಸಿದರು. ಜೊತೆಗೆ ಹೊಟ್ಟೆಯಲ್ಲಿ ರಂದ್ರ ಸಹ ಕಾಣಿಸಿಕೊಂಡಿದೆ ಎಂಬ ವರದಿ ನೀಡಿದರು.
ಇದಕ್ಕೆ ಮುಖ್ಯ ಕಾರಣವಾಗುವುದು ಲಿಕ್ವಿಡ್ ರೂಪದಲ್ಲಿರುವ ನೈಟ್ರೋಜನ್ ಆಗಿದೆ. ಇದು ದ್ರವ ರೂಪದಿಂದ ಅನಿಲ ರೂಪಕ್ಕೆ ಬದಲಾಗಬೇಕಾದರೆ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ. ಹೀಗಾಗುವಾಗ ಅದರಿಂದ ಹೊಗೆ ಹೊರಬರುತ್ತದೆ. ಇದನ್ನೇ ಡ್ರೈ ಐಸ್ ಅಂತಲೂ ಕರೆಯುತ್ತಾರೆ. ಇನ್ನು ಸರಳೀಕರಿಸಿ ಹೇಳುವುದಾದರೆ ಸಿನಿಮಾಗಳಲ್ಲಿ ಕೈಲಾಸ ಸ್ವರ್ಗ ಲೋಕ ಸೃಷ್ಟಿಸುವಾಗ ಅಲ್ಲಿ ಮಂಜಿನಂತಹ ಹೊಗೆ ಬರುವಂತೆ ಮಾಡಲು ಬಳಸು ಒಂದು ರಾಸಾಯನಿಕ ಇದಾಗಿದೆ.
ಈ ಅನಿಲ ಆವಿಯಾಗುವಿಕೆಯಂತಹ ಪ್ರಕ್ರಿಯೆಗೆ ಒಳಗಾದಾಗ ಅಪಾರ ಶಕ್ತಿ ಬಿಡುಗಡೆ ಮಾಡುತ್ತದೆ. ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಗಮನಾರ್ಹವಾದ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ಆವಿಯನ್ನು ಉಸಿರಾಡುವುದು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಅದರ ಅಪಾಯಕಾರಿ ಗುಣಲಕ್ಷಣಗಳಿಂದಾಗಿ ಅಂಗಾಂಗ ಹಾನಿಗೂ ಕಾರಣವಾಗುವ ಸಂಭವವಿರುತ್ತದೆ.
ಇತ್ತ ಈ ಅನಿಲ ಹಾಕಿದ್ದ ಬೀಡಾ ಸೇವಿಸಿದ ಬಾಲಕಿಯ ಹೊಟ್ಟೆಯ ಭಾಗದ ಚರ್ಮವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬೇಕಾದ ಅನಿವಾರ್ಯತೆ ಉಂಟಾಯಿತು. ಸುಮಾರು 4x5 ಸೆಂ.ಮೀ ಅಳತೆಯಲ್ಲಿ ಆಕೆಯ ಒಳ ಹೊಟ್ಟೆ ಭಾಗದ ಚರ್ಮ ಕತ್ತರಿಸಿ ತಗಿಯಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ.
ಇದೊಂದೆ ಪ್ರಕರಣವಲ್ಲ ಈ ಮೊದಲು ಹೋಟೆಲ್‌ವೊಂದರಲ್ಲಿ ಮೌತ್ ಫ್ರೆಶ್‌ನರ್ ಬದಲಿಗೆ ಡ್ರೈ ಐಸ್ ಸೇವಿಸಿದ್ದ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಬಾಯಿಯಿಂದ ರಕ್ತ ಬರುವಷ್ಟು ಹಾನಿಯಾಗಿತ್ತು. ಏಕೆಂದರೆ ಈ ಲಿಕ್ವಿಡ್ ನೈಟ್ರೋಜನ್ ಒಮ್ಮೆ ಗಾಳಿಯೊಂದಿಗೆ ಬೆರೆತಾಗ ಅದು ಆವಿಯಾಗಲು ಆರಂಭವಾಗುತ್ತದೆ. ಈ ವೇಳೆ ರಾಸಾಯನಿಕ ಪ್ರಕ್ರಿಯೆಗೆ ಅದು ಒಳಗಾಗುತ್ತವೆ. ಈ ಆವಿ ಅನಾರೋಗ್ಯದ ಜೊತೆಗೆ ಸಾವಿಗೂ ಕಾರಣವಾಗಬಹುದು.
ಈ ರೀತಿಯ ನೈಟ್ರೋಜನ್ ಬಳಕೆ ಇತ್ತೀಚಿಗೆ ಎತ್ತೇಚ್ಚವಾಗಿ ಬೆಳೆಯುತ್ತಿದೆ. ಅದರಲ್ಲೂ ಬೀಡಾ, ಐಸ್ ಕ್ರೀಮ್ ಅಂಗಡಿಗಳು ಇದನ್ನು ಗ್ರಾಹಕರ ಆಕರ್ಷಿಸುವ ಸಲುವಾಗಿ ಅದರ ಅಪಾಯ ಅರಿತ್ತಿದ್ದರೂ ಬಳಸುತ್ತಿರುವುದು ಆತಂಕ ಹುಟ್ಟಿಸಿದೆ. ಕೆಲವು ದಿನಗಳಿಂದ ಈ ರೀತಿ ಪ್ರಕರಣಗಳು ಕೇಳಿಬರುತ್ತಲೇ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
