Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಮಾಂಸವನ್ನೇ ಕಿತ್ತು ತಿನ್ನುತ್ತಿದೆ ಬ್ಯಾಕ್ಟೀರಿಯಾ..! 48 ಗಂಟೆಗಳಲ್ಲಿ ಬರುತ್ತಿದೆ ಮರಣ..!
ದಿನಗಳು ಉರುಳಿದಂತೆ ಕಾಲೋಚಿತ ಕಾಯಿಲೆಗಳು ಸಹ ಕಾಣಿಸಿಕೊಳ್ಳಲು ಆರಂಭವಾಗುತ್ತಿದೆ. ಮೊದಲು ಕೋವಿಡ್ ವೈರಸ್ ಇಡೀ ವಿಶ್ವವನ್ನೇ ತಲ್ಳಣಗೊಳಿಸಿದ ಬಳಿಕ ಈಗ ಹಕ್ಕಿ ಜ್ವರದ ಭೀತಿ ಎಲ್ಲೆಡೆ ಎದುರಾಗಿದೆ. ಹಕ್ಕಿ ಜ್ವರದಿಂದಾಗಿ ಮೊಟ್ಟ ಮೊದಲ ಸಾವಿನ ಪ್ರಕರಣ ಸಹ ದಾಖಲಾಗಿದೆ. ಆದರೆ ಇದೆಲ್ಲದರ ನಡುವೆ ಹೊಸದೊಂದು ಕಾಯಿಲೆ ಈಗ ವ್ಯಾಪಕವಾಗಿ ಹರಡಲು ಆರಂಭವಾಗಿದ್ದು, ವಿಶ್ವಕ್ಕೆ ಹೊಸ ಆತಂಕ ಎದುರಾಗಿದೆ.
ಅದರಲ್ಲೂ ಈಗ ಜಪಾನ್ ಎಂಬ ಸಣ್ಣ ದ್ವೀಪದಲ್ಲಿ ಹೊಸದಾದ ವೈರಸ್‌ವೊಂದು ಕಾಣಿಸಿಕೊಂಡಿದ್ದು ಇದು ನಿಮ್ಮ ಮಾಂಸವನ್ನೇ ತಿನ್ನುತ್ತದೆ. ಹೌದು ಮಾಂಸ ತಿನ್ನುವ ಹೊಸ ಬ್ಯಾಕ್ಟೀರಿಯಾ ಹುಟ್ಟಿಕೊಂಡಿದ್ದು, ಜಪಾನ್‌ನಲ್ಲಿ ಇದು ಮಾರಣಾಂತಿಕವಾಗಿ ಪರಿಣಮಿಸಿದೆ. ಈ ವೈರಸ್ ತಗುಲಿದ 48 ಗಂಟೆಯಲ್ಲಿ ಆ ವ್ಯಕ್ತಿ ಮೃತಪಡುತ್ತಿದ್ದಾನೆ.

ಈ ಬ್ಯಾಕ್ಟೀರಿಯಾವನ್ನು 'ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್' (STSS) ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯನ್ನು ಉಲ್ಲೇಖಿಸಿದ್ದು, ಬ್ಲೂಮ್‌ಬರ್ಗ್ ಈ ವರ್ಷದ ಜೂನ್ 2 ರವರೆಗೆ 977 ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಎಸ್‌ಟಿಎಸ್‌ಎಸ್) ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು 1999 ರಿಂದ ಈ ರೋಗವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸಂಸ್ಥೆಯ ಪ್ರಕಾರ, ಈ ವರ್ಷ ಈ ಮಾರಣಾಂತಿಕ ವೈರಸ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. 2022 ರ ಅಂತ್ಯದ ವೇಳೆಗೆ, ಕನಿಷ್ಠ ಐದು ಯುರೋಪಿಯನ್ ದೇಶಗಳಲ್ಲಿ ಪ್ರಕರಣವನ್ನು ದೃಢಪಡಿಸಲಾಗಿದ್ದು, ಮತ್ತಷ್ಟು ದೇಶಗಳಿಗೆ ಇದು ಹರಡುವ ಭೀತಿ ಸಹ ಎದುರಾಗಿದೆ.
ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಎಂದರೇನು ?
ನಿಮ್ಮ ದೇಹದ ಮೇಲೆ ತೆರೆದ ಗಾಯಗಳು, ಕಡಿತಗಳು ಅಥವಾ ಹುಣ್ಣುಗಳೊಂದಿಗೆ ಬ್ಯಾಕ್ಟೀರಿಯಾಗಳು ಸಂಪರ್ಕಕ್ಕೆ ಬಂದಾಗ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS) ಸಂಭವಿಸಬಹುದು ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ ವರದಿ ಮಾಡಿದೆ. ಇದು ಚರ್ಮದ ಸೋಂಕು, ಶಸ್ತ್ರಚಿಕಿತ್ಸೆ, ಹೆರಿಗೆ ಅಥವಾ ಮೂಗಿನ ರಕ್ತಸ್ರಾವದ ಕಾರಣದಿಂದಾಗಿರಬಹುದು, ಈ ಕಾಯಿಲೆ ಹರಡದಂತೆ ಹಾಗೂ ಜೀವಕ್ಕೆ ಹಾನಿ ಮಾಡದಂತೆ ತಡೆಯಬೇಕಾದರೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.
50 ವರ್ಷಕ್ಕಿಂತ ಮೇಲ್ಪಟ್ಟ ಜನರು ಈ ರೋಗಕ್ಕೆ ತುತ್ತಾಗುವುದು ಹೆಚ್ಚು ಅಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಲ್ಲಿ ಅಪಾಯ ಹೆಚ್ಚು. WHO ಈ ಬ್ಯಾಕ್ಟೀರಿಯಾವನ್ನು ಗುಂಪು A ಸ್ಟ್ರೆಪ್ಟೋಕೊಕಸ್ (GAS) ನಲ್ಲಿ ಸೇರಿಸಿದೆ. ಇದು ಗಂಟಲು ಮತ್ತು ಕೈ ಕಾಲಿನ ಚರ್ಮದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಮಕ್ಕಳು ಊತ ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು "ಸ್ಟ್ರೆಪ್ ಗಂಟಲು" ಎಂದು ಕರೆಯಲಾಗುತ್ತದೆ.
ಹೆಚ್ಚಿನ ರೋಗಿಗಳು ರೋಗಲಕ್ಷಣಗಳು ಕಾಣಿಸಿಕೊಂಡ ನಂತರ 48 ಗಂಟೆಗಳ ಒಳಗೆ ಸಾಯುತ್ತಾರೆ. ಈ ಬ್ಯಾಕ್ಟೀರಿಯಾದಿಂದ ಸೋಂಕಿತ ಜನರು ಬೆಳಿಗ್ಗೆ ತಮ್ಮ ಕಾಲುಗಳಲ್ಲಿ ಊತವನ್ನು ಗಮನಿಸುತ್ತಾರೆ, ಅದು ಮಧ್ಯಾಹ್ನದ ವೇಳೆಗೆ ಕಡಿಮೆಯಾಗುತ್ತದೆ. ಆದರೆ ಊಟ ಕಾಲುಗಳಿಂದ ಇಡೀ ದೇಹಕ್ಕೆ ಹರಡುತ್ತದೆ. ಎರಡು ದಿನದಲ್ಲಿ ಆತ ಸಾವಿಗೀಡಾಗುತ್ತಾನೆ ಎಂದು ಟೋಕಿಯೋ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆನ್ ಕಿಕುಚಿ ಹೇಳಿದ್ದಾರೆ.
ಈ ರೋಗದ ಲಕ್ಷಣಗಳೇನು?
ಮೊದಲು ಮೈ ಮೇಲಿನ ಚರ್ಮದಲ್ಲಿ ಅಲರ್ಜಿ ರೀತಿಯ ಲಕ್ಷಣ ಕಂಡುಬರಬಹುದು. ದೇಹದಲ್ಲಿ ವಿಪರೀತ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ, ನೆಕ್ರೋಸಿಸ್, ಉಸಿರಾಟದ ತೊಂದರೆಗಳು ಅಂಗಾಂಗ ವೈಫಲ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications