Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಒರೊಪೌಚೆ ವೈರಸ್‌ಗೆ ವಿಶ್ವದಲ್ಲಿ ಮೊದಲ ಬಲಿ..! ಏನಿದು ಹೊಸ ಆಪತ್ತು..!!
ಇತ್ತೀಚಿಗೆ ಹೊಸ ಹೊಸ ಕಾಯಿಲೆಗಳು, ವೈರಸ್‌ಗಳು ಹರಡುತ್ತಿವೆ. ಜಗತ್ತಿನಾದ್ಯಂತ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ. ಕೋವಿಡ್ ಬಳಿಕ ಹತ್ತಾರು ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುತ್ತಿರುವುದು ಇವುಗಳಿಗೆ ಹೊಸ ಹೊಸ ಹೆಸರು ಸಹ ನೀಡಿ ಕರೆಯಲಾಗುತ್ತಿದೆ.
ಈಗ ಬ್ರೆಜಿಲ್‌ನಲ್ಲಿ ಹೊಸದೊಂದು ಕಾಯಿಲೆ ಹುಟ್ಟಿಕೊಂಡಿದ್ದು, ಮೊಟ್ಟ ಮೊದಲ ಸಾವು ಸಹ ಸಂಭವಿಸಿದೆ. ಇದು ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಸೊಳ್ಳೆಗಳು ಕಚ್ಚುವುದರಿಂದ ಒರೊಪೌಚೆ ವೈರಸ್ ಹರಡುತ್ತದೆ, ಈ ವೈರಸ್‌ನಿಂದ ಈಗ ಮೊಟ್ಟ ಮೊದಲು ಸಾವು ಸಹ ಸಂಭವಿಸಿದೆ. ಡೆಂಗ್ಯೂ ಬಳಿಕ ಈಗ ಬ್ರೆಜಿಲ್‌ನಲ್ಲಿ ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಬ್ರೆಜಿಲ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಬಹಿಯಾ ರಾಜ್ಯದ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಯಾವುದೇ ಕೊಮೊರ್ಬಿಡಿಟಿಗಳು ಇರಲಿಲ್ಲ ಮತ್ತು ಅವರ ರೋಗಲಕ್ಷಣಗಳು ತೀವ್ರವಾದ ಡೆಂಗ್ಯೂ ಜ್ವರದಂತೆಯೇ ಇದ್ದವು ಎಂದು ತಿಳಿಸಿದೆ.
ಜನವರಿಯಿಂದ, 20 ರಾಜ್ಯಗಳಲ್ಲಿ 7,200 ಕ್ಕೂ ಹೆಚ್ಚು ಅನಾರೋಗ್ಯದ ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ ಹೆಚ್ಚಿನವು ಬ್ರೆಜಿಲಿಯನ್ ಅಮೆಜಾನ್‌ನ ರಾಜ್ಯಗಳಾದ ಅಮೆಜಾನಾಸ್ ಮತ್ತು ರೊಂಡೋನಿಯಾದಲ್ಲ ದಾಖಲಾಗಿದ್ದವು.
ಒರೊಪೌಚೆ ವೈರಸ್ ಎಂದರೇನು?
ಒರೊಪೌಚೆ ವೈರಸ್ ಹೆಚ್ಚಿನ ಜ್ವರವನ್ನು ಉಂಟುಮಾಡುತ್ತದೆ ಮತ್ತು ಮುಖ್ಯವಾಗಿ ಕ್ಯುಲಿಕೋಯಿಡ್ಸ್ ಪ್ಯಾರೆನ್ಸ್ ಸೊಳ್ಳೆಯಿಂದ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ, ಇದನ್ನು ಸ್ಥಳೀಯವಾಗಿ ಮಾರುಯಿಮ್ ಎಂದು ಕರೆಯಲಾಗುತ್ತದೆ. ಜ್ವರದ ಲಕ್ಷಣಗಳು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದ ಲಕ್ಷಣಗಳನ್ನು ಇದು ಹೋಲುತ್ತವೆ.
ಈ ವೈರಸ್ ಅನ್ನು ಮೊದಲು ಬ್ರೆಜಿಲ್‌ನಲ್ಲಿ 1960 ರಲ್ಲಿ ಗುರುತಿಸಲಾಗಿತ್ತು. ಪ್ರಮುಖವಾಗಿ ಪನಾಮ, ಅರ್ಜೆಂಟೀನಾ, ಬೊಲಿವಿಯಾ, ಈಕ್ವೆಡಾರ್, ಪೆರು ಮತ್ತು ವೆನೆಜುವೆಲಾದಂತಹ ಇತರ ಮಧ್ಯ ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿಯೂ ಈ ವೈರಸ್ ವರದಿಯಾಗಿದೆ.
ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದೇ ಇದನ್ನು ತಡೆಯುವ ಮಾರ್ಗವಾಗಿದೆ. ಹಾಗಾದ್ರೆ ಈ ಕಾಯಿಲೆ ಲಕ್ಷಣವೇನು?
ವಿಪರೀತ ಜ್ವರ
ಸ್ನಾಯು ನೋವುಗಳು
ತಲೆನೋವು
ವಾಂತಿ ಮತ್ತು ವಾಕರಿಕೆ
ಶೀತ
ತೀವ್ರವಾದ ಪ್ರಕರಣಗಳು ಮೆನಿಂಜೈಟಿಸ್‌ನಂತಹ ಮಾರಣಾಂತಿಕ ತೊಡಕುಗಳಿಗೆ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ, ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಲಸಿಕೆಗಳಿಲ್ಲ ಮತ್ತು ಪೀಡಿತ ಪ್ರದೇಶದಲ್ಲಿ ಸೊಳ್ಳೆಗಳ ಕಚ್ಚುವುದನ್ನು ತಪ್ಪಿಸುವುದು ಉತ್ತಮ ರಕ್ಷಣೆಯಾಗಿದೆ.
ಇದಕ್ಕೂ ಮುನ್ನ ಭಾರತದಲ್ಲೇ ನೈಲ್ ವೈರಲ್, ಚಂಡೀಪುರ ವೈರಸ್ ಎಂಬ ಎರಡು ಭಯಾನಕ ವೈರಸ್ ಸೇರಿದಂತೆ ಹಲವು ಹೊಸ ವೈರಸ್‌ಗಳು ಪತ್ತೆಯಾಗಿದ್ದನ್ನು ನಾವು ನೋಡಿದ್ದೇವೆ. ಅದ್ರಲ್ಲೂ ಭಾರತದಲ್ಲಿ ಈ ಚಂಢೀಪುರ ವೈರಸ್ ಭಯಾನಕವಾಗಿ ಕಾಡುತ್ತಿದೆ. ಈಗಾಗಲೆ ಗುಜರಾತ್‌ನಲ್ಲಿ ಇದು ವ್ಯಾಪಕವಾಗಿ ಹರಡಿದ್ದು, ಹಲವು ಮಕ್ಕಳ ಬಲಿ ಪಡೆದಿದೆ. ಅಲ್ಲದೆ ಹಲವು ಶಂಕಿತ ಪ್ರಕರಣಗಳು ವರದಿಯಾಗಿವೆ.
ಇದರ ಜೊತೆ ವೆಸ್ಟ್ ನೈಲ್ ವೈರಸ್ ಕೇರಳದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು, ಇದು ಸಹ ಆಫ್ರಿಕಾ ದೇಶದಿಂದಲೇ ಭಾರತಕ್ಕೆ ಆಗಮಿಸಿದ ವೈರಸ್ ಆಗಿದೆ. ಫ್ಲಾವಿವೈರೈಡ್ ಎಂಬ ಕುಟುಂಬಕ್ಕೆ ಸೇರಿದ ಈ ವೈರಸ್, ಕೇರಳದ ಮಲಪ್ಪುರಂ, ಕೋಯಿಕ್ಕೋಡ್ ಮತ್ತು ತ್ರಿಶ್ಶೂರ್ ಜಿಲ್ಲೆಗಳಲ್ಲಿ ವ್ಯಾಪಕ ಅನಾರೋಗ್ಯ ಪ್ರಕರಣಗಳಿಗೆ ಕಾರಣವಾಗಿತ್ತು. ಇದು ಸಹ ಸೊಳ್ಳೆಗಳ ಕಡಿತದಿಂದಲೇ ಹರಡುತ್ತದೆ. ಅಲ್ಲದೆ ಸೋಂಕಿತ ಸೊಳ್ಳೆಯ ಕಡಿತದಿಂದ ಮನುಷ್ಯರಿಗೆ ಈ ವೈರಸ್ ಹರಡುತ್ತದೆ. ಕೇರಳದಲ್ಲಿ ಸಾಮಾನ್ಯವಾಗಿರುವ ಕ್ಯುಲೆಕ್ಸ್ ಸೊಳ್ಳೆಗಳು ರಾಜ್ಯದಲ್ಲಿ ವೆಸ್ಟ್ ನೈಲ್ ವೈರಸ್ ಅನ್ನು ಹರಡುತ್ತಿವೆ ಎಂದು ವರದಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications