Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಶಂಕೆ: ಇದರ ಲಕ್ಷಣಗಳೇನು?
ಭಾರತದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ರೋಗಿಯನ್ನು ಐಸೋಲೇಷನ್‌ನಲ್ಲಿ ಇಡಲಾಗಿದ್ದು, ರೋಗಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ವಿಶ್ವದ ಹಲವು ಕಡೆ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಭಾರತಕ್ಕೆ ಬಂದಿರುವ ಶಂಕೆ ಉಂಟಾಗಿದ್ದು ಆತಂಕ ಹೆಚ್ಚಿದೆ.

ಕೋವಿಡ್ ಬಳಿಕ ಆತಂಕ ಸೃಷ್ಟಿಸಿರುವ ವೈರಸ್
ಕೋವಿಡ್ ಬಳಿಕ ಜಗತ್ತನ್ನು ಹೆಚ್ಚಾಗಿ ಭಯ ಹುಟ್ಟಿಸುತ್ತಿರುವುದು ಈ ಮಂಕಿಪಾಕ್ಸ್. ಈ ಕಾಯಿಲೆ ಅಪಾಯಕಾರಿಯಾಗಿದ್ದು ಭಾರತದಲ್ಲಿ ಈ ಕಾಯಿಲೆ ವಿದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಕಂಡು ಬಂದಿದೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಆ ರೋಗಿಯನ್ನು ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕಟ್ಟೆಚ್ಚರ ವಹಿಸಿರುವ ಆರೋಗ್ಯ ಇಲಾಖೆ
ಬಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಕೇಳಿ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ, ಈ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲಾ ಬಗೆಯ ಮುನ್ನೆಚ್ಚರಿಕೆ ವಹಿಸಿದೆ. ಕೇರಳದಲ್ಲಿ 2022ರಲ್ಲಿ ಮಂಕಿಪಾಕ್ಸ್ ಕಂಡು ಬಂದಿತ್ತು, ಇದೀಗ ಮಂಕಿ ಪಾಕ್ಸ್ ರೋಗ ಲಕ್ಷಣ ಕಂಡು ಬಂದಿರುವ ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಮಂಕಿಪಾಕ್ಸ್ ಲಕ್ಷಣಗಳೇನು?
ವ್ಯಕ್ತಿಯಲ್ಲಿ ತೀವ್ರ ಜ್ವರ ಕಂಡು ಬರುವುದು
ವಿಪರೀತ ತಲೆನೋವು ಇರುತ್ತದೆ
ಮೈಕೈ ನೋವು, ಆಯಾಸ, ತಲೆಸುತ್ತು ಕಂಡು ಬರುವುದು
ದುಗ್ಧ ರಸಗಳಲ್ಲಿ ಊತ ಕೂಡ ಕಂಡು ಬರುವುದು.
ಮೈ ಮೇಲೆ ಗುಲ್ಳೆಗಳು ಏಳುವುದು, ಆ ಗುಳ್ಳೆಗಳಲ್ಲಿ ಕೀವು ತುಂಬಿಕೊಂಡಿರುತ್ತದೆ
ಬಾಯಿಹುಣ್ಣು ಉಂಟಾಗುವುದು
ನಂತರ ಆ ಗುಳ್ಳೆಗಳು ಒಡೆದು ನೀರು ಬರಲಾರಂಭಿಸುತ್ತದೆ.
ಮಂಕಿಪಾಕ್ಸ್ ಬಗ್ಗೆ ಅತಂಕ ಬೇಡ, ಆದರೆ ಇರಲಿ ಎಚ್ಚರ
ಮಂಕಿಪಾಕ್ಸ್ ತಡೆಗಟ್ಟಲು ಕೈಗಳನ್ನು ಅಗಾಗ ಸೋಪು ಹಚ್ಚಿ ತೊಳೆಯಿರಿ
ಸೋಂಕು ತಗುಲಿರುವ ವ್ಯಕ್ತಿಯನ್ನು ಮುಟ್ಟಬೇಡಿ.
ಮಾಂಸವನ್ನು ಚೆನ್ನಾಗಿ ಬೇಯಸಿ ತಿನ್ನಬೇಕು
ಅವುಗಳ ಮಲ, ಮೂತ್ರ, ದ್ರವಾಂಶ ತಾಗದಂತೆ ಜಾಗ್ರತೆವಹಿಸಬೇಕು.
ಲೈಂಗಿಕತೆಯಿಂದಲೂ ಹರಡುವುದು ಮಂಕಿಪಾಕ್ಸ್
WHO ಪ್ರಕಾರ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಜೊತೆ ಲೈಂಗಿಕ ಸಂಪರ್ಕದಿಂದ ಕೂಡ ಹರಡುವುದು, ತುಟಿಗೆ ತುಟಿ ಒತ್ತಿ ಚುಂಬಿಸುವುದರಿಂದಲೂ ಹರಡುವುದು.
ಮಂಕಿಪಾಕ್ಸ್ ಎಂದರೇನು?
ಈ ಮಂಕಿಪಾಕ್ಸ್ ಎಂಬುವುದು ಸಿಡುಬಿನ ಪ್ರಭೇದವಾಗಿದೆ. ಮೊದಲ ಬಾರಿಗೆ ಇದು ಮಂಗನಲ್ಲಿ ಕಮಡು ಬಂತು. ಈ ಮಂಕಿಪಾಕ್ಸ್ ರೋಗವೂ 1970ರಲ್ಲಿ ಮೊದಲ ಬಶಾರಿಗೆ ಕಂಡು ಬಂತು. ಈ ಕಾಯಿಲೆ ಪ್ರಾಣಿಗಳಿಂದ ಮನುಷ್ಯರಿಗೆ, ಮನಿಷ್ಯರಿಂದ-ಮನುಷ್ಯರಿಗೆ ಹರಡುವುದು.
ಈ ಮಂಕಿಪಾಕ್ಸ್ ಬಂದಾಗ ಗುದನಾಳದಲ್ಲಿ ನೋವು, ಶಿಶ್ನದಲ್ಲಿ ನೋವು ಕಂಡು ಬರುವುದು. ಈ ಮಂಕಿಪಾಕ್ಸ್ ರೋಗಕ್ಕೆ ತುತ್ತಾದರೆ ಮೆದುಳಿನಲ್ಲಿತೊಂದರೆ ಉಂಟಾಗುವುದು, ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು.
ಈ ಮಂಕಿ ವೈರಸ್ ರೋಗದಿಂದ ಗುಣಮುಖರಶದರೂ ವೀರ್ಯದಲ್ಲಿರುತ್ತದೆ
2022ರಲ್ಲಿ 39ವರ್ಷದ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡ 5 ರಿಂ 19 ದಿನಗಳ ನಂತರ ಅವರ ವೀರ್ಯಾಣು ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಈ ಮಂಕಿವೈರಸ್ ಪತ್ತೆಯಾಗಿತ್ತು. ಹೀಗಾಗಿ ಕಾಂಡೋಮ್ ರಹಿತ ಲೈಂಗಿಕ ಕ್ರಿಯೆ ಹೆಚ್ಚು ಅಪಾರಕಾರಿಯಾಗಿದೆ.
ಮಂಕಿಪಾಕ್ಸ್‌ಗೆ ಯಾವುದೇ ಚಿಕಿತ್ಸೆಯಿಲ್ಲ , ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು, ರೋಗಿಯನ್ನು ಐಸೋಲೇಟ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
