Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಲಾಸ್ಕಾಪಾಕ್ಸ್ ತಗುಲಿದ್ದ ವ್ಯಕ್ತಿ ನಿಧನ..! ಏನಿದು ಹೊಸ ಸೋಂಕು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿದೆ. ಅದರಲ್ಲೂ ವೈರಸ್‌ಗಳಿಂದ ಕಾಡುವ ಕಾಯಿಲೆಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಚೀನಾ ಮೂಲದ ಬುಬೊನಿಕ್ ವೈರಸ್‌ನಿಂದ ಹರಡುವ ಕಾಯಿಲೆ ಪತ್ತೆಯಾಗಿತ್ತು. ಇದು ಅಮೆರಿಕದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿತ್ತು. ಇದೀಗ ಮತ್ತೊಂದು ಹೊಸ ಕಾಯಿಲೆ ಪತ್ತೆಯಾಗಿದ್ದು, ಆತಂಕ ಹುಟ್ಟಿಸಿದೆ.
ಅಲಾಸ್ಕಾಪಾಕ್ಸ್ ಎಂಬ ಮಾರಣಾಂತಿಕ ಕಾಯಿಲೆ ಬಗ್ಗೆ ಕೇಳಿದ್ದೀರಾ? ಇದು ಸಣ್ಣ ಸಣ್ಣ ಸಸ್ತನಿಗಳಲ್ಲಿ ಕಂಡುಬರುವ ವೈರಸ್ ಆಗಿದ್ದು, ಈಗ ಮಾನವರಲ್ಲೂ ಪತ್ತೆಯಾಗಿ ಆತಂಕ ಹುಟ್ಟಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಅಮೆರಿಕದ ವ್ಯಕ್ತಿಯೊಬ್ಬರು ಕಳೆದ ತಿಂಗಳು ಅಲಾಸ್ಕಾಪಾಕ್ಸ್‌ನಿಂದ ಸಾವನ್ನಪ್ಪಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೃದ್ಧರೊಬ್ಬರಲ್ಲಿ ರೋಗಲಕ್ಷಣಗಳು ಪ್ರಾರಂಭವಾಗಿತ್ತು. ಬಳಿಕ ಅವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆತ ಒಬ್ಬಂಟಿಯಾಗಿ ವಾಸವಿದ್ದರೂ ಈ ವೈರಸ್ ಹೇಗೆ ಅವರಿಗೆ ತಗುಲಿತು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿತ್ತು. ಆದರೆ ವೃದ್ಧನ ಮನೆಯಲ್ಲಿ ಬೆಕ್ಕು ಸಾಕಿದ್ದರು. ಈ ಮಾಹಿತಿ ಬಳಿಕ ಬೆಕ್ಕನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಬೆಕ್ಕಿನಲ್ಲಿ ಯಾವುದೇ ವೈರಸ್‌ಗಳು ಕಂಡುಬಂದಿರಲಿಲ್ಲ.
ವೃದ್ಧನ ಭುಜದ ಮೇಲೆ ಕಪ್ಪು ಮತ್ತು ಕೆಂಪು ಬಣ್ಣದ ಹುಣ್ಣು ಕಾಣಿಸಿಕೊಂಡಿತ್ತು. ಅದೆಷ್ಟು ನೋವು ಕಾಣಿಸಿಕೊಂಡಿತ್ತು ಎಂದರೆ ಆತನಿಗೆ ಭುಜವನ್ನು ಅತ್ತಿತ್ತ ಎತ್ತಲು ಸಹ ಸಾಧ್ಯವಾಗಷ್ಟು ಊದಿಕೊಂಡಿತ್ತು. ಈ ಗಾಯ ಯಾವುದೇ ಔಷಧಿಗೆ ಪ್ರತಿಕ್ರಿಯಸಲಿಲ್ಲ. ಆರಂಭಿಕ ಹಂತದಿಂದ ಈ ಗಾಯ ಹೆಚ್ಚುತ್ತಲೇ ಇತ್ತು. ಬರುಬರುತ್ತ ದೇಹದ ಕೆಲ ಭಾಗದಲ್ಲಿ ಈ ರೀತಿಯ ಸಣ್ಣ ಹುಣ್ಣುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು. ಹೀಗಾಗಿ ಇದು ಹರಡುವಿಕೆಯ ವೈರಸ್‌ನಿಂದ ಉಂಟಾಗಿದೆ ಎಂದು ತಿಳಿದ ಬಳಿಕ ವೈದ್ಯರು ವೃದ್ಧನ ಕಾಯಿಲೆ ಪತ್ತೆಗೆ ಮುಂದಾದರು.
ಅಲಾಸ್ಕಾಪಾಕ್ಸ್ ಎಂದರೇನು?
ಅಲಾಸ್ಕಾದ ಆರೋಗ್ಯ ಇಲಾಖೆಯ ವೆಬ್‌ಸೈಟ್ ಪ್ರಕಾರ, "ಅಲಾಸ್ಕಾಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಆಗಿದ್ದು, ಇದನ್ನು 2015 ರಲ್ಲಿ ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲಿ ರೋಗಿಯಲ್ಲಿ ಮೊದಲು ಗುರುತಿಸಲಾಯಿತು. ಆರ್ಥೋಪಾಕ್ಸ್ ವೈರಸ್‌ಗಳು ಮನುಷ್ಯರನ್ನು ಒಳಗೊಂಡಂತೆ ಸಸ್ತನಿಗಳಿಗೆ ಸೋಂಕು ತರುತ್ತವೆ ಮತ್ತು ಚರ್ಮದ ಗಾಯಗಳ ಬೆಳವಣಿಗೆಗೆ ಕಾರಣವಾಗಬಹುದು. " ವೈರಸ್ ಮುಖ್ಯವಾಗಿ ಸಣ್ಣ ಸಸ್ತನಿಗಳಲ್ಲಿ ಕಂಡುಬರುತ್ತದೆ. ಇದು ಮುನುಷ್ಯರಿಂದ ಮುನುಷ್ಯರಿಗೆ ಹರಡುತ್ತದೆ ಎಂಬುದು ದೃಢವಾಗಿಲ್ಲ.
ಅದರ ಲಕ್ಷಣಗಳೇನು?
ಚರ್ಮದ ಗಾಯಗಳು, ಒಂದು ಅಥವಾ ಹೆಚ್ಚು ಹುಣ್ಣುಗಳು ಕಾಣಿಸಿಕೊಳ್ಳುವುದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಕೀಲುಗಳು, ಜೊತೆಗೆ ಸ್ನಾಯು ನೋವು ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ. ಆರಂಭದಲ್ಲಿ ರೋಗಿಗಳು ಇದು ಜೇಡ ಕಡಿತ ಎಂದುಕೊಳ್ಳುವಷ್ಟು ಸಾಮ್ಯತೆ ಹೊಂದಿತ್ತು. ವಯಸ್ಸಾದವರಲ್ಲಿ ಇದು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲಿದೆ. ಅಂದರೆ ಸೋಂಕು ತಗುಲಿದ ಒಂದೇ ದಿನದಲ್ಲಿ ಪ್ರಭಾವ ಕಂಡುಬರುತ್ತದೆ. ಆದರೆ ವಯಸ್ಕರಲ್ಲಿ ಇದರ ಪರಿಣಾಮ ಮಂದವಾಗಬಹುದು ಎಂದು ಅಂದಾಜಿಸಲಾಗಿದೆ.
ಇದು ಸೋಂಕಿತ ವ್ಯಕ್ತಿಯ ಗಾಯವನ್ನು ಮುಟ್ಟುವುದರಿಂದ ಇಲ್ಲವೆ ಅವರು ಬಳಸಿದ ಬಟ್ಟೆ, ನೀರು ಬಳಕೆಯಿಂದ ಹರಡಬಹುದು. ಅಲ್ಲದೆ ಒಂದೇ ಕುಟುಂಬದಲ್ಲಿ ಈ ಸೋಂಕಿನ ಅಪಾಯ ಕಂಡುಬಂದರೆ ಇತರರಿಗೂ ಹರಡುವ ಸಂಭವವಿದೆ.
ತಡೆಯುವುದು ಹೇಗೆ?
ಈ ರೋಗ ಮುಖ್ಯವಾಗಿ ಪ್ರಾಣಿಗಳಿಂದಲೇ ಹರಡುವುದರಿಂದ ಅವುಗಳ ಮೇಲೆ ಗಮನವಿಡುವುದು, ಒಂದು ವೇಳೆ ಈ ಸೋಂಕು ಹರಡಿಸುರುವ ವ್ಯಕ್ತಿ ಅಥವಾ ಪ್ರಾಣಿ ಸಂಪರ್ಕ ಮಾಡದಿರುವುದು, ಕಾಡಿನ ಬಳಿ ಮನೆಗಳಿದ್ದರೆ ಹೆಚ್ಚಾಗಿ ಪ್ರಾಣಿಗಳ, ಪಕ್ಷಿಗಳ ಸಂಪರ್ಕ ಮತ್ತು ಮನೆ ಸ್ವಚ್ಛವಾಗಿಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications