Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ಮೊಟ್ಟ ಮೊದಲ ಹಕ್ಕಿ ಜ್ವರ ಪ್ರಕರಣ ದೃಢ..!
ಭಾರತದಲ್ಲಿ ಮೊಟ್ಟ ಮೊದಲ ಹಕ್ಕಿ ಜ್ವರ ಪ್ರಕರಣ ದಾಖಲಾಗಿದೆ. ಈ ಮೊದಲು ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬ ಹಕ್ಕಿ ಜ್ವರ ಬಲಿಯಾಗಿದ್ದ ಪ್ರಕರಣ ನಡೆದಿದ್ದ ಬೆನ್ನಲ್ಲೆ ಈಗ ಭಾರತದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ H9N2 ವೈರಸ್‌ನಿಂದ ಉಂಟಾಗುವ ಹಕ್ಕಿ ಜ್ವರದಿಂದ ಮಾನವ ಸೋಂಕಿನ ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಫೆಬ್ರವರಿಯಲ್ಲಿ ಮಗುವಿಗೆ ನಿರಂತರ ತೀವ್ರವಾದ ಉಸಿರಾಟದ ಸಮಸ್ಯೆಗಳು, ಅಧಿಕ ಜ್ವರ ಮತ್ತು ಹೊಟ್ಟೆಯ ಸೆಳೆತದಿಂದಾಗಿ ರೋಗಿಯನ್ನು ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು ಮತ್ತು ರೋಗನಿರ್ಣಯ ಮತ್ತು ಚಿಕಿತ್ಸೆಯ ನಂತರ ಮೂರು ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಆ ಮಗುವಿನ ಸಂಪರ್ಕಕ್ಕೆ ಹಾಗೂ ಆತನ ಸುತ್ತ ಮುತ್ತ ಕೋಳಿಗಳು ಇರುವುದು ಅವುಗಳ ಸಂಪರ್ಕಕ್ಕೆ ಮಗು ಬಂದಿದೆ ಆದರೆ ಮಗುವಿನ ಕುಟುಂಬಸ್ಥರಲ್ಲಿ ಯಾರಿಗೂ ಈ ರೀತಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ. ವ್ಯಾಕ್ಸಿನೇಷನ್ ಸ್ಥಿತಿಯ ಮಾಹಿತಿ ಮತ್ತು ಆಂಟಿವೈರಲ್ ಚಿಕಿತ್ಸೆಯ ವಿವರಗಳು ಲಭ್ಯವಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಇದು ಭಾರತದಲ್ಲಿ ದಾಖಲಾಗಿರುವ ಎರಡನೇ ಪ್ರಕರಣವಾಗಿದೆ. ಇದಕ್ಕೂ ಮೊದಲು 2019ರಲ್ಲಿ ಮೊಟ್ಟ ಮೊದಲ ಪ್ರಕರಣ ದಾಖಲಾಗಿತ್ತು. ಆದರೆ ಈ ವರ್ಷದ ಆರಂಭದಲ್ಲಿ ದಾಖಲಾಗಿದ್ದ ಮೆಕ್ಸಿಕೋದ ವ್ಯಕ್ತಿ ಮೃತಪಟ್ಟಿದ್ದ. ಇದು ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿತ್ತು.
H9N2 ವೈರಸ್ ಸಾಮಾನ್ಯವಾಗಿ ಸರಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಸಂಸ್ಥೆಯು ಈ ವೈರಸ್ ವಿವಿಧ ಪ್ರದೇಶಗಳಲ್ಲಿ ಕೋಳಿಗಳಲ್ಲಿ ಹರಡುವ ಅತ್ಯಂತ ಪ್ರಚಲಿತ ಏವಿಯನ್ ಇನ್ಫ್ಲುಯೆನ್ಸ ವೈರಸ್‌ಗಳಲ್ಲಿ ಒಂದಾಗಿರುವುದರಿಂದ ಮತ್ತಷ್ಟು ವಿರಳ ಮಾನವ ಪ್ರಕರಣಗಳು ಸಂಭವಿಸಬಹುದು ಎಂದು ಹೇಳಿದೆ. ಆದರೆ ಕೋವಿಡ್ ಸಮಯದಲ್ಲಿ ಹಕ್ಕಿ ಜ್ವರದ ಭೀತಿ ಅಧಿಕವಾಗಿತ್ತು. ಅದರಲ್ಲೂ ಭಾರತದಲ್ಲಿ ಲಕ್ಷ ಲಕ್ಷ ಕೋಳಿಗಳ ಸಾವಿಗೆ ಕಾರಣವಾಗಿತ್ತು.
ಹಕ್ಕಿಜ್ವರದ ಲಕ್ಷಣಗಳೇನು?
ಹಕ್ಕಿಜ್ವರ ಸಾಮಾನ್ಯವಾಗಿ ಹಕ್ಕಿಗಳಿಂದಲೇ ಹರಡುತ್ತದೆ. ಅದರಲ್ಲೂ ಸಾಕು ಪ್ರಾಣಿಗಳು, ಕೋಳಿ, ಬಾತುಕೋಳಿಗಳಿಂದಲೂ ಹರಡಬಹುದಂತೆ. ಇದು ಮನುಷ್ಯರಲ್ಲಿ ಕಂಡು ಬಂದಾಗ ತುಂಬಾ ಗಂಭೀರವಾದ ಅನಾರೋಗ್ಯದ ಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಜ್ವರ, ಸತತ ಕೆಮ್ಮು, ತಲೆನೋವು ಮತ್ತು ರೋಗ ಉಲ್ಬಣಗೊಂಡಾಗ ನ್ಯುಮೋನಿಯಾ, ಸೆಪ್ಸಿಸ್ ಮತ್ತು ಮೂಗು ಮತ್ತು ಗಂಟಲ ಭಾಗದ ಕಾಯಿಲೆಗಳು ಎದುರಾಗುತ್ತವೆ.
ಹಕ್ಕಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುತ್ತದೆ. ಜೊತೆಗೆ ಕೋಳಿಗಳಿಂದ ಅತ್ಯಂತ ವೇಗವಾಗಿ ಹರಡುತ್ತದೆ. ಈ ವೈರಸ್ ತಗುಲಿರುವ ಕೋಳಿ ಸಹ ಸಾಯುವುದು ಖಚಿತ, ಆದರೆ ಆ ಕೋಳಿಯ ಸಂಪರ್ಕಕ್ಕೆ ಬರುವ ಅಥವಾ ಕೋಳಿ ಮಾಂಸ ಸೇವನೆ ಮಾಡಿದಾಗ ಈ ಸೋಂಕು ಮಾನವರಿಗೆ ತಗುಲುತ್ತದೆ.
ಹೀಗಾಗಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಈ ಕಾಯಿಲೆ ಕೋಳಿ ಉದ್ಯಮದಾರರ ಭಾರೀ ನಷ್ಟಕ್ಕೆ ಕಾರಣವಾಗಿತ್ತು. ಕೆಲವು ರಾಷ್ಟ್ರಗಳ ಆದಾಯವೇ ಈ ಉದ್ಯಮವನ್ನು ನೆಚ್ಚಿಕೊಂಡಿದ್ದು ಈ ನಷ್ಟ ರಾಷ್ಟ್ರೀಯ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಕ್ಕಿ ಜ್ವರಕ್ಕೆ ಕಾರಣವಾಗುವ ಇನ್ಫ್ಲೂಯೆಂಜಾ ವೈರಸ್ ನಲ್ಲಿಯೂ ಹಲವು ವಿಧಗಳಿದ್ದು ಇವುಗಳಲ್ಲಿ ಈ ಮೂರು ಬಗೆಯ A(H5N1), A(H7N9) ಮತ್ತು A(H9N2) ವೈರಸ್ಸುಗಳು ವಿಶ್ವದಾದ್ಯಂತ ಗರಿಷ್ಟ ಸಾವುಗಳಿಗೆ ಕಾರಣವಾಗುತ್ತವೆ.
ಸಾವಿನ ಪ್ರಮಾಣವನ್ನು ಪರಿಗಣಿಸಿದರೆ ಕೊರೋನ್ನಾಕ್ಕಿಂತಲೂ ಹಕ್ಕಿ ಜ್ವರ ಹೆಚ್ಚು ಅಪಯಾಕಾರಿಯಾಗಿದೆ. ಕೊರೋನಾದಂತೆಯೇ ಇದು ವ್ಯಕ್ತಿಗಳ ನಡುವೆ ಕೆಮ್ಮು ಸೀನುವಿಕೆಯ ದ್ರವಗಳ ಸಿಡಿಯುವಿಕೆ, ಸೋಂಕು ಸ್ಪರ್ಶದ ಮೂಲಕ ಹರಡುತ್ತವೆ ಎಂದು ತಿಳಿದುಬಂದಿದೆ. ಈ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ತಿಂಗಳಿಗೂ ಹೆಚ್ಚು ದಿನಗಳ ಕಾಲ ಈ ವೈರಸ್ ಜೀವಂತವಾಗಿ ಇರಲಿದೆ. ಸೂಕ್ತ ಚಿಕಿತ್ಸೆ ಪಡೆದರೆ ಜೀವ ಉಳಿಸಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
