Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ತಲೆನೋವು-ಕಿರಿಕಿರಿಗೆ ಕಾರಣವಾಯ್ತಾ ಕಂಗುವ ಸಂಗೀತ: ಎಷ್ಟು ಡೆಸಿಬಲ್ ನಮಗೆ ಹಾನಿ ಮಾಡುತ್ತೆ..!
ಕಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಸೂರ್ಯ ನಟನೆಯ ಕಂಗುವ ರಿಲೀಸ್ ಆಗಿದೆ. ಅದ್ದೂರಿ ಮೇಕಿಂಗ್, ಟ್ರೈಲರ್‌ನಿಂದ ಗಮನ ಸೆಳೆದಿದ್ದ ಪ್ಯಾನ್ ಇಂಡಿಯಾ ಸಿನಿಮಾ ಈಗ ತೆರೆಕಂಡ ಎರಡನೇ ದಿನಕ್ಕೆ ಭಾರೀ ಗಳಿಕೆಯ ಜೊತೆಗೆ ಒಂದಿಷ್ಟು ಟೀಕೆಗೂ ಗುರಿಯಾಗುತ್ತಿದೆ. ಅದ್ದೂರಿತನದಿಂದ ಸಿನಿಮಾ ಕೂಡಿದ್ದರೂ ಕೂಡ ಕಥೆ ಹಾಗೂ ಸಂಗೀತದ ಕಾರಣಕ್ಕೆ ಟೀಕೆಗೆ ಒಳಗಾಗುತ್ತಿದೆ.
ಕಂಗುವ ಸಿನಿಮಾದಲ್ಲಿ ಕಲಾವಿದರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದ್ದರೂ ಸಿನಿಮಾದ ಸಂಗೀತಕ್ಕೆ ಕಳಪೆ ಮಾತು ಕೇಳಿಬಂದಿದೆ. ಸಿನಿಮಾದ ಉದ್ದಕ್ಕೂ ಕಿರಿಚಾಟ ಕೇಳಿಸಿಕೊಂಡಿರುವ ಪ್ರೇಕ್ಷಕರು ಹಿನ್ನೆಲೆ ಸಂಗೀತದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇಡೀ ಚಿತ್ರದ ಉದ್ದಕ್ಕೂ ತಡೆಯಲಾಗದಷ್ಟು ಮಟ್ಟದ ಸಂಗೀತ ಕಿವಿಗೆ ರಾಚುತ್ತದೆ ಎಂದು ಸಿನಿಮಾ ನೋಡಿದ ಬಂದವರ ಅಭಿಪ್ರಾಯವಾಗಿದೆ.

ಈ ಟೀಕೆಯ ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ಅವರು ಕೂಡ ಸಿನಿಮಾ ಕುರಿತಂತೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಯಾರನ್ನು ದೂಷಿಸಬೇಕು? 'ರೀ-ರೆಕಾರ್ಡಿಂಗ್ ಮಿಕ್ಸರ್ ನನ್ನ ಸ್ನೇಹಿತ ನನಗೆ ಈ ಕ್ಲಿಪ್ ಅನ್ನು ಕಳುಹಿಸಿದ್ದಾರೆ... ಈ ರೀತಿಯ ನಮ್ಮ ಜನಪ್ರಿಯ ಚಲನಚಿತ್ರಗಳಲ್ಲಿ ಧ್ವನಿಯ ಬಗ್ಗೆ ಟೀಕೆಗಳನ್ನು ನೋಡುವುದು ನಿರಾಶಾದಾಯಕವಾಗಿದೆ.' 'ನಮ್ಮ ಕಲಾತ್ಮಕತೆ ಜೋರಾಗಿ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡಿದೆ ... ಯಾರನ್ನು ದೂರುವುದು?! ಧ್ವನಿ ನೀಡಿದ ವ್ಯಕ್ತಿ?! ಕೊನೆ ಕ್ಷಣದಲ್ಲಿ ನಮ್ಮ ಬಳಿ ಬರುವ ಸಮಸ್ಯೆಗಳು. ಪ್ರೇಕ್ಷಕರು ತಲೆ ನೋವಿನಿಂದ ಹೊರನಡೆದರೆ ಯಾವುದೇ ಚಿತ್ರ ಮತ್ತೆ ಪ್ರೇಕ್ಷಕರ ಸೆಳೆಯುವುದಿಲ್ಲ' ಎಂದಿದ್ದಾರೆ.
ಸಿನಿಮಾಗಳಲ್ಲಿ ಲೌಡ್ ಮ್ಯೂಸಿಕ್ ಕುರಿತ ರೆಸೂಲ್ ಪೂಕುಟ್ಟಿ ಅವರ ಈ ಅಭಿಪ್ರಾಯ ಹೊಸ ಚರ್ಚೆಗೆ ಕಾರಣವಾಗಲಿದೆ. ಏಕೆಂದರೆ ಸಿನಿಮಾದಲ್ಲಿ ಅತ್ಯಂತ ಕರ್ಕಷವಾಗಿ ಈ ಹಿನ್ನಲೆ ಸಂಗೀತವನ್ನು ಡಿಸೈನ್ ಮಾಡಲಾಗಿದೆ ಎಂಬ ಆರೋಪವಿದೆ. ಹಾಗಾದ್ರೆ ಪ್ರೇಕ್ಷಕರಿಗೆ ಇದು ಹಿಂಸೆ ಅನಿಸುವುದು ಏಕೆ? ಅಗತ್ಯಕ್ಕಿಂತ ಹೆಚ್ಚು ಶಬ್ದ ಕಿವಿ ಮೇಲೆ ಬಿದ್ದಾಗ ತಲೆನೋವು, ಕಿರಿ ಏಕೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನಮ್ಮ ಕಿವಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದ ಡೆಸಿಬಲ್ ಶಬ್ದ ಕೇಳಿದರೆ ಕಿರಿ ಕಿರಿ ಉಂಟಾಗುತ್ತದೆ. ಮಾನವನ ಕಿವಿಗಳಿಗೆ ಸಾಮಾನ್ಯವಾಗಿ 90ಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದವು ಮಾನವ ಕಿವಿಗೆ ಹಾನಿ ಉಂಟು ಮಾಡುತ್ತದೆ. ಆದ್ರೆ ನಾವು 160 ಡೆಸಿಬಲ್ ವರೆಗಿನ ಶಬ್ದವನ್ನು ಕೇಳಬಹುದು. ಆದ್ರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಮಕ್ಕಳಲ್ಲಿ ಈ ಡೆಸಿಬಲ್ ಇನ್ನೂ ಕನಿಷ್ಟ ಮಟ್ಟದ್ದಿರುತ್ತದೆ. ಅತ್ಯಂತ ಸೂಕ್ಷ ಒಳಕಿವಿ ಹೊಂದಿರುವ ಮಕ್ಕಳು ಕೇವಲ 70 ಡೆಸಿಬಲ್ ಶಬ್ದ ಕೇಳಿಸಿಕೊಳ್ಳಬಹುದು.
ನಾವು ಹಚ್ಚು ಪಟಾಕಿ ಸುಮಾರು 140 ರಿಂದ 160 ಡೆಸಿಬಲ್ ಒಳಗೆ ಬರಬಹುದು. ಹಾಗೆ ವಾಹನಗಳ ಹಾರ್ನ್ ಕೂಡ 150 ಡೆಸಿಬಲ್ ಶಬ್ದ ಉಂಟುಮಾಡುತ್ತದೆ. ಹೀಗಾಗಿ ಕೆಲವೊಮ್ಮೆ ನಮ್ಮ ಹತ್ತಿರದಲ್ಲಿ ಹಾರ್ನ್ ಕೇಳಿಗಾದ ಅಥವಾ ಪಟಾಕಿ ಸಿಡಿಗಾದ ನಮ್ಮ ಕಿವಿ ಕೆಲವು ಸೆಕೆಂಡ್‌ಗಳ ಕಾಲ ನಿಷ್ಕ್ರಿಯೆಗೆ ಒಳಗಾಗುತ್ತದೆ. ಇದು ನಿರಂತವಾಗಿ ನಡೆದರೆ ಶಾಶ್ವತ ಕಿವುಡು ಉಂಟಾಗುತ್ತದೆ.
ಕಿವುಡುತನ, ತಲೆ ನೋವು ಹೀಗೆ ಹಲವು ಸಮಸ್ಯೆಗಳಿಂದ ದೂರ ಇರಬೇಕಾದರೆ ನಾವು 75 ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಶಬ್ದವನ್ನು ನಿರಂತವಾಗಿ ಕೇಳಬಾರದು ಎಂದು ಹೇಳಲಾಗುತ್ತದೆ.
ಎಷ್ಟು ಡೆಸಿಬಲ್ ನಮಗೆ ಅಪಾಯ ತರಲಿದೆ?
- 75 ಡೆಸಿಬಲ್ 8 ಗಂಟೆ ನಿರಂತರವಾಗಿ ಕೇಳುತ್ತಿದ್ದರೆ ಅಪಾಯ ಎದುರಾಗುತ್ತದೆ.
- 78 ಡೆಸಿಬಲ್ 4 ಗಂಟೆ
- 81 ಡೆಸಿಬಲ್ 2 ಗಂಟೆ
- 84 ಡೆಸಿಬಲ್ 1 ಗಂಟೆ
- 87 ಡೆಸಿಬಲ್ 30 ನಿಮಿಷ
- 90 ಡೆಸಿಬಲ್ 15 ನಿಮಿಷ
- 93 ಡೆಸಿಬಲ್ 7.5 ನಿಮಿಷ
- 96 ಡೆಸಿಬಲ್ 4 ನಿಮಿಷ
- 99 ಡೆಸಿಬಲ್ 2 ನಿಮಿಷ
- 102 ಡೆಸಿಬಲ್ 1 ನಿಮಿಷ
- 105 ಡೆಸಿಬಲ್ 1 ನಿಮಿಷಕ್ಕಿಂತ ಕಡಿಮೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications